ಮೈಕ್ರೊಮ್ಯಾಕ್ಸ್ ನೀಡಿದೆ ಹಗುರವಾದ ಮೊಬೈಲ್

By Super
|

ಮೈಕ್ರೊಮ್ಯಾಕ್ಸ್ ನೀಡಿದೆ ಹಗುರವಾದ ಮೊಬೈಲ್
ಡ್ಯೂಯಲ್ ಸಿಮ್ ಆಯ್ಕೆಯ ಮೊಬೈಲ್ ಗಳಿಗೆ ಬೇಡಿಕೆ ಹೆಚ್ಚಾದಂತೆ ಡ್ಯೂಯಲ್ ಸಿಮ್ ಮೊಬೈಲ್ ಗಳ ತಯಾರಿಕೆಯಲ್ಲೂ ಭಾರಿ ಪೈಪೋಟಿ ಏರ್ಪಟ್ಟಿದೆ. ಮೈಕ್ರೊಮ್ಯಾಕ್ಸ್ ಇದಕ್ಕೆಂದೇ ಡ್ಯೂಯಲ್ ಸಿಮ್ ಮೊಬೈಲನ್ನು ಇತ್ತೀಚೆಗಷ್ಟೆ ಭಾರತದಲ್ಲಿ ಬಿಡುಗಡೆಗೊಳಿಸಿದೆ.

ಮೈಕ್ರೊಮ್ಯಾಕ್ಸ್ X333 ಎಂಬ ಈ ಮೊಬೈಲ್ ಟಚ್ ಸ್ಕ್ರೀನ್ ಹೊಂದಿದ್ದು, ಹಗುರವಾಗಿರುವುದು ಇದರ ವಿಶೇಷತೆಗಳಲ್ಲಿ ಒಂದು. ಕಪ್ಪು ಬಣ್ಣದಲ್ಲಿ ಈ ಮೊಬೈಲ್ ಲಭ್ಯವಾಗಲಿದೆ. ಈ ಮೊಬೈಲಿನಲ್ಲಿ ಇನ್ನೂ ಏನೇನು ಆಯ್ಕೆಗಳಿವೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಮೈಕ್ರೊಮ್ಯಾಕ್ಸ್ X333 ಮೊಬೈಲ್ ವಿಶೇಷತೆ:

* ಜಿಎಸ್ ಎಂ ಮೊಬೈಲ್

* ಡ್ಯೂಯಲ್ ಸಿಮ್ ಆಯ್ಕೆ

* 103.65 ಎಂಎಂ x 57.2 ಎಂಎಂ x 13.35 ಎಂಎಂ ಸುತ್ತಳತೆ

* 2.8 ಇಂಚಿನ ಟಚ್ ಸ್ಕ್ರೀನ್ ಡಿಸ್ಪ್ಲೇ, 240 x 320 ಪಿಕ್ಸಲ್ ರೆಸೊಲ್ಯೂಷನ್

* VGA ಕ್ಯಾಮೆರಾ

* USB, ಬ್ಲೂಟೂಥ್

* ಎಫ್ ಎಂ ರೇಡಿಯೊ

* 8ಜಿಬಿವರೆಗೂ ಮೆಮೊರಿ ವಿಸ್ತರಣೆಗೆ ಅವಕಾಶ

* ಮೈಕ್ರೊ SD ಕಾರ್ಡ್ ಬೆಂಬಲಿತ

* ಮೊಬೈಲ್ ಟ್ರ್ಯಾಕರ್

1000mAh ಬ್ಯಾಟರಿ ಪಡೆದುಕೊಂಡಿರುವ ಈ ಮೈಕ್ರೊಮ್ಯಾಕ್ಸ್ ಮೊಬೈಲ್ 3 ಗಂಟೆ ಟಾಕ್ ಟೈಂ ಮತ್ತು 200 ಗಂಟೆಗಳ ಸ್ಟ್ಯಾಂಡ್ ಬೈ ಟೈಂ ನೀಡುತ್ತದೆ.

ಈ ಮೈಕ್ರೊಮ್ಯಾಕ್ಸ್ X333 ಮೊಬೈಲ್ ಬೆಲೆಯನ್ನು ಕಂಪನಿ ಇನ್ನೂ ಘೋಷಿಸಿಲ್ಲ. ಆದರೆ ಇದು ಕೈಗೆಟುಕುವ ದರದಲ್ಲಿಯೇ ಲಭ್ಯವಿರುವುದಾಗಿ ಕೆಲವು ಮೂಲಗಳಿಂದ ತಿಳಿದುಬಂದಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X