ಮೈಕ್ರೊಮ್ಯಾಕ್ಸ್ ಇನ್ಫಿನಿಟಿ ಎನ್12 ಖರೀದಿಸಲು ಯೋಗ್ಯವೇ?..ಇಲ್ಲಿದೆ ಸಂಪೂರ್ಣ ವಿಮರ್ಶೆ!

|

ಚೀನಾ ಮೊಬೈಲ್ ಕಂಪೆನಿಗಳ ಸ್ಮಾರ್ಟ್‌ಫೋನ್‌ಗಳಿಗೆ ಸೆಡ್ಡು ಹೊಡೆಯುತ್ತಿರುವ ಏಕೈಕ ಸ್ವದೇಸಿ ಸ್ಮಾರ್ಟ್‌ಫೋನ್ ಕಂಪನಿ ಮೈಕ್ರೊಮ್ಯಾಕ್ಸ್ ಇದೀಗ ಮತ್ತೊಮ್ಮೆ ಸದ್ದು ಮಾಡುತ್ತಿದೆ. ಕಡಿಮೆ ಬೆಲೆಯಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸುವುದರ ಮೂಲಕ ದೇಶದ ಮೊಬೈಲ್ ಮಾರುಕಟ್ಟೆಯಲ್ಲಿ ಹೆಸರು ಗಳಿಸಿದ್ದ ಮೈಕ್ರೋಮ್ಯಾಕ್ಸ್, ಇತ್ತೀಚಿಗೆ ಇನ್ಫಿನಿಟಿ ಹೆಸರಿನ ಎರಡು ಮಧ್ಯಮ ಶ್ರೇಣಿ ಬೆಲೆಯ ಸ್ಮಾರ್ಟ್‌ಫೋನ್‌ಗಳನ್ನು ದೇಸಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಆ ಎರಡೂ ಸ್ಮಾರ್ಟ್‌ಫೋನ್‌ಗಳು ಭಾರತೀಯ ಮೊಬೈಲ್ ಪ್ರಿಯರನ್ನು ಸೆಳೆಯುತ್ತಿವೆ.

ಮೈಕ್ರೊಮ್ಯಾಕ್ಸ್ ಇನ್ಫಿನಿಟಿ ಎನ್12 ಖರೀದಿಸಲು ಯೋಗ್ಯವೇ?..ಇಲ್ಲಿದೆ ವಿಮರ್ಶೆ!

ಮೈಕ್ರೊಮ್ಯಾಕ್ಸ್ ಇನ್ಫಿನಿಟಿ ಎನ್12 ಮತ್ತು ಇನ್ಫಿನಿಟಿ ಎನ್11 ಹೆಸರಿನ ಎರಡು ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದ್ದು, 'ಇನ್ಫಿನಿಟಿ ಎನ್ 12' ಸ್ಮಾರ್ಟ್‌ಫೋನ್ ಬೆಲೆ ಕೇವಲ 9,990ರೂ.ಗಳಾಗಿವೆ ಹಾಗೆಯೇ, 'ಇನ್ಫಿನಿಟಿ ಎನ್ 11' ಸ್ಮಾರ್ಟ್‌ಫೋನ್ ಬೆಲೆ ಕೇವಲ 8,990ರೂ.ಗಳಾಗಿವೆ. ಹಾಗಾದರೆ, ಮೊಬೈಲ್ ಪ್ರಿಯರನ್ನು ಹೆಚ್ಚು ಸೆಳೆಯುತ್ತಿರುವ 6.1 ಇಂಚಿನ ಡಿಸ್‌ಪ್ಲೇ, 3GB RAM ಸಾಮರ್ಥ್ಯವನ್ನು ಹೊಂದಿರುವ 'ಇನ್ಫಿನಿಟಿ ಎನ್ 12' ಸ್ಮಾರ್ಟ್‌ಫೋನಿನ ಕಾರ್ಯದಕ್ಷತೆ, ರಚನೆ ಮತ್ತು ವಿನ್ಯಾಸಗಳು ಹೇಗಿವೆ ಎಂಬ ಸಂಪೂರ್ಣ ವಿಮರ್ಶೆಯಯನ್ನು ಮುಂದೆ ಓದಿ ತಿಳಿಯಿರಿ.

ರಚನೆ

ರಚನೆ

ಮೈಕ್ರೊಮ್ಯಾಕ್ಸ್ ಇನ್ಫಿನಿಟಿ ಎನ್12 ಸ್ಮಾರ್ಟ್‌ಫೋನ್‌ ಕಡಿಮೆ ದರದ ಫೋನಾಗಿದ್ದರು ಸಹ ಅದರ ರಚನೆ ನೋಡುಗರನ್ನು ಆಕರ್ಷಿಸುವಂತಿದೆ. ನಾಚ್‌ನೊಂದಿಗೆ ಡಿಸ್‌ಪ್ಲೇ ಉತ್ತಮವಾಗಿದ್ದು, ನ್ಯಾರೋ ಅಂಚನ್ನು ಹೊಂದಿದೆ. ಈ ಫೋನಿನ ನಾಲ್ಕು ಅಂಚು ಹಾಫ್ ಕರ್ವ್ ಆಕಾರ ಹೊಂದಿರುವುದು ಸ್ಮಾರ್ಟ್‌ಫೋನಿನ ಅಂದ ಹೆಚ್ಚಿಸಿವೆ. ಫೋನಿನ ಪಕ್ಕದ ಪಟ್ಟಿಯಲ್ಲಿ ಧ್ವನಿ ನಿಯಂತ್ರಿಸುವ ಬಟನ್, ಪವರ್ ಬಟನ್ ಮತ್ತು ಸಿಮ್ ಸ್ಲಾಟ್ ನೀಡಿದ್ದಾರೆ. ಇದರೊಂದಿಗೆ ಯುಎಸ್‌ಬಿ, ಆಡಿಯೋ ಜಾಕ್, ಸ್ಪೀಕರ್ ಮತ್ತು ಮೈಕ್ರೊಫೋನ್‌ಗಳನ್ನು ನೀಡಿದ್ದಾರೆ.

ಗ್ಲಾಸ್ ಫಿನಿಶಿಂಗ್ ನೋಟ

ಗ್ಲಾಸ್ ಫಿನಿಶಿಂಗ್ ನೋಟ

ಈ ಸ್ಮಾರ್ಟ್‌ಫೋನ್ ಪ್ಲಾಸ್ಟಿಕ್‌ನಿಂದ ಬಾಹ್ಯ ರಚನೆಯನ್ನು ಹೊಂದಿದ್ದು, ಹಿಂಭಾಗದಲ್ಲಿ ಗ್ಲಾಸ್ ಫಿನಿಶಿಂಗ್ ನೋಟವನ್ನು ಹೊಂದಿದೆ. ಅದರದೊಂದಿಗೆ ಹಿಂಭಾಗದಲ್ಲಿ ಎರಡು ಕ್ಯಾಮರೆಗಳನ್ನು ನೀಡಿದ್ದಾರೆ. ಫಿಂಗರ್ ಸೆನ್ಸಾರ್ ಅನ್ನು ಸಹ ಹಿಂಬದಿಯಲ್ಲಿ ನೀಡಿದ್ದು, ಸುಲಭವಾಗಿ ತೊರ್ಬೆರಳಿಗೆ ತಾಗುವಂತಿದೆ. ಫಿಂಗರ್ ಸೆನ್ಸಾರ್ ಹತ್ತಿರವೇ ಕಂಪನಿಯ ಹೆಸರನ್ನು ನಮೂದಿಸಲಾಗಿದೆ. ವಿಯೋಲಾ, ಲಗೂನ್ ಮತ್ತು ವೆಲ್ವೇಟ್ ರೆಡ್ ಬಣ್ಣಗಳಲ್ಲಿ ಲಭ್ಯವಿರುವ ಮೈಕ್ರೊಮ್ಯಾಕ್ಸ್ ಇನ್ಫಿನಿಟಿ ಎನ್12 ಸ್ಮಾರ್ಟ್‌ಫೋನ್‌ ಉತ್ತಮ ಹಿಡಿತ ಹೊಂದಿದೆ. ಒಟ್ಟಾರೆಯಾಗಿ ಅತ್ಯುತ್ತಮ ರಚನೆ ಹೊಂದಿದೆ.

ಡಿಸ್‌ಪ್ಲೇ

ಡಿಸ್‌ಪ್ಲೇ

ಈ ಸ್ಮಾರ್ಟ್‌ಫೋನ್ 720x1520 ಪಿಕ್ಸಲ್ ರೆಸಲ್ಯೂಶನ್ ಹೊಂದಿರುವ 6.19 ಇಂಚಿನ ಡಿಸ್‌ಪ್ಲೇ ಕಾಣಬಹುದು. ಇದರ ಪಿಕ್ಸಲ್‌ಗಳ ಅನುಪಾತ 18:9 ಆಗಿದ್ದು, ಕಡಿಮೆ ಬೆಲೆಗೆ ಇದೊಂದು ತೃಪ್ತಿಕರ ಡಿಸ್‌ಪ್ಲೇ ಎನ್ನಬಹುದು. ಡಿಸ್‌ಪ್ಲೇಯಲ್ಲಿ ಬೆಳಕಿನ ಪ್ರಖರತೆ ಸಾಧಾರಣವಾಗಿದ್ದು, ಬಿಸಲಿನಲ್ಲಿ ಸ್ಮಾರ್ಟ್‌ಫೋನ್‌ ಬಳಸಿದಾಗ ಡಿಸ್‌ಪ್ಲೇನಲ್ಲಿ ಬೆಳಕು ಮಂದವಾಗಿ ಕಾಣಿಸುತ್ತದೆ. ಮಧ್ಯಮ ಶ್ರೇಣಿ ಬೆಲೆಯುಳ್ಳ ಇತರೆ ಕಂಪನಿಯ ಸ್ಮಾರ್ಟ್‌ಫೋನ್‌ಗಳಲ್ಲಿ ಇದಕ್ಕಿಂತ ಉತ್ತಮ ಡಿಸ್‌ಪ್ಲೇ ನೀಡಿರುವುದನ್ನು ನೋಡಬಹುದು. ಹೀಗಾಗಿ ಮೈಕ್ರೊಮ್ಯಾಕ್ಸ್ ಇನ್ಫಿನಿಟಿ ಎನ್12 ಸ್ಮಾರ್ಟ್‌ಫೋನ್‌ ಡಿಸ್‌ಪ್ಲೇ ಸಮಾದಾನಕರ ಆಗಿದೆ ಎನ್ನಬಹುದು.

ಕ್ಯಾಮೆರಾ

ಕ್ಯಾಮೆರಾ

ಹಿಂಭಾಗದಲ್ಲಿ 13 ಮೆಗಾಪಿಕ್ಸಲ್ ಮತ್ತು 5 ಮೆಗಾಪಿಕ್ಸಲ್ ಸಾಮರ್ಥ್ಯವನ್ನು ಹೊಂದಿರುವ ಎರಡು ರಿಯರ್ ಕ್ಯಾಮೆರಾಗಳನ್ನು ಈ ಸ್ಮಾರ್ಟ್‌ಫೋನ್ ನೀಡಲಾಗಿದ್ದು, ಉತ್ತಮ ಕ್ಯಾಮೆರಾ ಆಪ್ ಹೊಂದಿದೆ. ಸರಳವಾಗಿ ಕ್ಯಾಮೆರಾ ತೆರೆಯಬಹುದಾಗಿದ್ದು, ಈ ಕ್ಯಾಮೆರಾದಲ್ಲಿ ಫೋಟೋ ತೆಗೆದು ನೋಡಿದಾಗ ಚಿತ್ರಗಳು ಉತ್ತಮವಾಗಿ ಮೂಡಿಬಂದಿದ್ದವು. ಚಿತ್ರಗಳು ಉತ್ತಮ ಬಣ್ಣಗಳ ಪ್ರಖರತೆ ಹೊಂದಿತ್ತು. ಕ್ಯಾಮೆರಾಗೆ ಫ್ಲ್ಯಾಶ್ ನೀಡಲಾಗಿದ್ದು, ಮಂದ ಬೆಳಕಿನಲ್ಲಿ ಫೋಟೋಗಳು ಸಾಧಾರಣ ಗುಣಮಟ್ಟದಲ್ಲಿರುತ್ತವೆ.

ಸೆಲ್ಫೀಗಾಗಿ 16 ಮೆಗಾಪಿಕ್ಸಲ್

ಸೆಲ್ಫೀಗಾಗಿ 16 ಮೆಗಾಪಿಕ್ಸಲ್

ಇನ್ನೂ ಮುಂಭಾಗದಲ್ಲಿ ಸೆಲ್ಫೀಗಾಗಿ 16 ಮೆಗಾಪಿಕ್ಸಲ್ ಸಾಮರ್ಥ್ಯ ಇರುವ ಕ್ಯಾಮೆರಾ ನೀಡಲಾಗಿದ್ದು, ಕಡಿಮೆ ಬೆಲೆಗೆ ಉತ್ತಮ ಮೆಗಾಪಿಕ್ಸಲ್ ಸೆಲ್ಫೀ ಕ್ಯಾಮರೆ ನೀಡಿದ್ದಾರೆ. ಫೇಸ್‌ಮೋಡ್, ಬ್ಯೂಟಿ ಮೋಡ್ ಮತ್ತು ಫೇಸ್‌ ಸ್ಪಾಟ್‌ಲೆಸ್ ಆಯ್ಕೆಗಳನ್ನು ಸೆಲ್ಫೀ ಕ್ಯಾಮೆರಾದಲ್ಲಿ ನೀಡಿರುವುದರಿಂದ ಫೋಟೋಗಳ ಅಂದವಾಗಿ ಮೂಡಿಬರಲು ಸಹಾಯಕವಾಗಲಿವೆ. ಇದರೊಂದಿಗೆ ಪೊರ್ಟ್ರೇಟ್ ಮೋಡ್ ಆಯ್ಕೆಯನ್ನು ಸಹ ನೀಡಲಾಗಿದೆ. ಒಟ್ಟಾರೆಯಾಗಿ ಕ್ಯಾಮೆರಾ ಗುಣಮಟ್ಟವು ತೃಪ್ತಿಕರವಾಗಿದೆ.

ಪ್ರೊಸೆಸರ್ ಕಾರ್ಯದಕ್ಷತೆ

ಪ್ರೊಸೆಸರ್ ಕಾರ್ಯದಕ್ಷತೆ

ಮೈಕ್ರೊಮ್ಯಾಕ್ಸ್ ಇನ್ಫಿನಿಟಿ ಎನ್12 ಸ್ಮಾರ್ಟ್‌ಫೋನ್‌ 2 ಗಿಗಾಹರ್ಡ್ಸ್ ಆಕ್ಟಾಕೋರ್ ಮೀಡಿಯಾ ಟೆಕ್ ಹಿಲಿಯೋ ಪಿ22 ಪ್ರೊಸೆಸರ್ ಸಾಮರ್ಥ್ಯವನ್ನು ಹೊಂದಿದ್ದು, ಸರಳವಾಗಿ ಕಾರ್ಯಗಳನ್ನು ನಡೆಸಲು ಅನುಕೂಲಕರವಾಗಿದೆ. ಇದರೊಂದಿಗೆ 3GB RAM ನೀಡಿದ್ದು, ಮಲ್ಟಿ ಟಾಸ್ಕ್‌ಗಳನ್ನು ಮಾಡಬಹುದಾಗಿದೆ ಮತ್ತು 32GB ಆಂತರಿಕ ಸಂಗ್ರಹ ಸಾಮರ್ಥ್ಯವನ್ನು ಹೊಂದಿದ್ದು, ಇದರಲ್ಲಿ ಬಹುತೇಕ ಪಾಲು ಸ್ಥಳಾವಕಾಶ ಅಪ್ಲಿಕೇಶನ್‌ಗಳಿಗೆ ಹೋಗಿಬಿಡುತ್ತದೆ. ಬಾಹ್ಯ ಶೇಖರಣ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಎಸ್‌ಡಿಕಾರ್ಡ್ ಹಾಕಿಕೊಳ್ಳಲು ಅವಕಾಶ ನೀಡಲಾಗಿದೆ.

ಪ್ರೊಸೆಸರ್ ಅಡೆತಡೆಗಳು

ಪ್ರೊಸೆಸರ್ ಅಡೆತಡೆಗಳು

ಉತ್ತಮ ಪ್ರೊಸೆಸರ್ ಹೊಂದಿರುವುದರಿಂದ ಕಾರ್ಯಕ್ಷಮತೆ ಉತ್ತಮವಾಗಿದ್ದು, ಆದರೆ ಅಧಿಕ ಸಾಮರ್ಥ್ಯವುಳ್ಳ ಗೇಮ್ಸ್ ಆಡುವಾಗ ಮತ್ತು ಹೆಚ್ಚು ಸಾಮರ್ಥ್ಯ ಹೊಂದಿರುವ ಅಪ್ಲಿಕೇಶನ್ ಬಳೆಸುವಾಗ, ಫೋನಿನ ಕಾರ್ಯಕ್ಷಮತೆಯಲ್ಲಿ ಸ್ವಲ್ಪ ಅಡೆತಡೆಗಳು ಕಾಣಿಸುತ್ತವೆ. ಆಂಡ್ರಾಯ್ಡ್ 8.1 ಓರಿಯೋವನ್ನು ಹೊಂದಿ ಕಾರ್ಯನಿರ್ವಹಿಸುವ ಈ ಸ್ಮಾರ್ಟ್‌ಫೋನ್‌ ಆಂಡ್ರಾಯ್ಡ್ 9ಗೆ ಬಡ್ತಿ ನೀಡಿ ಅಪ್‌ಗೇಡ್ ಮಾಡಿಕೊಳ್ಳಬಹುದಾಗಿದೆ. ಕಡೆಯದಾಗಿ ಹೇಳಬೇಕಾದರೆ ಈ ಸ್ಮಾರ್ಟ್‌ಫೋನಿನ ಕಾರ್ಯದಕ್ಷತೆ ಉತ್ತಮವಾಗಿದೆ.

ಬ್ಯಾಟರಿ

ಬ್ಯಾಟರಿ

4000mAh ಶಕ್ತಿ ಸಾಮರ್ಥ್ಯವನ್ನು ಹೊಂದಿರುವ ಬ್ಯಾಟರಿಯನ್ನು ಇನ್ಫಿನಿಟಿ ಎನ್12 ಸ್ಮಾರ್ಟ್‌ಫೋನ್ ಹೊಂದಿದ್ದು, ಸುಲಭವಾಗಿ ಒಂದು ದಿನ ಬ್ಯಾಟರಿ ಬಾಳಿಕೆ ಬರಲಿದೆ. ಕಡಿಮೆ ಬೆಲೆಗೆ ಪವರ್‌ಫುಲ್ ಬ್ಯಾಟರಿ ನೀಡಿದ್ದು, ಈ ಸ್ಮಾರ್ಟ್‌ಫೋನಿನ ವಿಶೇಷವಾಗಿದೆ. ಕಂಪನಿ ನೀಡಿರುವ ಚಾರ್ಜರನ್ನು ಬಳಸಿ ಚಾರ್ಜಮಾಡಿದರೆ ಎರಡು ಗಂಟೆಯೊಳಗೆ ಬ್ಯಾಟರಿ ಸಂಪೂರ್ಣವಾಗುತ್ತದೆ. ಹೀಗಾಗಿ ಕೊಟ್ಟ ಬೆಲೆಗೆ ಅತ್ಯುತ್ತಮ ಬ್ಯಾಟರಿ ಇದಾಗಿದೆ.

ವಿಮರ್ಶೆಯ ಕೊನೆ ಮಾತು?

ವಿಮರ್ಶೆಯ ಕೊನೆ ಮಾತು?

ಮೈಕ್ರೊಮ್ಯಾಕ್ಸ್ ಇನ್ಫಿನಿಟಿ ಎನ್12 ಸ್ಮಾರ್ಟ್‌ಫೋನ್‌ ಕೆಲವು ನ್ಯೂನ್ಯತೆಗಳ ನಡುವೆಯು ಹಲವು ಅತ್ಯುತ್ತಮ ಫೀಚರ್ಸ್‌ಗಳನ್ನು ಹೊಂದಿರುವುದರಿಂದ ಇದೊಂದು ಉತ್ತಮ ಕಡಿಮೆ ಬಜ್‌ಟ್ ದರದ ಸ್ಮಾರ್ಟ್‌ಫೋನ್ ಆಗಿದೆ. ಮುಖ್ಯವಾಗಿ ಇದರ ಬ್ಯಾಟರಿ, ಕ್ಯಾಮೆರಾ ಮತ್ತು ಪ್ರೊಸೆಸರ್ ಅಂಶಗಳು ಉತ್ತಮವಾಗಿವೆ. ಇದರಿಂದ ಕೊಟ್ಟ ಹಣಕ್ಕೆ ಮೋಸವಿಲ್ಲ. ಖರೀದಿಸಬಹುದು.
ಐದಕ್ಕೆ ಮೂರು ಸ್ಟಾರ್

Best Mobiles in India

English summary
Micromax has finally caught up with the latest trend. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X