ಫ್ಲಾಶ್‌ಸೇಲ್‌ನಲ್ಲಿ 10,999 ರೂ,ಗೆ 4GB RAM "ಲೆನೊವೂ ಕೆ6 ಪವರ್‌" ಸ್ಮಾರ್ಟ್‌ಫೋನ್!!

Written By:

ಇತ್ತೀಚಿಗಷ್ಟೆ ಲಾಂಚ್ ಆದ ಲೆನೊವೋ ಕೆ6 ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಹವಾ ಎಬ್ಬಿಸುತ್ತಿರುವುದು ಎಲ್ಲರಿಗೂ ಗೊತ್ತಿದೆ. ಇನ್ನು ಸಿಹಿ ಸುದ್ದಿ ಏನೆಂದರೆ 4GB RAM ಹೊಂದಿರುವ "ಲೆನೊವೂ ಕೆ6 ಪವರ್‌" ಸ್ಮಾರ್ಟ್‌ಫೋನ್ ಕೇವಲ 10,999 ರೂ,ಗೆ ಮಾರಾಟಕ್ಕಿದೆ.!!

ಹೌದು, ಜನವರಿ 31 ರಂದು ಆಯೋಜನೆಯಾಗಿರುವ ಫ್ಲಿಪ್‌ಕಾರ್ಟ್ ಫ್ಲಾಶ್‌ಸೇಲ್‌ನಲ್ಲಿ "ಲೆನೊವೋ ಕೆ6 ಪವರ್‌" ಸ್ಮಾರ್ಟ್‌ಫೋನ್ ಕೇವಲ 10,999 ರೂ,ಗೆ ಮಾರಾಟಕ್ಕಿದೆ. ಲೆನೊವೋ ಕೆ6 ಪವರ್‌ಫ್ಲಾಶ್‌ಸೇಲ್ ಮಧ್ಯಾಹ್ನ 12 ಗಂಟೆಗೆ ಆಯೋಜನೆಯಾಗಿದ್ದು, ಸ್ಮಾರ್ಟ್‌ಫೋನ್‌ ಪ್ರಿಯರು ಅತ್ಯುತ್ತಮ ಫೀಚರ್ಸ್ ಹೊಂದಿರುವ ಸ್ಮಾರ್ಟ್‌ಫೋನ್‌ ಖರೀದಿಸಲು ಇದು ಸಕಾಲ.

ದೇಶದಾದ್ಯಂತ ಉಚಿತ ವೈ-ಫೈ ನೀಡುವ ಫೇಸ್‌ಬುಕ್ ಆಸೆ ಜೀವಂತ!!

10,999 ರೂ,ಗೆ ಬೆಲೆಗೆ ಲೆನೊವೂ ಹೊಂದಿರುವ ಫೀಚರ್‌ಗಳು ಶಿಯೋಮಿಯ ಎಮ್‌ ಐ 4 ಸ್ಮಾರ್ಟ್‌ಫೋನ್‌ಗಿಂತಲೂ ಹೆಚ್ಚಿದ್ದು, ಸ್ನಾಪ್‌ಡ್ರಾಗನ್ 430 ಪ್ರೊಸೆಸರ್ ಹೊಂದಿರುವ ನೂತನ ಲೆನೊವೋ ಕೆ6 ಪವರ್ ಬೇರೆ ಏನೆಲ್ಲಾ ಫೇಚರ್ಸ್‌ಗಳನ್ನು ಹೊಂದಿದೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಅತ್ಯತ್ತಮ ಲೋಹದ ವಿನ್ಯಾಸ

ಅತ್ಯತ್ತಮ ಲೋಹದ ವಿನ್ಯಾಸ

ಮೊದಲೇ ಹೇಳಿದಂತೆ ಲೆನೊವೋ ಮೊಬೈಲ್ ವಿನ್ಯಾಸಕ್ಕೆ ಹೆಚ್ಚು ಒತ್ತು ಕೊಡುತ್ತದೆ. ಹಿಡಿದರೆ ಹಿತಕರ ಅನುಭವವಾಗುವ ಅತ್ಯತ್ತಮ ಲೋಹದ ವಿನ್ಯಾಸವನ್ನು ಮೊಬೈಲ್ ಹೊಂದಿದೆ. ಡಾರ್ಕ್ ಗ್ರೇ, ಸಿಲ್ವರ್‌ ಮತ್ತು ಗೋಲ್ಡ್‌ ಬಣ್ಣಗಳಲ್ಲಿ ಮೊಬೈಲ್ ಲಭ್ಯವಿದೆ.

ಡಿಸ್‌ಪ್ಲೇ ಮತ್ತು ಕ್ಯಾಮರಾ.

ಡಿಸ್‌ಪ್ಲೇ ಮತ್ತು ಕ್ಯಾಮರಾ.

ಲೆನೊವೋ ಕೆ6 ಪವರ್ 5 ಇಂಚ್ ಡಿಸ್‌ಪ್ಲೇ ಹೊಂದಿದ್ದು, ಕ್ರಮವಾಗಿ 13MP ಮತ್ತು 8MP ಕ್ಯಾಮರಾವನ್ನು ಒಳಗೊಂಡಿದೆ. ಸೆಲ್ಫಿಗಾಗಿ ಉತ್ತಮ ಗುಣಮಟ್ಟದ ಕ್ಯಾಮರಾ ರೂಪಿಸಲಾಗಿದೆ.

4GB ರ್ಯಾಮ್ ಮತ್ತು 32 GB ಒಳ ಸಂಗ್ರಹಣ ಸಾಮರ್ಥ್ಯ

4GB ರ್ಯಾಮ್ ಮತ್ತು 32 GB ಒಳ ಸಂಗ್ರಹಣ ಸಾಮರ್ಥ್ಯ

430 ಆಕ್ಟಕೋರ್ ಪ್ರೊಸೆಸರ್ ಹೊಂದಿರುವ ಲೆನೊವೋ ಕೆ6 ಪವರ್ 4 GB ರ್ಯಾಮ್ ಮತ್ತು 32 GB ಒಳ ಸಂಗ್ರಹಣೆ ಸಾಮರ್ಥ್ಯ ಸೌಲಭ್ಯವನ್ನು ಹೊಂದಿದೆ. ಇನ್ನು 128 GB ವರೆಗೂ ಸಂಗ್ರಹಣಾ ಸಾಮರ್ಥ್ಯ ಹೆಚ್ಚಿಸಬಹುದಾಗಿದೆ.

ಫಿಂಗರ್‌ಪ್ರಿಂಟ್ ಸೆನ್ಸಾರ್.

ಫಿಂಗರ್‌ಪ್ರಿಂಟ್ ಸೆನ್ಸಾರ್.

ಆಂಡ್ರಾಯ್ಡ್ 6.0 ಆಪರೇಟಿಂಗ್ ಸಿಸ್ಟಮ್ ಹೊಂದಿರುವ ಲೆನೊವೋ ಕೆ6 ಪವರ್ ಇತ್ತಿಚಿನ ಫೀಚರ್ ಫಿಂಗರ್‌ಪ್ರಿಂಟ್ ಸೆನ್ಸಾರ್ ಒಳಗೊಂಡಿದೆ.

4G LTE ಮತ್ತು ಉತ್ತಮ ಧ್ವನಿ

4G LTE ಮತ್ತು ಉತ್ತಮ ಧ್ವನಿ

ಮೊಬೈಲ್ ಪ್ರಿಯರು ಇಷ್ಟಪಡುವಂತಹ ಎಲ್ಲಾ ಸೌಲಭ್ಯಗಳನ್ನು ಹೊಂದಿರುವ ಕೆ6 ಪವರ್ 4G LTE ಗೆ ಸಪೋರ್ಟ್ ಮಾಡುತ್ತದೆ. ಜೊತೆಗೆ ಉತ್ತಮ ಗುಣಮಟ್ಟದ ಧ್ವನಿಯನ್ನು ನೀಡಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
lenovo Priced at Rs 10,999, the smartphone will be available exclusively on Flipkart starting from 31st January, 2017 at 12 noon.to know more visit to kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot