ಕೇವಲ 2399ರೂ.ಗೆ ರಿಲೀಸ್ ಆಯ್ತು ಆಂಡ್ರಾಯ್ಡ್ 'ಓರಿಯೋ' ಬೆಂಬಲಿತ 'ಭಾರತ್ ಗೊ' 4G ಫೋನ್!!

|

ಭಾರತದಲ್ಲಿಯೇ ಅತ್ಯಂತ ಕಡಿಮೆ ಬೆಲೆಯ ಆಂಡ್ರಾಯ್ಡ್ ಓರಿಯೋ ಒಎಸ್ ಚಾಲಿತ 4G ಸ್ಮಾರ್ಟ್‌ಪೋನ್ ಬಿಡುಗಡೆಯಾಗಿದೆ. ದೇಶೀಯ ಮೊಬೈಲ್ ಕಂಪೆನಿ ಮೈಕ್ರೋಮ್ಯಾಕ್ಸ್ ಜೊತೆಗೂಡಿರುವ ಏರ್‌ಟೆಲ್ ಕಂಪೆನಿ ಆಂಡ್ರಾಯ್ಡ್ ಗೊ ಮಾದರಿಯ "ಭಾರತ್ ಗೊ" ಸ್ಮಾರ್ಟ್‌ಪೋನ್ ಅನ್ನು ಇದೇ ಮಂಗಳವಾರ (ಮೇ 21 ರಂದು) ಅತ್ಯಂತ ಕಡಿಮೆ ಬೆಲೆಯಲ್ಲಿ ಬಿಡುಗಡೆ ಮಾಡಿದೆ.

2399ರೂ.ಗೆ ರಿಲೀಸ್ ಆಯ್ತು ಆಂಡ್ರಾಯ್ಡ್ 'ಓರಿಯೋ' ಬೆಂಬಲಿತ 'ಭಾರತ್ ಗೊ' 4G ಫೋನ್!!

ರಿಲಾಯನ್ಸ್ ಜಿಯೋಗೆ 4G ಫೀಚರ್ ಸ್ಮಾರ್ಟ್‌ಫೋನಿಗೆ ಸೆಡ್ಡು ಹೊಡೆಯುವ ದೃಷ್ಟಿಯಿಂದ ಏರ್‌ಟೆಲ್ ಕೈಗೊಂಡಿದ್ದ ಯೋಜನೆ ಇದೀಗ ಕೈಗೂಡಿದೆ. ಈ ಮೊದಲು ಭಾರತದಲ್ಲಿ ಕೇವಲ 2000 ರೂಪಾಯಿಗಳಿಗೆ ಬಿಡುಗಡೆಯಾಗಲಿದೆ ಎಂಬ ರೂಮರ್ಸ್ ಹುಟ್ಟಿಸಿದ್ದ ಮೈಕ್ರೋಮ್ಯಾಕ್ಸ್ "ಭಾರತ್ ಗೊ" ಸ್ಮಾರ್ಟ್‌ಪೋನ್, ನಿರೀಕ್ಷೆಯಂತೆಯೇ ಅತ್ಯಂತ ಕಡಿಮೆ ಬೆಲೆಗೆ ಮಾರುಕಟ್ಟೆಗೆ ಬಂದಿದೆ.

2399ರೂ.ಗೆ ರಿಲೀಸ್ ಆಯ್ತು ಆಂಡ್ರಾಯ್ಡ್ 'ಓರಿಯೋ' ಬೆಂಬಲಿತ 'ಭಾರತ್ ಗೊ' 4G ಫೋನ್!!

ಆಂಡ್ರಾಯ್ಡ್ ಗೊ' ಮಾದರಿಯ "ಭಾರತ್ ಗೊ" ಸ್ಮಾರ್ಟ್‌ಪೋನ್, 4.5 ಇಂಚಿನ FWVGA ಡಿಸ್‌ಪ್ಲೇ, 1GB RAM ನಂತಹ ಫೀಚರ್ಸ್ ಹೊಂದಿದ್ದರೂ ಅತ್ಯಂತ ಕಡಿಮೆ ಬೆಲೆಗೆ ಭಾರತದ ಬೆಸ್ಟ್ ಸ್ಮಾರ್ಟ್‌ಫೋನ್ ಆಗುವ ನಿರೀಕ್ಷೆಯನ್ನು ಮೂಡಿಸಿದೆ.ಹಾಗಾದರೆ, ಭಾರತ್ ಗೊ" ಸ್ಮಾರ್ಟ್‌ಪೋನ್ ಪೂರ್ತಿ ಫೀಚರ್ಸ್ ಯಾವುವು? ಸ್ಮಾರ್ಟ್‌ಫೋನ್ ಬೆಲೆ ಎಷ್ಟು ಎಂಬುದನ್ನು ಮುಂದೆ ತಿಳಿಯಿರಿ.

ಆಂಡ್ರಾಯ್ಡ್ ಗೊ ಸ್ಮಾರ್ಟ್‌ಫೋನ್!!

ಆಂಡ್ರಾಯ್ಡ್ ಗೊ ಸ್ಮಾರ್ಟ್‌ಫೋನ್!!

ಆಂಡ್ರಾಯ್ಡ್ ಹರಿಕಾರ ಗೂಗಲ್ ಕಂಪೆನಿಯೂ ಬಜೆಟ್ ಬೆಲೆಯ ಸ್ಮಾರ್ಟ್‌ಫೋನ್‌ಗಳಿಗಾಗಿಯೇ ನಿರ್ಮಿಸಿರುವ 'ಆಂಡ್ರಾಯ್ಡ್ ಗೊ' ಒಎಸ್ ಆವೃತ್ತಿಯಲ್ಲಿ ಕಾರ್ಯನಿರ್ವಹಿಸಲಿರುವ ಸ್ಮಾರ್ಟ್‌ಫೋನ್ ಇದಾಗಿದೆ. ಗೂಗಲ್ ಲೈಟ್ ಆಪ್‌ಗಳನ್ನು ಉಪಯೋಗಿಸಬಹುದಾದ ಈ ಸ್ಮಾರ್ಟ್‌ಫೋನಿನಲ್ಲಿ ನೀವು ಅತ್ಯತ್ತಮ ಆಂಡ್ರಾಯ್ಡ್ ಓರಿಯೋ ಅನುಭವ ಪಡೆಯಬಹುದು

ಭಾರತ್ ಗೊ ವಿನ್ಯಾಸ ಮತ್ತು ಡಿಸ್‌ಪ್ಲೇ!!

ಭಾರತ್ ಗೊ ವಿನ್ಯಾಸ ಮತ್ತು ಡಿಸ್‌ಪ್ಲೇ!!

ಮೈಕ್ರೋಮ್ಯಾಕ್ಸ್ ಮತ್ತು ಏರ್‌ಟೆಲ್ ಬಿಡುಗಡೆ ಮಾಡಿರುವ ಭಾರತ್ ಗೊ ಸ್ಮಾರ್ಟ್‌ಪೋನಿನಲ್ಲಿ 4.5 ಇಂಚಿನ (480x854 pixel) FWVGA ಡಿಸ್‌ಪ್ಲೇಯನ್ನು ನೀಡಲಾಗಿದೆ. ಹಿಂಬಾಗದಲ್ಲಿ ರಿಯರ್ ಕ್ಯಾಮೆರಾ ಫ್ಲಾಶ್ ಹಾಗೂ ಮುಂಬಾದಲ್ಲಿ ಸೆಲ್ಫಿ ಕ್ಯಾಮೆರಾ ಮತ್ತು ಫ್ಲಾಶ್ ಅನ್ನು ಹೊಂದಿರುವ ಈ ಸ್ಮಾರ್ಟ್‌ಫೋನ್ ವಿನ್ಯಾಸ ಬಜೆಟ್ ಸ್ಮಾರ್ಟ್‌ಫೋನ್‌ಗಳಂತೆ ಇದೆ ಎನ್ನಬಹುದು.

ಪ್ರೊಸೆಸರ್ ಮತ್ತು RAM!!

ಪ್ರೊಸೆಸರ್ ಮತ್ತು RAM!!

ಭಾರತ್ ಗೊ ಸ್ಮಾರ್ಟ್‌ಫೋನ್ 1.1GHz ಮೀಡಿಯಾ ಟೆಕ್ MT6737 ಕ್ವಾಡ್-ಕೋರ್ ಪ್ರೊಸೆಸರ್ ಮತ್ತು ಮಾಲಿ-T720 MP1 GPU ಅನ್ನು ಹೊಂದಿದೆ. 1GB RAM ಮತ್ತು 8GB ಆಂತರಿಕ ಸಂಗ್ರಹ ಸಾಮರ್ಥವನ್ನು ಹೊಂದಿರುವ ಈ ಸ್ಮಾರ್ಟ್‌ಪೋನ್ ಮೆಮೊರಿಯನ್ನು ಮೈಕ್ರೊ ಎಸ್‌ಡಿ ಕಾರ್ಡ್ ಸಹಾಯದಿಂದ 32 ಜಿಬಿ ವರೆಗೆ ವಿಸ್ತರಿಸಬಹುದಾದ ಆಯ್ಕೆಯನ್ನು ನೀಡಲಾಗಿದೆ.

Facebook ನಲ್ಲಿ ಫೇಸ್‌ ರೆಕಗ್ನಿಷನ್ ಆಯ್ಕೆಯನ್ನು ಬಳಸುವುದು ಹೇಗೆ?
ಭಾರತ್ ಗೊ ಫೋನ್ ಕ್ಯಾಮೆರಾ?

ಭಾರತ್ ಗೊ ಫೋನ್ ಕ್ಯಾಮೆರಾ?

ಕಡಿಮೆ ಬೆಲೆಯ ಮೈಕ್ರೋಮಾಕ್ಸ್ ಭಾರತ್ ಗೊ ಸ್ಮಾರ್ಟ್‌ಫೋನಿನಲ್ಲಿ 5 MP ರಿಯರ್ ಕ್ಯಾಮೆರಾ ಮತ್ತು 5 MP ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ. ಎರಡೂ ಬದಿಯಲ್ಲಿಯೂ ಫ್ಲಾಶ್‌ಲೈಟ್ ಅನ್ನು ನೀಡಿರುವುದು ಕ್ಯಾಮೆರಾದ ವಿಶೇಷತೆಯಾಗಿದೆ. ಎರಡೂ ಬದಿಯ ಕ್ಯಾಮೆರಾಗಳು ಸಾಮಾನ್ಯ ಎನಿಸುವಂತಹ ಚಿತ್ರಗಳನ್ನು ಚಿತ್ರೀಕರಿಸುತ್ತವೆ ಎಂಬುದು ನಿಜ.

ಭಾರತ್ ಗೊ ಫೋನ್ ಬೆಲೆ ಎಷ್ಟು?

ಭಾರತ್ ಗೊ ಫೋನ್ ಬೆಲೆ ಎಷ್ಟು?

ಮೈಕ್ರೋಮಾಕ್ಸ್ ಮತ್ತು ಏರ್‌ಟೆಲ್ ಕಂಪೆನಿ ಜೊತೆಗೂಡಿ ಬಿಡುಗಡೆ ಮಾಡಿರುವ ಭಾರತ್ ಗೊ ಸ್ಮಾರ್ಟ್‌ಫೋನ್ ಬೆಲೆ ನಿರ್ಧಿಷ್ಟವಾಗಿ 4,399 ರೂಪಾಯಿಗಳಾಗಿವೆ. ಆದರೆ, "ನನ್ನ ಮೊದಲ ಸ್ಮಾರ್ಟ್‌ಫೋನ್" ಎಂಬ ಆಫರ್ ಅಡಿಯಲ್ಲಿ ಏರ್‌ಟೆಲ್ ಕಂಪೆನಿ ಬರೋಬ್ಬರಿ 2000 ರೂಪಾಯಿಗಳ ಕ್ಯಾಶ್‌ಬ್ಯಾಕ್ ಅನ್ನು ಸ್ಮಾರ್ಟ್‌ಪೋನ್ ಮೇಲೆ ಘೋಷಿಸಿದೆ.

Best Mobiles in India

English summary
Micromax Bharat Go Android Go Smartphone Launched in India: Price, Specifications, and Features. to know more visit to kannada. gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X