Subscribe to Gizbot

ರೆಡ್‌ಮಿ ನೋಟ್ 5ಗೆ ಸೆಡ್ಡು ಹೊಡೆಯುವ ಫೋನ್‌: ಮೊಟೊದ ಬೊಂಬಾಟ್ ಫೋನ್ ಯಾವುದು..?

Written By:

ಶಿಯೋಮಿ ಮಾರುಕಟ್ಟೆಗೆ ರೆಡ್‌ಮಿ ನೋಟ್ 5 ಮತ್ತು ರೆಡ್‌ಮಿ ನೋಟ್ 5 ಪ್ರೋ ಸ್ಮಾರ್ಟ್‌ಫೋನ್ ಲಾಂಚ್ ಮಾಡಿದ ಮರುಕ್ಷಣವೇ ಲಿನೊವೊ ಒಡೆತನದ ಮೊಟೊರೊಲಾ ನೂತನ ಸ್ಮಾರ್ಟ್‌ಫೋನ್ ವೊಂದನ್ನು ಲಾಂಚ್ ಮಾಡಲು ಸಿದ್ಧತೆ ನಡೆಸಿದ್ದು, ಮೊಟೊ G5 ಸ್ಮಾರ್ಟ್‌ಫೋನ್ ಮುಂದಿನ ತಲೆಮಾರಿನ ಫೋನ್ ಅನ್ನು ಲಾಂಚ್ ಮಾಡಲಿದೆ ಎನ್ನಲಾಗಿದೆ.

ರೆಡ್‌ಮಿ ನೋಟ್ 5ಗೆ ಸೆಡ್ಡು ಹೊಡೆಯುವ ಫೋನ್‌: ಮೊಟೊದ ಬೊಂಬಾಟ್ ಫೋನ್ ಯಾವುದು..?

ಮೊಟೊ G6, ಮೊಟೊ G6 ಪ್ಲಸ್ ಮತ್ತು ಮೊಟೊ G6 ಪ್ಲೇ ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡಿದ್ದು, ಈ ಸ್ಮಾರ್ಟ್‌ಫೋನ್‌ಗಳ ಕುರಿತ ಮಾಹಿತಿಯೂ ಲೀಕ್ ಆಗಿದ್ದು, ಫೆಬ್ರವರಿ 26ಕ್ಕೆ ಈ ಸ್ಮಾರ್ಟ್‌ಫೋನ್‌ಗಳು ಲಾಂಚ್ ಆಗಲಿದೆ. ಈ ಹಿನ್ನಲೆಯಲ್ಲಿ ಮೊಟೊ G6 ಕುರಿತ ಮಾಹಿತಿಯೂ ಮುಂದಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಒಟ್ಟು ಮೂರು ಫೋನ್‌ಗಳು ಲಾಂಚ್

ಒಟ್ಟು ಮೂರು ಫೋನ್‌ಗಳು ಲಾಂಚ್

ಲಿನೊವೊ ಒಡೆತನದ ಮೊಟೊರೊಲಾ ಫೆಬ್ರವರಿ 26ಕ್ಕೆ ಒಟ್ಟು ಮೂರು ಫೋನ್ ಗಳನ್ನು ಲಾಂಚ್ ಮಾಡಲಿದ್ದು, ಈಗಾಗಲೇ ಮಾರುಕಟ್ಟೆಯಲ್ಲಿರುವ ಸ್ಮಾರ್ಟ್‌ಫೋನ್‌ಗಳಿಗೆ ಭರ್ಜರಿ ಸ್ಪರ್ಧೆಯನ್ನು ನೀಡಲಿದೆ ಎಂದು ಊಹಿಸಲಾಗಿದೆ.

ಮೊಟೊ G6 ಸರಣಿ:

ಮೊಟೊ G6 ಸರಣಿ:

ಮೊಟೊ G6 ಸರಣಿಯ ಮೊಟೊ G6, ಮೊಟೊ G6 ಪ್ಲಸ್ ಮತ್ತು ಮೊಟೊ G6 ಪ್ಲೇ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಪರಿಚಯಗೊಳ್ಳಲಿದ್ದು, ಮಧ್ಯಮ ಸರಣಿಯ ಸ್ಮಾರ್ಟ್‌ಫೋನ್‌ಗಳಿಗೆ ಇದು ಭಾರೀ ಸ್ಪರ್ಧೇಯನ್ನು ನೀಡಲಿದೆ. ಮೊಬೈಲ್ ವರ್ಲ್ಡ್ ಕಾಂಗ್ರೆಸ್ ಸಮಾವೇಶದಲ್ಲಿ ಈ ಫೋನ್ ಬಿಡುಗಡೆಯಾಗಲಿದೆ.

ಫುಲ್ ಸ್ಕ್ರಿನ್ ಡಿಸ್‌ಪ್ಲೇ:

ಫುಲ್ ಸ್ಕ್ರಿನ್ ಡಿಸ್‌ಪ್ಲೇ:

ಈ ಮೂರು ಸ್ಮಾರ್ಟ್‌ಫೋನ್‌ಗಳಲ್ಲಿ ಫುಲ್ ಸ್ಕ್ರಿನ್ ಡಿಸ್‌ಪ್ಲೇಯನ್ನು ಕಾಣಬಹುದಾಗಿದ್ದು, 18:9 ಅನುಪಾತದ ಡಿಸ್‌ಪ್ಲೇ ಇದಾಗಲಿದೆ. ಆಂಡ್ರಾಯ್ಡ್ 8.0 ನಲ್ಲಿ ಕಾರ್ಯನಿರ್ವಹಿಸಲಿದ್ದು, FHD ಗುಣಮಟ್ಟದಾಗಿದೆ. ಬಳಕೆದಾರರಿಗೆ ಹೊಸ ಅನುಭವವು ನೀಡಲಿದೆ.

ಮೊಟೊ ಪ್ಲಸ್ ಸ್ಮಾರ್ಟ್‌ಫೋನ್:

ಮೊಟೊ ಪ್ಲಸ್ ಸ್ಮಾರ್ಟ್‌ಫೋನ್:

ಮೊಟೊ ಪ್ಲಸ್ ಸ್ಮಾರ್ಟ್‌ಫೋನ್ ನಲ್ಲಿ 5.7 ಇಂಚಿನ FHD + ಗುಣಮಟ್ಟದ ಡಿಸ್‌ಪ್ಲೇಯನ್ನು ಕಾಣಬಹುದಾಗಿದೆ. ಸ್ನಾಪ್‌ಡ್ರಾಗನ್ 450 ಪ್ರೋಸೆಸರ್ ಅನ್ನು ಇದರಲ್ಲಿ ಅಳವಡಿಸಲಾಗಿದ್ದು, 3GB/4GB RAM ಅನ್ನು ನೀಡಲಾಗಿದೆ. ಅಲ್ಲದೇ 32GB/ 64GB ಇಂಟರ್‌ನಲ್ ಮೆಮೊರಿ ಸಹ ಇದರಲ್ಲಿದೆ. 12MP+5MP ಡ್ಯುಯಲ್ ಕ್ಯಾಮೆರಾ ಸೆಟಪ್ ಹಾಗೂ ಮುಂಭಾಗದಲ್ಲಿ 16MP ಕ್ಯಾಮೆರಾವನ್ನು ಕಾಣಬಹುದಾಗಿದೆ. 3000mAh ಬ್ಯಾಟರಿ ಸಹ ಇದರಲ್ಲಿದೆ.

ಮೊಟೊ G6 ಪ್ಲಸ್ ಸ್ಮಾರ್ಟ್‌ಫೋನ್:

ಮೊಟೊ G6 ಪ್ಲಸ್ ಸ್ಮಾರ್ಟ್‌ಫೋನ್:

ಮೊಟೊ G6 ಪ್ಲಸ್ ಸ್ಮಾರ್ಟ್‌ಫೋನ್ ನಲ್ಲಿ 5.93 ಇಂಚಿನ FHD + ಗುಣಮಟ್ಟದ ಡಿಸ್‌ಪ್ಲೇಯನ್ನು ಕಾಣಬಹುದಾಗಿದೆ. ಸ್ನಾಪ್‌ಡ್ರಾಗನ್ 630 ಪ್ರೋಸೆಸರ್ ಅನ್ನು ಇದರಲ್ಲಿ ಅಳವಡಿಸಲಾಗಿದ್ದು, 3GB/4GB/6GB RAM ಅನ್ನು ನೀಡಲಾಗಿದೆ. ಅಲ್ಲದೇ 32GB/ 64GB ಇಂಟರ್‌ನಲ್ ಮೆಮೊರಿ ಸಹ ಇದರಲ್ಲಿದೆ. 12MP+5MP ಡ್ಯುಯಲ್ ಕ್ಯಾಮೆರಾ ಸೆಟಪ್ ಹಾಗೂ ಮುಂಭಾಗದಲ್ಲಿ 16MP ಕ್ಯಾಮೆರಾವನ್ನು ಕಾಣಬಹುದಾಗಿದೆ. 3200mAh ಬ್ಯಾಟರಿ ಸಹ ಇದರಲ್ಲಿದೆ.

ಮೊಟೊ G6 ಪ್ಲೇ ಸ್ಮಾರ್ಟ್‌ಫೋನ್:

ಮೊಟೊ G6 ಪ್ಲೇ ಸ್ಮಾರ್ಟ್‌ಫೋನ್:

ಮೊಟೊ G6 ಪ್ಲೇ ಸ್ಮಾರ್ಟ್‌ಫೋನ್ ನಲ್ಲಿ 5.7 ಇಂಚಿನ HD ಗುಣಮಟ್ಟದ ಡಿಸ್‌ಪ್ಲೇಯನ್ನು ಕಾಣಬಹುದಾಗಿದೆ. ಸ್ನಾಪ್‌ಡ್ರಾಗನ್ 430 ಪ್ರೋಸೆಸರ್ ಅನ್ನು ಇದರಲ್ಲಿ ಅಳವಡಿಸಲಾಗಿದ್ದು, 2GB/3GB RAM ಅನ್ನು ನೀಡಲಾಗಿದೆ. ಅಲ್ಲದೇ 16GB/32GB ಇಂಟರ್‌ನಲ್ ಮೆಮೊರಿ ಸಹ ಇದರಲ್ಲಿದೆ. 4000mAh ಬ್ಯಾಟರಿ ಸಹ ಇದರಲ್ಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Moto G6, Moto G6 Plus and Moto G6 Play spotted. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot