LYF ನಿಂದ 7,999ಕ್ಕೆ 3GB RAM ಹೊಂದಿರುವ 4G ಸ್ಮಾರ್ಟ್‌ಪೋನು..!

|

ರಿಲಯನ್ಸ್ ಮಾಲೀಕತ್ವದ LYF ನಿಂದ ಮತ್ತೊಂದು ಕಡಿಮೆ ಬೆಲೆಯ ಉತ್ತಮ ಸ್ಮಾರ್ಟ್‌ಪೋನ್ ಬಿಡುಗಡೆಯಾಗುತ್ತಿದ್ದು, ಈ ಪೋನಿಗೆ Water 7S ಎಂದು ನಾಮಕರಣ ಮಾಡಿದ್ದು, ಈ ಪೋನಿನೊಂದಿಗೆ ಜಿಯೋ 'ಹ್ಯಾಪಿ ನ್ಯೂ ಇಯರ್' ಆಫರ್ ದೊರೆಯಲಿದೆ. ಈ ಹಿಂದಿನ ವಾಟರ್ ಸ್ಮಾರ್ಟ್‌ಪೋನ್ ಸರಣಿಯ ಮುಂದುವರೆದ ಭಾಗ ಇದಾಗಿದೆ.

LYF ನಿಂದ 7,999ಕ್ಕೆ 3GB RAM ಹೊಂದಿರುವ 4G ಸ್ಮಾರ್ಟ್‌ಪೋನು..!

ನೋಕಿಯಾದ 7ಕ್ಕೂ ಹೆಚ್ಚು ಸ್ಮಾರ್ಟ್‌ಪೋನ್ ಜೊತೆಯಲ್ಲಿ ಬರಲಿವೆ ಫೀಚರ್ ಪೋನುಗಳು

ಕಡಿಮೆ ಬೆಲೆ ಎಂದ ಕಾರಣಕ್ಕೆ ಗುಣಮಟ್ಟದಲ್ಲಿ ಯಾವುದೇ ರಾಜಿಯಾಗಿಲ್ಲ, ಒಳ್ಳೆ ಡಿಸ್‌ಪ್ಲೇ, ಬ್ಯಾಟರಿ ಬ್ಯಾಕಪ್, ಕ್ಯಾಮೆರಾವನ್ನು ನೀಡುವುದರಲ್ಲಿ LYF ಮುಂದಿದೆ. ಬೇರೆ ಸ್ಮಾರ್ಟ್‌ಪೋನುಗಳಲ್ಲಿ ಇರುವಂತಹ ಎಲ್ಲಾ ಸೌಲಭ್ಯಗಳನ್ನು ಕಡಿಮೆ ಬೆಲೆಗೆ ತನ್ನ ಸ್ಮಾರ್ಟ್‌ಪೋನಿನಲ್ಲಿ ನೀಡುವ ಪ್ರಯತ್ನಮಾಡಿದೆ.

Full HD ಡಿಸ್‌ಪ್ಲೇ

Full HD ಡಿಸ್‌ಪ್ಲೇ

LYF Water 7S ಪೋನಿನಲ್ಲಿ 5.5 ಇಂಚಿನ (13.9ಸೇ.ಮಿ.)IPS LCD ಸ್ಕ್ರಿನ್ ಇದೆ. 1920 x 1080 ಪಿಕ್ಸಲ್ Full HD ಗುಣಮಟ್ಟವನ್ನು ಹೊಂದಿದ್ದು, ಪಾಂಡ ಗ್ಲಾಸ್ ರಕ್ಷಣೆ ಸಹ ಈ ಸ್ಕ್ರಿನ್‌ಗೆ ಇದೆ. ಉತ್ತಮ ಗುಣಮಟ್ಟದ ವಿಡಿಯೋ ಮತ್ತು ಪೋಟೋ ವಿಕ್ಷಣೆಗೆ ಹೇಳಿಮಾಡಿಸಿದಂತಿದೆ.

ವೇಗದ ಪ್ರೋಸರ್

ವೇಗದ ಪ್ರೋಸರ್

1.3GHz ವೇಗದ ಆಕ್ವಾಕೋರ್ ಮಿಡಿಯಾ ಟೆಕ್ MT6753 ಚಿಮ್ ಮತ್ತು T720 GPU ಈ ಪೋನಿನಲ್ಲಿದೆ. ಇದರೊಂದಿಗೆ 3GB RAM, 16GB ಇಂಟರ್ನಲ್ ಮೆಮೊರಿ ಇದ್ದು, 64GBವರೆಗೂ ವಿಸ್ತರಿಸಿಕೊಳ್ಳಬಹುದಾಗಿದೆ.

ಉತ್ತಮ ಕ್ಯಾಮೆರಾ

ಉತ್ತಮ ಕ್ಯಾಮೆರಾ

ಒಳ್ಳೆಯ ಚಿತ್ರಗಳನ್ನು ಸೆರೆಹಿಡಿಯುವ ಸಲುವಾಗಿಯೇ ಈ ಪೋನಿನ ಹಿಂಬಾಗದಲ್ಲಿ 13MP ಕ್ಯಾಮೆರಾವನ್ನು ನೀಡಲಾಗಿದೆ. ಇದರೊಂದಿಗೆ LED ಪ್ಲಾಷ್ ಲೈಟ್ ಇದೆ. ಅಲ್ಲದೇ 1080p ವಿಡಿಯೋ ರೇಕಾರ್ಡಿಂಗ್ ಸೌಲಭ್ಯವು ಇದರಲಿದ್ದೆ. ಮುಂಭಾಗದಲ್ಲಿ 5MP ಕ್ಯಾಮೆರಾ ವನ್ನು ಸೆಲ್ಫಿ ತೆಗೆದುಕೊಳ್ಳಲು ಇದೆ.

2800mAh ಬ್ಯಾಟರಿ

2800mAh ಬ್ಯಾಟರಿ

LYF Water 7S ಸ್ಮಾರ್ಟ್‌ಪೋನಿನಲ್ಲಿ 2800mAh ಬ್ಯಾಟರಿ ಅಳವಡಿಸಲಾಗಿದ್ದು, ದೀರ್ಘಕಾಲದ ಪೋನ್ ಬಳಕೆಗೆ ಇದು ಸಹಾಯಕಾರಿಯಾಗಿದೆ. ಅಲ್ಲದೇ ಈ ಪೋನಿನಲ್ಲಿ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಸಹ ಇದೆ.

Best Mobiles in India

Read more about:
English summary
Reliance Retail’s subsidiary LYF has introduced a new device under its Water lineup. The newly launched LYF handset goes with the name LYF Water 7S and comes with significant improvements over the existing LYF Water 7.to know more visit kannada.goizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X