ಲೀ 1 ಎಸ್: 20 ಸೆಕೆಂಡ್‌ಗಳಲ್ಲಿ 95000 ಆರ್ಡರ್‌ ಕಂಡ ಬಜೆಟ್ ಫೋನ್

By Shwetha
|

ಲೀ 1 ಎಸ್ ಬರೇ 20 ಸೆಕೆಂಡ್‌ಗಳಲ್ಲಿ 95000 ಆರ್ಡರ್‌ಗಳನ್ನು ಸ್ವೀಕರಿಸಿದೆ! ಇಂದಿನ ಫ್ಲ್ಯಾಶ್ ಸೇಲ್‌ಗೆ ಮುನ್ನವೇ ನೋಂದಣಿ ಸಂಖ್ಯೆಯು 10.3 ಲಕ್ಷಗಳ ದಾಖಲೆಯನ್ನು ತಲುಪಿದೆ.

ಲೀಕೊ ಮೂರು ದಾಖಲೆಗಳನ್ನು ಮೊತ್ತೊಮ್ಮೆ ಹೊಂದಿದೆ. ಏಕೈಕ ಫ್ಲ್ಯಾಶ್ ಸೇಲ್‌ನಲ್ಲೇ ಈ ಡಿವೈಸ್ ಹೆಚ್ಚು ಸಂಖ್ಯೆಗಳ ಆರ್ಡರ್ ಅನ್ನು ಪಡೆದುಕೊಂಡಿದೆ. ಅತಿ ಕಡಿಮೆ ಸಮಯದಲ್ಲೇ ಹೆಚ್ಚು ಆರ್ಡರ್ ಮತ್ತು ಹೆಚ್ಚು ಪೂರ್ವ ಮಾರಾಟ ನೋಂದಣಿ ಸಂಖ್ಯೆಯನ್ನು ಈ ಡಿವೈಸ್ ಮುಡಿಗೇರಿಸಿಕೊಂಡಿದೆ. ಬನ್ನಿ ಇಂದಿನ ಈ ಸಾಧಕನ ಕುರಿತಾದ ಹೆಚ್ಚಿನ ಮಾಹಿತಿಗಳನ್ನು ಸ್ಲೈಡರ್‌ಗಳಲ್ಲಿ ಪರಿಶೀಲಿಸಿಕೊಳ್ಳೋಣ.

20 ಸೆಕೆಂಡ್‌ಗಳಲ್ಲಿ 95000 ಆರ್ಡರ್‌

20 ಸೆಕೆಂಡ್‌ಗಳಲ್ಲಿ 95000 ಆರ್ಡರ್‌

ಲೀಕೊದ ಸಿಒಒ, ಅತುಲ್ ಜೈನ್ ಗ್ರಾಹಕರಿಗೆ ಧನ್ಯವಾದಗಳನ್ನು ಅರ್ಪಿಸಿದ್ದು ಇವರುಗಳ ಸಹಕಾರದಿಂದಲೇ ನಾವು ಇಂತಹ ಸಂಖ್ಯೆಯನ್ನು ತಲುಪಿದ್ದೇವೆ ಎಂಬುದಾಗಿ ತಿಳಿಸಿದ್ದಾರೆ. 1 ಮಿಲಿಯನ್ ಪ್ರಿ ಸೇಲ್ ಅನ್ನು ನಾವು ತಲುಪಿರುವುದು ನಿಜಕ್ಕೂ ನಮ್ಮ ಸಂತಸವನ್ನು ಇಮ್ಮಡಿಗೊಳಿಸಿದ್ದು 20 ಸೆಕೆಂಡ್‌ಗಳಲ್ಲಿ 95000 ಆರ್ಡರ್‌ಗಳನ್ನು ನಾವು ತಲುಪಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ ಎಂದೆನಿಸಿದೆ.

ಲೀ ಮ್ಯಾಕ್ಸ್ ಮತ್ತು ಲೀ 1ಎಸ್

ಲೀ ಮ್ಯಾಕ್ಸ್ ಮತ್ತು ಲೀ 1ಎಸ್

ಫೋನ್‌ಗಳ ಲಾಂಚ್ ಸಮಯದಲ್ಲಿ ಲೀಕೊ ಎರಡು ಸೂಪರ್ ಫೋನ್‌ಗಳಾದ ಲೀ ಮ್ಯಾಕ್ಸ್ ಮತ್ತು ಲೀ 1ಎಸ್ ಅನ್ನು ಬಿಡುಗಡೆ ಮಾಡಿತ್ತು. ತನ್ನ ಅತ್ಯಾಕರ್ಷಕ ಫೀಚರ್‌ಗಳು ಮತ್ತು ಕೈಗೆಟಕುವ ಬೆಲೆಯಲ್ಲಿ ಈ ಫ್ಲ್ಯಾಗ್‌ಶಿಪ್ ಕಿಲ್ಲರ್ ಸ್ಮಾರ್ಟ್‌ಫೋನ್ ಮಾರುಕಟ್ಟೆಯನ್ನು ಆಳುವ ಎಲ್ಲಾ ಲಕ್ಷಣವನ್ನು ಗೋಚರಿಸುತ್ತಿದೆ.

24 ಗಂಟೆ

24 ಗಂಟೆ

ಲಾಂಚ್ ಈವೆಂಟ್‌ನ 24 ಗಂಟೆಗಳೊಳಾಗಿ ಲೀ 1 ಎಸ್‌ಗಾಗಿ ನೋಂದಾವಣೆಯು ಪ್ರಥಮ ಫ್ಲ್ಯಾಶ್ ಸೇಲ್ ಮೂಲಕ ಆರಂಭವಾಗಿದ್ದು ಇದು 1 ಲಕ್ಷವನ್ನು ದಾಟಿದೆ. 2 ಸೆಕೆಂಡ್‌ಗಳಲ್ಲಿ 70,000 ಫೋನ್‌ಗಳ ಮಾರಾಟದೊಂದಿಗೆ 605,000 ಅನ್ನು ಇದು ತಲುಪಿದೆ. ಇದು ಹೊಸ ದಾಖಲೆ ಎಂದೆನಿಸಿದೆ.

ರೂ 10,999 ಬೆಲೆ

ರೂ 10,999 ಬೆಲೆ

ಲೀ 1ಎಸ್ ರೂ 10,999 ಬೆಲೆಯಲ್ಲಿ ಮೆಟಲ್ ಬಾಡಿಯನ್ನು ಪಡೆದುಕೊಂಡಿದೆ, ವಿಶ್ವದ ಪ್ರಥಮ ಸರ್ಫೇಸ್ ಫಿಂಗರ್ ಸ್ಕ್ಯಾನರ್ ಅನ್ನು ಇದು ಪಡೆದುಕೊಂಡಿದ್ದು, 5.5 ಇಂಚಿನ ಎಫ್‌ಎಚ್‌ಡಿ ಡಿಸ್‌ಪ್ಲೇಯನ್ನು ಇದು ಹೊಂದಿದೆ. 3ಜಿಬಿ RAM ಮತ್ತು 32 ಜಿಬಿ ಸಂಗ್ರಹಣೆಯನ್ನು ಡಿವೈಸ್ ಪಡೆದುಕೊಂಡಿದ್ದು, ಡ್ಯುಯಲ್ ಸಿಮ್ ಕಾರ್ಡ್ ಸ್ಲಾಟ್‌ಗಳನ್ನು ಡಿವೈಸ್ ಒಳಗೊಂಡಿದೆ.

ಚೀನಾದಲ್ಲಿ 3 ಮಿಲಿಯನ್ ಯೂನಿಟ್‌ ಹೆಚ್ಚಿನ ಮಾರಾಟ

ಚೀನಾದಲ್ಲಿ 3 ಮಿಲಿಯನ್ ಯೂನಿಟ್‌ ಹೆಚ್ಚಿನ ಮಾರಾಟ

ಫೋನ್‌ನ ರಿಯರ್ ಕ್ಯಾಮೆರಾ 13 ಮೆಗಾಪಿಕ್ಸೆಲ್ ಆಗಿದ್ದು, ಮುಂಭಾಗ ಕ್ಯಾಮೆರಾ 5 ಮೆಗಾಪಿಕ್ಸೆಲ್ ಎಂದೆನಿಸಿದೆ. ಇತರ ಮಾರುಕಟ್ಟೆಗಳಲ್ಲಿ ಕೂಡ ಫೋನ್ ಪ್ರಸಿದ್ಧಿಯನ್ನು ಪಡೆದುಕೊಂಡಿದ್ದು 3 ತಿಂಗಳಲ್ಲೇ ಚೀನಾದಲ್ಲಿ 3 ಮಿಲಿಯನ್ ಯೂನಿಟ್‌ಗಳಗಿಂತಲೂ ಹೆಚ್ಚಿನ ಮಾರಾಟವನ್ನು ಕಂಡಿದೆ. 5 ಗಂಟೆಗಳ ಕ್ವಿಕ್ ಚಾರ್ಜ್ ಅನ್ನು ಇದು ಒದಗಿಸುತ್ತಿದ್ದು ಬ್ಯುಸಿ ದಿನದಲ್ಲಿ ಕೂಡ ಈ ಫೋನ್ ನಿಮ್ಮ ಬಯಕೆಗೆ ತಕ್ಕಂತೆ ನಿಮಗೆ ಸಹಕಾರಿಯಾಗಲಿದೆ.

Best Mobiles in India

English summary
Le 1s receives a record 95000 orders received within 20 seconds ! Prior to the flash sale today, the registration number reached a record high of 10.30 lacs.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X