Subscribe to Gizbot

ಬಜೆಟ್ ಬೆಲೆಯಲ್ಲಿ ಅತ್ಯಾಕರ್ಷಕ ಡಿವೈಸ್ ಮೋಟೋ ಜಿ4 ಪ್ಲಸ್: ವೀಡಿಯೊ

Written By:

ಬಜೆಟ್ ಫೋನ್‌ಗಳ ಭರಾಟೆಯೇ ಫೋನ್ ಮಾರುಕಟ್ಟೆಯಲ್ಲಿ ಇಂದು ನಡೆಯುತ್ತಿದ್ದು ಹೆಚ್ಚಿನ ಸ್ಮಾರ್ಟ್‌ಫೋನ್ ತಯಾರಿಕಾ ಕಂಪೆನಿಗಳು ಗ್ರಾಹಕರಿಗೆ ಕೈಗೆಟಕುವ ಬೆಲೆಯಲ್ಲಿ ಡಿವೈಸ್‌ಗಳನ್ನು ತಯಾರಿಸುತ್ತಿವೆ. ದುಬಾರಿ ಫೋನ್‌ಗಳಲ್ಲಿ ಕಾಣುವ ಅದೇ ಫೀಚರ್‌ಗಳನ್ನೇ ಬಜೆಟ್ ಡಿವೈಸ್‌ಗಳು ಹೊರತರುತ್ತಿದ್ದು ಮಧ್ಯಮ ಕ್ರಮಾಂಕದ ಫೋನ್‌ಗಳಿಗೂ ಈಗ ಭರ್ಜರಿ ಬೇಡಿಕೆ ಬಂದೊಗಿದೆ.

ಇಂದಿನ ಲೇಖನದಲ್ಲಿ ಇಂತುದೇ ಮಧ್ಯಮ ಕ್ರಮಾಂಕಿತ ಫೋನ್ ಆದ ಮೋಟೋ ಜಿ4 ಪ್ಲಸ್ ಕುರಿತಾದ ವಿಶೇಷತೆಗಳನ್ನು ವೀಡಿಯೊ ಮೂಲಕ ನಾವು ಪ್ರಸ್ತುಪಡಿಸುತ್ತಿದ್ದು ಫೋನ್ ಖರೀದಿ ಮಾಡುವವರಿಗೆ ಇದು ಸುವರ್ಣವಕಾಶ ಎಂದೆನಿಸಲಿದೆ.

5.5 ಇಂಚುಗಳ ಪರದೆ, ಗೋರಿಲ್ಲಾ ಗ್ಲಾಸ್ 3 ಭದ್ರತೆಯನ್ನು ಡಿವೈಸ್ ಪಡೆದುಕೊಂಡಿದ್ದು ಫೋನ್‌ನ ರಿಯರ್ ಕ್ಯಾಮೆರಾ 16 ಮೆಗಾಪಿಕ್ಸೆಲ್ ಹಾಗೂ ಮುಂಭಾಗ ಕ್ಯಾಮೆರಾ 5 ಮೆಗಾಪಿಕ್ಸೆಲ್ ಆಗಿದೆ. ಆಂಡ್ರಾಯ್ಡ್ 6.0.1 ಮಾರ್ಷ್ ಮಲ್ಲೊ ಇದರಲ್ಲಿದ್ದು 16 ಜಿಬಿ, 32 ಜಿಬಿ ಆಂತರಿಕ ಸಂಗ್ರಹಣೆಯನ್ನು ಫೋನ್ ಪಡೆದುಕೊಂಡಿದೆ.

ಡಿವೈಸ್‌ನ RAM 2 ಜಿಬಿ, 3ಜಿಬಿ, 4ಜಿಬಿ ಯಾಗಿದ್ದು ಫೋನ್ ಬ್ಯಾಟರಿ 3,000mAh ಎಂದೆನಿಸಿದೆ. ಡಿವೈಸ್ ಫಿಂಗರ್ ಪ್ರಿಂಟ್ ರೀಡರ್ ಅನ್ನು ಪಡೆದುಕೊಂಡಿದ್ದು, ಡ್ಯುಯಲ್ ಸಿಮ್‌ನೊಂದಿಗೆ ಬಂದಿದೆ. 16 ಜಿಬಿ ಡಿವೈಸ್ ಬೆಲೆ ರೂ 13,499 ಆಗಿದ್ದು 32 ಜಿಬಿ ಫೋನ್ ಬೆಲೆ ರೂ 14,999 ಆಗಿದೆ.

English summary
Here we are giving you Moto G4 Plus specifications and price about device.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot