ಡ್ಯುಯಲ್‌ ಸ್ಕ್ರೀನ್ 'ಎಲ್‌ಜಿ ವಿ20' ಫೋನ್‌ ಭಾರತದಲ್ಲಿ ಸೋಮವಾರ ಲಾಂಚ್‌: ಹೇಗಿರಲಿದೆ ಗೊತ್ತಾ?

By Suneel
|

ಭಾರತದ ಸ್ಮಾರ್ಟ್‌ಫೋನ್‌ ಮಾರುಕಟ್ಟೆಗೆ ಎಲ್‌ಜಿ ಹೊಸ ಡಿವೈಸ್‌ ಅನ್ನು ಪರಿಚಯಿಸಲು ರೆಡಿಯಾಗಿದೆ. ಎಲ್‌ಜಿ ವಿ20(V20) ಸ್ಮಾರ್ಟ್‌ಫೋನ್‌ ಅನ್ನು ಸೋಮವಾರ ಲಾಂಚ್‌ ಮಾಡಲು ಈಗಾಗಲೇ ಮಾಧ್ಯಮಗಳಿಗೆ ಆಹ್ವಾನ ಕಳುಹಿಸುತ್ತಿದೆ. ಎಲ್‌ಜಿಯ ವಿ20(V20) ಸ್ಮಾರ್ಟ್‌ಫೋನ್‌ ಅನ್ನು ಮುಂದಿನ ವಾರದ ಒಳಗಾಗಿ ಭಾರತದ ಆಫ್‌ಲೈನ್ ರೀಟೇಲರ್‌ಗಳಲ್ಲಿಯೂ. ಬೆಸ್ಟ್‌ ಬಜೆಟ್ ಬೆಲೆ ರೂ. 54,999 ಮತ್ತು ರೂ.60,000 ಕ್ಕೆ ಖರೀದಿಸಬಹುದು.

ಡ್ಯುಯಲ್‌ ಸ್ಕ್ರೀನ್ 'ಎಲ್‌ಜಿ ವಿ20' ಫೋನ್‌ ಭಾರತದಲ್ಲಿ ಸೋಮವಾರ ಲಾಂಚ್‌..ǃ

ಎಲ್‌ಜಿ ವಿ20(V20) ಸ್ಮಾರ್ಟ್‌ಫೋನ್‌ ಡ್ಯುಯಲ್‌ ಡಿಸ್‌ಪ್ಲೇ ಮತ್ತು ಡ್ಯುಯಲ್ ಹಿಂಭಾಗ ಕ್ಯಾಮೆರಾ ಸೆಟಪ್ ಹೊಂದಿದ್ದು, AL6013 ಮೆಟಲ್ ಬಾಡಿ ನಿರ್ಮಾಣ ಹೊಂದಿರುವುದು ಡಿವೈಸ್‌ನ ದೊಡ್ಡ ಪ್ರಮುಖ ವಿಷಯವಾಗಿದೆ. 4 ಅಡಿ ಎತ್ತರದಿಂದ ಬಿದ್ದರೂ ಸಹ ಡಿವೈಸ್ ಸುರಕ್ಷತೆ ಹೊಂದುವ ಎಲ್ಲಾ ಲಕ್ಷಣಗಳನ್ನು ಹೊಂದಿದೆ. 32 ಬಿಟ್ ಹೈ ಫೈ ಕ್ವಾಡ್ DACm HD ಆಡಿಯೋ ರೆಕಾರ್ಡರ್, ಮತ್ತು ಬಿ ಮತ್ತು ಒ ಪ್ಲೇ ಸ್ಪೀಕರ್‌ ಫೀಚರ್ ಹೊಂದಿದೆ.

ಡ್ಯುಯಲ್‌ ಸ್ಕ್ರೀನ್ 'ಎಲ್‌ಜಿ ವಿ20' ಫೋನ್‌ ಭಾರತದಲ್ಲಿ ಸೋಮವಾರ ಲಾಂಚ್‌..ǃ

ಎಲ್‌ಜಿ ವಿ20(V20) ಸ್ಮಾರ್ಟ್‌ಫೋನ್ 5.7 ಇಂಚಿನ ಕ್ವಾಡ್‌ಕೋರ್ ಎಚ್‌ಡಿ ಐಪಿಎಸ್ ಡಿಸ್‌ಪ್ಲೇ ಮತ್ತು ಕ್ವಾಲ್ಕಂ ಸ್ನಾಪ್‌ಡ್ರಾಗನ್ 820 ಕ್ಲಾಕ್ಡ್‌ 2.15GHz ಪ್ರೊಸೆಸರ್ ಹೊಂದಿದೆ. 4GB RAM ಜೊತೆಗೆ, 64GB ಆಂತರಿಕ ಮೆಮೊರಿ ಹೊಂದಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಡ್ಯುಯಲ್‌ ಸ್ಕ್ರೀನ್ 'ಎಲ್‌ಜಿ ವಿ20' ಫೋನ್‌ ಭಾರತದಲ್ಲಿ ಸೋಮವಾರ ಲಾಂಚ್‌..ǃ

ಫೋಟೋಗ್ರಫಿ ವಿಭಾಗದಲ್ಲಿ ಡ್ಯುಯಲ್ ಹಿಂಭಾಗ ಕ್ಯಾಮೆರಾ ಹೊಂದಿರುವ ಎಲ್‌ಜಿ ವಿ20(V20) 16MP ಜೊತೆಗೆ f/1.8 ಅಪರ್ಚರ್ ಸೆನ್ಸಾರ್ ಮತ್ತು 8MP ಕ್ಯಾಮೆರಾ ಹೊಂದಿದೆ. 5MP ಸೆಲ್ಫಿ ಕ್ಯಾಮೆರಾ ಜೊತೆಗೆ f/1.9 ಅಪರ್ಚರ್ ಸೆನ್ಸಾರ್ ಹೊಂದಿದೆ.

ಎಲ್‌ಜಿ ಜಿ ವಕ್ರ ಸ್ಕ್ರೀನ್‌ ಸ್ಮಾರ್ಟ್‌‌ಫೋನ್‌ ದೇಶೀಯ ಮಾರುಕಟ್ಟೆಯಲ್ಲಿ ಲಭ್ಯ

ಡ್ಯುಯಲ್‌ ಸ್ಕ್ರೀನ್ 'ಎಲ್‌ಜಿ ವಿ20' ಫೋನ್‌ ಭಾರತದಲ್ಲಿ ಸೋಮವಾರ ಲಾಂಚ್‌..ǃ

ಸ್ಮಾರ್ಟ್‌ಫೋನ್‌ ಆಂಡ್ರಾಯ್ಡ್ 7.0 ನ್ಯೂಗಾ ಓಏಸ್ ಚಾಲಿತವಾಗಿದೆ. 3,200mAh ರೀಮೂವೇಬಲ್ ಕ್ವಿಕ್‌ ಚಾರ್ಜ್‌ ಬ್ಯಾಟರಿ ಹೊಂದಿದೆ. ಅಲ್ಲದೇ ಬ್ಯಾಟರಿ ಬದಲಾಯಿಸುವ ಫೀಚರ್ ಹೊಂದಿದೆ. ಕನೆಕ್ಟಿವಿಟಿ ಫೀಚರ್‌ಗಳಲ್ಲಿ 4G LTE, ವೈ-ಫೈ, ಯುಎಸ್ಬಿ-ಸಿ ಸಪೋರ್ಟ್, ಬ್ಲೂಟೂತ್ 4.2 ಮತ್ತು NFC ಹೊಂದಿದೆ. ಎಲ್‌ಜಿ ವಿ20(V20) ಮೊಟ್ಟ ಮೊದಲ ಗೂಗಲ್‌ ಇನ್‌ ಆಪ್‌ಗಳನ್ನು ಹೋಂದಿರುವ ಸ್ಮಾರ್ಟ್‌ಫೋನ್ ಆಗಿದೆ. ಇದು ಗೂಗಲ್‌ ಆಪ್‌ನಲ್ಲಿನ ಹೊಸ ಸರ್ಚ್‌ ಮೋಡ್ ಫೀಚರ್‌ ಆಗಿದೆ.

ಅಮೆಜಾನ್‌ ಡಿಸ್ಕೌಂಟ್: ಮೊಟೊ ಜಿ4, ಪ್ಲೇ, ಟರ್ಬೊ ಡಿವೈಸ್‌ ಖರೀದಿಗೆ ರೂ.2000 ವರೆಗೆ ಡಿಸ್ಕೌಂಟ್...!

Best Mobiles in India

Read more about:
English summary
LG V20 to launch in India on Monday: Dual Srceen, Dual Camera. To Know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X