ಭಾರತೀಯರು ಗೂಗಲ್‌ ಸರ್ಚ್ ಮಾಡಿದ ಟಾಪ್ 5 ಸ್ಮಾರ್ಟ್‌ಫೋನ್ ಯಾವುವು ಗೊತ್ತಾ?

|

ಪ್ರತಿಯೋರ್ವರಿಗೂ ನೂತನ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಬರುತ್ತಿದೆ ಎಂದರೆ ಏನೋ ಒಂದು ಕುತೋಹಲ. ಯಾವ ಸ್ಮಾರ್ಟ್‌ಫೋನ್‌ ಬಿಡುಗಡೆಯಾಗುತ್ತಿದೆ ಅದರ ಫೀಚರ್‌ ಏನು? ಬೆಲೆ ಎಷ್ಟು? ಎಂಬ ಎಲ್ಲಾ ಮಾಹಿತಿಗಳನ್ನು ಗೂಗಲ್‌ನಲ್ಲಿ ಟೈಪಿಸಿಯೇ ಇರುತ್ತಾರೆ!!

ಗೂಗಲ್‌ ಸಹ ಪ್ರತಿವರ್ಷವೂ ಹೆಚ್ಚು ಸರ್ಚ್ ಆದ ವಸ್ತುಗಳ ಹೆಸರನ್ನು ಪ್ರಕಟಿಸುತ್ತದೆ. ಅದರ ಹಾಗೆ 2016 ನೇ ವರ್ಷದಲ್ಲಿ ಗೂಗಲ್‌ನಲ್ಲಿ ಹೆಚ್ಚು ಸರ್ಚ್ ಆದ ಟಾಪ್ 5 ಸ್ಮಾರ್ಟ್‌ಫೊನ್‌ಗಳು ಯಾವುವು ಎಂಬ ಪಟ್ಟಿಯನ್ನು ಬಿಡುಗಡೆ ಮಾಡಿದೆ!

ಕೇಂದ್ರಸರ್ಕಾರದಿಂದ ಇಂದು "ಆಧಾರ್ ಪೇಮೆಂಟ್ ಆಪ್‌" ಬಿಡುಗಡೆ!!..ರಿಜಿಸ್ಟರ್ ಹೇಗೆ?

ಇನ್ನು ಈ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಪಡೆದಿರುವ ಸ್ಮಾರ್ಟ್‌ಫೊನ್ ಯಾರಿಗೂ ಆಶ್ಚರ್ಯಗೊಳಿಸುವುದಿಲ್ಲ! ಹೌದು, ಕೇವಲ 251 ರೂಪಾಯಿಗಳಿಗೆ ಸ್ಮಾರ್ಟ್‌ಫೋನ್ ನೀಡುತ್ತೇವೆ ಎಂದು ಘೋಷಿಸಿಕೊಂಡ "ಫ್ರೀಡಂ 251" ಗೂಗಲ್‌ನಲ್ಲಿ ಭಾರತೀಯರಿಂದ ಹೆಚ್ಚು ಸರ್ಚ್ ಆದ ಸ್ಮಾರ್ಟ್‌ಫೋನ್!!

ಹಾಗಾದರೆ ಗೂಗಲ್‌ನಲ್ಲಿ ಹೆಚ್ಚು ಸರ್ಚ್ ಆದ ಟಾಪ್ ಸ್ಮಾರ್ಟ್‌ಫೋನ್‌ಗಳು ಯಾವುವು ಅವುಗಳ ವಿಶೇಷತೆ ಏನು ಎಂಬುದನ್ನು ಕೆಳಗಿನ ಸ್ಲಯಡರ್‌ಗಳಲ್ಲಿ ತಿಳಿಯಿರಿ.

#1 ಫ್ರೀಡಂ 251

#1 ಫ್ರೀಡಂ 251

ಮೊದಲೇ ಹೇಳಿದಂತೆ ಭಾರತೀಯರು ಗೂಗಲ್‌ನಲ್ಲಿ ಹೆಚ್ಚು ಸರ್ಚ್ ಮಾಡಿದ ನಂಬರ್‌ ಒನ್ ಸ್ಮಾರ್ಟ್‌ಫೋನ್ ಫ್ರೀಡಂ 251, ಆದರೆ ಕಡಿಮೆ ಬೆಲೆಗೆ ಆಂಡ್ರಾಯ್ಡ್ ಸ್ಮಾರ್ಟ್‌ಪೋನ್ ಬಿಡುಗಡೆ ಮಾಡುತ್ತೇನೆ ಎಂದು ಜನರಿಗೆ ನಂಬಿಸಿದ ಫ್ರೀಡಂ ಸ್ಮಾರ್ಟ್‌ಫೋನ್‌ ಕಂಪೆನಿ ಮತ್ತೆ ಕಾಣಲೇ ಇಲ್ಲ!!

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

#2 ಆಪಲ್ ಐಫೋನ್ 7

#2 ಆಪಲ್ ಐಫೋನ್ 7

ಭಾರತೀಯರು ಗೂಗಲ್‌ನಲ್ಲಿ ಸಚ್‌ಮಾಡಿದ ಸ್ಮಾರ್ಟ್‌ಫೋನ್‌ಗಳಲ್ಲಿ ಎರಡನೆ ಸ್ಥಾನ, ಪ್ರಪಂಚದ ಅತ್ಯುತ್ತಮ ಸ್ಮಾರ್ಟ್‌ಫೊನ್ ಕಂಪೆನಿ ಬುಡುಗಡೆ ಮಾಡಿದ ಆಪಲ್ ಐಫೋನ್ 7 ಗೆ ಸಿಕ್ಕಿದೆ. ಕೇವಲ ರೂಮರ್ಸ್‌ಗಳಿಂದಲೇ ಐಫೋನ್ 7 ಇಷ್ಟು ಹೆಸರು ಗಳಿಸಿದೆ.

#3 ಶ್ಯೋಮಿ ರೆಡ್‌ ಮಿ ನೋಟ್ 3

#3 ಶ್ಯೋಮಿ ರೆಡ್‌ ಮಿ ನೋಟ್ 3

ಚೀನಾದ ಆಪಲ್ ಕಂಪೆನಿ ಎಂದೇ ಹೆಸರು ಪಡೆದಿರುವ ಶ್ಯೋಮಿ ಕಂಪೆನಿಯ ರೆಡ್‌ ಮಿ ನೋಟ್ 3 ಸ್ಮಾರ್ಟ್‌ಫೋನ್‌ 2016 ರಲ್ಲಿ ಭಾರತೀಯರಿಂದ ಗೂಗಲ್‌ನಲ್ಲಿ ಸರ್ಚ್‌ಗೆ ಆದ ಸ್ಮಾರ್ಟ್‌ಫೊನ್‌ಗಳಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದೆ.

#4 ಲೆನೋವೊ ಕೆ4 ನೋಟ್‌

#4 ಲೆನೋವೊ ಕೆ4 ನೋಟ್‌

ಕಡಿಮೆ ಬೆಲೆಯಲ್ಲಿ ಹೆಚ್ಇನ ಫೀಚರ್‌ಗಳನ್ನು ಒಳಗೊಂಡು ಮಾರುಕಟ್ಟೆಗೆ ಬಿಡುಗಡೆಯಾದ ಲೆನೋವೊ ಕೆ4 ನೋಟ್ ಸ್ಮಾರ್ಟ್‌ಪೊನ್‌ ಗೂಗಲ್‌ ಸಚ್‌ ಆದ ನಾಲ್ಕನೇ ಸ್ಥಾನದಲ್ಲಿರುವ ಸ್ಮಾರ್ಟ್‌ಫೊನ್. ವರ್ಚುವಲ್ ರಿಯಾಲಿಟಿ ತಂತ್ರಜ್ಞಾನ ಮತ್ತು ವಿವಡ್ ಡಿಸ್‌ಪ್ಲೇ ಹೊಂದಿದ್ದ ಲೆನೋವೊ ಕೆ4 ನೋಟ್ ಭಾರತೀಯರ ಮನಗೆದ್ದಿತ್ತು.

#5 ಸ್ಯಾಮ್‌ಸಂಗ್ ಗ್ಯಾಲಕ್ಸಿ ಜೆ7

#5 ಸ್ಯಾಮ್‌ಸಂಗ್ ಗ್ಯಾಲಕ್ಸಿ ಜೆ7

2016 ನೇ ವರ್ಷದಲ್ಲಿ ಅತಿ ಹೆಚ್ಚು ಮಾರಾಟವಾದ ಸ್ಮಾರ್ಟ್‌ಫೋನ್‌ಗಳಲ್ಲಿ ಸ್ಯಾಮ್‌ಸಂಗ್ ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ. ಆದರೆ ಗೂಗಲ್‌ನಲ್ಲಿ ಸರ್ಚ್‌ ಆದ ಸ್ಮಾಟ್‌ಫೋನ್‌ಗಳಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ ಜೆ7 ಐದನೇ ಸ್ಥಾನ ಪಡೆದುಕೊಂಡಿದೆ.! ಮಧ್ಯಮ ಬೆಲೆಯಲ್ಲಿ 4G ಸಪೋರ್ಟ್ ಒಳಗೊಂಡು ಬಿಡುಗಡೆಯಾದ ಗ್ಯಾಲಕ್ಸಿ ಜೆ7 ಭಾರತೀಯರ ಸ್ಮಾರ್ಟ್‌ಫೊನ್‌ ಪ್ರಿಯರ ಮನಗೆದ್ದಿತ್ತು.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
These smartphones were most searched by Indians in 2016. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X