4G ಸಪೋರ್ಟ್ ಮಾಡುವ ಲಿನೋವೋ ವೈಬ್ ಬಿ: ಬೆಲೆ 5,799 ರೂ. ಮಾತ್ರ..!
ಚೀನಾದ ಮೂಲದ ಲಿನೋವೋ ಬಜೆಟ್ ಸ್ಮಾರ್ಟ್‌ಪೋನೊಂದನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ.
ಭಾರತೀಯ ಮಾರುಕಟ್ಟೆಯಲ್ಲಿ ಅತೀ ಹೆಚ್ಚಿನ ಗ್ರಾಹಕರನ್ನು ಹೊಂದಿರುವ ಚೀನಾದ ಮೂಲದ ಲಿನೋವೋ ಬಜೆಟ್ ಸ್ಮಾರ್ಟ್‌ಪೋನೊಂದನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ. ಒಟ್ಟಿನಲ್ಲಿ ಭಾರತದ ಮಾರುಕಟ್ಟೆಯಲ್ಲಿ ಇದು ಹೊಸ ಅಲೆಯನ್ನು ಸೃಷ್ಟಿಸಲಿದೆ.

ಓದಿರಿ: ಪೇಟಿಎಂ ಬಳಕೆದಾರರೇ ಈ ಸ್ಟೋರಿ ನೋಡಿ: ನೀವು 2% ಶುಲ್ಕ ಕಟ್ಟಬೇಕಾದಿತು..!!
ಲಿನೋವೋ ವೈಬ್ ಬಿ 5,799 ರೂಗಳಿಗೆ ಮಾರಾಟವಾಗಲಿದ್ದು, ಮಾರ್ಚ್ 10 ರಿಂದ ಮಾರುಕಟ್ಟೆಯಲ್ಲಿ ಈ ಪೋನು ದೊರೆಯಲಿದೆ. ಆರಂಭಿಕ ಬೆಲೆಯ ಸ್ಮಾರ್ಟ್‌ಪೋನಿನಲ್ಲಿ ಇದು ಹೊಸ ಹವಾ ಹುಟ್ಟಿಹಾಕಲಿದೆ.

4.5 ಇಂಚಿನ ಪರದೆ:
ಲಿನೋವೋ ಕಂಪನಿಯ ಹೊಸ ಪೋನ್ ಲಿನೋವೋ ವೈಬ್ ಬಿ 4.5 ಇಂಚಿನ ಪರದೆಯನ್ನು ಹೊಂದಿದ್ದು, 480x854p ರೆಸಲ್ಯೂಷನ್ ಗುಣಮಟ್ಟವನ್ನು ಹೊಂದಿದೆ.

1GHz ವೇಗದ ಪ್ರೋಸೆಸರ್:
1GHz ವೇಗದ ಪ್ರೋಸೆಸರ್ ಹೊಂದಿರುವ ಲಿನೋವೋ ಕಂಪನಿಯ ಹೊಸ ಪೋನ್ ಲಿನೋವೋ ವೈಬ್ ಬಿ, MediaTek ಪ್ರೋಸೆಸರ್ ಹೊಂದಿದೆ ಎನ್ನಲಾಗಿದೆ. 1GB RAM ಈ ಪೋನಿನಲ್ಲಿದೆ. 4G ಸಪೋರ್ಟ್ ಮಾಡಲಿದೆ.

5 MP ಕ್ಯಾಮೆರಾ:
ಲಿನೋವೋ ವೈಬ್ ಬಿ ಹಿಂಭಾಗದಲ್ಲಿ 5 MP ಕ್ಯಾಮೆರಾವನ್ನು ಹೊಂದಿದ್ದು, ಮುಂಭಾಗದಲ್ಲಿ 2 MP ಕ್ಯಾಮೆರಾವನ್ನು ಅಳವಡಿಸಲಾಗಿದೆ. ಅಲ್ಲದೇ ಹಿಂಭಾಗದಲ್ಲಿ LED ಫ್ಲಾಷ್ ಲೈಟ್ ನೀಡಲಾಗಿದೆ.

2000mAh ಬ್ಯಾಟರಿ:
2000mAh ಬ್ಯಾಟರಿ ಈ ಪೋನಿನಲ್ಲಿ ಅಳವಡಿಸಲಾಗಿದೆ. 8GB ಇಂಟರ್ನಲ್ ಮೆಮೊರಿಯನ್ನು ಹೊಂದಿದೆ. ಕಾರ್ಡ್ ಮೂಲಕ 32GB ಮೆಮೊರಿ ಹೆಚ್ಚಿಸಿಕೊಳ್ಳಬಹುದಾಗಿದೆ.


Click it and Unblock the Notifications








