ಭಾರೀ ದರದಲ್ಲಿ ಆಕರ್ಷಕ ವೈ‍ಶಿಷ್ಟ್ಯ ಎಲ್‌ಜಿ G3

Written By:

ಎಲ್‌ಜಿ ತನ್ನ ಫ್ಲ್ಯಾಗ್‌ಶಿಪ್‌ನ ಸ್ಮಾರ್ಟ್‌ಫೋನ್ G3 ಅನ್ನು ಭಾರತದಲ್ಲಿ ಲಾಂಚ್ ಮಾಡಿದ್ದು ಇದು ದೇಶದಲ್ಲಿ ಕಂಪೆನಿ ಬಿಡುಗಡೆ ಮಾಡುತ್ತಿರುವ ದ್ವಿತೀಯ QHD ಡಿಸ್‌ಪ್ಲೇ ಫೋನ್ ಆಗಿದೆ. ಈ ಫೋನ್‌ನ ಕ್ಯಾಮೆರಾ ಲೇಸರ್ - ಫೋಕಸ್ ಅನ್ನು ಹೊಂದಿದ್ದು ಹೆಚ್ಚಿನ ಎಲ್ಲಾ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಇದರ ಬೆಲೆ ರೂ 47,990 ಆಗಿದ್ದು ಎಲ್‌ಜಿ ಈಗ ಮಾರುಕಟ್ಟೆಯಲ್ಲಿರುವ ಎಚ್‌ಟಿಸಿ ಒನ್ (M8), ಸ್ಯಾಮ್‌ಸಂಗ್ ಗ್ಯಾಲಕ್ಸಿ S5 ಮತ್ತು ಸೋನಿ ಎಕ್ಸ್‌ಪೀರಿಯಾ Z2 ನೊಂದಿಗೆ ಸ್ಪರ್ಧಿಸಬೇಕಾಗಿದೆ. ಇದು ಬೆರಳಚ್ಚು ಸ್ಕ್ಯಾನರ್, ಹೃದಯ ಬಡಿತ ಮಾನಿಟರ್ ಮತ್ತು ಹಿಂಭಾಗದಲ್ಲಿ ಡ್ಯುಯೆಲ್ ಕ್ಯಾಮೆರಾದೊಂದಿಗೆ ಬಂದಿದ್ದು ವಿಶಿಷ್ಟವಾಗಿದೆ.

ಎಲ್‌ಜಿ G3 ವೀಡಿಯೋ ವಿಮರ್ಶೆ

ಎಲ್‌ಜಿ G3 ಡಿಸ್‌ಪ್ಲೇಯು QHD ವೈಶಿಷ್ಟ್ಯವನ್ನು ಒಳಗೊಂಡಿದೆ. ಇತರ ಎಲ್ಲಾ ಫೋನ್‌ಗಳಿಗೆ ಹೋಲಿಸಿದಾಗ ಇದು ಹೆಚ್ಚು ಪಿಕ್ಸೆಲ್ ಡೆನ್ಸಿಟಿಯನ್ನು ನೀಡುತ್ತಿದ್ದು ಮತ್ತು ಇದರ ಡಿಸ್‌ಪ್ಲೇ ಇತರ ಸ್ಮಾರ್ಟ್‌ಫೋನ್‌ಗಳಿಗಿಂತ ಅತಿ ವಿಶಿಷ್ಟವಾಗಿದೆ.

ಇದರ ವಿನ್ಯಾಸವನ್ನು ಮೆಟಲ್ ಹಾಗೆ ಕಾಣುವ ಗ್ಲೋಸಿ (ಹೊಳೆಯುವ) ಪ್ಲಾಸ್ಟಿಕ್‌ನಿಂದ ಮಾಡಲಾಗಿದೆ. ಇದರ ವಿನ್ಯಾಸ ಭಾಷೆಯನ್ನು ಫ್ಲೋಟಿಂಗ್ ಆರ್ಕ್ ಎಂದು ಕರೆಯಲಾಗಿದೆ. ಏಕೆಂದರೆ ಇದು ಕರ್ವ್ ವಿನ್ಯಾಸವನ್ನು ಹೊಂದಿರುವುದು ಮತ್ತು ಕೈಯಲ್ಲಿ ಫೋನ್ ಅನ್ನು ಹಿಡಿದುಕೊಳ್ಳಲು ಆರಾಮದಾಯಕವಾಗಿದೆ. ಇದು ಧ್ವನಿ ಮತ್ತು ಪವರ್ ಕೀಗಳನ್ನು ಹಿಂಭಾಗದಲ್ಲಿ ಹೊಂದಿದೆ. ಕ್ಯಾಮೆರಾದ ಕೆಳಗೆ ನಿಮ್ಮ ಧ್ವನಿಯನ್ನು ಹಿಗ್ಗಿಸಬಹುದು ಮತ್ತು ಕುಗ್ಗಿಸಬಹುದು. ಇದು ಎಲ್‌ಇಡಿ ಅಧಿಸೂಚನೆ ಬೆಳಕನ್ನು ಕೂಡ ಒಳಗೊಂಡಿದ್ದು, ಉತ್ತಮ ಸೇರ್ಪಡೆಯನ್ನು ಒಳಗೊಂಡಿದೆ ಎಂದು ಹೇಳಬಹುದಾಗಿದೆ.

5.5 ಇಂಚಿನ (2560×1440 pixels) HD IPS ಡಿಸ್‌ಪ್ಲೇಯೊಂದಿಗೆ ಬಂದಿರುವ 538ppi ಪಿಕ್ಸೆಲ್‌ ಡೆನ್ಸಿಟಿಯನ್ನು ನೀಡುತ್ತಿದೆ. ಇದರಲ್ಲಿ 2.5 GHz ಕ್ವಾಡ್ ಕೋರ್ ಸ್ನ್ಯಾಪ್‌ಡ್ರಾಗನ್ 801 (MSM8974AC) ಪ್ರೊಸೆಸರ್ ಇದ್ದು Adreno 330 GPU ಡಿವೈಸ್‌ನಲ್ಲಿದೆ. ಇದು 2 ಅಥವಾ 3 ಜಿಬಿ RAM ಅನ್ನು ಆಂಡ್ರಾಯ್ಡ್ 4.4.2 (ಕಿಟ್‌ಕ್ಯಾಟ್) ಓಎಸ್ ಅನ್ನು ಆಧರಿಸಿ ನೀಡುತ್ತಿದೆ.

ಎಲ್‌ಜಿ 16ಜಿಬಿ / 32ಜಿಬಿ ಆಂತರಿಕ ಮೆಮೊರಿಯನ್ನು ನೀಡುತ್ತಿದ್ದು ಇದನ್ನು ನಿಮಗೆ 128 ಜಿಬಿ ಎಸ್‌ಡಿ ಕಾರ್ಡ್ ಅನ್ನು ಬಳಸಿಕೊಂಡು ವಿಸ್ತರಿಸಬಹುದಾಗಿದೆ. ಇದರಲ್ಲಿರುವ ಸಂಪರ್ಕ ವೈಶಿಷ್ಟ್ಯಗಳೆಂದರೆ 4G LTE / 3ಜಿ HSPA+, ವೈಫೈ 802.11 a/b/g/n/ac, ಬ್ಲ್ಯೂಟೂತ್ 4.0 , GPS, NFC and ಸ್ಲಿಮ್ ಪೋರ್ಟ್ ಆಗಿದೆ. ಎಲ್‌ಜಿ ಜಿ3 3000 mAh ತೆಗೆಯಬಹುದಾದ ಬ್ಯಾಟರಿಯೊಂದಿಗೆ ಬಂದಿದ್ದು Qi ವೈರ್‌ಲೆಸ್ ಚಾರ್ಜಿಂಗ್ ಅನ್ನು ಕೂಡ ಒದಗಿಸುತ್ತಿದೆ.

ಎಲ್‌ಜಿ G3 ವೀಡಿಯೊ ಎಲ್‌ಜಿ G3 13MP ರಿಯರ್ ಕ್ಯಾಮೆರಾವನ್ನು ಒಳಗೊಂಡಿದ್ದು ಓಎಸ್, ಡ್ಯುಯೆಲ್ ಫ್ಲ್ಯಾಶ್ ಮತ್ತು ಎಲ್‌ಜಿ ಹೊಸ ತಂತ್ರಜ್ಞಾನ ಲೇಸರ್ ಆಟೋ ಫೋಕಸ್ ಅನ್ನು ಹೊಂದಿದೆ. 4K ವೀಡಿಯೋ ರೆಕಾರ್ಡಿಂಗ್ ಅನ್ನು ಕೂಡ ಈ ಡಿವೈಸ್‌ನಲ್ಲಿ ನಿಮಗೆ ಮಾಡಬಹುದಾಗಿದೆ. 2.1MP ಮುಂಭಾಗ ಶೂಟರ್ ಕೂಡ ಇದರಲ್ಲಿದೆ.

ಹೆಚ್ಚಿನ ಬೆಲೆಯಲ್ಲಿ ಈ ಫೋನ್ ಬಂದಿದ್ದರೂ ಇದರ ವಿಶೇಷತೆಗಳು ಮನಮುಟ್ಟುವಂತಿದ್ದು ನಮ್ಮನ್ನು ಖರೀದಿಸುವಂತೆ ಮಾಡುವುದು ಖಂಡಿತ. ಫೋನ್‌ನ ಡಿಸ್‌ಪ್ಲೇ, ಹಾರ್ಡ್‌ವೇರ್ ಗುಣಮಟ್ಟ, ಕ್ಯಾಮೆರಾ ಹೀಗೆ ಪ್ರತಿಯೊಂದರಲ್ಲೂ ವೈಶಿಷ್ಟ್ಯಗಳನ್ನು ನಮಗೆ ಕಾಣಬಹುದಾಗಿದೆ.

<center><iframe width="100%" height="360" src="//www.youtube.com/embed/7KRygw80Rqo" frameborder="0" allowfullscreen></iframe></center>

Read more about:
English summary
This article tells about LG G3 smartphone video review and its specifications.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot