ಹೇಗಿದೆ ಐಫೋನ್ 8..? ಇಲ್ಲಿದೆ ಸಂಪೂರ್ಣ ಮಾಹಿತಿ..!

Written By: Lekhaka

10ನೇ ವಾರ್ಷಿಕೋತ್ಸವದ ಅಂಗವಾಗಿ ಬಿಡುಗಡೆಗೊಂಡಿರುವ ಐಫೋನ್ X ನೊಂದಿಗೆ ಐಫೋನ್ 8 ಸಹ ಲಾಂಚ್ ಗೊಂಡಿದೆ. ಈ ಫೋನಿನ ವಿನ್ಯಾಸವು ಹೆಚ್ಚಿನ ಗಮನವನ್ನು ಸೆಳೆಯುತ್ತಿದೆ. ಹೊರ ಭಾಗದ ಬಾಹ್ಯ ವಿನ್ಯಾಸವಲ್ಲದೇ ಆಂತರಿಕ ವಿನ್ಯಾಸವು ಸಹ ಹೆಚ್ಚು ಸುದ್ದಿಯಲ್ಲಿದೆ. ಇದರಲ್ಲಿ ಬಳಸಿರುವ ವಸ್ತುಗಳು ಹೆಚ್ಚು ಆಡ್ವಾನ್ಸ್ ಆಗಿದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸೂಪರ್ ಸ್ಪೀಡ್ ಪ್ರೋಸೆಸರ್:

ಸೂಪರ್ ಸ್ಪೀಡ್ ಪ್ರೋಸೆಸರ್:

ಐಫೋನ್ 8 ಸೂಪರ್ ಸ್ಪೀಡ್ ಪ್ರೋಸೆಸರ್ ಅನ್ನು ಒಳಗೊಂಡಿದೆ. ಇದು ಸಿಕ್ಸ್ ಕೋರ್ CPU ಹೊಂದಿದ್ದು, ಜೊತೆಗೆ ಸಿಕ್ಸ ಕೋರ್ GPU ಸಹ ಇದೆ. ಇದರಲ್ಲಿ A1 ಬಯೋನಿಕ್ ಚಿಪ್ ಅಳವಡಿಸಲಾಗಿದ್ದು, ವೇಗದ ಕಾರ್ಯಚರಣೆಗೆ ಸಹಾಯವನ್ನು ಮಾಡಲಿದೆ.

ಡಿಸ್ ಪ್ಲೇ:

ಡಿಸ್ ಪ್ಲೇ:

ಐಫೋನ್ 8ನಲ್ಲಿ 4.7 ಇಂಚಿನ ಡಿಸ್ ಪ್ಲೇಯನ್ನು ಕಾಣಬಹುದಾಗಿದೆ. ಇದಲ್ಲದೇ ಇದು ಟ್ರೂ ಟೋನ್ ಡಿಸ್ ಪ್ಲೇಯಾಗಿದ್ದು, ಇತರೆ ಸ್ಮಾರ್ಟ್ ಫೋನ್ ಗಳಿಗಿಂತ ವಿಭಿನ್ನವಾಗಿ ಕಾಣಿಸಿಕೊಂಡಿದೆ. ನೋಡಲು ಮತ್ತು ಬಳಕೆ ಮಾಡಲು ಉತ್ತಮವಾಗಿದೆ.

ಕ್ಯಾಮೆರಾ:

ಕ್ಯಾಮೆರಾ:

ಐಫೋನ್ 8 ನಲ್ಲಿ ಉತ್ತಮ ಗುಣಮಟ್ಟದ ಕ್ಯಾಮೆರಾವನ್ನು ಕಾಣಬಹುದಾಗಿದೆ. 12 MP ವೈಡ್ ಆಂಗಲ್ ಕ್ಯಾಮೆರಾ ಮತ್ತು ಮುಂಭಾಗದಲ್ಲಿ 7 MP ಕ್ಯಾಮೆರಾವನ್ನು ನೀಡಲಾಗಿದ್ದು, ಉತ್ತಮ ಚಿತ್ರಗಳನ್ನು ಸೆರೆ ಹಿಡಿಯಲು ಸಹಾಯಕಾರಿಯಾಗಿದೆ.

ರೀಡೈರೆಕ್ಟ್ ಜಾಹಿರಾತು ಕಿರಿಕಿರಿಗೆ ಪರಿಹಾರ ನೀಡಿದ ಗೂಗಲ್!!

ವೈಲ್ ಲೈಸ್ ಚಾರ್ಜಿಂಗ್

ವೈಲ್ ಲೈಸ್ ಚಾರ್ಜಿಂಗ್

ಇದಲ್ಲದೇ ಐಫೋನ್ 8ನಲ್ಲಿ ನೀವು ವೈರ್ ಲೈಸ್ ಚಾರ್ಜಿಂಗ್ ವ್ಯವಸ್ಥೆಯನ್ನು ಕಾಣಬಹುದಾಗಿದೆ. ಇದು ಈ ಫೋನಿನ ವಿಶೇಷತೆಗಳಲ್ಲಿ ಒಂದು ಎಂದರೆ ತಪ್ಪಾಗುವುದಿಲ್ಲ.

 ಹಿನ್ನಡೆ:

ಹಿನ್ನಡೆ:

ಐಫೋನ್ 8 ವಿನ್ಯಾಸದಲ್ಲಿ ಯಾವುದೇ ಹೊಸತನವಿಲ್ಲ. ಐಫೋನ್ 6s ಮಾದರಿಯಲ್ಲಿ ಕಾಣಿಸಿಕೊಂಡಿದೆ. ಆದರೆ ಐಫೋನ್ 7 ವಿನ್ಯಾಸ ಕೊಂಚ ಬದಲಾವಣೆಯಿಂದ ಕೂಡಿತ್ತು. ಅಲ್ಲದೇ ಅದರಲ್ಲಿದ್ದ ಎಲ್ಲಾ ಆಯ್ಕೆಗಳನ್ನು ಈ ಫೋನ್ ಸಹ ಹೊಂದಿದೆ.

ಬೆಲೆ:

ಬೆಲೆ:

ಐಫೋನ್ 8 ಎರಡು ಆವೃತ್ತಿಯಲ್ಲಿ ದೊರೆಯುತ್ತಿದೆ. ಒಂದು 64 GB ಆವೃತ್ತಿ ಮತ್ತೊಂದು 256 GB ಆವೃತ್ತಿ. ಈ ಎರಡು ಫೋನ್ ಗಳ ಬೆಲೆ ರೂ. 64,000 ಮತ್ತು ರೂ. 77,000.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
At the 10th anniversary, Apple has launched its 8th-gen iPhones along with the iPhone X with a major overhaul in design. Check out the merits and demerits of iPhone 8.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot