ಕೇಂದ್ರಸರ್ಕಾರದಿಂದ "ಆಧಾರ್ ಪೇಮೆಂಟ್ ಆಪ್‌" ಬಿಡುಗಡೆ!!..ರಿಜಿಸ್ಟರ್ ಹೇಗೆ?

ಡಿಜಿಟಲ್ ವ್ಯವಹಾರವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಇಂದು ಸರ್ಕಾರದಿಂದಲೇ ರೂಪಿಸಿರುವ "ಆಧಾರ್ ಪೇಮೆಂಟ್ ಆಪ್‌" ಬಿಡುಗಡೆಮಾಡುತ್ತಿದೆ.!!

|

ಡಿಜಿಟಲ್ ಸಮಾಜ ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ಇಂದು ಬಹುದೊಡ್ಡ ಹೆಜ್ಜೆಯನ್ನು ಇಡುತ್ತಿದೆ.! ಹೌದು, ಡಿಜಿಟಲ್ ವ್ಯವಹಾರವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಇಂದು ಸರ್ಕಾರದಿಂದಲೇ ರೂಪಿಸಿರುವ "ಆಧಾರ್ ಪೇಮೆಂಟ್ ಆಪ್‌" ಬಿಡುಗಡೆಮಾಡುತ್ತಿದೆ.!!

500 ಮತ್ತು 1000 ರೂಪಾಯಿ ನೋಟು ನಿಷೇಧ ನಂತರ ಜನತೆ ಆನ್‌ಲೈನ್ ವ್ಯವಹಾರದ ಕಡೆ ಮುಖ ಮಾಡಿದ್ದು, ಜನತೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೇಂದ್ರಸರ್ಕಾರ "ಆಧಾರ್ ಪೇಮೆಂಟ್ ಆಪ್‌" ಬಿಡುಗಡೆಮಾಡುತ್ತಿದೆ. ಈ ಮೂಲಕ ಪೇಟಿಎಂ, ಫ್ರೀ ಚಾರ್ಜ್‌ಗಳಂತಹ ಪೇಮೆಂಟ್ ವಾಲೆಟ್ ಕಂಪೆನಿಗಳಿಗೆ ಭಾರತ ಸರ್ಕಾರದ ಪೇಮೆಂಟ್ ಆಪ್‌ ಸೆಡ್ಡು ಹೊಡೆಯಲಿದೆ.!!

ಶಾಕಿಂಗ್ ನ್ಯೂಸ್..ಜಿಯೋ ವೆಲಕಮ್ 2 ಆಫರ್ ಇಲ್ಲ!!?

"ಆಧಾರ್ ಪೇಮೆಂಟ್ ಆಪ್‌" ಮೂಲಕ ಪಡೆಯಬಹುದಾದ ಎಲ್ಲಾ ಸೇವೆಗಳು ಉಚಿತವಾಗಿದ್ದು, ಸರ್ಕಾರಕ್ಕೆ ಸಲ್ಲಿಸಬೇಕಾದ ಎಲ್ಲಾ ಬಿಲ್‌ಗಳನ್ನು ಇದರಿಂದಲೇ ಪಾವತಿಸಬಹುದಾಗಿದೆ. ಹಾಗಾಗಿ, ಭಾರತದ ಸರ್ಕಾರದ ಪೇಮೆಂಟ್ ಆಪ್‌ಗೆ ರಿಜಿಸ್ಟರ್ ಆಗುವುದು ಹೇಗೆ? ಮತ್ತು ಇದರಿಂದ ಪಡೆಯಬಹುದಾದ ಸೇವೆಗಳೇನು ಎಂಬುದನ್ನು ಕೆಳಗಿನ ಸ್ಲೈಡರ್‌ಗಳ ಮೂಲಕ ತಿಳಿಯಿರಿ.

"ಆಧಾರ್ ಪೇಮೆಂಟ್ ಆಪ್‌" ಡೌನ್‌ಲೋಡ್ ಮಾಡಿಕೊಳ್ಳಿ.

"ಆಧಾರ್ ಪೇಮೆಂಟ್ ಆಪ್‌" ಇಂದು ಬಿಡುಗಡೆಯಾಗಲಿದ್ದು, ಕೆಲವೇ ದಿನಗಳಲ್ಲಿ ಗೂಗಲ್‌ ಪ್ಲೇಸ್ಟೋರ್‌ನಲ್ಲಿ ನಮಗೆ ಲಭ್ಯವಿರುತ್ತದೆ. ಹಾಗಾಗಿ ಮೊದಲು "ಆಧಾರ್ ಪೇಮೆಂಟ್ ಆಪ್‌" ಡೌನ್‌ಲೋಡ್ ಮಾಡಿಕೊಂಡು ರಿಜಿಸ್ಟರ್ ಆಗಿ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಿಜಿಸ್ಟರ್ ಆಗುವುದು ಹೇಗೆ?

ರಿಜಿಸ್ಟರ್ ಆಗುವುದು ಹೇಗೆ?

ನೀವು ಆಧಾರ್‌ ಪೇಮೆಂಟ್ ಆಪ್ ಉಪಯೊಗಿಸಲು ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಹೊಂದಿರುವ ಸ್ಮಾರ್ಟ್‌ಫೋನ್ ಮತ್ತು ಆಧಾರ್‌ ಕಾರ್ಡ್‌ನಂಬರ್ ಹೊಂದಿರಬೇಕು. ನಂತರ ನಿಮ್ಮ ಫಿಂಗರ್‌ಪ್ರಿಂಟ್ ನೀಡಿ ಆಧಾರ್‌ ನಂಬರ್‌ ನಮೂದಿಸಿದರೆ ನಿಮ್ಮ ಆಧಾರ್‌ ಪೇಮೆಂಟ್ ಆಪ್‌ಗೆ ರಿಜಿಸ್ಟರ್ ಆಗಬಹುದು

"ಆಧಾರ್ ಪೇಮೆಂಟ್ ಆಪ್‌" ಉಪಯೋಗಿಸುವುದು ಹೇಗೆ?

ಖರೀದಿದಾರ ಆಪ್‌ ತೆರೆದು ಆಧಾರ್ ಪೇಮೆಂಟ್ ಆಪ್‌ ತೆರೆದು ತಾನು ಪಾವತಿಸಬೆಕಿರುವ ಮೊತ್ತವನ್ನು ಎಂಟರ್ ಮಾಡಿ ಪಾವತಿ ಮಾಡುವ ವ್ಯಕ್ತಿಯ ಆಧಾರ್‌ ನಂಬರ್ ಹಾಕಬೇಕು. ನಂತರ ಯಾವುದೇ ಬ್ಯಾಂಕ್ ಮೂಲಕ ಪೇಮೆಂಟ್ ಮಾಡಬಹುದು.

ಅನುಕೂಲವೇನು?

ಅನುಕೂಲವೇನು?

ಸರ್ಕಾರ ಬಿಡುಗಡೆ ಮಾಡಿರುವ ಆಧಾರ್ ಪೇಮೆಂಟ್ ಆಪ್‌ ಪೂರ್ಣ ಉಚಿತವಾಗಿದ್ದು, ಹೆಚ್ಚು ಸೆಕ್ಯೂರ್ ಆಗಿರುತ್ತದೆ.ಮತ್ತು ಸ್ಮಾರ್ಟ್‌ಫೋನ್‌ ಇಲ್ಲದೆಯೂ ಎಲ್ಲೆಡೆ ಹಣ ಪಾವತಿ ಮಾಡಬಹುದು! ಹಣ ಪಾವತಿಸಲು ಆಪ್‌ಗೆ ಮೊದಲೇ ಹಣ ತುಂಬುವ ಅವಶ್ಯಕತೆ ಇಲ್ಲ!!

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
The government will launch a new aadhaar payments app tomorrow, which would do away with the need of downloading wallet apps and remembering passwords.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X