Subscribe to Gizbot

ಆಂಡ್ರಾಯ್ಡ್ ಒನ್ ಲಾವಾ ಪಿಕ್ಸೆಲ್ VI ನ ಅಸಾಮಾನ್ಯ ವಿಶೇಷತೆಗಳು

Written By:

ಲಾವಾ ಇತ್ತೀಚೆಗಷ್ಟೇ ತನ್ನ "ಪಿಕ್ಸೆಲ್" ಸಿರೀಸ್ ಸ್ಮಾರ್ಟ್‌ಫೋನ್‌ಗಳ ಲಾಂಚ್ ಅನ್ನು ಮಾಡಿದೆ. ಈ ಸಿರೀಸ್‌ನ ಪ್ರಥಮ ಫೋನ್ ಪಿಕ್ಸೆಲ್ VI ಆಗಿದ್ದು, ಗೂಗಲ್‌ನೊಂದಿಗೆ ಸಂಯೋಜನೆ ಹೊಂದಿ ಅಭಿವೃದ್ಧಿಯನ್ನು ಕಂಡುಕೊಂಡಿರುವ ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ ಒನ್ ಪ್ರೊಗ್ರಾಮ್‌ನೊಂದಿಗೆ ಬಂದಿದೆ.

ಓದಿರಿ: ಕಚೇರಿ ದಾಖಲೆಗಳನ್ನು ಫೋನ್‌ನಲ್ಲಿರಿಸುವುದು ಎಷ್ಟು ಸೂಕ್ತ?

ಸ್ಮಾರ್ಟ್‌ಫೋನ್ ಹೆಚ್ಚು ಮನಸೆಳೆಯುವ ವಿಶೇಷತೆಗಳೊಂದಿಗೆ ಬಂದಿದ್ದು ಸಾಂಪ್ರದಾಯಿಕ ವಿನ್ಯಾಸ ನಿಮ್ಮನ್ನು ಆಕರ್ಷಿಸುವುದು ಖಂಡಿತ. ಇಂದಿನ ಲೇಖನದಲ್ಲಿ ಲಾವಾ ಪಿಕ್ಸೆಲ್ VI ವಿಶೇಷತೆಗಳನ್ನು ನೋಡೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಡಿಸ್‌ಪ್ಲೇ
  

ಫೋನ್ 5.5 ಇಂಚಿನ ಗಾಢ ಐಪಿಎಸ್ ಪೂರ್ಣ ಲ್ಯಾಮಿನೇಶನ್ ಎಚ್‌ಡಿ ಡಿಸ್‌ಪ್ಲೇಯೊಂದಿಗೆ ಬಂದಿದೆ. ಇದು ಸ್ಲಿಮ್ ವಿನ್ಯಾಸವನ್ನು ಹೊಂದಿದ್ದು ನಿಮ್ಮ ಅಂಗೈಯಲ್ಲಿ ಭದ್ರವಾಗಿ ನೆಲೆಗೊಳ್ಳುವಂತಿದೆ.

ವಿನ್ಯಾಸ
  

ಫೋನ್ ಅತ್ಯಾಧುನಿಕ ವಿನ್ಯಾಸದೊಂದಿಗೆ ಬಂದಿದೆ. ಉದ್ದ 76.3 ಎಮ್‌ಎಮ್ ಆಗಿದ್ದು ತೂಕ 8.5 ಎಮ್‌ಎಮ್ ಮತ್ತು 135 ಗ್ರಾಮ್ ಆಗಿದೆ.

ಪ್ರೊಸೆಸರ್
  

ಪಿಕ್ಸೆಲ್ VI, 1.3GHZ ಕ್ವಾಡ್ ಕೋರ್ ಪ್ರೊಸೆಸರ್‌ನೊಂದಿಗೆ ಬಂದಿದ್ದು, ಮಾಲಿ-400MP2 ಜಿಪಿಯು ಇದರಲ್ಲಿದೆ. 2ಜಿಬಿ RAM ಅನ್ನು ಡಿವೈಸ್ ಪಡೆದುಕೊಂಡಿದ್ದು ಆಂಡ್ರಾಯ್ಡ್ ಒನ್ ಇದರಲ್ಲಿ ಚಾಲನೆಯಾಗುತ್ತಿದೆ.

ಸಂಗ್ರಹಣೆ
  

ಫೋನ್ 32ಜಿಬಿ ಸಂಗ್ರಹಣಾ ಸಾಮರ್ಥ್ಯವನ್ನು ಪಡೆದುಕೊಂಡಿದ್ದು ಎಸ್‌ಡಿ ಕಾರ್ಡ್ ಬಳಸಿ ಇದನ್ನು ವಿಸ್ತರಿಸಬಹುದಾಗಿದೆ.

ಕ್ಯಾಮೆರಾ
  

ಫೋನ್ 13 ಎಮ್‌ಪಿ ರಿಯರ್ ಕ್ಯಾಮೆರಾವನ್ನು ಪಡೆದುಕೊಂಡಿದ್ದು ಉತ್ತಮ ಚಿತ್ರಗಳನ್ನು ತೆಗೆಯುವಲ್ಲಿ ಸಮರ್ಥ ಎಂದೆನಿಸಿದೆ.

ಸೆಲ್ಫಿ ಕ್ಯಾಮೆರಾ
  

ಇನ್ನು ಡಿವೈಸ್ 8 ಎಮ್‌ಪಿ ಸೆಲ್ಫಿ ಕ್ಯಾಮೆರಾವನ್ನು ಪಡೆದುಕೊಂಡು ಬಂದಿದ್ದು ಸೆಲ್ಫಿ ಪ್ರಿಯರು ಇದಕ್ಕೆ ಮನಸೋಲುವುದು ಖಂಡಿತ.

ಇಂಟರ್ಫೇಸ್
  

ಹೆಚ್ಚು ಗುಣಮಟ್ಟದ ಬಳಕೆದಾರ ಅನುಭವವನ್ನು ಡಿವೈಸ್ ನೀಡುತ್ತಿದ್ದು, ಆಂಡ್ರಾಯ್ಡ್‌ನ ಅತ್ಯುನ್ನತ ಬಳಕೆದಾರ ಇಂಟರ್ಫೇಸ್‌ನೊಂದಿಗೆ ಇದು ಬಂದಿದೆ.

ಬ್ಯಾಟರಿ
  

ಲಾವಾ ಪಿಕ್ಸೆಲ್ VI, 2560mAh ಬ್ಯಾಟರಿಯೊಂದಿಗೆ ಬಂದಿದ್ದು, ಆಂಡ್ರಾಯ್ಡ್ ಡಿವೈಸ್‌ನಲ್ಲಿ 90 ನಿಮಿಷಗಳ ದೀರ್ಘತೆಯನ್ನು ನೀಡುತ್ತದೆ.

ಸಂಪರ್ಕ
  

ಪಿಕ್ಸೆಲ್ VI ಒಂದು ಡ್ಯುಯಲ್ ಸಿಮ್ 3ಜಿ ಸಖ್ರಿಯಗೊಂಡಿರುವ ಡಿವೈಸ್ ಆಗಿದ್ದು ನಿಮ್ಮ ವೈಯಕ್ತಿಕ ಅಂತೆಯೇ ವೃತ್ತಿಪರ ಜೀವನವನ್ನು ಸಮತೋಲನಗೊಳಿಸುವದಲ್ಲಿ ಇದು ಉತ್ತಮವಾಗಿದೆ. ವೈರ್‌ಲೆಸ್ ಸಂಪರ್ಕಕ್ಕಾಗಿ ವೈಫೈ, ವೈಫೈ ಹಾಟ್‌ಸ್ಪಾಟ್, ಬ್ಲ್ಯೂಟೂತ್ ಅನ್ನು ಇದು ಒಳಗೊಂಡಿದೆ.

ಬೆಲೆ
  

ಸಿಲ್ವರ್ ಬಿಳಿ ಮತ್ತು ಚಿನ್ನದ ಬಣ್ಣದಲ್ಲಿ ಡಿವೈಸ್ ಲಭ್ಯವಿದ್ದು ಎಲ್ಲಾ ರಾಷ್ಟ್ರೀಯ ಮತ್ತು ಸ್ಥಳೀಯ ಮಳಿಗೆಗಳಾದ 4000 ಮಳಿಗೆಗಳಲ್ಲಿ ಡಿವೈಸ್ ಲಭ್ಯವಿದೆ. ಫ್ಲಿಪ್‌ಕಾರ್ಟ್‌ನಲ್ಲಿ ಡಿವೈಸ್ ರೂ 12,250 ಕ್ಕೆ ಲಭ್ಯವಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
The smartphone comes with extraordinary specifications along with the company's traditional design attributes, all packed in an affordable price segment. Here are the top 10 stunning features of Lava Pixel V1.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot