ಅಮೇಜಾನ್ ನಲ್ಲಿ ಎಂಐ ಡೇಸ್: ಶಿಯೋಮಿ ಫೋನ್ ಗಳಿಗೆ 10,000ದ ವರೆಗೆ ರಿಯಾಯಿತಿ

By Gizbot Bureau
|

ಶಿಯೋಮಿ ಸ್ಮಾರ್ಟ್ ಫೋನ್ ಸೇಲ್ ಅಮೇಜಾನ್ ನಲ್ಲಿ ಆರಂಭವಾಗಿದೆ. ಅದನ್ನು ಎಂಐ ಡೇಸ್ ಎಂದು ಕರೆಯಲಾಗಿದೆ. ಸೇಲ್ ಈಗಾಗಲೇ ಆರಂಭವಾಗಿದ್ದು ಸೆಪ್ಟೆಂಬರ್ 5 ರಿಂದ ಸೆಪ್ಟೆಂಬರ್ 9 ರ ವರೆಗೆ ಮುಂದುವರಿಯಲಿದೆ.

ಶಿಯೋಮಿ ಫೋನ್ ಗಳು ಭರ್ಜರಿ ರಿಯಾಯಿತಿ

ಈ ಸೇಲಿನ ಭಾಗವಾಗಿ ಶಿಯೋಮಿ ಫೋನ್ ಗಳು ಭರ್ಜರಿ ರಿಯಾಯಿತಿ ಬೆಲೆಯಲ್ಲಿ ಸಿಗುತ್ತಿದ್ದು 8,000ದ ವರೆಗೆ ರಿಯಾಯಿತಿ ಇದೆ. ಹೆಚ್ಚುವರಿಯಾಗಿ 2,000 ರುಪಾಯಿವರೆಗೆ ಎಕ್ಸ್ ಚೇಂಜ್ ಆಫರ್ ಇದೆ. ಐಸಿಐಸಿಐ ಬ್ಯಾಂಕಿನ ಗ್ರಾಹಕರು ಇನ್ಸೆಂಟ್ ರಿಯಾಯಿತಿಯನ್ನು 1,500 ರುಪಾಯಿವರೆಗೆ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಇಎಂಐ ಖರೀದಿಯಲ್ಲಿ ಪಡೆಯುವುದಕ್ಕೆ ಅವಕಾಶವಿದೆ.

ಇಲ್ಲಿದೆ ಸಂಪೂರ್ಣ ವಿವರ :

ಶಿಯೋಮಿ ಎಂಐ ಎ3 :2,000ದ ವರೆಗೆ ರಿಯಾಯಿತಿ

ಶಿಯೋಮಿ ಎಂಐ ಎ3 :2,000ದ ವರೆಗೆ ರಿಯಾಯಿತಿ

ಶಿಯೋಮಿ ಎಂಐ ಎ3 ಯನ್ನು ರಿಯಾಯಿತಿ ಬೆಲೆಯಲ್ಲಿ ಮಾರಾಟ ಮಾಡಲಾಗುತ್ತಿದ್ದು 4ಜಿಬಿ ಮೆಮೊರಿ ಮತ್ತು 64ಜಿಬಿ ಇಂಟರ್ನಲ್ ಸ್ಟೋರೇಜ್ ವ್ಯವಸ್ಥೆ ಇರುವ ಫೋನ್ ನಿಮಗೆ 12,999 ರುಪಾಯಿ ಬೆಲೆಗೆ ಖರೀದಿಸುವುದಕ್ಕೆ ಅವಕಾಶವಿದೆ. ಇನ್ನು 6ಜಿಬಿ ಮಾಡೆಲ್ ನ ಫೋನ್ 16,999 ರುಪಾಯಿ ಬೆಲೆಗೆ ಸಿಗುತ್ತದೆ. ಇದರಲ್ಲಿ 48ಎಂಪಿ ಎಐ ಟ್ರಿಪಲ್ ಕ್ಯಾಮರಾ ವ್ಯವಸ್ಥೆ ಇದ್ದು 6.08-ಇಂಚಿನ ಸೂಪರ್ AMOLED ಡಿಸ್ಪ್ಲೇ ಇದೆ.

ಶಿಯೋಮಿ ರೆಡ್ಮಿ 7: 2,500 ರುಪಾಯಿ ವರೆಗೆ ರಿಯಾಯಿತಿ

ಶಿಯೋಮಿ ರೆಡ್ಮಿ 7: 2,500 ರುಪಾಯಿ ವರೆಗೆ ರಿಯಾಯಿತಿ

ರೆಡ್ಮಿ 7 2ಜಿಬಿ RAM ಮತ್ತು 32ಜಿಬಿ ಸ್ಟೋರೇಜ್ ವ್ಯವಸ್ಥೆಯ ಫೋನ್ 7,499 ರುಪಾಯಿ ಬೆಲೆಗೆ ಸಿಗುತ್ತದೆ. ಇದು ಸ್ನ್ಯಾಪ್ ಡ್ರ್ಯಾಗನ್ 632 ಪ್ರೊಸೆಸರ್ ನ್ನು ಹೊಂದಿದ್ದು 4000mAh ಬ್ಯಾಟರಿ ಸಾಮರ್ಥ್ಯವನ್ನು ಒಳಗೊಂಡಿದೆ.

ಶಿಯೋಮಿ ರೆಡ್ಮಿ ವೈ3: 3,000 ದ ವರೆಗೆ ರಿಯಾಯಿತಿ

ಶಿಯೋಮಿ ರೆಡ್ಮಿ ವೈ3: 3,000 ದ ವರೆಗೆ ರಿಯಾಯಿತಿ

3+32GB RAM ಮಾಡೆಲ್ ನ ರೆಡ್ಮಿ ವೈ3 ಫೋನ್ ನ್ನು 8,999 ರುಪಾಯಿ ಬೆಲೆಗೆ ಈ ಸೇಲ್ ನಲ್ಲಿ ಖರೀದಿಸಬಹುದು.ಇದರ ನೈಜ ಬೆಲೆ 11,999 ರುಪಾಯಿಗಳಾಗಿದ್ದು 3,000 ರುಪಾಯಿಯ ರಿಯಾಯಿತಿ ಬೆಲೆಯಲ್ಲಿ ಸಿಗುತ್ತಿದೆ.

ಶಿಯೋಮಿ ರೆಡ್ಮಿ 6 ಪ್ರೋ 4,500 ರುಪಾಯಿ ವರೆಗೆ ರಿಯಾಯಿತಿ

ಶಿಯೋಮಿ ರೆಡ್ಮಿ 6 ಪ್ರೋ 4,500 ರುಪಾಯಿ ವರೆಗೆ ರಿಯಾಯಿತಿ

ಶಿಯೋಮಿ ರೆಡ್ಮಿ 6 ಪ್ರೋ 4ಜಿಬಿ RAM ಮತ್ತು 64GB ಸ್ಟೋರೇಜ್ ವ್ಯವಸ್ಥೆಯ ಫೋನ್ ನ್ನು 8,999 ರುಪಾಯಿ ಬೆಲೆಗೆ ಈ ಸೇಲ್ ನಲ್ಲಿ ಮಾರಾಟ ಮಾಡಲಾಗುತ್ತಿದೆ. ಇದರ ನೈಜ ಬೆಲೆ 13,499 ರುಪಾಯಿಗಳು. ಈ ಹ್ಯಾಂಡ್ ಸೆಟ್ 5.84-ಇಂಚಿನ ಡಿಸ್ಪ್ಲೇ ಮತ್ತು ಸ್ನ್ಯಾಪ್ ಡ್ರ್ಯಾಗನ್ 625 ಪ್ರೊಸೆಸರ್ ನಲ್ಲಿ ರನ್ ಆಗುತ್ತದೆ.

ಶಿಯೋಮಿ ಪೋಕೋ ಎಫ್1 : 8,000 ದ ವರೆಗೆ ರಿಯಾಯಿತಿ

ಶಿಯೋಮಿ ಪೋಕೋ ಎಫ್1 ನ್ನು ನೀವು 18,999 ರುಪಾಯಿ ಬೆಲೆಗೆ ಈ ಸೇಲ್ ನಲ್ಲಿ 6ಜಿಬಿ RAM ವೇರಿಯಂಟ್ ನ್ನು ಖರೀದಿಸಬಹುದು. 8ಜಿಬಿ RAM ಮಾಜೆಲ್ ನ್ನು 22,999 ರುಪಾಯಿ ಬೆಲೆಗೆ ಈ ಸೇಲ್ ನಲ್ಲಿ ಮಾರಾಟ ಮಾಡಲಾಗುತ್ತಿದೆ. ಹೆಚ್ಚುವರಿಯಾಗಿ 2,000 ರುಪಾಯಿಯ ಎಕ್ಸ್ ಚೇಂಜ್ ಆಫರ್ ಕೂಡ ಲಭ್ಯವಿದೆ.

ಶಿಯೋಮಿ ರೆಡ್ಮಿ ನೋಟ್ 6 ಪ್ರೋ: 5,000 ದ ವರೆಗೆ ರಿಯಾಯಿತಿ

ಶಿಯೋಮಿ ರೆಡ್ಮಿ ನೋಟ್ 6 ಪ್ರೋ ರಿಯಾಯಿತಿ ಬೆಲೆಯಲ್ಲಿ ಅಂದರೆ 12,999 ರುಪಾಯಿ ಬೆಲೆಗೆ ಖರೀದಿಸಬಹುದು. ಅಮೇಜಾನ್ ಪೇ ಬ್ಯಾಲೆನ್ಸ್ ಮೂಲಕ 1,000 ರುಪಾಯಿಯ ಕ್ಯಾಷ್ ಬ್ಯಾಕ್ ನ್ನು ಕೂಡ ಖರೀದಿದಾರರು ಪಡೆದುಕೊಳ್ಳಬಹುದು.

Best Mobiles in India

English summary
Mi Days on Amazon: Get up to Rs. 10,000 discount

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X