ಬಜೆಟ್‌ಫೋನ್ ಬೇಡ: ಮೊಟೊ G5S ಸ್ಮಾರ್ಟ್‌ಫೋನ್‌ ಬೆಲೆಯಲ್ಲಿ ಭಾರೀ ಕಡಿತ ಮಾಡಿದೆ ಅಮೆಜಾನ್

|

2017ರ ಅಂತ್ಯಕ್ಕೆ ಎಲ್ಲಾ ಸ್ಮಾರ್ಟ್‌ಫೋನ್ ತಯಾರಿಕ ಕಂಪನಿಗಳು ತಮ್ಮ ಜನಪ್ರಿಯ ಸ್ಮಾರ್ಟ್‌ಫೋನ್‌ಗಳ ಬೆಲೆಯಲ್ಲಿ ಭಾರೀ ಕಡಿತವನ್ನು ಮಾಡುತ್ತಿದ್ದು, ಈ ಮೂಲಕ ಗ್ರಾಹಕರಿಗೆ ಭರ್ಜರಿ ಆಫರ್ ನೀಡುತ್ತಿದ್ದಾರೆ. ಇದೇ ಮಾದರಿಯಲ್ಲಿ ಲಿನೊವೊ ಒಡೆತನಕ್ಕೆ ಸೇರಿರುವ ಮೊಟೊ ತನ್ನ ಸ್ಮಾರ್ಟ್‌ಫೋನ್ ಬೆಲೆಯಲ್ಲಿ ಭಾರೀ ಕಡಿಮೆಯನ್ನು ಮಾಡಿದೆ.

ಬಜೆಟ್‌ಫೋನ್ ಬೇಡ: ಮೊಟೊ G5S ಸ್ಮಾರ್ಟ್‌ಫೋನ್‌ ಬೆಲೆಯಲ್ಲಿ ಭಾರೀ ಕಡಿತ ಮಾಡಿದೆ ಅಮೆ

ಓದಿರಿ: ಇಯರ್ ಎಂಡ್ ಸೇಲ್‌ನಲ್ಲಿ ಮೊಬೈಲ್ ಖರೀದಿಸುವ ಮುನ್ನ ಒಮ್ಮೆ ಇಲ್ಲಿ ನೋಡಿ...!

ಮಾರುಕಟ್ಟೆಯಲ್ಲಿ ಮೊಟೊ ಈಗಾಗಲೇ ಬಿಡುಗಡೆ ಮಾಡಿರುವ ಮೊಟೊ G5S ಮತ್ತು ಮೊಟೊ G5S ಪ್ಲಸ್ ಸ್ಮಾರ್ಟಫೋನ್‌ಗಳು ಮಾರುಕಟ್ಟೆಯಲ್ಲಿ ಸಾಕಷ್ಟು ಸದ್ದು ಮಾಡುತ್ತಿದ್ದು, ಇದೇ ಮೊದಲ ಬಾರಿಗೆ ಬೆಲೆಯಲ್ಲಿ ಭಾರೀ ಕಡಿತವನ್ನು ಕಂಡಿದೆ. ಈ ಮೂಲಕ ಮತ್ತಷ್ಟು ಗ್ರಾಹಕರನ್ನು ಸೆಳೆಯಲು ಮುಂದಾಗಿದೆ. ಈ ಕುರಿತ ಸಂಫೂರ್ಣ ಮಾಹಿತಿ ಮುಂದಿನಂತೆ ಇದೆ.

ಅಮೆಜಾನ್‌ನಲ್ಲಿ ಆಫರ್:

ಅಮೆಜಾನ್‌ನಲ್ಲಿ ಆಫರ್:

ಈ ಹಿಂದೆ ಮಾರುಕಟ್ಟೆಯಲ್ಲಿ ಮೊಟೊ G5S ರೂ.11,999ಕ್ಕೆ ದೊರೆಯುತ್ತಿತ್ತು, ಇದೇ ಮಾದರಿಯಲ್ಲಿ ಮೊಟೊ G5S ಪ್ಲಸ್ ಸ್ಮಾರ್ಟ್‌ಫೋನ್ ರೂ. 13,999ಕ್ಕೆ ಲಭ್ಯವಿತ್ತು. ಸದ್ಯ ಈ ಎರಡು ಸ್ಮಾರ್ಟ್‌ಫೋನ್‌ಗಳ ಮೇಲೆ ಅಮೆಜಾನ್ ಆಫರ್ ನೀಡಿದ್ದು, ರೂ. 2000 ಕಡಿತವನ್ನು ಮಾಡಿದೆ ಎನ್ನಲಾಗಿದೆ.

ಹೊಸ ಬೆಲೆಗಳು:

ಹೊಸ ಬೆಲೆಗಳು:

ಸದ್ಯ ಅಮೆಜಾನ್‌ನಲ್ಲಿ ಮೊಟೊ G5S ರೂ.9,803ಕ್ಕೆ ದೊರೆಯುತ್ತಿತ್ತು, ಇದೇ ಮಾದರಿಯಲ್ಲಿ ಮೊಟೊ G5S ಪ್ಲಸ್ ಸ್ಮಾರ್ಟ್‌ಫೋನ್ ರೂ. 12,001ಕ್ಕೆ ಮಾರಾಟವಾಗುತ್ತಿದೆ. ಆಗಸ್ಟ್‌ನಲ್ಲಿ ಕಾಣಿಸಿಕೊಂಡಿದ್ದ ಈ ಸ್ಮಾರ್ಟ್‌ಫೋನ್‌ಗಳು ಈಗಾಗಲೇ ಮಾರುಕಟ್ಟೆಯಲ್ಲಿ ಸಾಕಷ್ಟು ಸದ್ದು ಮಾಡುತ್ತಿವೆ.

 ಮೊಟೊ G5S ಸ್ಮಾರ್ಟ್‌ಫೋನ್ ವಿಶೇಷತೆ:

ಮೊಟೊ G5S ಸ್ಮಾರ್ಟ್‌ಫೋನ್ ವಿಶೇಷತೆ:

ಮೊಟೊ G5S ಸ್ಮಾರ್ಟ್‌ಫೋನಿನಲ್ಲಿ FHD ಗುಣಮಟ್ಟದ 5.2 ಇಂಚಿನ ಡಿಸ್‌ಪ್ಲೇಯನ್ನು ಕಾಣಬಹುದಾಗಿದೆ. ಅಲ್ಲದೇ ಸ್ನಾಪ್‌ಡ್ರಾಗನ್ 430 ಪ್ರೋಸೆಸರ್ 3GB RAM ಮತ್ತು 32GB ಇಂಟರ್ನಲ್ ಮೆಮೊರಿಯನ್ನು ನೀಡಲಾಗಿದೆ. ಹಿಂಭಾಗದಲ್ಲಿ 16MP ಕ್ಯಾಮೆರಾ ಮತ್ತು ಮುಂಭಾಗದಲ್ಲಿ 5MP ಕ್ಯಾಮೆರಾವನ್ನು ಅಳವಡಿಸಲಾಗಿದೆ. ಅಲ್ಲದೇ ಎರಡು ಕಡೆಯಲ್ಲಿ LED ಫ್ಲಾಷ್‌ ಲೈಟ್ ಅನ್ನು ನೋಡಬಹುದು. ಆಂಡ್ರಾಯ್ಡ್ ನ್ಯಾಗದಲ್ಲಿ ಕಾರ್ಯನಿರ್ವಹಿಸುವ ಈ ಫೋನ್ 3000mAh ಬ್ಯಾಟರಿಯನ್ನು ಒಳಗೊಂಡಿದೆ.

ಮೊಟೊ G5S ಪ್ಲಸ್ ಸ್ಮಾರ್ಟ್‌ಫೋನ್ ವಿಶೇಷತೆ:

ಮೊಟೊ G5S ಪ್ಲಸ್ ಸ್ಮಾರ್ಟ್‌ಫೋನ್ ವಿಶೇಷತೆ:

ಮೊಟೊ G5S ಪ್ಲಸ್ ಸ್ಮಾರ್ಟ್‌ಫೋನಿನಲ್ಲಿ FHD ಗುಣಮಟ್ಟದ 5.5 ಇಂಚಿನ ಡಿಸ್‌ಪ್ಲೇಯನ್ನು ಕಾಣಬಹುದಾಗಿದೆ. ಅಲ್ಲದೇ ಸ್ನಾಪ್‌ಡ್ರಾಗನ್ 625 ಪ್ರೋಸೆಸರ್ 4GB RAM ಮತ್ತು 64GB ಇಂಟರ್ನಲ್ ಮೆಮೊರಿಯನ್ನು ನೀಡಲಾಗಿದೆ. ಹಿಂಭಾಗದಲ್ಲಿ 13 MP + 13 MP ಡ್ಯುಯಲ್ ಕ್ಯಾಮೆರಾ ಮತ್ತು ಮುಂಭಾಗದಲ್ಲಿ 8 MP ಕ್ಯಾಮೆರಾವನ್ನು ಅಳವಡಿಸಲಾಗಿದೆ. ಅಲ್ಲದೇ ಎರಡು ಕಡೆಯಲ್ಲಿ LED ಫ್ಲಾಷ್‌ ಲೈಟ್ ಅನ್ನು ನೋಡಬಹುದು. ಆಂಡ್ರಾಯ್ಡ್ ನ್ಯಾಗದಲ್ಲಿ ಕಾರ್ಯನಿರ್ವಹಿಸುವ ಈ ಫೋನ್ 3000mAh ಬ್ಯಾಟರಿಯನ್ನು ಒಳಗೊಂಡಿದೆ.

Best Mobiles in India

English summary
Moto G5S, G5S Plus now available with limited period discount. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X