ಮೈಕ್ರೊಮ್ಯಾಕ್ಸ್ ತಂದಿದೆ ಹೊಸ ಮ್ಯುಸಿಕ್ ಫೋನ್

Posted By: Staff
ಮೈಕ್ರೊಮ್ಯಾಕ್ಸ್ ತಂದಿದೆ ಹೊಸ ಮ್ಯುಸಿಕ್ ಫೋನ್

ಸಂಗೀತ ಪ್ರಿಯರನ್ನೇ ಉದ್ದೇಶವಾಗಿಟ್ಟುಕೊಂಡು ಮೈಕ್ರೊ ಮ್ಯಾಕ್ಸ್ ಕಂಪನಿ ತನ್ನದೇ ಮ್ಯುಸಿಕ್ ಫೋನನ್ನು ಬಿಡುಗಡೆ ಮಾಡಿದೆ. ಮೈಕ್ರೊ ಮ್ಯಾX271 ಎಂಬ ಈ ಮೊಬೈಲ್ ಸಂಗೀತ ಪ್ರಿಯರು ನಿರೀಕ್ಷಿಸುವ ಉತ್ತಮ ಗುಣಮಟ್ಟದ ಸಂಗೀತವನ್ನು ಒದಗಿಸಲಿದೆ. ಜಿಎಸ್ ಎಂ ಬೆಂಬಲಿತವಾಗಿರುವ ಈ ಫೋನ್ ಡ್ಯೂಯಲ್ ಸಿಮ್ ಆಯ್ಕೆ ಹೊಂದಿರುವುದು ವಿಶೇಷವಾಗಿದೆ. ಈ ಮೊಬೈಲ್ ನಲ್ಲಿ ಇನ್ನೂ ಹಲವು ಆಯ್ಕೆಗಳಿವೆ. ಅದೇನೆಂದು ಮುಂದೆ ತಿಳಿಯಿರಿ.

ಈ ಮೈಕ್ರೊ ಮ್ಯಾಕ್ಸ್ X271 ವಿಶೇಷತೆ:

* ಡ್ಯೂಯಲ್ ಸಿಮ್

* 85 ಗ್ರಾಂ ತೂಕ

* 2.6 ಇಂಚಿನ TFT ಡಿಸ್ಪ್ಲೇ, 240 x 320 ಪಿಕ್ಸಲ್ ರೆಸೊಲ್ಯೂಷನ್

* VGA ಕ್ಯಾಮೆರಾ

* ಎಫ್ ಎಂ, ರೇಡಿಯೋ, ಮಲ್ಟಿ ಮೀಡಿಯಾ ಪ್ಲೇಯರ್

* 3.5 ಎಂಎಂ ಆಡಿಯೋ ಜ್ಯಾಕ್

* 8 ಎಂಬಿ ಆಂತರಿಕ ಮೆಮೊರಿ

* 8ಜಿಬಿವರೆಗೂ ಮೆಮೊರಿ ವಿಸ್ತರಣೆಗೆ ಅವಕಾಶ

* WAP / GPRS

* ಬ್ಲೂಟೂಥ್, USB

1500 mAh ಲೀಥಿಯಂ ಐಯಾನ್ ಬ್ಯಾಟರಿ ಪಡೆದುಕೊಂಡಿರುವ ಈ ಮೊಬೈಲ್ 8 ಗಂಟೆ ಟಾಕ್ ಟೈಂ ಮತ್ತು 15 ದಿನಗಳ ಸ್ಟ್ಯಾಂಡ್ ಬೈ ಟೈಂ ನೀಡುತ್ತದೆ.

ಈ ಮೈಕ್ರೊ ಮ್ಯಾಕ್ಸ್ X271 ಬೆಲೆ ಕೇಳಿದರೆ ನಿಮಗೇ ಆಶ್ಚರ್ಯವಾಗುತ್ತದೆ. ಕೇವಲ 2,000 ದಿಂದ 2,500 ರೂಪಾಯಿಗೆ ಈ ಮೊಬೈಲ್ ದೊರೆಯಲಿರುವುದೆಂದು ಕಂಪನಿ ತಿಳಿಸಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot