ಏರ್ಪ್ಲೇನ್ ಮೋಡ್ : ಇಲ್ಲಿದೆ ಸಂಪೂರ್ಣ ಮಾಹಿತಿ

ನಮ್ಮ ಫೋನ್ ನಲ್ಲಿ ಲಭ್ಯವಿರುವ 'ಏರ್ಪ್ಲೇನ್ ಮೋಡ್' ಎಂಬ ಫೀಚರ್ ಮೇಲೆ ಈ ಲೇಖನದಲ್ಲಿ ಬೆಳಕು ಚೆಲ್ಲಲಾಗಿದೆ.

By Tejaswini P G
|

ನೀವು ಯಾವುದೇ ಸ್ಮಾರ್ಟ್ಫೋನ್ ಬಳಸುತ್ತಿದ್ದರೂ ಒಂದು ಬಾರಿಯಾದರೂ ಏರ್ಪ್ಲೇನ್ ಮೋಡ್ ಬಳಸಿಯೇ ಇರುತ್ತೀರಿ.ನಾವು ಸಾಮಾನ್ಯವಾಗಿ ವಿಮಾನದಲ್ಲಿ ಪ್ರಯಾಣಿಸುವ ಸಂದರ್ಭದಲ್ಲಿ ಹೆಚ್ಚಾಗಿ ಈ ಏರ್ಪ್ಲೇನ್ ಮೋಡ್ ಅನ್ನು ಬಳಸುತ್ತೇವೆ. ಅಥವಾ ಕಾಲ್ ಗಳ ಬಳಕೆ ಇಲ್ಲದ ಸಂದರ್ಭಗಳಲ್ಲಿ ಈ ಮೋಡ್ ನ ಬಳಕೆಯಾಗುತ್ತದೆ. ನಮ್ಮಲ್ಲಿ ಹೆಚ್ಚಿನವರಿಗೆ ಏರ್ಪ್ಲೇನ್ ಮೋಡ್ ನ ಈ ಬಳಕೆಯಲ್ಲದೆ ಬೇರೆ ಯಾವ ಉಪಯೋಗಗಳೂ ಗೊತ್ತಿಲ್ಲ.

ಏರ್ಪ್ಲೇನ್ ಮೋಡ್ : ಇಲ್ಲಿದೆ ಸಂಪೂರ್ಣ ಮಾಹಿತಿ

ಆದರೆ ಇದರ ಉಪಯೋಗಗಳು ಹಲವು ಇದ್ದು, ಈ ಲೇಖನದ ಮೂಲಕ ಏರ್ಪ್ಲೇನ್ ಮೋಡ್ ನ ಉಪಯೋಗಗಳ ಮೇಲೆ ಬೆಳಕು ಚೆಲ್ಲಿದ್ದೇವೆ. ಮೂಲತ: ಈ ಏರ್ಪ್ಲೇನ್ ಮೋಡ್ ನಿಮ್ಮ ಸೆಲ್ಯುಲಾರ್ ಕನೆಕ್ಷನ್, ವೈಫೈ ಮತ್ತು ಬ್ಲೂಟೂತ್ ಕನೆಕ್ಟಿವಿಟಿಯನ್ನು ನಿಷ್ಕ್ರಿಯಗೊಳಿಸುತ್ತದೆ.

ಏರ್ಪ್ಲೇನ್ ಮೋಡ್ ಸಕ್ರಿಯಗೊಳಿಸುವುದು ಹೇಗೆ?

ಏರ್ಪ್ಲೇನ್ ಮೋಡ್ ಸಕ್ರಿಯಗೊಳಿಸುವುದು ಹೇಗೆ?

ಏರ್ಪ್ಲೇನ್ ಮೋಡ್ ಆನ್ನು ಸಕ್ರಿಯಗೊಳಿಸಲು ನಿಮ್ಮ ಫೋನ್ ನ ಕ್ವಿಕ್ ಸೆಟ್ಟಿಂಗ್ಸ್ ನಲ್ಲಿರುವ ಏರ್ಪ್ಲೇನ್ ಮೋಡ್ ಐಕಾನ್ ಬಳಸಬಹುದು. ಒಂದು ವೇಳೆ ಈ ಐಕಾನ್ ನಿಮಗೆ ಸಿಗದಿದ್ದಲ್ಲಿ ನಿಮ್ಮ ಫೋನ್ ನ ಸೆಟ್ಟಿಂಗ್ಸ್ ಗೆ ಹೋಗಿ 'ನೆಟ್ವರ್ಕ್ & ಇಂಟರ್ನೆಟ್' -> 'ಏರ್ಪ್ಲೇನ್ ಮೋಡ್' ಅನ್ನು ಟಾಗಲ್ ಆನ್ ಮಾಡಿ.

ಏರ್ಪ್ಲೇನ್ ಮೋಡ್ ಬಳಸುವ ಮೂಲಕ ಬ್ಯಾಟರಿಯ ಲೈಫ್ ಹೆಚ್ಚಿಸಬಹುದೇ?

ಏರ್ಪ್ಲೇನ್ ಮೋಡ್ ಬಳಸುವ ಮೂಲಕ ಬ್ಯಾಟರಿಯ ಲೈಫ್ ಹೆಚ್ಚಿಸಬಹುದೇ?

ಏರ್ಪ್ಲೇನ್ ಮೋಡ್ ಬಳಸುವ ಮೂಲಕ ಬ್ಯಾಟರಿಯ ಲೈಫ್ ಉಳಿಸಬಹುದು. ಏರ್ಪ್ಲೇನ್ ಮೋಡ್ ಸಕ್ರಿಯಗೊಳಿಸಿದಾಗ ನಿಮ್ಮ ಫೋನ್ ನ ಕನೆಕ್ಷನ್ಗಳು ನಿಷ್ಕ್ರಿಯವಾಗುವ ಕಾರಣ ಬ್ಯಾಟರಿಯ ಬಳಕೆ ಗಣನೀಯವಾಗಿ ಕಡಿಮೆಯಾಗುತ್ತದೆ. ಅಲ್ಲದೆ ಏರ್ಪ್ಲೇನ್ ಮೋಡ್ ನಲ್ಲಿ ಫೋನ್ ಚಾರ್ಜ್ ಮಾಡಿದರೆ ಬಹಳ ಬೇಗನೇ ಚಾರ್ಜ್ ಆಗುತ್ತದೆ.

ಫೋನ್ ಏರ್ಪ್ಲೇನ್ ಮೋಡ್ನಲ್ಲಿದ್ದರೂ ವೈಫೈ ಬಳಸಬಹುದೇ?

ಫೋನ್ ಏರ್ಪ್ಲೇನ್ ಮೋಡ್ನಲ್ಲಿದ್ದರೂ ವೈಫೈ ಬಳಸಬಹುದೇ?

ಈ ಪ್ರಶ್ನೆಗೆ ಉತ್ತರ ನೀವು ಯಾವ ಫೋನ್ ಬಳಸುತ್ತಿದ್ದೀರಿ ಎಂಬುದರ ಮೇಲೆ ಅವಲಂಬಿಸಿರುತ್ತದೆ. ಇತ್ತೀಚಿನ ದಿನಗಳಲ್ಲಿ ಬಹುತೇಕ ಎಲ್ಲಾ ಮೊಬೈಲ್ಗಳು ಏರ್ಪ್ಲೇನ್ ಮೋಡ್ ನಲ್ಲಿರುವಾಗಲೂ ವೈಫೈ ಗೆ ಕನೆಕ್ಟ್ ಮಾಡಲು ಅನುವುಮಾಡಿಕೊಡುತ್ತದೆ. ಏರ್ಪ್ಲೇನ್ ಮೋಡ್ ಸಕ್ರಿಯಗೊಳಿಸಿದ ಕೂಡಲೇ ವೈಫೈ ತನ್ನಿಂತಾನೇ ಆಫ್ ಆಗುತ್ತದೆ. ವೈಫೈ ಬಳಸಬೇಕಾದರೆ ನೀವು ಮತ್ತೆ ಅದನ್ನು ಸಕ್ರಿಯಗೊಳಿಸಿದರೆ ಸಾಕು.

ಪ್ರತಿಬಾರಿ ವೆಬ್‌ಸೈಟ್ ಲಿಂಕ್ ಟೈಪಿಸದೇ ವೆಬ್‌ಸೈಟ್ ತೆರೆಯಿರಿ!!ಪ್ರತಿಬಾರಿ ವೆಬ್‌ಸೈಟ್ ಲಿಂಕ್ ಟೈಪಿಸದೇ ವೆಬ್‌ಸೈಟ್ ತೆರೆಯಿರಿ!!

ಏರ್ಪ್ಲೇನ್ ಮೋಡ್ ನಲ್ಲಿ ಅಲಾರ್ಮ್ ರಿಂಗ್ ಆಗುವದನ್ನು ಕೇಳಬಹುದೇ?

ಏರ್ಪ್ಲೇನ್ ಮೋಡ್ ನಲ್ಲಿ ಅಲಾರ್ಮ್ ರಿಂಗ್ ಆಗುವದನ್ನು ಕೇಳಬಹುದೇ?

ನಿಮ್ಮ ಸ್ಮಾರ್ಟ್ಫೋನಿನ ಅಲಾರ್ಮ್ ಫೀಚರ್ ಯಾವುದೇ ರೀತಿಯ ಇಂಟರ್ನೆಟ್ ಕನೆಕ್ಷನ್ ಅನ್ನು ಬಳಸುವುದಿಲ್ಲ. ಹಾಗಾಗಿ ನಿಮ್ಮ ಸ್ಮಾರ್ಟ್ಫೋನ್ ಏರ್ಪ್ಲೇನ್ ಮೋಡ್ ನಲ್ಲಿದ್ದರೂ ಅದು ಯಾವುದೇ ರೀತಿಯಲ್ಲಿ ನಿಮ್ಮ ಅಲಾರ್ಮ್ ಮೇಲೆ ಪರಿಣಾಮ ಬೀರುವುದಿಲ್ಲ.

ಏರ್ಪ್ಲೇನ್ ಮೋಡ್ನಲ್ಲಿ ಇರುವಾಗ ಕರೆಗಳನ್ನು ಸ್ವೀಕರಿಸಬಹುದೇ?

ಏರ್ಪ್ಲೇನ್ ಮೋಡ್ನಲ್ಲಿ ಇರುವಾಗ ಕರೆಗಳನ್ನು ಸ್ವೀಕರಿಸಬಹುದೇ?

ನಿಮ್ಮ ಫೋನ್ ಏರ್ಪ್ಲೇನ್ ಮೋಡ್ ನಲ್ಲಿರುವಾಗ ನಿಮಗೆ ಯಾವುದೇ ಕರೆ ಅಥವಾ ಸಂದೇಶಗಳು ಬರುವುದಿಲ್ಲ. ನೀವು ಏರ್ಪ್ಲೇನ್ ಮೋಡ್ ಅನ್ನು ಸಕ್ರಿಯಗೊಳಿಸಿದ ಕೂಡಲೇ ಎಲ್ಲಾ ಸೆಲ್ಯುಲಾರ್ ಕನೆಕ್ಷನ್ಗಳು ನಿಷ್ಕ್ರಿಯಗೊಳ್ಳುತ್ತದೆ. ನಿಮಗೆ ಕರೆ ಮಾಡಲು ಬಯಸುವವರು ವಾಯ್ಸ್ ಮೇಲ್ ಮೂಲಕ ನಿಮ್ಮನ್ನು ಸಂಪರ್ಕಿಸಬಹುದು. ಏರ್ಪ್ಲೇನ್ ಮೋಡ್ ಅನ್ನು ನಿಷ್ಕ್ರಿಯಗೊಳಿಸಿದ ಬಳಿಕವಷ್ಟೇ ನೀವು ಕರೆಗಳು ಮತ್ತು ಸಂದೇಶಗಳನ್ನು ಸ್ವೀಕರಿಸಬಹುದು.

How to Check Your Voter ID Card Status (KANNADA)
ಏರ್ಪ್ಲೇನ್ ಮೋಡ್ ಸಕ್ರಿಯವಾಗಿರುವಾಗ ಫೋನ್ ನಲ್ಲಿ ಮ್ಯೂಸಿಕ್ ಕೇಳಬಹುದೇ?

ಏರ್ಪ್ಲೇನ್ ಮೋಡ್ ಸಕ್ರಿಯವಾಗಿರುವಾಗ ಫೋನ್ ನಲ್ಲಿ ಮ್ಯೂಸಿಕ್ ಕೇಳಬಹುದೇ?

ನಿಮ್ಮ ಫೋನ್ ನ ಮ್ಯೂಸಿಕ್ ಪ್ಲೇಯರ್ ಮ್ಯೂಸಿಕ್ ಪ್ಲೇ ಮಾಡಲು ಯಾವುದೇ ರೀತಿಯ ಇಂಟರ್ನೆಟ್ ಮೂಲಗಳನ್ನು ಬಳಸುವುದಿಲ್ಲವಾದಲ್ಲಿ , ನೀವು ಏರ್ಪ್ಲೇನ್ ಮೋಡ್ ನಲ್ಲಿ ಯಾವುದೇ ತೊಂದರೆಯಿಲ್ಲದೆ ಹಾಡುಗಳನ್ನು ಆಲಿಸಬಹುದು. ಗೂಗಲ್ ಪ್ಲೇ ಮ್ಯೂಸಿಕ್ ನಂತಹ ಆಪ್ಗಳು ಹಾಡುಗಳನ್ನು ಪ್ಲೇ ಮಾಡಲು ಇಂಟರ್ನೆಟ್ ನ ಬಳಕೆ ಮಾಡುತ್ತದೆ. ನೀವು ಈ ಆಪ್ ನ ಅಥವಾ ಇದೇ ಮಾದರಿಯ ಇತರ ಆಪ್ ಗಳ ಪ್ರೀಮಿಯಂ ಆವೃತ್ತಿ ಹೊಂದಿರದಿದ್ದರೆ ಏರ್ಪ್ಲೇನ್ ಮೋಡ್ ನಲ್ಲಿ ನೀವು ಮ್ಯೂಸಿಕ್ ಕೇಳಲಾರಿರಿ.

ಸಾರಾಂಶ

ಏರ್ಪ್ಲೇನ್ ಮೋಡ್ ನಿಮ್ಮ ಮೊಬೈಲ್ ನ ಎಲ್ಲಾ ಕನೆಕ್ಷನ್ ಗಳನ್ನು ನಿಷ್ಕ್ರಿಯಗೊಳಿಸುತ್ತದೆ. ನಿಮ್ಮ ಅದೃಷ್ಟ ಚೆನ್ನಾಗಿದ್ದರೆ ನೀವು ನಿಮ್ಮ ಮೊಬೈಲ್ನಲ್ಲಿ ವೈಫೈ ಬಳಸಬಲ್ಲಿರಿ. ಆದರೆ ನೀವು ಈ ರೀತಿ ಆನ್ಲೈನ್ ಕನೆಕ್ಷನ್ ಮೇಲೆ ಅವಲಂಬಿಸದಿರುವುದೇ ಉತ್ತಮ. ನಿಮ್ಮ ಫೋನ್ ನಲ್ಲಿ ಏರ್ಪ್ಲೇನ್ ಮೋಡ್ ಸಕ್ರಿಯಗೊಳಿಸುವ ಮುನ್ನ ನಿಮಗೆ ಬೇಕಾದುದನ್ನೆಲ್ಲ ಡೌನ್ಲೋಡ್ ಮಾಡಿಕೊಳ್ಳಿ. ನಿಮ್ಮ ಫೋನ್ ನಲ್ಲಿರುವ ಇಂಟರ್ನೆಟ್ ಅಥವಾ ಸೆಲ್ಯುಲಾರ್ ಕನೆಕ್ಷನ್ ಬಳಸದ ಆಪ್ ಗಳು ಅಥವಾ ಚಟುವಟಿಕೆಗಳು ಯಾವುದೇ ತೊಂದರೆಯಿಲ್ಲದೆ ಸರಾಗವಾಗಿ ಕಾರ್ಯನಿರ್ವಹಿಸುತ್ತದೆ.

Best Mobiles in India

Read more about:
English summary
Airplane mode, aeroplane mode, flight mode, offline mode, or standalone mode is a setting available on many smartphones. In this mode, the device will not have any network connectivity.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X