Subscribe to Gizbot

ಎಲ್‌ಜಿ ಜಿ2 4ಜಿ ಸ್ಮಾರ್ಟ್‌ಫೋನ್‌ ಬೆಂಗಳೂರಿನಲ್ಲಿ ಬಿಡುಗಡೆ

Posted By:

ವಿಶ್ವದ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ 4 ಸ್ಥಾನದಲ್ಲಿರುವ ಎಲ್‌‌ಜಿ 4ಜಿ ನೆಟ್‌ವರ್ಕ್‌ಗೆ ಬೆಂಬಲ ನೀಡುವ ತನ್ನ ದುಬಾರಿ ಬೆಲೆಯ ಎಲ್‌ಜಿ ಜಿ2 ಸ್ಮಾರ್ಟ್‌ಫೋನನ್ನು ಬೆಂಗಳೂರಿನಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಿದೆ.

32ಜಿಬಿ ಆಂತರಿಕ ಮೆಮೊರಿಯ ಸ್ಮಾರ್ಟ್‌ಫೋನಿಗೆ 49 ಸಾವಿರ ರೂಪಾಯಿ ಬೆಲೆಯನ್ನು ಎಲ್‌ಜಿ ನಿಗದಿಮಾಡಿದ್ದು,ಏರ್‌ಟೆಲ್‌ 4ಜಿ ಮೊಬೈಲ್‌ ನೆಟ್‌‌‌ವರ್ಕ್‌ ಸದ್ಯಕ್ಕೆ ದೇಶದಲ್ಲೇ ಬೆಂಗಳೂರಿನಲ್ಲಿ ಲಭ್ಯವಿರುವುದರಿಂದ ಬೆಂಗಳೂರಿನ ಗ್ರಾಹಕರು ಈ ಸ್ಮಾರ್ಟ್‌ಫೋನ್‌ ಖರೀದಿಸಬಹುದು.

3ಜಿಗೆ ಬೆಂಬಲ ನೀಡುವ ಈ ಸ್ಮಾರ್ಟ್‌ಫೋನನ್ನು ಎಲ್‌ಜಿ ಕಳೆದ ಸೆಪ್ಟೆಂಬರ್‌ನಲ್ಲಿ ಭಾರತದ ಮಾರುಕಟ್ಟೆಗೆ ಪರಿಚಯಿಸಿತ್ತು.16 ಜಿಬಿ ಆಂತರಿಕ ಮೆಮೊರಿಯ ಸ್ಮಾರ್ಟ್‌ಫೋನಿಗೆ 41,500 ರೂಪಾಯಿ,32 ಜಿಬಿ ಸ್ಮಾರ್ಟ್‌ಫೋನನ್ನು 43,500 ಬೆಲೆಯಲ್ಲಿ ಎಲ್‌ಜಿ ಬಿಡುಗಡೆ ಮಾಡಿತ್ತು.

ಫುಲ್‌ ಎಚ್‌ಡಿ ಸ್ಮಾರ್ಟ್‌ಫೋನ್‌ ಇದಾಗಿದ್ದು 70.9x138.5x8.9 ಮಿ.ಮೀಟರ್‌ ಗಾತ್ರ, 143 ಗ್ರಾಂ ತೂಕವನ್ನುಹೊಂದಿದೆ. ಈ ಸ್ಮಾರ್ಟ್‌ಫೋನಿನ ವಿಶೇಷತೆ ಏನೆಂದರೆ ವಾಲ್ಯೂಮ್‌ ಬಟನ್‌ ಹಿಂದುಗಡೆ ಕ್ಯಾಮೆರಾದ ಸಮೀಪ ನೀಡಿದ್ದಾರೆ. 32ಜಿಬಿ ಆಂತರಿಕ ಮೆಮೊರಿಯನ್ನು ನೀಡಿರುವುದರಿಂದ ಹೆಚ್ಚುವರಿ ಮೆಮೊರಿ ವಿಸ್ತರಿಸಲು ಎಸ್‌ಡಿ ಕಾರ್ಡ್‌ ಸೌಲಭ್ಯವಿಲ್ಲ.3000 mAh ಶಕ್ತಿಶಾಲಿ ಬ್ಯಾಟರಿಯನ್ನು ಸ್ಮಾರ್ಟ್‌‌ಫೋನ್‌ ಒಳಗೊಂಡಿದೆ.

ಎಲ್‌ಜಿ ಜಿ 2(4ಜಿ)
ವಿಶೇಷತೆ:
ಸಿಂಗಲ್‌ ಸಿಮ್‌
5.2 ಇಂಚಿನ ಫುಲ್‌ ಎಚ್‌ಡಿ ಕೆಪಾಸಿಟಿವ್‌ ಟಚ್‌ಸ್ಕ್ರೀನ್‌(1920 x 1080 ಪಿಕ್ಸೆಲ್‌)
ಆಂಡ್ರಾಯ್ಡ್‌4.2.2 ಜೆಲ್ಲಿ ಬೀನ್‌ ಓಎಸ್‌
2.26 GHz ಕ್ವಾಡ್‌ ಕೋರ್‌ ಪ್ರೊಸೆಸರ್‌
13 ಎಂಪಿ ಹಿಂದುಗಡೆ ಕ್ಯಾಮೆರಾ
2.1 ಎಂಪಿ ಮುಂದುಗಡೆ ಕ್ಯಾಮೆರಾ
32ಜಿಬಿ ಆಂತರಿಕ ಮೆಮೊರಿ
2 GB ರ್‍ಯಾಮ್‌
4ಜಿ,3ಜಿ,ಜಿಪಿಎಸ್‌,ಎ-ಜಿಪಿಎಸ್‌,ವೈಫೈ,ಬ್ಲೂಟೂತ್‌,ಎನ್‌ಎಫ್‌ಸಿ
ಮೆಮೊರಿ ವಿಸ್ತರಿಸಲು ಎಸ್‌ಡಿ ಕಾರ್ಡ್ ಸ್ಲಾಟ್‌ ಇಲ್ಲ
3000 mAh ಬ್ಯಾಟರಿ

ಎಲ್‌ಜಿ ಮೊಬೈಲ್‌ ಇಂಡಿಯಾ ಮಾರುಕಟ್ಟೆ ಮುಖ್ಯ ಅಮಿತ್‌ ಗುಜ್ರಲ್‌ ಜೊತೆಗೆ ಗಿಝ್‌‌ಬಾಟ್‌ ತಂಡದ ಮುಖ್ಯಸ್ಥೆ ಎಲ್‌ಜಿ ಜಿ2 4ಜಿ ಸ್ಮಾರ್ಟ್‌ಫೋನಿನ್‌ ಕುರಿತು ಸಂದರ್ಶನ ನಡೆಸಿದ್ದಾರೆ‌. ಆ ಸಂದರ್ಶನದ ವಿಡಿಯೋ ಇಲ್ಲಿ ನೀಡಲಾಗಿದೆ.

ಇದನ್ನೂ ಓದಿ: ಎಲ್‌ಜಿ ಆಂಡ್ರಾಯ್ಡ್ ಸ್ಮಾರ್ಟ್‌ಬಲ್ಬ್‌ ಹೇಗಿದೆ ನೋಡಿದ್ದೀರಾ?

<center><iframe width="100%" height="360" src="//www.youtube.com/embed/JjZUkWMRNls?feature=player_embedded" frameborder="0" allowfullscreen></iframe></center>

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot