ಲಿನೊವೊ Z2 ಪ್ಲಸ್: ನಿಮಗೆ ಗೊತ್ತಿರಬೇಕಾದ ಹತ್ತು ವಿಶೇಷತೆಗಳು.

|

ಚೀನಾದ ಟೆಕ್ ದೈತ್ಯ ಲಿನೊವೊ ಇತ್ತೀಚೆಗೆ Z2 ಪ್ಲಸ್ ಫೋನನ್ನು ಬಿಡುಗಡೆಗೊಳಿಸಿತು. ಇದು ಝುಕ್ Z2 ಸ್ಮಾರ್ಟ್ ಫೋನಿನ ಮತ್ತೊಂದು ಹೆಸರು. ಉತ್ತಮ ಹಾರ್ಡ್ ವೇರ್ ಕೊಡುವುದರ ಜೊತೆಗೆ ಕಂಪನಿಯು ಬೆಲೆಯನ್ನೂ ಕಡಿಮೆಯಿಟ್ಟಿರುವುದು ಇದನ್ನೊಂದು ಉತ್ತಮ ಫೋನನ್ನಾಗಿ ಮಾಡಿದೆ.

ಲಿನೊವೊ Z2 ಪ್ಲಸ್: ನಿಮಗೆ ಗೊತ್ತಿರಬೇಕಾದ ಹತ್ತು ವಿಶೇಷತೆಗಳು.

Z2 ಪ್ಲಸ್ ಎರಡು ಆವೃತ್ತಿಗಳಲ್ಲಿ ಲಭ್ಯ. 3ಜಿಬಿ/32ಜಿಬಿ ಫೋನಿನ ಬೆಲೆ 17,999 ರುಪಾಯಿಗಳಿದ್ದರೆ 4ಜಿಬಿ/64ಜಿಬಿ ಫೋನಿನ ಬೆಲೆ 19,999 ರುಪಾಯಿ. ಫೋನಿನಲ್ಲಿ ಸ್ನಾಪ್ ಡ್ರಾಗನ್ 820 ಚಿಪ್ ಇದೆ. 13 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರ ಮತ್ತು 8 ಮೆಗಾಪಿಕ್ಸೆಲ್ಲಿನ ಸೆಲ್ಫಿ ಕ್ಯಾಮೆರಾ ಇದೆ.

ಓದಿರಿ: ದೀಪಾವಳಿ ಆಫರ್: ಏರ್‌ಟೆಲ್‌ನಿಂದ ಉಚಿತ 2ಜಿಬಿ 4ಜಿ ಡೇಟಾ

4ಜಿಬಿ/64ಜಿಬಿಯ ಫೋನಿನ ಜೊತೆಗೆ ಬಹಳಷ್ಟು ಸಮಯ ಕಳೆದ ನಂತರ ಅದರಲ್ಲಿರುವ ನಿಮಗೆ ಗೊತ್ತಿರಲೇಬೇಕಾದ ಹತ್ತು ವಿಶೇಷತೆಗಳನ್ನಿಲ್ಲಿ ಪಟ್ಟಿ ಮಾಡಿದ್ದೇವೆ. ಒಮ್ಮೆ ಗಮನಿಸಿ.

960 ಎಫ್.ಪಿ.ಎಸ್ ನಲ್ಲಿ ಸ್ಲೋಮೋಷನ್ ವೀಡಿಯೋ ಚಿತ್ರಿಸಿ.

960 ಎಫ್.ಪಿ.ಎಸ್ ನಲ್ಲಿ ಸ್ಲೋಮೋಷನ್ ವೀಡಿಯೋ ಚಿತ್ರಿಸಿ.

ಸ್ಮಾರ್ಟ್ ಫೋನಿನಲ್ಲಿರುವ 13 ಮೆಗಾಪಿಕ್ಸೆಲ್ಲಿನ ಕ್ಯಾಮೆರ 120 ಎಫ್.ಪಿ.ಎಸ್ ನಲ್ಲಿ ಸ್ಲೋ ಮೋಷನ್ ವೀಡಿಯೋ ಚಿತ್ರಿಸಬಲ್ಲದು. ನೀವು ಈ ಆಯ್ಕೆಯನ್ನು 240 ಅಥವಾ 960 ಎಫ್.ಪಿ.ಎಸ್ ಗೆ ಬದಲಿಸಿಕೊಳ್ಳುವ ಆಯ್ಕೆ ಇದೆ.

ಮಲ್ಟಿಫಂಕ್ಷನಲ್ ಯು ಟಚ್.

ಮಲ್ಟಿಫಂಕ್ಷನಲ್ ಯು ಟಚ್.

ಬೆರಳಚ್ಚು ಸಂವೇದಕದ ಜೊತೆಗೆ ಹೋಮ್ ಬಟನ್ ನಲ್ಲಿ ಹಲವು ವಿಶೇಷತೆಗಳಿವೆ. ಉದಾಹರಣೆಗೆ ಎಡದಿಂದ ಬಲಕ್ಕೆ ಸ್ವೈಪ್ ಮಾಡುವ ಮೂಲಕ ನೀವು ಆ್ಯಪ್ ಗಳನ್ನು ತೆರೆಯಬಹುದು, ದೀರ್ಘವಾಗಿ ಒತ್ತುವುದರಿಂದ ಮುಖಪುಟಕ್ಕೆ ಬರಬಹುದು ಇತ್ಯಾದಿ. ಜೊತೆಗೆ ಈ ಕಾರ್ಯಗಳನ್ನು ನಿಮ್ಮ ಇಚ್ಛೆಗೆ ತಕ್ಕಂತೆ ಬದಲಿಸಿಕೊಳ್ಳಬಹುದು.

ಕ್ವಿಕ್ ಸ್ವಿಚ್ ಪ್ಯಾನೆಲ್.

ಕ್ವಿಕ್ ಸ್ವಿಚ್ ಪ್ಯಾನೆಲ್.

ಕ್ವಿಕ್ ಸ್ವಿಚ್ ಪ್ಯಾನೆಲ್ (ಕೆಳಗಿನಿಂದ ಸ್ವೈಪ್ ಮಾಡಿದಾಗ ತೆರೆದುಕೊಳ್ಳುವ ಪರದೆ) ಆ್ಯಪಲ್ ನ ಕಂಟ್ರೋಲ್ ಸೆಂಟರಿನಂತೆಯೇ ಇದೆ. ಇಲ್ಲಿ ಇನ್ನೂ ಹೆಚ್ಚಿನ ನಿಯಂತ್ರಣಗಳಿವೆ.

ನಿಮ್ಮ ಅಗತ್ಯಕ್ಕನುಗುಣವಾಗಿ ಶಾರ್ಟ್ ಕಟ್ಟುಗಳನ್ನು ಸೇರಿಸಿಕೊಳ್ಳಬಹುದು.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನೋಟಿಫಿಕೇಷನ್ ಎಲ್.ಇ.ಡಿ.

ನೋಟಿಫಿಕೇಷನ್ ಎಲ್.ಇ.ಡಿ.

ನೋಟಿಫಿಕೇಷನ್ ಎಲ್.ಇ.ಡಿ ಅನ್ನು ನಿಮ್ಮ ಇಚ್ಛೆಗೆ ತಕ್ಕಂತೆ ಬದಲಿಸಿಕೊಳ್ಳಬಹುದು. ಚಾರ್ಜ್ ಆಗುವಾಗ ಎಲ್.ಇ.ಡಿ ಹೊತ್ತಿಕೊಳ್ಳುವಂತೆ ಮಾಡಬಹುದು.

ಡಿಫಾಲ್ಟ್ ನಲ್ಲಿ ನೋಟಿಫಿಕೇಷನ್ ಎಲ್.ಇ.ಡಿ ಆಫ್ ಆಗಿರುತ್ತದೆ, ನೋಟಿಫಿಕೇಷನ್ ಸೆಟ್ಟಿಂಗ್ಸ್ ಗೆ ಹೋಗಿ ಅದನ್ನು ಬದಲಿಸಿಕೊಳ್ಳಬಹುದು.

ಎರಡು ಬಾರಿ ಕುಟ್ಟಿ ಮೊಬೈಲನ್ನು ಎಚ್ಚರಗೊಳಿಸಿ.

ಎರಡು ಬಾರಿ ಕುಟ್ಟಿ ಮೊಬೈಲನ್ನು ಎಚ್ಚರಗೊಳಿಸಿ.

ಲಿನೊವೊ Z2 ಪ್ಲಸ್ ನಲ್ಲಿರುವ ಮತ್ತೊಂದು ವಿಶೇಷತೆಯೆಂದರೆ 'ಡಬಲ್ ಟ್ಯಾಪ್ ಟು ವೇಕ್ ಅಪ್' ಆಯ್ಕೆ. ಇದರಿಂದಾಗಿ ಪವರ್ ಬಟನ್ ಒತ್ತದೆಯೇ ನಿಮ್ಮ ಫೋನನ್ನು ಎಚ್ಚರಗೊಳಿಸಬಹುದು. ಎರಡು ಬಾರಿ ಪರದೆಯ ಮೇಲೆ ಮೆಲ್ಲಗೆ ಕುಟ್ಟಿದರೆ ಆಯಿತು.

ಯು - ಹೆಲ್ಥ್.

ಯು - ಹೆಲ್ಥ್.

ಸ್ಮಾರ್ಟ್ ಫೋನಿನಲ್ಲಿ ಪೀಡೋಮೀಟರ್ ತಂತ್ರಾಂಶ ಅಡಕವಾಗಿದೆ. ನಿಮ್ಮ ಹೆಜ್ಜೆಗಳು, ಕ್ರಮಿಸಿದ ದೂರ, ವ್ಯಯಿಸಿದ ಕ್ಯಾಲೋರಿಯನ್ನು ಇದು ಗಮನದಲ್ಲಿಟ್ಟುಕೊಳ್ಳುತ್ತದೆ. ಸ್ಮಾರ್ಟ್ ಫೋನಿನಲ್ಲಿರುವ ಯು - ಹೆಲ್ಥ್ ಆ್ಯಪ್ ನಲ್ಲಿ ಈ ಮಾಹಿತಿಯೆಲ್ಲವೂ ಸಂಗ್ರಹವಾಗುತ್ತಿರುತ್ತದೆ.

ಹೋಮ್ ಸ್ಕ್ರೀನ್ ಅನ್ನು ತಿರುಗಿಸಬಹುದು.

ಹೋಮ್ ಸ್ಕ್ರೀನ್ ಅನ್ನು ತಿರುಗಿಸಬಹುದು.

ಈ ಮುಂಚೆ ಕೆಲವು ತಂತ್ರಾಂಶಗಳಷ್ಟೇ ಲ್ಯಾಂಡ್ ಸ್ಕೇಪ್ ಆಯ್ಕೆಯನ್ನು ಕೊಡುತ್ತಿದ್ದವು. ಈಗ ಓ.ಎಸ್ ನಲ್ಲಿ ಪ್ರಗತಿಯಾದ ನಂತರ ಹೋಮ್ ಸ್ಕ್ರೀನ್ ಅನ್ನೂ ಲ್ಯಾಂಡ್ ಸ್ಕೇಪ್ ರೀತಿ ನೋಡಬಹುದು. ನಿಮಗಿದು ಬೇಕಿದ್ದರೆ ಕ್ವಿಕ್ ಸ್ವಿಚ್ ಪ್ಯಾನೆಲ್ ನಲ್ಲಿ ಆಟೋ ರೊಟೇಷನ್ ಮೋಡ್ ಆಯ್ಕೆ ಮಾಡಿಕೊಳ್ಳಿ.

ಲಾಂಗ್ ಸ್ಕ್ರೀನ್ ಶಾಟ್.

ಲಾಂಗ್ ಸ್ಕ್ರೀನ್ ಶಾಟ್.

ಲಿನೊವೊ Z2 ಪ್ಲಸ್ ನಲ್ಲಿರುವ ಮತ್ತೊಂದು ಉತ್ತಮ ವಿಶೇಷತೆಯಿದು. ಇದರಿಂದ ನೀವು ದೊಡ್ಡ ಸ್ಕ್ರೀನ್ ಶಾಟ್ ಪಡೆಯಬಹುದು. ಸ್ಕ್ರಾಲ್ ಮಾಡುವ ಪುಟದ ಸ್ಕ್ರೀನ್ ಶಾಟ್ ನಿಮಗೆ ಬೇಕಿದ್ದರೆ ಇದು ಅನುಕೂಲ.

ಈ ವಿಶೇಷತೆಯನ್ನು ಉಪಯೋಗಿಸಲು ಸ್ಕ್ರಾಲ್ ಪುಟದಲ್ಲಿದ್ದಾಗ ಪವರ್ ಬಟನ್ ಮತ್ತು ವಾಲ್ಯೂಮ್ ಕಡಿಮೆ ಮಾಡುವ ಬಟನ್ ಅನ್ನು ಒಮ್ಮೆಲೆ ಒತ್ತಿರಿ. "ಕ್ಲಿಕ್ ಟು ಸ್ಟಾರ್ಟ್ ಲಾಂಗ್ ಸ್ಕ್ರೀನ್ ಶಾಟ್" ಎಂಬ ಸಂದೇಶ ಕಾಣುತ್ತದೆ, ಅದರ ಮೇಲೆ ಕ್ಲಿಕ್ಕಸಿದರೆ ಉದ್ದನೆಯ ಸ್ಕ್ರೀನ್ ಶಾಟ್ ತಯಾರು.

ನೈಟ್ ಮೋಡ್.

ನೈಟ್ ಮೋಡ್.

ನಿಮ್ಮ ಕಣ್ಣನ್ನು ನೀಲಿ ಬೆಳಕಿನಿಂದ ರಾತ್ರಿಯ ಸಮಯದಲ್ಲಿ ರಕ್ಷಿಸಲು ಲಿನೊವೊ Z2 ಪ್ಲಸ್ ನಲ್ಲಿ ನೈಟ್ ಮೋಡ್ ಆಯ್ಕೆ ಇದೆ. ಇದು ಪರದೆಗೊಂದು ನೀಲಿ ಬೆಳಕಿನ ಫೀಲ್ಟರ್ ಹಾಕುತ್ತದೆ, ಬೆಳಕಿನ ಪ್ರಖರತೆಯನ್ನು ಕಡಿಮೆಗೊಳಿಸುತ್ತದೆ.

ಪ್ರಿವೆಂಟ್ ಪಾಕೆಟ್ ಡಯಲ್ಸ್.

ಪ್ರಿವೆಂಟ್ ಪಾಕೆಟ್ ಡಯಲ್ಸ್.

ಬಹಳಷ್ಟು ಸಲ ಮೊಬೈಲ್ ಜೇಬಿನಲ್ಲಿದ್ದಾಗ ನಂಬರುಗಳು ಡಯಲ್ ಆಗಿಬಿಡುತ್ತದೆ. ಅದನ್ನು ತಡೆಯಲು ಲಿನೊವೊ Z2 ಪ್ಲಸ್ ನಲ್ಲಿ 'ಪ್ರಿವೆಂಟ್ ಪಾಕೆಟ್ ಡಯಲ್ಸ್' ಆಯ್ಕೆ ಇದೆ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Most Read Articles
Best Mobiles in India

English summary
Lenovo, after tasting a huge success with it's Zuk Z1 in the country unveiled the Lenovo Z2 Plus - a rebranded version of the Zuk Z2. Here are ten tips and tricks you can't afford to miss on.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more