Subscribe to Gizbot

'ಲೆನೊವೋ ವೈಬ್ ಕೆ5 ನೋಟ್'ಗೆ VoLTE ಅಪ್‌ಡೇಟ್‌: ಜಿಯೋ ಸಿಮ್‌ ಸಪೋರ್ಟ್

Written By:

ಲೆನೊವೋ ತನ್ನ ಕೆ ಸೀರೀಸ್ ಸ್ಮಾರ್ಟ್‌ಫೋನ್‌ ನಲ್ಲಿ ಕೆ5 ನೋಟ್‌ ಅನ್ನು ಆಗಸ್ಟ್‌ನಲ್ಲಿ ಲಾಂಚ್‌ ಮಾಡಿತ್ತು. ಲೆನೊವೋ'ದ ಕೆ5 ನೋಟ್ ಸ್ಮಾರ್ಟ್‌ಫೋನ್ ಸೋಶಿಯಲ್ ಮೀಡಿಯಾ ಸಮಾರ್ಥ್ಯ ಮತ್ತು ಥಿಯೇಟರ್ ಮ್ಯಾಕ್ಸ್ ಫೀಚರ್‌ಗಳನ್ನು ಹೊಂದಿತ್ತು. ಆದರೆ 4G VoLTE ಸಪೋರ್ಟ್ ಕೊರತೆ ಮಾತ್ರ ಇತ್ತು.

'ಲೆನೊವೋ ವೈಬ್ ಕೆ5 ನೋಟ್'ಗೆ VoLTE ಅಪ್‌ಡೇಟ್‌: ಜಿಯೋ ಸಿಮ್‌ ಸಪೋರ್ಟ್

ಅಂದಹಾಗೆ ಕಂಪನಿ ಇತ್ತೀಚೆಗೆ ಕೆ5 ನೋಟ್ ಸ್ಮಾರ್ಟ್‌ಫೋನ್‌ಗೆ ಹೊಸ ಅಪ್‌ಡೇಟ್ ಅನ್ನು ನೀಡಿದ್ದು, ಸಾಫ್ಟ್‌ವೇರ್‌ ಅಪ್‌ಡೇಟ್‌ನಲ್ಲಿ VoLTE ಸಪೋರ್ಟ್ ನೀಡಿದೆ. ಬಳಕೆದಾರರು ಈ ಸ್ಮಾರ್ಟ್‌ಫೋನ್‌ನಲ್ಲಿ ಇನ್ನುಮುಂದೆ VoLTE ಕರೆಯನ್ನು ರಿಲಾಯನ್ಸ್ ಜಿಯೋ ನೆಟ್‌ವರ್ಕ್‌ನಿಂದ ಯಾವುದೇ ಆಪ್‌ಗಳ ಡೌನ್‌ಲೋಡ್ ಇಲ್ಲದೇ ಮಾಡಬಹುದು.

ಲೆನೊವೋದ 4GB RAM 'ವೈಬ್ ಕೆ5 ನೋಟ್‌' ಭಾರತದಲ್ಲಿ ಲಾಂಚ್‌

ಸಾಫ್ಟ್‌ವೇರ್‌ ಅಪ್‌ಡೇಟ್‌ ಈಗಾಗಲೇ ಭಾರತದ ಸ್ಮಾರ್ಟ್‌ಫೋನ್‌ಗಳಿಗೆ ಆರಂಭವಾಗಿದ್ದು, ಶೀಘ್ರದಲ್ಲಿ ಬಳಕೆದಾರರಿಗೆ ಲಭ್ಯವಾಗಲಿದೆ ಎಂದು ಕಂಪನಿ ಹೇಳಿದೆ.

'ಲೆನೊವೋ ವೈಬ್ ಕೆ5 ನೋಟ್'ಗೆ VoLTE ಅಪ್‌ಡೇಟ್‌: ಜಿಯೋ ಸಿಮ್‌ ಸಪೋರ್ಟ್

ಲೆನೊವೋ ಕೆ5 ನೋಟ್ ಬಳಕೆದಾರರು ಸಾಫ್ಟ್‌ವೇರ್‌ ಅಪ್‌ಡೇಟ್‌ಗಾಗಿ Settings>>About phone>>System Update ಟ್ಯಾಪ್‌ ಮಾಡಿ. ಹೊಸ ಅಪ್‌ಡೇಟ್‌ ಸಾಫ್ಟ್‌ವೇರ್‌ ವರ್ಸನ್‌ S312 ಗೆ ಅಪ್‌ಡೇಟ್‌ ಆಗುತ್ತದೆ.

ಅಂದಹಾಗೆ ಲೆನೊವೋ ವೈಬ್‌ ಕೆ5 ನೋಟ್ 3GB/4GB RAM, 5.5 ಇಂಚಿನ FHD IPS ಡಿಸ್‌ಪ್ಲೇ, 64 ಬಿಟ್ ಆಕ್ಟಾ ಕೋರ್ ಮೀಡಿಯಾ ಟೆಕ್ ಹಿಲಿಯೋ P10 ಪ್ರೊಸೆಸರ್, 13MP ಹಿಂಭಾಗ ಕ್ಯಾಮೆರಾ ಮತ್ತು 8MP ಸೆಲ್ಫಿ ಕ್ಯಾಮೆರಾ ಫೀಚರ್‌ನೊಂದಿಗೆ ಲಾಂಚ್‌ ಆಗಿತ್ತು.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

English summary
Lenovo K5 Note Receives VoLTE Update. To know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot