ಹೆಚ್.ಟಿ.ಸಿ ಬೋಲ್ಟ್: ಆ್ಯಂಡ್ರಾಯ್ಡ್ ನೌಗಾಟ್ ಮತ್ತು ಸ್ನಾಪ್ ಡ್ರಾಗನ್ 821.

|

ಗೂಗಲ್ಲಿಗಾಗಿ ಪಿಕ್ಸೆಲ್ ಸ್ಮಾರ್ಟ್ ಫೋನುಗಳನ್ನು ತಯಾರಿಸಿಕೊಟ್ಟ ನಂತರ ಹೆಚ್.ಟಿ.ಸಿ ಈಗ ಹೊಸ ಫ್ಲಾಗ್ ಶಿಪ್ ಫೋನನ್ನು ಬಿಡುಗಡೆಗೊಳಿಸಲು ಅಣಿಯಾಗುತ್ತಿದೆ. ಕಳೆದ ತಿಂಗಳು, ಹೆಚ್.ಟಿ.ಸಿಯ ಹೊಸ ಸ್ಮಾರ್ಟ್ ಫೋನ್ 'ಬೋಲ್ಟ್' ಬಗೆಗಿನ ಕೆಲ ಮಾಹಿತಿಗಳು ಸೋರಿಕೆಯಾಗಿದ್ದವು.

ಹೆಚ್.ಟಿ.ಸಿ ಬೋಲ್ಟ್: ಆ್ಯಂಡ್ರಾಯ್ಡ್ ನೌಗಾಟ್ ಮತ್ತು ಸ್ನಾಪ್ ಡ್ರಾಗನ್ 821.

ಈಗ, ಹೊಸದಾಗಿ ಸೋರಿಕೆಯಾಗಿರುವ ಮಾಹಿತಿಗಳ ಪ್ರಕಾರ ಬೋಲ್ಟ್ ಫೋನುಗಳು ಆ್ಯಂಡ್ರಾಯ್ಡ್ ನೌಗಾಟ್ ಹೊಂದಿರುವ ಮೊದಲ ಹೆಚ್.ಟಿ.ಸಿ ಫೋನುಗಳಾಗಲಿವೆ. ಅಷ್ಟನ್ನು ಹೊರತುಪಡಿಸಿದರೆ ವಿನ್ಯಾಸದಲ್ಲಿ ಹಳೆಯ ಹೆಚ್.ಟಿ.ಸಿ 10ಕ್ಕೂ ಹೊಸ ಫೋನಿಗೂ ಹೇಳಿಕೊಳ್ಳುವಂತಹ ವ್ಯತ್ಯಾಸಗಳೇನಿಲ್ಲ.

ಓದಿರಿ: ಏರ್‌ಟೆಲ್‌ ಬ್ರಾಡ್‌ಬ್ಯಾಂಡ್‌ ಆಫರ್: ಅನ್‌ಲಿಮಿಟೆಡ್ ಉಚಿತ ಕರೆಗಳು ಮತ್ತು 100GB ಉಚಿತ ಡಾಟಾ

ಪಾಪ್ಯುಲರ್ ಟಿಪ್ಸ್ಟರ್, ಇವಾನ್ ಬ್ಲಾಸ್ ಈಗಾಗಲೇ ಹೆಚ್.ಟಿ.ಸಿ ಬೋಲ್ಟಿನ ಚಿತ್ರಗಳನ್ನು ಸೋರಿಕೆ ಮಾಡಿವೆ. ಈ ಸಾಧನ ಹೇಗಿರುತ್ತದೆಂಬ ಮಾಹಿತಿ ಇಲ್ಲಿದೆ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಅದೇ ಪರದೆ.

ಅದೇ ಪರದೆ.

ಇವಾನ್ ಬ್ಲಾಸ್ ನ ಪ್ರಕಾರ ಹೆಚ್.ಟಿ.ಸಿ 10ಕ್ಕೆ ಹೋಲಿಸಿದರೆ ಹೆಚ್.ಟಿ.ಸಿ ಬೋಲ್ಟಿನಲ್ಲಿ ಹೆಚ್ಚಿನ ಬದಲಾವಣೆಗಳಿಲ್ಲ. ಬೋಲ್ಟಿನಲ್ಲೂ 5.2 ಇಂಚಿನ ಕ್ವಾಡ್ ಹೆಚ್.ಡಿ ಪರದೆ ಇರಲಿದೆ.

'ಅಕಾಡಿಯಾ' ಎಂಬ ರಹಸ್ಯನಾಮ.

'ಅಕಾಡಿಯಾ' ಎಂಬ ರಹಸ್ಯನಾಮ.

ಈಗ ಸೋರಿಕೆಯಾಗಿರುವ ಮಾಹಿತಿಯ ಪ್ರಕಾರ ಈ ಸ್ಮಾರ್ಟ್ ಫೋನಿಗೆ 'ಅಕಾಡಿಯಾ' ಎಂಬ ರಹಸ್ಯನಾಮವನ್ನಿರಿಸಲಾಗಿದೆ. ಈ ಮಾಹಿತಿಯು ಲಭ್ಯವಾಗಿರುವುದು ಎಕ್ಸ್.ಡಿ.ಎ ಸದಸ್ಯರಿಂದ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಆ್ಯಂಡ್ರಾಯ್ಡ್ ನೌಗಾಟ್ ಹೊಂದಿರುವ ಮೊದಲ ಹೆಚ್.ಟಿ.ಸಿ ಫೋನ್.

ಆ್ಯಂಡ್ರಾಯ್ಡ್ ನೌಗಾಟ್ ಹೊಂದಿರುವ ಮೊದಲ ಹೆಚ್.ಟಿ.ಸಿ ಫೋನ್.

ಹೆಚ್.ಟಿ.ಸಿ 10 ಸೇರಿದಂತೆ ಅನೇಕ ಫೋನುಗಳಿಗೆ ಆ್ಯಂಡ್ರಾಯ್ಡ್ ನೌಗಾಟ್ ಲಭ್ಯವಾಗಲಿದೆ ಎಂದು ಹೆಚ್.ಟಿ.ಸಿ ತಿಳಿಸಿದೆ. ಎಕ್ಸ್.ಡಿ.ಎ ಬಳಗದ ಲಾಬ್ ಟೂಫೆರ್ ಪ್ರಕಾರ ಹೆಚ್.ಟಿ.ಸಿ ಬೋಲ್ಟಿನಲ್ಲಿ ಆ್ಯಂಡ್ರಾಯ್ಡ್ ನೌಗಾಟ್ ಜೊತೆಗೆ ಕಂಪನಿಯ ಸೆನ್ಸ್ ಯುಐ 8.0 ಇರಲಿದೆ.

ಲೇಸರ್ ಆಟೋ ಫೋಕಸ್ ಇಲ್ಲ.

ಲೇಸರ್ ಆಟೋ ಫೋಕಸ್ ಇಲ್ಲ.

ಹೆಚ್.ಟಿ.ಸಿ 10ರಂತೆಯೇ ಬೋಲ್ಟಿನಲ್ಲೂ ಲೇಸರ್ ಆಟೋ ಫೋಕಸ್ ತಂತ್ರಜ್ಞಾನವಿರುವುದಿಲ್ಲ; ಕಳೆದ ತಿಂಗಳ ಇವಾನ್ ಬ್ಲಾಸ್ ನ ಟ್ವಿಟರ್ ಕೂಡ ಇದನ್ನು ದೃಡಪಡಿಸಿತ್ತು.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಅಕ್ಟೋಬರ್ ತಿಂಗಳ ಕೊನೆಯಲ್ಲಿ ಬಿಡುಗಡೆ.

ಅಕ್ಟೋಬರ್ ತಿಂಗಳ ಕೊನೆಯಲ್ಲಿ ಬಿಡುಗಡೆ.

ಇವಾನ್ ಬ್ಲಾಸ್ ಪ್ರಕಾರ ಹೆಚ್.ಟಿ.ಸಿ ಬೋಲ್ಟ್ ಅಕ್ಟೋಬರ್ ತಿಂಗಳ ಕೊನೆಯಲ್ಲಿ ಸ್ಪ್ರಿಂಟ್ ಮೂಲಕ ಅಮೆರಿಕಾದಲ್ಲಿ ಬಿಡುಗಡೆಯಾಗಲಿದೆ. ಭಾರತದಲ್ಲಿ ಬಿಡುಗಡೆಯಾಗುವ ದಿನಾಂಕದ ಬಗ್ಗೆ ಇನ್ನೂ ಯಾವುದೇ ಮಾಹಿತಿಯಿಲ್ಲ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
After manufacturing the Pixel smartphones for Google, HTC is now eyeing to launch a new flagship under their product portfolio. Last month, we have seen a new HTC smartphone leaked online and was dubbed as 'Bolt'.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X