ಹೈ ಎಂಡ್‌ ಫೀಚರ್ಸ್‌ನೊಂದಿಗೆ ಎಂಟ್ರಿ ಕೊಡಲಿವೆ 'ಎಲ್‌ಜಿ'ಯ ಈ ಸ್ಮಾರ್ಟ್‌ಫೋನ್‌ಗಳು.!!

|

ವಿಶ್ವದ ಜನಪ್ರಿಯ ಎಲೆಕ್ಟ್ರಾನಿಕ್ಸ್ ಕಂಪನಿ 'ಎಲ್‌ಜಿ' ಕಂಪನಿಯು ಇದೀಗ ಮತ್ತೆ ಸ್ಮಾರ್ಟ್‌ಫೋನ್ ಉತ್ಪಾದನೆಯತ್ತ ಗಮನ ನೀಡಿದ್ದು, ಇತ್ತೀಚಿಗೆ ನಡೆದ 'ಮೊಬೈಲ್ ವರ್ಲ್ಡ್ ಕಾಂಗ್ರೆಸ್ 2019' ರಲ್ಲಿ ತನ್ನ ನೂತನ ಎರಡು ಸ್ಮಾರ್ಟ್‌ಫೋನ್ ಅನ್ನು ಪ್ರದರ್ಶಿಸಿದೆ. ಎಲ್‌ಜಿಯ 'G8 ThinQ' ಮತ್ತು 'G8s ThinQ' ಹೆಸರಿನ ಈ ಎರಡು ಹೊಸ ಸ್ಮಾರ್ಟ್‌ಫೋನ್‌ಗಳು ಭಾರೀ ಅಚ್ಚರಿಯ ಫೀಚರ್ಸ್‌ಗಳನ್ನು ಒಳಗೊಂಡಿವೆ.

 ಹೈ ಎಂಡ್‌ ಫೀಚರ್ಸ್‌ನೊಂದಿಗೆ ಎಂಟ್ರಿ ಕೊಡಲಿವೆ 'ಎಲ್‌ಜಿ'ಯ ಈ ಸ್ಮಾರ್ಟ್‌ಫೋನ್‌ಗಳು

ಹೌದು, ಎಲ್‌ಜಿ ಕಂಪನಿಯು 'G8 ThinQ' ಮತ್ತು 'G8s ThinQ' ಸ್ಮಾರ್ಟ್‌ಫೋನ್‌ಗಳಲ್ಲಿ IP68 ದೂಳು ಮುಕ್ತ ಮತ್ತು ವಾಟರ್‌ ರೆಸಿಸ್ಟೆನ್ಸ್ ತಂತ್ರಜ್ಞಾನದಂತಹ ಫೀಚರ್ಸ್‌ಗಳನ್ನು ನೀಡಿದೆ. ಇದರೊಂದಿಗೆ ಹ್ಯಾಂಡ್‌ ಐಡಿ ಸೆಕ್ಯುರಿಟಿ ಫೀಚರ್ ಅನ್ನು ಪರಿಚಯಿಸಿದ್ದು, ಬಳಕೆದಾರರು ತಮ್ಮ ಕೈ ಬೆರಳಿನ ಗುರುತಿನಿಂದ ದೃಢೀಕರಿಸಿ ಫೋನ್ ಅನ್‌ಲಾಕ್ ಮಾಡಬಹುದಾಗಿದೆ. ಹಾಗೂ ತ್ರಿವಳಿ ಕ್ಯಾಮೆರಾವನ್ನು ನೀಡಲಾಗಿದೆ.

 ಹೈ ಎಂಡ್‌ ಫೀಚರ್ಸ್‌ನೊಂದಿಗೆ ಎಂಟ್ರಿ ಕೊಡಲಿವೆ 'ಎಲ್‌ಜಿ'ಯ ಈ ಸ್ಮಾರ್ಟ್‌ಫೋನ್‌ಗಳು

ಈ ಸ್ಮಾರ್ಟ್‌ಫೋನ್ 6GB RAM ಸಾಮರ್ಥ್ಯದೊಂದಿಗೆ 128GB ಆಂತರಿಕ ಸಂಗ್ರಹ ಸ್ಥಳಾವಕಾಶವನ್ನು ಒಳಗೊಂಡಿರುವ ಈ ಸ್ಮಾರ್ಟ್‌ಫೋನ್‌ಗಳು ನ್ಯೂ ಅರೋರಾ ಬ್ಲ್ಯಾಕ್, ಕಾರಮಿನ್ ರೆಡ್, ನ್ಯೂ ಮೋರೋಕ್ಯಾನ್ ಬ್ಲೂ, ಈ ಮೂರು ಬಣ್ಣಗಳ ಆಯ್ಕೆಗಳಲ್ಲಿ ದೊರೆಯಲಿವೆ. ಇದರೊಂದಿಗೆ ಎಲ್‌ಜಿ ಕಂಪನಿಯ G8 ThinQ ಮತ್ತು G8s ThinQ ಸ್ಮಾರ್ಟ್‌ಫೋನ್‌ಗಳು ಇತರೆ ಏನೆಲ್ಲಾ ಸ್ಪೆಷಲ್ ಫೀಚರ್ಸ್‌ಗಳನ್ನು ಹೊಂದಿದೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಎಲ್‌ಜಿ G8 ThinQ ಡಿಸ್‌ಪ್ಲೇ ಮತ್ತು ರಚನೆ

ಎಲ್‌ಜಿ G8 ThinQ ಡಿಸ್‌ಪ್ಲೇ ಮತ್ತು ರಚನೆ

1440 x 3120 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.1 ಇಂಚಿನ QHD+ OLED ಡಿಸ್‌ಪ್ಲೇಯನ್ನು ಹೊಂದಿರುವ ಈ ಸ್ಮಾರ್ಟ್‌ಫೋನ್‌ಗೆ 19.5:9 ರಷ್ಟು ಅನುಪಾತದಲ್ಲಿ ಪೂರ್ಣ ಡಿಸ್‌ಪ್ಲೇ ಒದಗಿಸಲಾಗಿದೆ. ಈ ಸ್ಮಾರ್ಟ್‌ಫೋನ್ 151.9x71.8x8.4 mm ಸುತ್ತಳತೆಯನ್ನು ಹೊಂದಿದ್ದು, ಆಕರ್ಷಕ ರಚನೆಯಲ್ಲಿ ಕಾಣಿಸುತ್ತದೆ. ಫೋನ್ ಹಗುರವಾಗಿದ್ದು, ಇದರ ತೂಕ 167 ಗ್ರಾಂ ಆಗಿದೆ.

ಎಲ್‌ಜಿ G8 ThinQ  ಪ್ರೊಸೆಸರ್

ಎಲ್‌ಜಿ G8 ThinQ ಪ್ರೊಸೆಸರ್

ಈ ಸ್ಮಾರ್ಟ್‌ಫೋನ್ 'ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ ಆಕ್ಟಾಕೋರ್ 855 ಪ್ರೊಸೆಸರ್' ನಲ್ಲಿ ಕಾರ್ಯನಿರ್ವಹಿಸಲಿದೆ. 6GB RAM ಸಾಮರ್ಥ್ಯದೊಂದಿಗೆ ಆಂತರಿಕ ಸಂಗ್ರಹಕ್ಕಾಗಿ 128GB ಸ್ಥಳಾವಕಾಶವನ್ನು ಒದಗಿಸಲಾಗಿದ್ದು, ಇದರೊಂದಿಗೆ ಎಸ್‌ಡಿ ಕಾರ್ಡ್‌ ಮೂಲಕ 2TB ವರೆಗೂ ಬಾಹ್ಯ ಸಂಗ್ರಹ ಸಾಮರ್ಥ್ಯ ವಿಸ್ತರಿಸಲು ಅವಕಾಶ ನೀಡಲಾಗಿದೆ.

ಎಲ್‌ಜಿ G8 ThinQ  ಕ್ಯಾಮೆರಾ

ಎಲ್‌ಜಿ G8 ThinQ ಕ್ಯಾಮೆರಾ

ಮೂರು ಕ್ಯಾಮೆರಾಗಳಿದ್ದು, ಪ್ರಾಥಮಿಕ ಕ್ಯಾಮೆರಾ 12 ಮೆಗಾಪಿಕ್ಸಲ್ f/1.5 ಅಪರ್ಚರ್ ಸಾಮರ್ಥ್ಯ ಹೊಂದಿದೆ. ಸೆಕೆಂಡರಿ ಕ್ಯಾಮೆರಾ ಸಹ 12 ಮೆಗಾಪಿಕ್ಸಲ್ ಜತೆಗೆ f/2.4 ಅಪರ್ಚರ್ನ ಟೆಲಿಫೋಟೋ ಲೆನ್ಸ್ ಹೊಂದಿದ್ದು, ಇನ್ನೂ ತೃತಿಯ ಕ್ಯಾಮೆರಾ 16 ಮೆಗಾಪಿಕ್ಸಲ್‌ನೊಂದಿಗೆ f/1.9 ಅಪರ್ಚರ್ ಜೊತೆ ವೈಲ್ಡ್ ಆಂಗಲ್ ಲೆನ್ಸ್ ಸಾಮರ್ಥ್ಯವನ್ನು ಒಳಗೊಂಡಿದೆ. ಸೆಲ್ಫಿಗಾಗಿ 8ಮೆಗಾಪಿಕ್ಸಲ್ ಕ್ಯಾಮೆರಾ ಇದೆ.

ಎಲ್‌ಜಿ G8 ThinQ  ಬ್ಯಾಟರಿ

ಎಲ್‌ಜಿ G8 ThinQ ಬ್ಯಾಟರಿ

ಈ ಸ್ಮಾರ್ಟ್‌ಫೋನಿನಲ್ಲಿ 3,500mAh ಸಾಮರ್ಥ್ಯದ ಶಕ್ತಿಯುತ ಬ್ಯಾಟರಿಯನ್ನು ನೀಡಲಾಗಿದ್ದು, ಇದರೊಂದಿಗೆ 3.0 ತಂತ್ರಾಜ್ಞಾನದ ಸಹಕರಿಸುವ ಫಾಸ್ಟ್‌ ಚಾರ್ಜರ್ ಅನ್ನು ಒದಗಿಸಲಾಗಿದೆ. ಇದರ ನೆರವಿನಿಂದ ಸ್ಮಾರ್ಟ್‌ಫೋನ್ ಅತೀ ಬೇಗನೆ ಚಾರ್ಜ್ ಆಗಲಿದೆ.

ಎಲ್‌ಜಿ G8s ThinQ ಡಿಸ್‌ಪ್ಲೇ ಮತ್ತು ರಚನೆ

ಎಲ್‌ಜಿ G8s ThinQ ಡಿಸ್‌ಪ್ಲೇ ಮತ್ತು ರಚನೆ

ಎಲ್‌ಜಿ G8s ThinQ ಸ್ಮಾರ್ಟ್‌ಫೋನ್‌ 1080x2248 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.2 ಇಂಚಿನ ಪೂರ್ಣ ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದೆ. ಇದರೊಂದಿಗೆ ಡಿಸ್‌ಪ್ಲೇಯು 18.7:9 ರಷ್ಟು ಅನುಪಾತವನ್ನು ಹೊಂದಿದ್ದು, ಕಡಿಮೆ ಅಂಚಿನಿಂದ ಕೂಡಿದೆ. ಈ ಸ್ಮಾರ್ಟ್‌ಫೋನ್

ಎಲ್‌ಜಿ G8s ThinQ ಪ್ರೊಸೆಸರ್

ಎಲ್‌ಜಿ G8s ThinQ ಪ್ರೊಸೆಸರ್

ಈ ಸ್ಮಾರ್ಟ್‌ಫೋನ್ 'ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ ಆಕ್ಟಾಕೋರ್ 855 SOC ಪ್ರೊಸೆಸರ್ ನ ವೇಗದ ಪ್ರೊಸೆಸರ್ ಅನ್ನು ಹೊಂದಿದ್ದು, ಇದರೊಟ್ಟಿಗೆ 6GB RAM ಸಾಮರ್ಥ್ಯದೊಂದಿಗೆ 128GB ಆಂತರಿಕ ಶೇಖರಣಾ ಸಾಮರ್ಥ್ಯವನ್ನು ಒದಗಿಸಲಾಗಿದೆ. ಆದರೆ ಇದರಲ್ಲಿ ಎಸ್‌ಡಿ ಕಾರ್ಡ್‌ ಮೂಲಕ ಬಾಹ್ಯ ಸಂಗ್ರಹಕ್ಕೆ ಯಾವುದೇ ಅವಕಾಶ ನೀಡಲ್ಲ.

ಎಲ್‌ಜಿ G8s ThinQ ಕ್ಯಾಮೆರಾ

ಎಲ್‌ಜಿ G8s ThinQ ಕ್ಯಾಮೆರಾ

ಎಲ್‌ಜಿ ಈ ಸ್ಮಾರ್ಟ್‌ಫೋನ್ ಒಟ್ಟು ಮೂರು ಕ್ಯಾಮೆರಾಗಳನ್ನು ಒಳಗೊಂಡಿದ್ದು, ಮೊದಲ ಕ್ಯಾಮೆರಾ 12 ಮೆಗಾಪಿಕ್ಸಲ್, ಎರಡನೆ ಕ್ಯಾಮೆರಾ ಸಹ 12 ಮೆಗಾಪಿಕ್ಸಲ್ ಮತ್ತು ಮೂರನೆ ಕ್ಯಾಮೆರಾ 13 ಮೆಗಾಪಿಕ್ಸಲ್ ಸಾಮರ್ಥ್ಯವನ್ನು ಹೊಂದಿವೆ. ಸೆಲ್ಫಿಗಾಗಿ 8 ಮೆಗಾಪಿಕ್ಸಲ್ ಕ್ಯಾಮೆರಾ ಒದಗಿಸಲಾಗಿದೆ.

ಎಲ್‌ಜಿ G8s ThinQ  ಬ್ಯಾಟರಿ

ಎಲ್‌ಜಿ G8s ThinQ ಬ್ಯಾಟರಿ

ಎಲ್‌ಜಿ G8s ThinQ ಸ್ಮಾರ್ಟ್‌ಫೋನ್‌ 3,550mAh ಸಾಮರ್ಥ್ಯದ ದೀರ್ಘ ಬಾಳಿಕೆಯ ಬ್ಯಾಟರಿಯನ್ನು ಹೊಂದಿದೆ. ಇದರೊಂದಿಗೆ 3.0 ತಂತ್ರಾಜ್ಞಾನದ ಸಹಕರಿಸುವ ಫಾಸ್ಟ್‌ ಚಾರ್ಜರ್ ಅನ್ನು ಒದಗಿಸಲಾಗಿದೆ. ಇದರ ನೆರವಿನಿಂದ ಸ್ಮಾರ್ಟ್‌ಫೋನ್ ಅತೀ ಬೇಗನೆ ಚಾರ್ಜ್ ಆಗಲಿದೆ.

ಲಭ್ಯತೆ ಮತ್ತು ದರ?

ಲಭ್ಯತೆ ಮತ್ತು ದರ?

ಎಲ್‌ಜಿ ಕಂಪನಿಯ ಈ ಎರಡು ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಗೆ ಯಾವಾಗ ಎಂಟ್ರಿ ಕೊಡಲಿವೆ ಎಂಬುದನ್ನು ಕಂಪನಿ ಅಧಿಕೃತವಾಗಿ ತಿಳಿಸಿಲ್ಲ. ಹಾಗೂ ಇವುಗಳು ಬೆಲೆಯ ಬಗ್ಗೆಯು ಮಾಹಿತಿ ಬಹಿರಂಗಪಡಿಸಿಲ್ಲ.

Best Mobiles in India

English summary
The LG G8s ThinQ and LG G8 ThinQ have been launched and while they feature over 6.0-inch QHD+ displays and IP68 dust and water-resistant technology, they also come with ToF Z Camera and Hand ID authentication..to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X