'ಎಲ್‌ಜಿ' ವಿ50 ThinQ' ಫೋನ್‌ ರಿಲೀಸ್‌ಗೆ ಮೂಹುರ್ತ ಫಿಕ್ಸ್!.OLED ಡಿಸ್‌ಪ್ಲೇ ಸ್ಪೆಷಲ್!

|

ಜನಪ್ರಿಯ ಎಲ್‌ಜಿ ಸ್ಮಾರ್ಟ್‌ಫೋನ್ ಕಂಪನಿಯು ಇತ್ತೀಚಿಗೆ ಮುಕ್ತಾಯವಾದ ಮೊಬೈಲ್‌ ಕಾಂಗ್ರೆಸ್‌ ವರ್ಲ್ಡ್ 2019 ರಲ್ಲಿ ತನ್ನ ಹೊಸ ಸ್ಮಾರ್ಟ್‌ಫೋನ್‌ ಒಂದನ್ನು ಪ್ರದರ್ಶಿಸಿ ಗಮನ ಸೆಳೆದಿತ್ತು. ಇದೀಗ ಕಂಪನಿ ಆ ಸ್ಮಾರ್ಟ್‌ಪೋನ್‌ ಅನ್ನು ರಿಲೀಸ್ ಮಾಡಲು ಮೂಹುರ್ತ ಫಿಕ್ಸ್‌ ಮಾಡಿದ್ದು, ಅತ್ಯುತ್ತಮ ಫೀಚರ್ಸ್‌ಗಳನ್ನು ತುಂಬಿಕೊಂಡಿರುವ ಹೊಸ ಫ್ಯ್ಲಾಗ್‌ಶಿಪ್‌ ಸ್ಮಾರ್ಟ್‌ಫೋನ್‌ ಗ್ರಾಹಕರ ಕುತೂಹಲ ಹೆಚ್ಚಿದೆ.

'ಎಲ್‌ಜಿ' ವಿ50 ThinQ' ರಿಲೀಸ್‌ಗೆ ಮೂಹುರ್ತ ಫಿಕ್ಸ್!.OLED ಡಿಸ್‌ಪ್ಲೇ ಸ್ಪೆಷಲ್!

ಹೌದು, ಎಲ್‌ಜಿ ಸಂಸ್ಥೆಯು 'ವಿ50 ThinQ' ಹೆಸರಿನ 5G ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆಗೆ ಮಾಡಲು ಸಜ್ಜಾಗಿದ್ದು, ಇದೇ ಏಪ್ರಿಲ್ 19ರಂದು ದಕ್ಷಿಣ ಕೊರಿಯಾದ ಮಾರುಕಟ್ಟೆಯನ್ನು ಪ್ರವೇಶಿಸಲಿದೆ. ಎಲ್‌ಜಿಯ 6.4 ಇಂಚಿನ ಡಿಸ್‌ಪ್ಲೇಯನ್ನು ಹೊಂದಿರಲಿದ್ದು, ಸ್ನ್ಯಾಪ್‌ಡ್ರಾಗನ್ 855 SoC ಪ್ರೊಸೆಸರ್‌ ಇದರಲ್ಲಿ ಕಾರ್ಯನಿರ್ವಹಿಸಲಿದೆ. 6GB RAM ಸ್ಮಾರ್ಟ್‌ಫೋನ್‌ಗೆ ವೇಗಕ್ಕೆ ಬಲ ತುಂಬಲಿದೆ.

'ಎಲ್‌ಜಿ' ವಿ50 ThinQ' ರಿಲೀಸ್‌ಗೆ ಮೂಹುರ್ತ ಫಿಕ್ಸ್!.OLED ಡಿಸ್‌ಪ್ಲೇ ಸ್ಪೆಷಲ್!

ಪ್ರಸ್ತುತ ಟ್ರೆಂಡ್‌ನಲ್ಲಿರುವ ತ್ರಿವಳಿ ಕ್ಯಾಮೆರಾ ಫೀಚರ್‌ ಅನ್ನು ಎಲ್‌ಜಿ 'ವಿ50 ThinQ' ಸ್ಮಾರ್ಟ್‌ಫೋನ್‌ ಒಳಗೊಂಡಿದ್ದು, ಅತ್ಯುತ್ತಮ ಸಾಮರ್ಥ್ಯದ ಕ್ಯಾಮೆರಾಗಳನ್ನು ನೀಡಲಾಗಿದೆ. ಹೈ ಪವರ್‌ ಬ್ಯಾಟರಿ ಶಕ್ತಿಯೊಂದಿಗೆ ಕ್ವಿಕ್‌ ಚಾರ್ಜರ್‌ ಸೌಲಭ್ಯವನ್ನು ಒದಗಿಸಲಾಗುವುದು ಎನ್ನಲಾಗುತ್ತಿದೆ. ಹಾಗಾದರೇ ಏನೆಲ್ಲಾ ವಿಶೇಷ ಫೀಚರ್ಸ್‌ಗಳೊಂದಿಗೆ ಲಾಂಚ್‌ ಆಗಲಿದೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಡಿಸ್‌ಪ್ಲೇ

ಡಿಸ್‌ಪ್ಲೇ

1440x3120 ಪಿಕ್ಸಲ್‌ ರೆಸಲ್ಯೂಶನ್‌ ನೊಂದಿಗೆ 6.4 ಇಂಚಿನ OLED ಫುಲ್‌ QHD ಸಾಮರ್ಥ್ಯದ ಪೂರ್ಣ ಡಿಸ್‌ಪ್ಲೇಯನ್ನು ಹೊಂದಿರಲಿದ್ದು, ಡಿಸ್‌ಪ್ಲೇ ಮತ್ತು ಬಾಹ್ಯ ಬಾಡಿಯ ನಡುವಿನ ಅನುಪಾತವು 19.5:9 ರಷ್ಟು ಆಗಿರಲಿದೆ. ಡಿಸ್‌ಪ್ಲೆಯ ಪ್ರತಿ ಇಂಚಿನ ಪಿಕ್ಸಲ್ ಸಾಂದ್ರತೆಯು 538ppi ಆಗಿದ್ದು, ಸ್ಕ್ರೀನ್‌ ಹೆಚ್ಚು ಪ್ರಖರವಾಗಿರುತ್ತದೆ.

ಪ್ರೊಸೆಸರ್‌

ಪ್ರೊಸೆಸರ್‌

ಎಲ್‌ಜಿಯ 'ವಿ50 ThinQ' ಸ್ಮಾರ್ಟ್‌ಫೋನ್‌ ಕ್ವಾಲ್ಕಮ ಸ್ನ್ಯಾಪ್‌ಡ್ರಾಗನ್ 855 SoC ಪ್ರೊಸೆಸರ್‌ ಅನ್ನು ಹೊಂದಿದ್ದು, ಜೊತೆಗೆ ಸ್ನ್ಯಾಪ್‌ಡ್ರಾಗನ್ X50 ಮೋಡೆಮ್‌ ಸಹ ಇದರಲ್ಲಿರಲಿದೆ ಎನ್ನಲಾಗುತ್ತಿದೆ. ಇದರೊಂದಿಗೆ ಅಂಡ್ರನೊ 640 GPU ಅನ್ನು ಅಳವಡಿಸಲಾಗಿದ್ದು, ಇದು ಪ್ರೊಸೆಸರ್‌ಗೆ ಹೆಚ್ಚಿನ ಬಲ ಒದಗಿಸಲಿದೆ.

ಮೆಮೊರಿ

ಮೆಮೊರಿ

ಎಲ್‌ಜಿಯ 'ವಿ50 ThinQ' ಸ್ಮಾರ್ಟ್‌ಫೋನ್‌ 6GB ಸಾಮರ್ಥ್ಯದ RAM ಇರಲಿದ್ದು, ಇದರೊಟ್ಟಿಗೆ 128GBಯ ಆಂತರಿಕ ಸಂಗ್ರಹ ಸಾಮರ್ಥ್ಯವನ್ನು ನೀಡಲಾಗಿರಲಿದೆ. ಮೈಕ್ರೋ ಎಸ್‌ಡಿ ಕಾರ್ಡ್‌ ಮೂಲಕ 2TB ವರೆಗೂ ಬಾಹ್ಯ ಸಂಗ್ರಹವನ್ನು ವಿಸ್ತರಿಸಿಕೊಳ್ಳಲು ಅವಕಾಶ ನೀಡಲಾಗಿರಲಿದೆ.

ತ್ರಿವಳಿ ಕ್ಯಾಮೆರಾ

ತ್ರಿವಳಿ ಕ್ಯಾಮೆರಾ

ಸ್ಮಾರ್ಟ್‌ಫೋನಿನ ಹಿಂಬದಿಯಲ್ಲಿ ಮೂರು ಕ್ಯಾಮೆರಾಗಳನ್ನು ಒದಗಿಸಲಾಗಿದ್ದು, ಮುಖ್ಯ ಕ್ಯಾಮೆರಾ 12 ಮೆಗಾಪಿಕ್ಸಲ್ ನೊಂದಿಗೆ 78 ಡಿಗ್ರಿ ಲೆನ್ಸ್‌ ಇರಲಿದ್ದು, ಅಪರ್ಚರ್ f/1.5 ಆಗಿದೆ. ಎರಡನೆ ಕ್ಯಾಮೆರಾದ ಅಪರ್ಚರ್ f/2.4 ಆಗಿದ್ದು, 12 ಮೆಗಾಪಿಕ್ಸಲ್‌ನೊಂದಿಗೆ 45 ಡಿಗ್ರಿ ಟೆಲಿಫೋಟೋ ಲೆನ್ಸ್ ಹೊಂದಿರಲಿದೆ. ಮೂರನೇ ಕ್ಯಾಮೆರಾವು 16 ಮೆಗಾಪಿಕ್ಸಲ್ ಜೊತೆ ವೈಲ್ಡ್ ಆಂಗಲ್‌ ಲೆನ್ಸ್‌ ಅನ್ನು ಹೊಂದಿರಲಿದೆ.

ಡ್ಯುಯಲ್ ಸೆಲ್ಫಿ ಕ್ಯಾಮೆರಾ

ಡ್ಯುಯಲ್ ಸೆಲ್ಫಿ ಕ್ಯಾಮೆರಾ

ಸೆಲ್ಫಿಗಾಗಿ ಎರಡು ಕ್ಯಾಮೆರಾ ನೀಡಲಾಗಿದ್ದು, ಮುಖ್ಯ ಕ್ಯಾಮೆರಾ 8 ಮೆಗಾಪಿಕ್ಸಲ್ ಜೊತೆಗೆ RGB ಸೆನ್ಸಾರ್‌ ಹೊಂದಿರಲಿದೆ. ಇದರ ಅಪರ್ಚರ್‌ f/1.9 ಆಗಿರಲಿದ್ದು, 1 ಮೈಕ್ರೋನ್ ಪಿಕ್ಸಲ್ ಗಾತ್ರವನ್ನು ಹೊಂದಿರುವ ಜೊತೆ 80 ಡಿಗ್ರಿ ಲೆನ್ಸ್‌ ಇರಲಿದೆ. ಇನ್ನೂ ಎರಡನೇ ಕ್ಯಾಮೆರಾ 5 ಮೆಗಾಪಿಕ್ಸಲ್ ಸಾಮರ್ಥ್ಯದೊಂದಿಗೆ 90 ಡಿಗ್ರಿ ವೈಲ್ಡ್ ಆಂಗಲ್‌ ಲೆನ್ಸ್ ಹೊಂದಿರಲಿದ್ದು, ಇದರ ಅಪರ್ಚರ್‌ f/2.2 ಆಗಿದೆ ಮತ್ತು 1.12 ಮೈಕ್ರೋನ್ ಪಿಕ್ಸಲ್ ಗಾತ್ರವನ್ನು ಹೊಂದಿರಲಿದೆ.

ಬ್ಯಾಟರಿ

ಬ್ಯಾಟರಿ

4,000mAh ಸಾಮರ್ಥ್ಯದ ಪವರ್‌ಪುಲ್ ಬ್ಯಾಟರಿಯನ್ನು ಒಳಗೊಂಡಿರಲಿದ್ದು, ಇದರೊಂದಿಗೆ ಕ್ವಿಕ್‌ ಚಾರ್ಜರ್‌ 3.0 ಸೌಲಭ್ಯವನ್ನು ಸಹ ಒದಗಿಸಲಾಗುವುದು. ಈ ತಂತ್ರಜ್ಞಾನವು ಸ್ಮಾರ್ಟ್‌ಫೋನ್‌ ವೇಗವಾಗಿ ಚಾರ್ಜ್‌ ಪಡೆದುಕೊಳ್ಳಲು ನೆರವಾಗಲಿದೆ. ಯುಎಸ್‌ಬಿ Type-C ಚಾರ್ಜಿಂಗ್ ಮಾದರಿಯ ಫೋರ್ಟ್‌ ಅನ್ನು ಹೊಂದಿರಲಿದೆ.

ಲಭ್ಯತೆ ಮತ್ತು ಬೆಲೆ

ಲಭ್ಯತೆ ಮತ್ತು ಬೆಲೆ

ಎಲ್‌ಜಿಯ 'ವಿ50 ThinQ' ಸ್ಮಾರ್ಟ್‌ಫೋನ್‌ ಇದೇ ಏಪ್ರಿಲ್ 19ರಂದು ದಕ್ಷಿಣ ಕೊರಿಯಾದಲ್ಲಿ ರಿಲೀಸ್‌ ಆಗಲಿದ್ದು, ಬೆಲೆಯು KRW 1,119,000 (ಅಂದಾಜು 73,000ರೂ.ಗಳು). ಆದರೆ ಭಾರತೀಯ ಮಾರುಕಟ್ಟೆಗೆ ಯಾವಾಗ ಪ್ರವೇಶಿಸಲಿದೆ ಎನ್ನುವ ಬಗ್ಗೆ ಕಂಪನಿ ಅಧಿಕೃತ ಮಾಹಿತಿ ನೀಡಿಲ್ಲ.

Best Mobiles in India

English summary
LG V50 ThinQ 5G will be available from April 19 and its pricing has also been released for the South Korean market.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X