ಎಲ್ ಜಿ3ಯ ಅಧಿಕೃತ ಬಿಡುಗಡೆ ಮೇ 27 ಕ್ಕೆ

Written By:

ಮೊಬೈಲ್ ಉತ್ಪನ್ನ ಹಾಗೂ ಮಾರಾಟ ಇದೊಂದು ನಿರಂತರ ಪ್ರಕ್ರಿಯೆಯಾಗಿದೆ. ಮಾರುಕಟ್ಟೆಯಲ್ಲಿ ಅತ್ಯಾಧುನಿಕ ಹ್ಯಾಂಡ್‌ಸೆಟ್‌ಗಳು ಬಳಕೆದಾರರ ಮನವನ್ನು ಕದಿಯುವಲ್ಲಿ ಯಶಸ್ವಿಯಾಗಿದ್ದು ವಿಭಿನ್ನ ತಂತ್ರಜ್ಞಾನಗಳನ್ನು ಬಳಸುವ ಅವರ ಬಯಕೆ ಕೂಡ ಈಡೇರಿದೆ.

ದಕ್ಷಿಣ ಕೊರಿಯಾದ ಸ್ಮಾರ್ಟ್‌ಫೋನ್ ದಿಗ್ಗಜ ಎಲ್‌ಜಿ ಕಂಪೆನಿ ತನ್ನ ಹೊಸ ಮೊಬೈಲ್ ಅವತರಣಿಕೆಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಕಲ ರೀತಿಯ ಸಜ್ಜಿಕೆಯನ್ನು ಮಾಡಿಕೊಂಡಿದೆ. ಎಲ್ ಜಿ3ಯು ಮೇ 27 ಕ್ಕೆ ಬಳಕೆದಾರರ ಕೈ ಸೇರಲಿದ್ದು ನಿಮ್ಮ ಕನಸು ನನಸಾಗುವ ಕಾಲ ಬಂದೊದಗಿದೆ ಎಂದೇ ಹೇಳಬಹುದು.

ತನ್ನ ಎಂದಿನ ಸ್ಲೋಗನ್ "ಟು ಬಿ ಸಿಂಪಲ್ ಈಸ್ ಟು ಬಿ ಗ್ರೇಟ್" (ಸರಳವಾಗಿರುವುದು ಮಹಾನ್ ಆಗಿದೆ) ಅನ್ನು ಸಮರ್ಪಕವಾಗಿ ಬಳಸಿಕೊಂಡಿರುವ ಎಲ್‌ಜಿ ಗ್ರಾಹಕರ ಮೆಚ್ಚುಗೆಯನ್ನು ಪಡೆಯಲು ಹರಸಾಹಸವನ್ನೇ ಮಾಡಿದೆ ಎಂದೂ ಕೂಡ ಹೇಳಬಹುದಾಗಿದೆ. ಬಳಕೆದಾರರಿಗೆ ಬಳಸಲು ಸುಲಭವಾಗಿರುವ ಹಾಗೂ ನವೀನ ತಾಂತ್ರಿಕತೆಯನ್ನು ಅಳವಡಿಸುವುದರ ಕುರಿತು ಬಹಳಷ್ಟು ಪ್ರಯತ್ನಗಳನ್ನು ಮಾಡಿ ಎಲ್‌ಜಿ ಈ ಕಾರ್ಯದಲ್ಲಿ ವಿಜಯಿಯಾಗಿದೆ.

ಎಲ್ ಜಿ3ಯ ಅಧಿಕೃತ ಬಿಡುಗಡೆ ಮೇ 27 ಕ್ಕೆ

ಹಾಗಿದ್ದರೆ ಈ ಪೋನ್‌ನಲ್ಲಿ ಏನಿದೆ?
2,560 x 1,440 ಡಿಸ್‌ಪ್ಲೇ ಉಳ್ಳ ಪ್ರೀಮಿಯಂ ಡಿವೈಸ್ ಇದಾಗಿದ್ದು ಇದರ ಪರದೆಯ ಅಂದಾಜು ಇನ್ನೂ ಸರಿಯಾಗಿ ತಿಳಿದಿಲ್ಲ. ಅಂದಾಜು ಪ್ರಕಾರ ಇದರ ಡಿಸ್‌ಪ್ಲೇ ಗಾತ್ರ 5.5 ಇಂಚಿನದ್ದಾಗಿರಬಹುದಾಗಿದೆ. ಇದು ಶಾರ್ಪರ್ ಡಿಸ್‌ಪ್ಲೇ ಮತ್ತು ಬೀಫರ್ ಪ್ರೊಸೆಸರ್ ಅನ್ನು ನೀಡುತ್ತದೆ.
ಕ್ವಾಡ್ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 801 ಪ್ರೊಸೆಸರ್ ಇದರಲ್ಲಿದ್ದು 3ಜಿಬಿ ರ್‌ಯಾಮ್ ಇದರ ವಿಶೇಷತೆ. ಪೋಲಿಕಾರ್ಬೋನೇಟ್ ಪ್ಲಾಸ್ಟಿಕ್ ಬದಲಿಗೆ ಬ್ರಶ್‌ಡ್ ಅಲ್ಯುಮಿನಿಯಂ ಚಾಸಿಸ್ ಅನ್ನು ಇದು ಬಳಸಿಕೊಂಡಿದೆ.

13 ಮೆಗಾಪಿಕ್ಸೆಲ್ ರಿಯರ್ ಫೇಸಿಂಗ್ ಕ್ಯಾಮೆರಾ ಇದರಲ್ಲಿದ್ದು ಒಐಎಸ್ ಹಾಗೂ ಇತರ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಎಲ್‌ ಜಿ3 ಯು ಗೋಲ್ಡನ್ ಬಣ್ಣದಲ್ಲಿ ದೊರೆಯುವ ಸಾಧ್ಯತೆ ಇದ್ದು ಬೇರೆ ಬಣ್ಣಗಳಲ್ಲೂ ಈ ಫೋನ್ ಲಭ್ಯವಿದೆ. ಇದು ವಾಟರ್‌ಪ್ರೂಫ್ ವಿನ್ಯಾಸವನ್ನೂ ಹೊಂದಿದ್ದು ಸುದೃಢವಾದ ಮಾರ್ಕೆಟ್ ಬೆಂಬಲವನ್ನು ಗಳಿಸಿಕೊಂಡಿದೆ. ನಿಮಗೆ ಎಲ್ ಜಿ 3 ಬಗ್ಗೆ ಇನ್ನಷ್ಟು ತಿಳಿದುಕೊಳ್ಳಬೇಕೆಂಬ ಉತ್ಪ್ರೇಕ್ಷೆ ಇದ್ದಲ್ಲಿ ಗಿಜ್‌ಬಾಟ್‌ಗೆ ಭೇಟಿ ನೀಡುತ್ತಿರಿ.

Read more about:
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot