ಆನ್‌ಲೈನ್‌ಲ್ಲಿ ಎಲ್‌ಜಿ ಜಿ2 ಖರೀದಿಸಿ

Posted By:

ಕೊರಿಯಾದ ಸ್ಮಾರ್ಟ್‌ಫೋನ್ ತಯಾರಕ ಕಂಪೆನಿ ಎಲ್‌‌ಜಿ ಕಳೆದ ವಾರ ಭಾರತದ ಮಾರುಕಟ್ಟೆಗೆ ತನ್ನ ಪ್ರಥಮ 4ಜಿಗೆ ಬೆಂಬಲ ನೀಡುವ ಜಿ2 ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದೆ. ಸದ್ಯಕ್ಕೆ ಬೆಂಗಳೂರಿನಲ್ಲಿ ಮಾತ್ರ ಮೊಬೈಲ್‌ 4ಜಿ ನೆಟ್‌ವರ್ಕ್ ಇರುವುದರಿಂದ ಬೆಂಗಳೂರಿನ ಗ್ರಾಹಕರು ಮಾತ್ರ ಈ ಸ್ಮಾರ್ಟ್‌ಫೋನ್‌ ಖರೀದಿಸಬಹುದು.

ಎಲ್‌ಜಿ 4ಜಿ ನೆಟ್‌‌ವರ್ಕ್‌ಗೆ ಸಪೋರ್ಟ್‌ ಮಾಡುವ ಜಿ2 ಸ್ಮಾರ್ಟ್‌‌ಫೋನ್‌ ಬಿಡುಗಡೆ ಮಾಡಿದ್ದರೂ 3ಜಿಗೆ ಬೆಂಬಲ ನೀಡುವ ಜಿ2 ಸ್ಮಾರ್ಟ್‌ಫೋನ್‌ನ್ನು ಕಳೆದ ವರ್ಷ‌ ಬಿಡುಗಡೆ ಮಾಡಿತ್ತು.
16GB ಆಂತರಿಕ ಮೆಮೋರಿಯ ಸ್ಮಾರ್ಟ್‌ಫೋನಿಗೆ 41,500 ರೂಪಾಯಿ,32GB ಸ್ಮಾರ್ಟ್‌ಫೋನಿಗೆ 43,500 ಬೆಲೆಯಲ್ಲಿ ಎಲ್‌ಜಿ ಬಿಡುಗಡೆ ಮಾಡಿತ್ತು.

ಫುಲ್‌ ಎಚ್‌ಡಿ ಸ್ಮಾರ್ಟ್‌ಫೋನ್‌ ಇದಾಗಿದ್ದು 70.9x138.5x8.9 ಮಿ.ಮೀಟರ್‌ ಗಾತ್ರ, 143 ಗ್ರಾಂ ತೂಕ,3.5 ಆಡಿಯೋ ಜಾಕ್‌ ಹೊಂದಿದೆ. ಈ ಸ್ಮಾರ್ಟ್‌ಫೋನಿನ ವಿಶೇಷತೆ ಏನೆಂದರೆ ವಾಲ್ಯೂಮ್‌ ಬಟನ್‌ ಹಿಂದುಗಡೆ ಕ್ಯಾಮೆರಾದ ಸಮೀಪ ನೀಡಿದ್ದಾರೆ.ಆದರೆ ಮೆಮೋರಿ ವಿಸ್ತರಿಸಲು ಎಸ್‌ಡಿ ಕಾರ್ಡ್‌ ಸೌಲಭ್ಯವಿಲ್ಲ. ಆದರೆ ಸ್ಮಾರ್ಟ್‌ಫೋನ್‌ 3000 mAh ಶಕ್ತಿಶಾಲಿ ಬ್ಯಾಟರಿ ಹೊಂದಿದೆ. ಕಳೆದ ವರ್ಷ ಅತ್ಯಂತ ನವೀನ ಸಾಧನ ತಯಾರಕ ಕಂಪೆನಿ ಪ್ರಶಸ್ತಿಯನ್ನು ಪಡೆದಿರುವ ಎಲ್‌ಜಿ ಕಂಪೆನಿಯ 3ಜಿ ಸ್ಮಾರ್ಟ್‌ಫೋನ್‌ ಖರೀದಿಸಬೇಕು ಎಂದು ಯೋಚಿಸುತ್ತಿದ್ದವರಿಗೆ ಗಿಝ್‌ಬಾಟ್ ಇಂದು ಆನ್‌ಲೈನ್‌ ಶಾಪಿಂಗ್‌ ತಾಣಗಳ ಮಾಹಿತಿಯನ್ನು ತಂದಿದೆ. ಬಿಡುಗಡೆಯಾದಾಗ ನಿಗದಿಯಾಗಿದ್ದ ಬೆಲೆಗಿಂತ ಮತ್ತಷ್ಟು ಬೆಲೆ ಕಡಿಮೆಯಾಗಿದೆ.ಒಂದೊಂದೆ ಪುಟವನ್ನು ತಿರುಗಿಸಿ ಯಾವ ಆನ್‌ಲೈನ್‌ ಶಾಪಿಂಗ್‌ ತಾಣ ಎಷ್ಟು ರೂಪಾಯಿ ನಿಗದಿಪಡಿಸಿದೆ ಎಂಬುದನ್ನು ನೋಡಿಕೊಂಡು ಹೋಗಿ.

ಎಲ್‌ಜಿ ಜಿ 2
ವಿಶೇಷತೆ:
ಸಿಂಗಲ್‌ ಸಿಮ್‌
5.2 ಇಂಚಿನ ಫುಲ್‌ ಎಚ್‌ಡಿ ಕೆಪಾಸಿಟಿವ್‌ ಟಚ್‌ಸ್ಕ್ರೀನ್‌(1920 x 1080 ಪಿಕ್ಸೆಲ್‌)
ಆಂಡ್ರಾಯ್ಡ್‌4.2.2 ಜೆಲ್ಲಿ ಬೀನ್‌ ಓಎಸ್‌
2.26 GHz ಕ್ವಾಡ್‌ ಕೋರ್‌ ಪ್ರೊಸೆಸರ್‌
13 ಎಂಪಿ ಹಿಂದುಗಡೆ ಕ್ಯಾಮೆರಾ
2.1 ಎಂಪಿ ಮುಂದುಗಡೆ ಕ್ಯಾಮೆರಾ
16/32GB ಆಂತರಿಕ ಮೆಮೊರಿ
2 GB RAM
ಮೆಮೊರಿ ವಿಸ್ತರಿಸಲು ಎಸ್‌ಡಿ ಕಾರ್ಡ್ ಸ್ಲಾಟ್‌ ಇಲ್ಲ
3ಜಿ,ಜಿಪಿಎಸ್‌,ಎ-ಜಿಪಿಎಸ್‌,ವೈಫೈ,ಬ್ಲೂಟೂತ್‌
3000 mAh ಬ್ಯಾಟರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot