ದೇಶಾದ್ಯಂತ ಒನ್‌ಪ್ಲಸ್‌ 6T ಕ್ರೇಜ್‌..! ಪಾಪ್‌ಅಪ್‌ ಕೇಂದ್ರಗಳಲ್ಲಿ ಜನ ಸಾಗರ..!

  ಇತ್ತೀಚೆಗಷ್ಟೇ ನವದೆಹಲಿಯಲ್ಲಿ ವೈಭವದ ಕಾರ್ಯಕ್ರಮದ ಮೂಲಕ ಒನ್‌ಪ್ಲಸ್‌ 6T ಸ್ಮಾರ್ಟ್‌ಫೋನ್‌ನ್ನು ಓನ್‌ಪ್ಲಸ್‌ ಕಂಪನಿ ಭರ್ಜರಿಯಾಗಿಯೇ ಬಿಡುಗಡೆ ಮಾಡಿತ್ತು. ಹೊಸ ಫ್ಲಾಗ್‌ಶಿಪ್‌ ಸ್ಮಾರ್ಟ್‌ಫೋನ್‌ ಕಾರ್ಯನಿರ್ವಹಣೆ ಸಾಮರ್ಥ್ಯವನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗಿದ್ದು, ಅಭಿಮಾನಿಗಳು ಹಾಗೂ ಸ್ಮಾರ್ಟ್‌ಫೋನ್‌ ಪ್ರಿಯರಲ್ಲಿ ಬಹಳ ದೊಡ್ಡ ಕ್ರೇಜ್‌ ಮೂಡಿಸಿದೆ. ಜನರಲ್ಲಿ ಹೊಸ ಸ್ಮಾರ್ಟ್‌ಫೋನ್‌ ಬಗ್ಗೆ ಭಾರೀ ಕುತೂಹಲ ಹೊಂದಿದ್ದು, ಇದರ ಅರಿವನ್ನು ಒನ್‌ಪ್ಲಸ್‌ ಕಂಪನಿ ಹೊಂದಿದ್ದು, ಆ ಉತ್ಸಾಹವನ್ನು ಇಮ್ಮಡಿಗೊಳಿಸಲು ಪ್ರಯತ್ನಗಳನ್ನು ಮುಂದುವರೆಸಿದೆ.

  ದೇಶಾದ್ಯಂತ ಒನ್‌ಪ್ಲಸ್‌ 6T ಕ್ರೇಜ್‌..! ಪಾಪ್‌ಅಪ್‌ ಕೇಂದ್ರಗಳಲ್ಲಿ ಜನ ಸಾಗರ..!

  ಒನ್‌ಪ್ಲಸ್‌ ಅಭಿಮಾನಿಗಳ ಬೇಡಿಕೆಗಳನ್ನು ಪೂರೈಸಲು ದೇಶದ 9 ನಗರಗಳ 12 ಸ್ಥಳಗಳಲ್ಲಿ ನವೆಂಬರ್ 2, 2018ರಿಂದ ಪಾಪ್‌ಅಪ್‌ ಕೇಂದ್ರಗಳನ್ನು ಆರಂಭಿಸಿತ್ತು. ಪಾಪ್‌ಅಪ್‌ ಕೇಂದ್ರಗಳ ಕಾರ್ಯಕ್ರಮದಲ್ಲಿ ಕಂಡುಬಂದ ಅಭಿಮಾನಿಗಳ ಕ್ರೇಜ್‌ ಬಹಳಷ್ಟು ರೋಮಾಂಚನಕಾರಿಯಾಗಿತ್ತು. ಅಭಿಮಾನಿಗಳು ಮತ್ತು ಆಸಕ್ತ ಖರೀದಿದಾರರು ದೇಶಾದ್ಯಂತ ವಿವಿಧ ಪಾಪ್‌ಅಪ್ ಕೇಂದ್ರಗಳಲ್ಲಿ ಅವರ ನೆಚ್ಚಿನ ಸ್ಮಾರ್ಟ್‌ಫೋನ್‌ನ್ನು ಖರೀದಿಸಿದ್ದಾರೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಭಾರೀ ಕ್ರೇಜ್‌

  ಒನ್‌ಪ್ಲಸ್‌ ಕಂಪನಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಿ ಬಳಕೆದಾರರಿಗೆ ಹೊಸ ಫ್ಲಾಗ್‌ಶಿಪ್ ಸ್ಮಾರ್ಟ್‌ಫೋನ್‌ನ್ನು ಮೊದಲ ಬಾರಿ ಅನುಭವಿಸಲು ಅವಕಾಶ ನೀಡುತ್ತಿದೆ ಎಂಬುದನ್ನು ನೀವು ತಿಳಿದುಕೊಂಡಿರಬೇಕು. ಎಲ್ಲಾ ಸಮಯಗಳಂತೆ ಒನ್‌ಪ್ಲಸ್‌ 6T ಪಾಪ್‌ಅಪ್‌ ಕೇಂದ್ರಗಳಲ್ಲಿ ಭಾರೀ ಉತ್ಸಾಹದಿಂದ ಒನ್‌ಪ್ಲಸ್‌ ಅಭಿಮಾನಿಗಳು ಜನಜಂಗುಳಿಯನ್ನ ಲೆಕ್ಕಿಸದೇ ಇತರ ಬಳಕೆದಾರರ ಜತೆ ಕ್ಯೂನಲ್ಲಿ ನಿಂತಿರುವುದು ಒನ್‌ಪ್ಲಸ್‌ 6T ಜನಪ್ರಿಯತೆಯನ್ನು ತೋರಿಸುತ್ತದೆ. ಈ ಉತ್ಸಾಹವನ್ನು ಒನ್‌ಪ್ಲಸ್‌ ವಿಶೇಷ ಆಫರ್‌ಗಳ ಮೂಲಕ ಸ್ವಾಗತಿಸಿತು. ವಿಶೇಷ ಆಫರ್‌ಗಳಾ ಎಂದು ಆಶ್ಚರ್ಯರಾದೀರಾ..? ಹೌದು, ವಿಶೇಷವಾದ ಒನ್‌ಪ್ಲಸ್‌ 6T ಸ್ಮಾರ್ಟ್‌ಫೋನ್‌ನ್ ಕವರ್‌ ಮತ್ತು ಬಂಪರ್ಸ್‌, ಒನ್‌ಪ್ಲಸ್‌ ಸ್ಕೇಚ್‌ಬುಕ್‌, ಒನ್‌ಪ್ಲಸ್‌ Never Settle ಟೀಶರ್ಟ್‌ ಮತ್ತು ಒನ್‌ಪ್ಲಸ್‌ ಟೋಟ್‌ ಬ್ಯಾಗ್‌ಗಳನ್ನು ಗ್ರಾಹಕರಿಗೆ ನೀಡಲಾಯಿತು.

  ಬೆಂಗಳೂರಿನಲ್ಲಿ ರಾತ್ರಿಯೆಲ್ಲಾ ಕಾದ ಅಭಿಮಾನಿಗಳು

  ಒನ್‌ಪ್ಲಸ್‌ 6T ಪಾಪ್‌ಅಪ್‌ ಕಾರ್ಯಕ್ರಮಗಳನ್ನು 8 ನಗರಗಳ 10 ಸ್ಥಳಗಳಲ್ಲಿ ಆಯೋಜಿಸಲಾಗಿದೆ. ಸಾವಿರಾರು ಅಭಿಮಾನಿಗಳು ಮತ್ತು ಆಸಕ್ತ ಖರೀದಿದಾರರು ಈ ಸ್ಥಳಗಲ್ಲಿ ಒನ್‌ಪ್ಲಸ್‌ 6T ಸ್ಮಾರ್ಟ್‌ಫೋನ್‌ನ್ನು ಆನುಭವಿಸಲು ಪಾಪ್‌ಅಪ್‌ ಕೇಂದ್ರಗಳು ಸಹಾಯ ಮಾಡಿದವು. ಕೆಲವು ಸ್ಥಳಗಳಲ್ಲಿ ಒನ್‌ಪ್ಲಸ್‌ 6T ಸ್ಮಾರ್ಟ್‌ಫೋನ್‌ಗಾಗಿ ಜನರ ಪ್ರತಿಕ್ರಿಯೆ ಅಸಾಧಾರಣವಾಗಿತ್ತು. ಒನ್‌ಪ್ಲಸ್‌ ಬೆಂಗಳೂರಿನ ಅನುಭವ ಕೇಂದ್ರದಲ್ಲಿ ರಾತ್ರಿಯಿಂದಲೇ ಅಭಿಮಾನಿಗಳು ಮತ್ತು ಸಮುದಾಯದ ಸದಸ್ಯರು ಹೊಸ ಫ್ಲಾಗ್‌ಶಿಪ್‌ ಸ್ಮಾರ್ಟ್‌ಫೋನ್‌ನ್ನು ಪಡೆಯಲು ಕ್ಯೂ ನಿಂತಿದ್ದರು ಎಂದರೇ ಒನ್‌ಪ್ಲಸ್‌ 6T ಕ್ರೇಜ್‌ ಅರ್ಥವಾಗುತ್ತದೆ.

  62 ವರ್ಷದ ವ್ಯಕ್ತಿಯ ಅಭಿಮಾನ

  ಚೆನ್ನೈ ಪಾಪ್‌ಅಪ್‌ ಕಾರ್ಯಕ್ರಮದಲ್ಲಿ 62 ವರ್ಷದ ಅಭಿಮಾನಿ ಒನ್‌ಪ್ಲಸ್‌ 6T ಸ್ಮಾರ್ಟ್‌ಫೋನ್‌ ಪಡೆಯಲು ಎಲ್ಲಾ ರೀತಿಯ ಕಷ್ಟಗಳನ್ನು ಹಿಂದಕ್ಕಾಕಿ ಬಂದಿರುವುದು ಒನ್‌ಪ್ಲಸ್‌ ಉತ್ಪನ್ನಗಳ ಕ್ರೇಜ್‌ ಎಷ್ಟಿದೇ ಎಂಬುದನ್ನು ಅರ್ಥಮಾಡಿಕೊಳ್ಳಬಹುದು. ಆ ಅಭಿಮಾನಿಗೆ ಒನ್‌ಪ್ಲಸ್‌ ತಂಡ ಕ್ಯೂನಲ್ಲಿ ನಿಲ್ಲಿಸದೆ ಕನಸಿನ ಸ್ಮಾರ್ಟ್‌ಫೋನ್‌ ಪಡೆಯಲು ಸಹಾಯ ಮಾಡಿತು. ಇನ್ನೊಂದು ಘಟನೆಯನ್ನು ಗಮನಿಸುವುದಾದರೆ, ಒನ್‌ಪ್ಲಸ್‌ 6T ಸ್ಮಾರ್ಟ್‌ಫೋನ್‌ಗಾಗಿ ಪಾಪ್‌ಅಪ್‌ ಕಾರ್ಯಕ್ರಮಗಳಿಗೆ ಹಾಜರಾಗಲು ಅಭಿಮಾನಿಗಳ ಗುಂಪೊಂದು ರಾಜಸ್ಥಾನದ ಉದಯ್‌ಪುರದಿಂದ 250 ಕಿ.ಮೀ ದೂರದಿಂದ ಬೈಕ್‌ನಲ್ಲಿ ಬಂದಿದ್ದಾರೆ. ಪಾಪ್‌ಅಪ್‌ ಕಾರ್ಯಕ್ರಮಗಳು ಬರೀ ಇಂತಹ ಕಥೆಗಳಿಂದಲೇ ತುಂಬಿವೆ. ಇದು ಒನ್‌ಪ್ಲಸ್‌ ಅಭಿಮಾನಿಗಳು ಮತ್ತು ಸಮುದಾಯದ ಸದಸ್ಯರು ಹೊಂದಿರುವ ಪ್ರೀಮಿಯಂ ಉತ್ಪನ್ನಗಳ ಪ್ರೀತಿಯನ್ನು ತೋರಿಸುತ್ತದೆ.

  ನಂಬಿಕೆಯ ಪ್ರತೀಕ

  ಒನ್‌ಪ್ಲಸ್‌ ಕಂಪನಿ ಯಾವಾಗಲೂ ತನ್ನ ಸಮುದಾಯದ ಸದಸ್ಯರಿಗೆ ವಿಶೇಷ ಅನುಭವ ನೀಡಲು ಮತ್ತು ಗುಣಮಟ್ಟದ ಉತ್ಪನ್ನಗಳನ್ನು ಅನುಭವಿಸುವಂತೆ ಮಾಡಲು ಅತ್ಯುತ್ತಮ ಪ್ರಯತ್ನವನ್ನು ಮಾಡಿದೆ. ಒಂದು ಬ್ರಾಂಡ್‌ಗೆ ಇಷ್ಟೊಂದು ಅಭಿಮಾನವನ್ನು ಸಮುದಾಯದ ಸದಸ್ಯರು ಮತ್ತು ಅಭಿಮಾನಿಗಳು ತೋರಿಸುತ್ತಿರುವುದು ಇಂದಿನ ದಿನಗಳಲ್ಲಿ ಅಸಾಮಾನ್ಯವಾಗಿದೆ. ಇದು ಅಭಿಮಾನಿಗಳು ಮತ್ತು ಸಮುದಾಯದ ಸದಸ್ಯರ ದೃಷ್ಟಿಯಲ್ಲಿ ಒನ್‌ಪ್ಲಸ್‌ ಬ್ರಾಂಡ್ ಯಾವ ಸ್ಥಾನದಲ್ಲಿದೆ ಎಂಬುದನ್ನು ಸ್ಪಷ್ಟವಾಗಿ ಪ್ರದರ್ಶಿಸಿದೆ. ಈ ಅಭಿಮಾನಿಗಳು ಒನ್‌ಪ್ಲಸ್‌ ಕಂಪನಿಯ ವಿಶೇಷ ಉತ್ಪನ್ನಗಳಲ್ಲಿನ ವಿಶೇಷತೆಗಳನ್ನು ಕೌಶಲಗಳನ್ನು ನಂಬುತ್ತಾರೆ ಎಂಬುದು ಒನ್‌ಪ್ಲಸ್‌ಗೆ ಹೆಮ್ಮೆಯಾಗಿದೆ.

  ಅತ್ಯಾಧುನಿಕ ಫೀಚರ್ಸ್

  ಒನ್‌ಪ್ಲಸ್‌ 6T ಸ್ಮಾರ್ಟ್‌ಫೋನ್‌ ಆನ್‌ಲೈನ್‌ ಜಗತ್ತಿನಲ್ಲಿ ದೀರ್ಘಕಾಲದಿಂದ ಕ್ರೇಜ್‌ ಹುಟ್ಟು ಹಾಕಿತ್ತು. ಭವಿಷ್ಯದ ಇನ್‌ಡಿಸ್‌ಪ್ಲೇ ಸ್ಕ್ರೀನ್ ಅನ್‌ಲಾಕ್‌ ತಂತ್ರಜ್ಞಾನ, ಕನಿಷ್ಟ ನೋಚ್‌ನೊಂದಿಗೆ OLED ಡಿಸ್‌ಪ್ಲೇ ಹೊಂದಿದೆ. ಕ್ಯಾಮೆರಾಗಳು ಅದ್ಭುತ ಚಿತ್ರಗಳನ್ನು ಕ್ಲಿಕ್ ಮಾಡುವ ಸಾಮರ್ಥ್ಯ ಹೊಂದಿವೆ. ಈ ಸ್ಮಾರ್ಟ್‌ಫೋನ್‌ ಸ್ನಾಪ್‌ಡ್ರಾಗನ್‌ 845 CPU ಹಾಗೂ 6GB/8GB RAM ಆಯ್ಕೆಯಲ್ಲಿ ಅತ್ಯಂತ ವೇಗವನ್ನು ನೀಡುತ್ತಿದೆ.

  ಖರೀದಿಗೆ ಬೆಸ್ಟ್‌ ಟೈಂ..!

  ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌ ಸೇಲ್‌ನಲ್ಲಿ ಒನ್‌ಪ್ಲಸ್‌ 6 ಮತ್ತು ಒನ್‌ಪ್ಲಸ್‌ 6T ಸ್ಮಾರ್ಟ್‌ಫೋನ್‌ಗಳು ಕೇವಲ 36 ಗಂಟೆಗಳಲ್ಲಿ ರೂ. 400 ಕೋಟಿಗೂ ಹೆಚ್ಚಿನ ಮೌಲ್ಯದ ಬುಕ್ಕಿಂಗ್‌ ಆಗಿ ದಾಖಲೆ ನಿರ್ಮಿಸಿತ್ತು. ಕಂಪನಿಯ ಉತ್ಪನ್ನಗಳು ಉನ್ನತ ಶೈಲಿಯ ಆಂಡ್ರಾಯ್ಡ್‌ ಪರಿಸರ ವ್ಯವಸ್ಥೆಯನ್ನು ಹೊಂದಿರುವುದರಿಂದ ಅಸಂಖ್ಯಾತ ಜನರ ಪ್ರೀತಿಗೆ ಪಾತ್ರವಾಗಿವೆ.


  ನೀವಿನ್ನೂ ಒನ್‌ಪ್ಲಸ್‌ 6T ಸ್ಮಾರ್ಟ್‌ಫೋನ್‌ ತೆಗೆದುಕೊಂಡಿಲ್ಲವೆಂದರೆ. ಖರೀದಿಸಲು ಇದು ಉತ್ತಮ ಸಮಯವಾಗಿದೆ. ಆನ್‌ಲೈನ್‌ ಅಥವಾ ಆಫ್‌ಲೈನ್‌ ಯಾವುದೇ ಪ್ಲಾಟ್‌ಫಾರ್ಮ್‌ನಲ್ಲೂ ಒನ್‌ಪ್ಲಸ್‌ 6T ಸ್ಮಾರ್ಟ್‌ಫೋನ್‌ ಖರೀದಿಗೆ ಒನ್‌ಪ್ಲಸ್‌ ಕಂಪನಿ ವಿಶೇಷ ಆಫರ್‌ಗಳನ್ನು ಘೋಷಿಸಿದ್ದು, ಕೆಳಗಿನ ಪ್ರಯೋಜನಗಳನ್ನು ಪಡೆಯುತ್ತಾರೆ. ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಮೂಲಕ ಖರೀದಿಗೆ ಆಕರ್ಷಕಕ ಕ್ಯಾಶ್‌ಬ್ಯಾಕ್‌, 3 ತಿಂಗಳ ನೋಕಾಸ್ಟ್‌ ಇಎಂಐ, ಕೋಟಾಕ್ ಸರ್ವೀಫೈನಿಂದ 12 ತಿಂಗಳ ಉಚಿತ ಡ್ಯಾಮೇಜ್‌ ಪ್ರೊಟೇಕ್ಷನ್ ಹಾಗೂ ಅಮೆಜಾನ್‌ನಲ್ಲಿ ಅಮೆಜಾನ್‌ ಕಿಂಡಲ್‌ ಖರೀದಿಗೆ ರೂ.500ರವರೆಗೆ ರಿಯಾಯಿತಿಯನ್ನು ಗ್ರಾಹಕರು ಪಡೆಯುತ್ತಾರೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  Massive queues at Pop-ups event show OnePlus rules the smartphone market. To know more this visit kannada.gizbot.com
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more