ಲೀ 1 ಎಸ್ ಬಜೆಟ್ ಬಳಕೆದಾರರಿಗೆ ಹೇಳಿಮಾಡಿಸಿರುವ ಫೋನ್ ಹೇಗೆ?

Written By:

ಲೀಕೊದ ಇತ್ತೀಚಿನ ಫ್ಲ್ಯಾಗ್‌ಶಿಪ್ ಫೋನ್ ಲೀ 1 ಎಸ್ ಮೆಟಲ್ ಯೂನಿಬಾಡಿ ಡಿಸೈನ್‌ನೊಂದಿಗೆ ಬಂದಿದ್ದು ಮಾರುಕಟ್ಟೆಯಲ್ಲಿ ಹೆಸರುವಾಸಿಯಾಗುತ್ತಿರುವ ಬ್ರ್ಯಾಂಡ್‌ಗಳಲ್ಲಿ ಲೀ 1ಎಸ್ ಕೂಡ ಒಂದು. ಏರ್‌ಕ್ರಾಫ್ಟ್ ಗ್ರೇಡ್ ಅಲ್ಯುಮಿನಿಯಮ್ ಅನ್ನು ಈ ಡಿವೈಸ್ ಪಡೆದುಕೊಂಡಿದ್ದು, ಇಂಡಸ್ಟ್ರಿಯಲ್ ವಿನ್ಯಾಸವನ್ನು ಇದು ಪಡೆದುಕೊಂಡಿದೆ.

ಬೆಜೆಲ್ ಲೆಸ್ ವಿನ್ಯಾಸವನ್ನು ಫೋನ್ ಪಡೆದುಕೊಂಡಿದ್ದು, ಪೂರ್ಣ ಫ್ಲೋಟಿಂಗ್ ಗ್ಲಾಸ್ ಅನ್ನು ಹೊಂದಿದೆ. ಪ್ರಸ್ತುತ ಹೆಚ್ಚು ವೈಶಿಷ್ಟ್ಯಗಳನ್ನೊಳಗೊಂಡು ಬಂದಿರುವ ಬಜೆಟ್ ಫೋನ್ ಎಂಬ ಹೆಗ್ಗಳಿಕೆಗೆ ಲೀ 1 ಎಸ್ ಒಳಗಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಅಳತೆ

ಅಳತೆ

#1

ಲೀ 1ಎಸ್ 13% ದಷ್ಟು ಸ್ಲಿಮ್ ಆಗಿದ್ದು 7.5 ಎಮ್‌ಎಮ್ ಅಳತೆಯನ್ನು ಪಡೆದುಕೊಂಡಿದೆ. ರೆಡ್ಮೀ ನೋಟ್ 3, 8.65 ಎಮ್‌ಎಮ್‌ ಅಳತೆಯನ್ನು ಪಡೆದುಕೊಂಡಿದ್ದು ಐಫೋನ್‌ನ 7.1 ಎಮ್‌ಎಮ್ ಐಫೋನ್ 6 ಎಸ್ ಪ್ಲಸ್‌ಗಿಂತ ಸಣ್ಣದಾಗಿದೆ. ಮೆಟಲ್ ವಿನ್ಯಾಸ ಆಕರ್ಷಣೆಯನ್ನು ಮಾತ್ರ ಹೆಚ್ಚಿಸದೇ ಸಿಗ್ನಲ್ ಸ್ವೀಕರಿಸುವುದನ್ನು ದ್ವಿಗುಣಗೊಳಿಸಿದೆ.

ಪೂರ್ಣ ಫ್ಲೋಟಿಂಗ್ ಗ್ಯಾಸ್ ವಿನ್ಯಾಸ

ಪೂರ್ಣ ಫ್ಲೋಟಿಂಗ್ ಗ್ಯಾಸ್ ವಿನ್ಯಾಸ

#2

ಪೂರ್ಣ ಫ್ಲೋಟಿಂಗ್ ಗ್ಯಾಸ್ ವಿನ್ಯಾಸವನ್ನು ಲೀ 1ಎಸ್ ಪಡೆದುಕೊಂಡಿದ್ದು ಉತ್ತಮ ಸ್ಕ್ರೀನ್ ಭದ್ರತೆಯನ್ನು ನೀಡುತ್ತಿದೆ. ಗೋರಿಲ್ಲಾ ಗ್ಲಾಸ್ 3 ಸ್ಕ್ರೀನ್ ಅನ್ನು ಇದು ಒದಗಿಸುತ್ತಿದ್ದು ಲೀ 1ಎಸ್ ಬಜೆಟ್ ಬೆಲೆಯಲ್ಲಿ ಅತ್ಯಮೂಲ್ಯ ವಿಶೇಷತೆಗಳೊಂದಿಗೆ ಬಂದಿದೆ.

ಅತ್ಯುತ್ತಮ ಕಾರ್ಯಕ್ಷಮತೆ

ಅತ್ಯುತ್ತಮ ಕಾರ್ಯಕ್ಷಮತೆ

#3

ಅತ್ಯುತ್ತಮ ಕಾರ್ಯಕ್ಷಮತೆಯನ್ನು ಡಿವೈಸ್ ಹೊಂದಿದ್ದು, ಅತಿ ಕಡಿಮೆ ಸಮಯದಲ್ಲಿ ಆನ್‌ಲೈನ್‌ನಲ್ಲಿ ಮಾರಾಟವಾಗಿ ಮಾರುಕಟ್ಟೆ ದಾಖಲೆಯನ್ನು ಮುರಿದಿದೆ. ಲೀ 1ಎಸ್ ಟೈಪ್ ಸಿ ಚಾರ್ಜರ್ ಅನ್ನು ಹೊಂದಿದ್ದು, 5 ನಿಮಿಷಗಳಲ್ಲಿ 3.5 ಗಂಟೆಗಳ ಟಾಕ್ ಟೈಮ್ ಅನ್ನು ಒದಗಿಸುತ್ತಿದೆ.

ಬೆಲೆ

ಬೆಲೆ

#4

ಫೋನ್ ರೂ 10,999 ಕ್ಕೆ ಲಭ್ಯವಾಗುತ್ತಿದ್ದು ಕಡಿಮೆ ಬೆಲೆಗೆ ಅತ್ಯುತ್ತಮ ವಿಶೇಷತೆಗಳೊಂದಿಗೆ ಬಂದಿದೆ. ನಿಜಕ್ಕೂ ಬಳಕೆದಾರರಿಗೆ ಇದು ಬಂಪರ್ ಕೊಡುಗೆ ಎಂದೆನಿಸಿದೆ.

ಆಂಡ್ರಾಯ್ಡ್ ಆಧಾರಿತ EUI ಸಿಸ್ಟಮ್

ಆಂಡ್ರಾಯ್ಡ್ ಆಧಾರಿತ EUI ಸಿಸ್ಟಮ್

#5

ಆಂಡ್ರಾಯ್ಡ್ ಆಧಾರಿತ EUI ಸಿಸ್ಟಮ್ ಅನ್ನು ಫೋನ್ ಹೊಂದಿದ್ದು ಈರೋಸ್ ಮತ್ತು ಯುಪ್ ಟಿವಿಗಳೊಂದಿಗೆ ಡಿವೈಸ್ ಒಪ್ಪಂದವನ್ನು ಮಾಡಿಕೊಂಡಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Le Eco's recent flagship killer Le 1s flaunts a trendy full metal uni-body design, which is one of the few brands in the market worldwide to boast of this.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot