ಟ್ರಕ್ ನಲ್ಲಿ ಸಾಗಿಸುತ್ತಿದ್ದ ಒಂದು ಕೋಟಿ ಮೊತ್ತದ ಎಂಐ ಫೋನ್ ಗಳು ಲೂಟಿ

By Gizbot Bureau
|

1 ಕೋಟಿ ರುಪಾಯಿ ಬೆಲೆಬಾಳುವ ಶಿಯೋಮಿ ಫೋನ್ ಗಳನ್ನು ಹೊತ್ತೊಯ್ಯುತ್ತಿದ್ದ ಟ್ರಕ್ ನ್ನು ಅಪರಿಚಿತ ದುಷ್ಕರ್ಮಿಗಳು ಲೂಟಿ ಮಾಡಿದ ಘಟನೆ ನಡೆದಿದೆ. ನೆಲ್ಲೂರು ಜಿಲ್ಲೆ ಧಗದರ್ತಿ ಹಳ್ಳಿಯ ಬಳಿ ಚಾಲಕನಿಗೆ ಥಳಿಸಿ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ.

ಟ್ರಕ್ ನಿಲ್ಲಿಸಿದ್ದಾಗ ಘಟನೆ:

ಟ್ರಕ್ ನಿಲ್ಲಿಸಿದ್ದಾಗ ಘಟನೆ:

ಶ್ರೀ ಸಿಟಿಯಿಂದ ಕೊಲ್ಕತ್ತಾಗೆ ಟ್ರಕ್ ಚಲಿಸುತ್ತಿತ್ತು. ಕಾವಾಲಿ ಪೋಲೀಸರು ತಿಳಿಸಿರುವಂತೆ ಡ್ರೈವರ್ ಕೆಲವು ನಿಮಿಷಗಳ ವಿಶ್ರಾಂತಿಗೆಂದು ಟ್ರಕ್ ನಿಲ್ಲಿಸಿದ್ದಾಗ ದುಷ್ಕರ್ಮಿಗಳು ಅಟ್ಯಾಕ್ ಮಾಡಿ ಈ ಕೆಲಸವನ್ನು ಮಾಡಿದ್ದಾರೆ.

ನಾಲ್ಕು ಮಂದಿಯ ತಂಡದಿಂದ ಕೃತ್ಯ:

ನಾಲ್ಕು ಮಂದಿಯ ತಂಡದಿಂದ ಕೃತ್ಯ:

ನಾಲ್ಕು ಮಂದಿ ದುಷ್ಕರ್ಮಿಗಳ ತಂಡ ಈ ಕೆಲಸವನ್ನು ಮಾಡಿದ್ದು ಡ್ರೈವರ್ ಗೆ ಥಳಿಸಿದ್ದಾರೆ ಮತ್ತು ಆತನನ್ನು ಒಂದು ಮರಕ್ಕೆ ಕಟ್ಟಿ ಹಾಕಿದ್ದಾರೆ. ನಂತರ ಟ್ರಕ್ ನ್ನು ತಾವೇ ಚಲಾಯಿಸಿಕೊಂಡು ಸಾಗಿದ್ದಾರೆ. ನಂತರ ಗೌರಾವರಂ ನಲ್ಲಿ ಟ್ರಕ್ ನ್ನು ನಿಲ್ಲಿಸಿ ಸೆಲ್ ಫೋನ್ ಗಳನ್ನು ಅಪರಿಚಿತ ಟ್ರಕ್ ವೊಂದಕ್ಕೆ ಶಿಫ್ಟ್ ಮಾಡಿದ್ದಾರೆ ಮತ್ತು ಅಲ್ಲಿಂದ ಪರಾರಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸ್ಥಳೀಯರಿಂದ ಚಾಲಕನ ರಕ್ಷಣೆ:

ಸ್ಥಳೀಯರಿಂದ ಚಾಲಕನ ರಕ್ಷಣೆ:

ಸ್ಥಳೀಯರು ಡ್ರೈವರ್ ನನ್ನು ಮರಕ್ಕೆ ಕಟ್ಟಿ ಹಾಕಿರುವುದನ್ನು ಗಮನಿಸಿದ್ದಾರೆ ಮತ್ತು ಆತನನ್ನು ರಕ್ಷಿಸಿ ಪೋಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಟ್ರಕ್ ನ್ನು ಟ್ರೇಸ್ ಮಾಡಲು ಪೋಲೀಸರು ಆತನಿಂದ ಮಾಹಿತಿಯನ್ನು ಪಡೆದಿದ್ದಾರೆ.

ಗೌರಾರಂಪುರಂ ಹಳ್ಳಿಯ ಬಳಿ ಪೋಲೀಸರು ಖಾಲಿ ಇರುವ ಟ್ರಕ್ ನ್ನು ಪತ್ತೆ ಹಚ್ಚಿದ್ದಾರೆ.

ಕಂಪೆನಿಯ ವ್ಯಕ್ತಿಗಳದ್ದೇ ಕೈವಾಡದ ಶಂಕೆ:

ಕಂಪೆನಿಯ ವ್ಯಕ್ತಿಗಳದ್ದೇ ಕೈವಾಡದ ಶಂಕೆ:

ಪೋಲೀಸರು ತಿಳಿಸುವ ಪ್ರಕಾರ ಈ ಕೃತ್ಯವೆಸಗಲು ದುಷ್ಕರ್ಮಿಗಳು ಮೊದಲೇ ಪ್ಲಾನ್ ಮಾಡಿದ್ದರು ಮತ್ತು ಕಂಪೆನಿಯ ಒಳಗಿರುವ ವ್ಯಕ್ತಿಗಳದ್ದೇ ಕೈವಾಡವಿರುವ ಬಗ್ಗೆ ಪೋಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. 6000 ದಿಂದ 14,000 ಬೆಲೆಬಾಳುವ ಫೋನ್ ಗಳು ಟ್ರಕ್ ನಲ್ಲಿತ್ತು ಎಂದು ಪೋಲೀಸರು ತಿಳಿಸಿದ್ದಾರೆ. ಸದ್ಯ ಕಳ್ಳತನದ ಕೇಸ್ ದಾಖಲಿಸಿಕೊಳ್ಳಲಾಗಿದ್ದು ಪೋಲೀಸರು ತನಿಖೆ ಮುಂದುವರಿಸಿದ್ದಾರೆ.

Best Mobiles in India

Read more about:
English summary
Miscreants stop truck and loot MI phones worth Rs 1 crore in Andhra Pradesh

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X