ಸಂಪೂರ್ಣ ಗಾಜಿನಿಂದ ಮಾಡಿದ ಐಫೋನ್ 8

|

ಮುಂದಿನ ತಿಂಗಳು ಬಿಡುಗಡೆಯಾಗುವ ಐಫೋನ್ 7 ಮತ್ತು 7 ಪ್ಲಸ್ ಬಗೆಗಿನ ಸುದ್ದಿಗಳ ಮಧ್ಯೆ ಅಂತರ್ಜಾಲದಲ್ಲಿ ಐಫೋನ್ 8ರ ಬಗೆಗಿನ ಗಾಳಿ ಸುದ್ದಿಗಳೂ ಹರಿದಾಡುತ್ತಿವೆ.

ಸಂಪೂರ್ಣ ಗಾಜಿನಿಂದ ಮಾಡಿದ ಐಫೋನ್ 8

2017ರ ಆ್ಯಪಲ್ ಐಫೋನ್ ಬಗ್ಗೆ ಹಲವು ಗಾಳಿ ಸುದ್ದಿಗಳನ್ನು ನಾವು ಕೇಳಿದ್ದೇವೆ. ಒಂದು ಆಸಕ್ತಿದಾಯಕ ಗಾಳಿ ಸುದ್ದಿ ಎಂದರೆ ಈ ಫೋನ್ ಸಂಪೂರ್ಣ ಗಾಜಿನಿಂದ ತಯಾರಾಗಿರುತ್ತದೆ ಎನ್ನುವುದು. ಮೊದಲಿಗೆ, ಕೆ.ಜಿ.ಐ ವಿಶ್ಲೇಷಕ ಮಿಂಗ್-ಚಿ ಕುವೋ ಇದನ್ನು ವರದಿ ಮಾಡಿದರು. ನಂತರ, ಪೇಟೆಂಟ್ಲಿ ಆ್ಯಪಲ್ ಸಂಪೂರ್ಣ ಗಾಜಿನ ಫೋನನ್ನು 2017ರಲ್ಲಿ ಹೊರತರಲು ಆ್ಯಪಲ್ ತುಂಬಾ ಗಂಭೀರವಾಗಿ ಪ್ರಯತ್ನಿಸುತ್ತಿದೆ ಎಂದು ಹೇಳಿಕೆ ಕೊಟ್ಟಿತು.

ಓದಿರಿ: ಆಂಡ್ರಾಯ್ಡ್ ಫೋನ್‌ನಲ್ಲಿ ಜಿಪಿಎಸ್ ಸಿಗ್ನಲ್ ಉತ್ತಮಗೊಳಿಸುವುದು ಹೇಗೆ?

ವರದಿಯ ಪ್ರಕಾರ ಬಾಗುವ ಪರದೆಗಳ ಮೂಲಕ ಎಡ್ಜ್ ಪರದೆಗಳನ್ನು ತಯಾರಿಸಲಾಗಿದೆ. ಈ ಎಡ್ಜ್ ಪರದೆಯಲ್ಲಿ ಅನೇಕ ವರ್ಚ್ಯುಯಲ್ ಬಟನ್ನುಗಳು ಅಥವಾ ಸ್ವಿಚ್ಚುಗಳನ್ನು ಹಾಕಿ ಪರದೆಯ ಕಾರ್ಯನಿರ್ವಹಣೆಯನ್ನು ನಿಯಂತ್ರಿಸಬಹುದು. ಮೆಸೇಂಜಿಗ್, ಕ್ಯಾಮೆರಾ ಆ್ಯಪ್ ಮತ್ತು ಇನ್ನೂ ಅನೇಕ ಆ್ಯಪ್ ಗಳ ಶಾರ್ಟ್ ಕಟ್ ಗಳಾಗಿ ಕೂಡ ಈ ವರ್ಚ್ಯುಯಲ್ ಬಟನ್ನುಗಳನ್ನ ಉಪಯೋಗಿಸಬಹುದು.

ವರದಿಗಳು ಬಂದ ನಂತರ ಹೊಚ್ಚ ಹೊಸ ಪೂರ್ಣ ಗಾಜಿನ ಐಫೋನ್ 8 ಹೇಗೆ ಕಾಣಿಸಬಹುದು ಎಂದು ಹಲವರು ಪರಿಕಲ್ಪಿಸಿದ್ದಾರೆ. ಕೆಳಗಿನ ಚಿತ್ರಗಳನ್ನು ನೋಡಿ ಅಚ್ಚರಿಪಡಿ!

ಐಫೋನ್ 8ರಲ್ಲಿ ಸ್ಟೀರಿಯೋ ಸ್ಪೀಕರ್ಸ್.

ಐಫೋನ್ 8ರಲ್ಲಿ ಸ್ಟೀರಿಯೋ ಸ್ಪೀಕರ್ಸ್.

ಸ್ಯಾಫೈರ್ ಗಾಜಿನ ದೇಹದ ಜೊತೆಗೆ ಐಫೋನ್ 8ರಲ್ಲಿ ಐಪ್ಯಾಡ್ ಪ್ರೋದಲ್ಲಿರುವಂತೆ ಸ್ಟೀರಿಯೋ ಸ್ಪೀಕರ್ರುಗಳಿರುತ್ತವೆ.

ಐಫೋನ್ 8 ವೈರ್ ಲೆಸ್ ಚಾರ್ಜಿಂಗನ್ನೂ ಬೆಂಬಲಿಸಬಹುದು.

ಐಫೋನ್ 8 ವೈರ್ ಲೆಸ್ ಚಾರ್ಜಿಂಗನ್ನೂ ಬೆಂಬಲಿಸಬಹುದು.

ಆ್ಯಪಲ್ ನ ಅಭಿಮಾನಿಗಳ ಪ್ರಕಾರ ಐಫೋನುಗಳಲ್ಲಿ ಇಲ್ಲದಿದ್ದ ಒಂದು ಗುಣವೆಂದರೆ ವೈರ್ ಲೆಸ್ ಚಾರ್ಜಿಂಗ್. ವೈರುಗಳ ಸಹಾಯವಿಲ್ಲದೆಯೇ ತಮ್ಮ ಫೋನುಗಳನ್ನು ಚಾರ್ಜ್ ಮಾಡಿಕೊಳ್ಳುವ ಸೌಕರ್ಯ ಆ್ಯಪಲ್ ಬಳಕೆದಾರರಿಗೆ ಇರಲಿಲ್ಲ. ಮುಂದಿನ ವರುಷ ಬಿಡುಗಡೆಯಾಗಲಿರುವ ಐಫೋನ್ 8 ಈ ಕೊರತೆಯನ್ನು ನೀಗಿಸಬಹುದು.

30 ಪರ್ಸೆಂಟ್ ತೆಳುವಾದ ಫೋನು.

30 ಪರ್ಸೆಂಟ್ ತೆಳುವಾದ ಫೋನು.

ಲಭ್ಯವಿರುವ ಪರಿಕಲ್ಪನೆಗಳ ಪ್ರಕಾರ, ಐಫೋನ್ 8 ಸದ್ಯ ಮಾರುಕಟ್ಟೆಯಲ್ಲಿರುವ ಆ್ಯಪಲ್ ಫೋನುಗಳಿಗಿಂತ 30 ಪರ್ಸೆಂಟ್ ತೆಳುವಾಗಿರುತ್ತದೆ. 16:9 ರೆಸಲ್ಯೂಷನ್ನಿನ ಪರದೆಯೊಂದಿಗೆ ಬರುತ್ತದೆ.

4ಕೆ ಕ್ಯಾಮೆರಾ ಮತ್ತು ಪ್ರೊರೆಸ್ ತಂತ್ರಜ್ಞಾನ.

4ಕೆ ಕ್ಯಾಮೆರಾ ಮತ್ತು ಪ್ರೊರೆಸ್ ತಂತ್ರಜ್ಞಾನ.

ಐಫೋನ್ 8 ರ ಹೋಮ್ ಬಟನ್ನಿನಲ್ಲಿ ಬೆರಳಚ್ಚು ತಂತ್ರಜ್ಞಾನವಿರುತ್ತದೆ. ಈ ಹೊಸ ಸಾಧನದಲ್ಲಿ 4ಕೆ ಕ್ಯಾಮೆರಾ ಮತ್ತು ಪ್ರೊರೆಸ್ ತಂತ್ರಜ್ಞಾನ ಇರುವ ನಿರೀಕ್ಷೆಯಿದೆ.

ರಿಮ್ ಲೆಸ್ ಪರದೆ ವಾಸ್ತವವಾಗಬಹುದು.

ರಿಮ್ ಲೆಸ್ ಪರದೆ ವಾಸ್ತವವಾಗಬಹುದು.

ಕ್ರಾಂತಿಕಾರಿ ಇ-ಸಿಮ್ ಮತ್ತು ರಿಮ್ ಲೆಸ್ ಪರದೆಯನ್ನು ನಾವು ನಿರೀಕ್ಷಿಸಬಹುದು. ಈ ವಿನ್ಯಾಸದಲ್ಲಿ ಐಫೋನ್ ಹೊರಬಂದರೆ ಅದು ಖಂಡಿತವಾಗಿಯೂ ಭವಿಷ್ಯತ್ತಿನ ಫೋನಾಗಲಿದೆ.

Best Mobiles in India

English summary
The Apple iPhone 8 that is rumored to be launched in 2017 is expected to feature an all glass design. Here we have come up with some concepts of the iPhone 8 with a slim and rimless design. Take a look at the concepts from here.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X