Subscribe to Gizbot

ಹೆಚ್ಚು ಮಾರಾಟವಾಗಿರುವ ಹೋನರ್ ಬೀಯಲ್ಲಿ ಮೆಚ್ಚುವ ಅಂಶವೇನು?

Written By:

ಮಾರುಕಟ್ಟೆಯಲ್ಲಿರುವ ಬಜೆಟ್ ಸ್ನೇಹಿ ಗ್ರಾಹಕರಿಗಾಗಿ ಹುವಾಯಿ ಇತ್ತೀಚೆಗೆ ಬಜೆಟ್ ಸ್ಮಾರ್ಟ್‌ಫೋನ್ ಆದ ಹೋನರ್ ಬೀಯನ್ನು ಲಾಂಚ್ ಮಾಡಿದೆ. ಭಾರತದಲ್ಲಿರುವ ಗ್ರಾಹಕರಿಗಾಗಿ ಅತಿ ವಿಶೇಷವಾಗಿ ತಯಾರಿಸಲಾದ ಫೋನ್ ಇದಾಗಿದ್ದು ಎಲ್ಲಾ ಅವಶ್ಯಕತೆಗಳನ್ನು ಪೂರೈಸುವಲ್ಲಿ ಇದು ಸಫಲವಾಗಿದೆ. ಶಕ್ತಿಯುತ ಅತ್ಯಾಕರ್ಷಕ ವಿಶೇಷತೆಗಳು ಮತ್ತು ಉತ್ತಮ ಬೆಲೆಯನ್ನು ಒಳಗೊಂಡು ಬಂದಿರುವ ಫೋನ್ ಇದಾಗಿದ್ದು ಬಳಕೆದಾರರಿಗೆ ಹೇಳಿ ಮಾಡಿಸಿದ ಡಿವೈಸ್ ಆಗಿದೆ.

ಈ ಕೆಳಗಿನ ಸ್ಲೈಡರ್‌ಗಳಲ್ಲಿ ಹೋನರ್ ಬೀ ಫೋನ್‌ನ 10 ಅಂಶಗಳನ್ನು ನೋಡಿ ನಿಜಕ್ಕೂ ಇದು ನಿಮ್ಮನ್ನು ಮೋಡಿ ಮಾಡುವುದು ಖಂಡಿತ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಪರಿಪೂರ್ಣ ನೋಟ

ವಿನ್ಯಾಸ ಮತ್ತು ರಚನೆ

ಫೋನ್ ಅತ್ಯುತ್ತಮ ಗುಣಮಟ್ಟ ರಚನೆ ಮತ್ತು ವಿನ್ಯಾಸವನ್ನು ಪಡೆದುಕೊಂಡಿದೆ. ಬಳಕೆದಾರರ ಕೈಯಲ್ಲಿ ಸುಭದ್ರವಾಗಿ ನೆಲೆ ನಿಲ್ಲುವ ಫೋನ್ ಇದಾಗಿದ್ದು, ಇದರ ಆಕಾರ ಮತ್ತು ಸ್ಟೈಲ್‌ಗೆ ನಿಜಕ್ಕೂ ಮನಸೋಲಲೇಬೇಕು. ಈ ಎಲ್ಲಾ ಅಂಶಗಳು ಫೋನ್‌ಗೆ ಪರಿಪೂರ್ಣ ನೋಟವನ್ನು ನೀಡಿದೆ.

ಬ್ಯಾಟರಿ ಇದ್ದೂ ಹಗುರ ಫೋನ್

ಡೈಮೆನ್ಶನ್ಸ್

ಫೋನ್‌ನ ಅಳತೆಯು 129 x 66.3 x 10 ಎಮ್‌ಎಮ್ ಆಗಿದ್ದು ಹಗುರ ತೂಕದ್ದಾಗಿದೆ. ಬ್ಯಾಟರಿ ಇದ್ದೂ ಕೂಡ ಫೋನ್ 170 ಗ್ರಾನದ್ದಾಗಿದೆ.

ಬಳಕೆದಾರರಿಗೆ ಉತ್ತಮ ಕೊಡುಗೆ

ಡಿಸ್‌ಪ್ಲೇ

ಹೋನರ್ ಬೀ 4.5 ಇಂಚಿನ ಸ್ಕ್ರೀನ್ ಅನ್ನು ಒಳಗೊಂಡಿದ್ದು 480 x 854 ಪಿಕ್ಸೆಲ್ ರೆಸಲ್ಯೂಶನ್ ಇದರಲ್ಲಿದೆ. ಇದರ ಸ್ಕ್ರೀನ್ ರೇಶಿಯೊ 16:9 ಆಗಿದ್ದು ಉತ್ತಮ ಬಣ್ಣಗಳೊಂದಿಗೆ ವೀಡಿಯೋಗಳನ್ನು ತೋರಿಸಲಿದೆ. ಬಳಕೆದಾರರಿಗೆ ಈ ಫೋನ್ ಉತ್ತಮ ಕೊಡುಗೆಯಾಗಿದೆ.

ವೇಗ

ಪ್ರೊಸೆಸರ್

ಫೋನ್‌ನಲ್ಲಿ SC7731 ಪವರ್ ಇದ್ದು ಕ್ವಾಡ್ ಕೋರ್ 1.2GHz ವೇಗದೊಂದಿಗೆ ಬಂದಿದೆ. 1 ಜಿಬಿ RAM ಡಿವೈಸ್‌ನಲ್ಲಿದ್ದು ಉತ್ತಮ ಕಾರ್ಯಕ್ಷಮತೆಗೆ ಸಹಕಾರಿಯಾಗಿದೆ.

ಸ್ಥಳಾವಕಾಶ

ಸಂಗ್ರಹಣೆ

ಫೋನ್‌ನಲ್ಲಿ ಸಾಕಷ್ಟು ಸ್ಥಳಾವಕಾಶವಿದ್ದು ನಿಮಗೆ ಯಾವುದೇ ತೊಂದರೆಯಿಲ್ಲದೆ ಇದರಲ್ಲಿ ವಿಷಯಗಳನ್ನು ಸಂಗ್ರಹಿಸಬಹುದಾಗಿದೆ. 8 ಜಿಬಿ ಸಂಗ್ರಹವನ್ನು ಇದು ಪಡೆದುಕೊಂಡಿದ್ದು ಇದನ್ನು ಎಸ್‌ಡಿ ಕಾರ್ಡ್ ಬಳಸಿ 32 ಜಿಬಿಗೆ ವಿಸ್ತರಿಸಬಹುದು.

ಫೋಟೋಗ್ರಫಿ

ಕ್ಯಾಮೆರಾ

ಫೋನ್‌ನಲ್ಲಿ 8 ಎಮ್‌ಪಿ ಕ್ಯಾಮೆರಾ ಇದ್ದು ನಿಮ್ಮ ಫೋಟೋಗಾರಿಕೆಯ ಹುಚ್ಚಿಗೆ ಇದು ಉತ್ತಮ ಸಾಥ್ ನೀಡಲಿದೆ. ಡ್ಯುಯಲ್ ಎಲ್‌ಇಡಿ ಫ್ಲ್ಯಾಶ್ ಇದರಲ್ಲಿದ್ದು ಕಡಿಮೆ ಬೆಳಕಿನ ವಲಯದಲ್ಲಿ ಕೂಡ ಸೂಕ್ತ ಫೋಟೋಗ್ರಫಿಗೆ ಇದು ಹೇಳಿ ಮಾಡಿಸಿರುವಂಥದ್ದಾಗಿದೆ. ಮುಂಭಾಗದಲ್ಲಿ 2 ಎಮ್‌ಪಿ ಕ್ಯಾಮೆರಾ ಇದ್ದು ಸೆಲ್ಫಿ ಪ್ರೇಮಿಗಳಿಗೆ ಈ ಫೋನ್ ರಸದೌತಣ ಎಂದೆನಿಸಲಿದೆ.

ಡ್ಯುಯಲ್ ಸಿಮ್ ಫೋನ್

ಸಂಪರ್ಕ

ಡ್ಯುಯಲ್ ಸಿಮ್ ಫೋನ್ ಇದಾಗಿದ್ದು ನಿಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನಕ್ಕೆ ಇದು ಹೇಳಿಮಾಡಿಸಿರುವಂಥದ್ದು. ವೈರ್‌ಲೆಸ್ ಕನೆಕ್ಟಿವಿಟಿಗಾಗಿ ಫೋನ್ 802.11b/g/n + ವೈಫೈ ಹಾಟ್‌ಸ್ಪಾಟ್, ಬ್ಲ್ಯೂಟೂತ್ 4.0 + EDR, ಮತ್ತು GPS/AGPS ಇದಾಗಿದೆ.

ಉತ್ತಮ ಕಾರ್ಯಕ್ಷಮತೆ

ಬ್ಯಾಟರಿ

ಫೋನ್‌ನ ಉತ್ತಮ ಕಾರ್ಯಕ್ಷಮತೆಯಲ್ಲಿ ಬ್ಯಾಟರಿ ಹೆಚ್ಚಿನ ಪ್ರಭಾವವನ್ನು ಬೀರುತ್ತದೆ. ಫೋನ್‌ನಲ್ಲಿ 1730mAh ಬ್ಯಾಟರಿ ಇದ್ದು ಪೂರ್ಣ ಚಾರ್ಜ್‌ನಲ್ಲಿ 24 ಗಂಟೆಗಳ ಸೇವೆಯನ್ನು ಒದಗಿಸುತ್ತದೆ. ಪವರ್ ಸೇವಿಂಗ್ ತಂತ್ರಜ್ಞಾನದೊಂದಿಗೆ ಡಿವೈಸ್ ಬಂದಿದ್ದು ಬ್ಯಾಟರಿ ಕಾರ್ಯಕ್ಷಮತೆಯನ್ನು ಇದು ಹೆಚ್ಚಿಸಲಿದೆ. ಪರಿಪೂರ್ಣ ಸೇವೆ ಈ ಡಿವೈಸ್‌ನಿಂದ ನೀವು ಪಡೆದುಕೊಳ್ಳಲಿರುವುದಂತೂ ಖಂಡಿತ.

ಎರಡು ಬಣ್ಣ

ಬಣ್ಣ

ಫೋನ್ ಎರಡು ಬಣ್ಣದಲ್ಲಿ ಲಭ್ಯವಾಗಲಿದೆ ಮಂಜಿನ ಬಿಳಿ ಕಪ್ಪು ಬಣ್ಣದಲ್ಲಿ ಡಿವೈಸ್ ದೊರೆಯಲಿದೆ. ನಿಮ್ಮ ಸ್ಟೈಲ್‌ಗೆ ಇದು ಉತ್ತಮ ಹೊಂದಿಕೆಯಾಗಲಿದೆ.

ಬೆಲೆ ರೂ 4,499

ಬೆಲೆ

ಇನ್ನು ಬಳಕೆದಾರರಿಗೆ ಅನುಕೂಲಕರವಾಗಿರುವ ಬೆಲೆ ರೂ 4,499 ಕ್ಕೆ ಈ ಡಿವೈಸ್ ಬಂದಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Huawei recently launched its budget smartphone called the Honor Bee to cater to the budget conscious consumers in the market. Huawei recently launched its budget smartphone called the Honor Bee to cater to the budget conscious consumers in the market.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot