ಸದ್ಯ ಖರೀದಿಗೆ ಲಭ್ಯ ಇರುವ 5 ಬಜೆಟ್ ಬೆಲೆಯ ಫೋನ್‌ಗಳು!

|

ಪ್ರಸ್ತುತ ಮೊಬೈಲ್ ಮಾರುಕಟ್ಟೆಯಲ್ಲಿ ಸಾಕಷ್ಟು ಬಜೆಟ್ ಸ್ಮಾರ್ಟ್‌ಫೋನ್‌ಗಳು ಲಭ್ಯ ಇವೆ. ಅವುಗಳಲ್ಲಿ ಉನ್ನತ ಸೆನ್ಸಾರ್ ಕ್ಯಾಮೆರಾ, ವೇಗದ ಪ್ರೊಸೆಸರ್, ಬಿಗ್ ಬ್ಯಾಟರಿ ಲೈಫ್ ಸೇರಿದಂತೆ ಆಕರ್ಷಕ ಫೀಚರ್ಸ್ ಹೊಂದಿರುವ ಫೋನ್‌ಗಳಿಗೆ ಬೇಡಿಕೆ ಹೆಚ್ಚು. ಹೀಗೆ ನೀವು ಬಜೆಟ್ ಬೆಲೆಯಲ್ಲಿ ಒಂದು ಅತ್ಯುತ್ತಮ ಸ್ಮಾರ್ಟ್‌ಫೋನ್ ಖರೀದಿಸುವ ಆಲೋಚನೆಯಲ್ಲಿದ್ದರೇ, ಈ ಲೇಖನದಲ್ಲಿ ನೀಡಲಾಗಿರುವ ಉತ್ತಮ ಬಜೆಟ್‌ ಫೋನ್‌ಗಳ ಲಿಸ್ಟ್‌ ನಿಮಗೆ ಸಹಕಾರಿ ಅನಿಸಲಿದೆ.

ಹತ್ತು ಸಾವಿರ ಬೆಲೆ

ಬಹುತೇಕ ಗ್ರಾಹಕರು ಸುಮಾರು ಹತ್ತು ಸಾವಿರ ಬೆಲೆಯ ಆಸುಪಾಸಿನ ಬೆಲೆಯಲ್ಲಿರುವ ಸ್ಮಾರ್ಟ್‌ಫೋನ್‌ಗಳನ್ನೇ ಆಯ್ಕೆ ಮಾಡುವುದು ಹೆಚ್ಚು. ಏಕೆಂದರೇ ಮೊಬೈಲ್ ಮಾರುಕಟ್ಟೆಯಲ್ಲಿ ಚೀನಾ ಫೋನ್‌ಗಳ ಅಬ್ಬರ ಅಧಿಕವಾಗಿದ್ದು, ಸದ್ಯ ಬಜೆಟ್ ಪ್ರೈಸ್‌ನಲ್ಲಿಯೇ ಅತ್ಯುತ್ತಮ ಫೀಚರ್ಸ್‌ಗಳು ಲಭ್ಯವಾಗುತ್ತಿವೆ. ಹಾಗೆಯೇ ಸ್ಯಾಮ್‌ಸಂಗ್ ಸಂಸ್ಥೆಯು ಸಹ ಚೀನಾ ಫೋನ್‌ಗಳಿಗೆ ಎದಿರೇಟು ನೀಡುವ ಬೆಲೆಯಲ್ಲಿ ಹೊಸ ಫೋನ್‌ಗಳನ್ನು ಲಾಂಚ್ ಮಾಡುತ್ತಾ ಸಾಗಿದೆ. ಸದ್ಯ 10,000 ರೂ. ಬೆಲೆಯಲ್ಲಿ ಖರೀದಿಸಬಹುದಾದ ಐದು ಬೆಸ್ಟ್‌ ಫೋನ್‌ಗಳು ಯಾವುವು ಎಂಬುದನ್ನು ಈ ಲೇಖನದಲ್ಲಿ ತಿಳಿಸಿಲಾಗದೆ. ಮುಂದೆ ಓದಿರಿ.

ವಿವೋ ಯು10

ವಿವೋ ಯು10

ಈ ಸ್ಮಾರ್ಟ್‌ಫೋನ್ 5,000mAh ಬ್ಯಾಟರಿ, ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 665, AI ಬೆಂಬಲಿತ ತ್ರಿವಳಿ ಕ್ಯಾಮೆರಾ ಹಾಗೂ 18W ಸಾಮರ್ಥ್ಯದ ಫಾಸ್ಟ್‌ ಚಾರ್ಜಿಂಗ್ ಸೌಲಭ್ಯಗಳನ್ನು ಒಳಗೊಂಡಿದೆ. 3GB+32GB, 3GB+64GB ಮತ್ತು 6GB+64GB ಸ್ಟೋರೇಜ್‌ನ ಮೂರು ವೇರಿಯಂಟ್‌ ಆಯ್ಕೆಗಳನ್ನು ಹೊಂದಿದ್ದು, ಬ್ಕ್ಯಾಕ್‌ ಮತ್ತು ಬ್ಲೂ ಬಣ್ಣಗಳಲ್ಲಿ ಸಿಗಲಿದೆ.

ರೆಡ್ಮಿ 7s

ರೆಡ್ಮಿ 7s

ಜನಪ್ರಿಯ ರೆಡ್ಮಿ ನೋಟ್ ಸರಣಿಯಲ್ಲಿಯೇ ಈ ಫೋನ್ ಸಹ ಬಿಡುಗಡೆ ಆಗಿದ್ದು, ಇದು ಸಹ ಮಾರುಕಟ್ಟೆಯಲ್ಲಿ ಮೆಚ್ಚುಗೆ ಪಡೆದಿರುವ ಫೋನಾಗಿದೆ. 48ಎಂಪಿ ಕ್ಯಾಮೆರಾ, ಬಿಗ್ ಬ್ಯಾಟರಿ ಹಾಗೂ 660 ಪ್ರೊಸೆಸರ್ ಹೊಂದಿದೆ. 3GB RAM ಮತ್ತು 32GB ವೇರಿಯಂಟ್ ಸಾಮರ್ಥ್ಯದ ಬೇಸಿಕ ವೇರಿಯಂಟ್ ಆಯ್ಕೆ ಇದೆ.

ರಿಯಲ್‌ ಮಿ 5i

ರಿಯಲ್‌ ಮಿ 5i

ಆಕರ್ಷಕ ಡಿಸೈನ್‌ನಿಂದ ಗಮನ ಸೆಳೆದಿರುವ ರಿಯಲ್‌ ಮಿ 5i ಸ್ಮಾರ್ಟ್‌ಫೋನ್ 665 AIE ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಪೂರಕ ಆಂಡ್ರಾಯ್ಡ್ ಓಎಸ್‌ ಬೆಂಬಲ ಪಡೆದಿದೆ. 5000mAh ಬ್ಯಾಟರಿ ಬಾಳಿಕೆಯನ್ನು ಪಡೆದಿರುವ ಈ ಫೋನ್ ಕ್ವಾಡ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಪಡೆದಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ M30

ಸ್ಯಾಮ್‌ಸಂಗ್ ಗ್ಯಾಲಕ್ಸಿ M30

ಸ್ಯಾಮ್‌ಸಂಗ್ ಸಂಸ್ಥೆಯ ಬಜೆಟ್ ಕೇಟಗೇರಿಯಲ್ಲಿ ಗ್ಯಾಲಕ್ಸಿ ಎಂ30 ಫೋನ್ ಉತ್ತಮವಾಗಿ ಗುರುತಿಸಿಕೊಂಡಿದೆ. ಈ ಫೋನ್ Exynos 7904 ಚಿಪ್‌ಸೆಟ್‌ ಪ್ರೊಸೆಸರ್‌ ಅನ್ನು ಪಡೆದಿದೆ. ತ್ರಿವಳಿ ಕ್ಯಾಮೆರಾ ಆಯ್ಕೆಯನ್ನು ಒಳಗೊಂಡಿದ್ದು, ಸೂಪರ್ AMOLED ಡಿಸ್‌ಪ್ಲೇಯನ್ನು ಪಡೆದಿದೆ.

ರೆಡ್ಮಿ ನೋಟ್ 7 ಪ್ರೊ

ರೆಡ್ಮಿ ನೋಟ್ 7 ಪ್ರೊ

ಕಳೆದ ವರ್ಷ ಲಾಂಚ್ ಆದ ರೆಡ್ಮಿ ನೋಟ್ 7 ಪ್ರೊ ಸಖತ್ ಹವಾ ಸೃಷ್ಠಿಸಿತ್ತು. 4000mAh ಬ್ಯಾಟರಿ, 675 ಪ್ರೊಸೆಸರ್, 48ಎಂಪಿ ಸೆನ್ಸಾರ್ ಸಾಮರ್ಥ್ಯದ ಫೀಚರ್ಸ್‌ಗಳನ್ನು ಒಳಗೊಂಡಿದೆ. ಬಜೆಟ್ ಬೆಲೆಯ ಫೋನ್‌ಗಳಲ್ಲಿಯೇ ಟ್ರೆಂಡಿಂಗ್ ಹೊಂದಿದೆ.

Best Mobiles in India

English summary
budget phones have become very good nowadays, giving consumers plenty of features at affordable prices.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X