Subscribe to Gizbot

ಫಸ್ಟ್‌ ಸೇಲ್ ನಲ್ಲಿ ನೋಟ್ 5 ಸೋಲ್ಡ್‌ ಔಟ್: ಮುಂದಿನ ಸೇಲ್ ಎಂದು..?

Written By:

ಶಿಯೋಮಿ ಅಭಿಮಾನಿಗಳು ತೀವ್ರ ಕುತೂಹಲದಿಂದ ಕಾಯುತ್ತಿದ್ದ ರೆಡ್‌ಮಿ ನೋಟ್ 5 ಇಂದು ಮೊದಲ ಬಾರಿಗೆ ಸೇಲ್‌ನಲ್ಲಿ ಕಾಣಿಸಿಕೊಂಡಿತ್ತು. ರೆಡ್‌ಮಿ ನೋಟ್ 5 ಮತ್ತು ನೋಟ್ 5 ಪ್ರೋ ಸ್ಮಾರ್ಟ್‌ಫೋನ್ ಮೊದಲ ಸೇಲ್‌ನಲ್ಲಿ ಸೋಲ್ಡ್‌ ಔಟ್ ಆಗಿದೆ ಎನ್ನಲಾಗಿದೆ. ಇದರೊಂದಿಗೆ ಲಾಂಚ್ ಆಗಿದ್ದ Mi LED TV 4 ಸಹ ಔಟ್ ಆಫ್ ಸ್ಟಾಕ್ ಆಗಿದ್ದು, ಮತ್ತೊಮ್ಮೆ ಸೇಲ್‌ನಲ್ಲಿ ಕಾಣಿಸಿಕೊಳ್ಳಲಿದೆ ಎನ್ನಲಾಗಿದೆ. ಫ್ಲಿಪ್‌ಕಾರ್ಟ್‌ ಮತ್ತು ಮಿ.ಕಾಮ್‌ನಲ್ಲಿ ಇಂದು ಸೇಲ್ ನಡೆದಿತ್ತು.

ಫಸ್ಟ್‌ ಸೇಲ್ ನಲ್ಲಿ ನೋಟ್ 5 ಸೋಲ್ಡ್‌ ಔಟ್: ಮುಂದಿನ ಸೇಲ್ ಎಂದು..?

ರೆಡ್‌ಮಿ ನೋಟ್ 5 ಮತ್ತು ನೋಟ್ 5 ಪ್ರೋ ಸ್ಮಾರ್ಟ್‌ಫೋನ್ ಮತ್ತೇ ಫೆಬ್ರವರಿ 28 ರಂದು ಮತ್ತೊಮ್ಮೆ ಸೇಲ್‌ನಲ್ಲಿ ಕಾಣಿಸಿಕೊಳ್ಳಲಿದೆ, ಇದಕ್ಕೂ ಒಂದು ದಿನ ಮುಂಚಿತವಾಗಿ. ಫೆಬ್ರವರಿ 27 ರಂದು Mi LED TV 4 ಸೇಲ್‌ನಲ್ಲಿ ಲಭ್ಯವಿರಲಿದೆ. ಮೊದಲನೇ ಸೇಲ್‌ನಲ್ಲಿ ಇವುಗಳನ್ನು ಕೊಂಡುಕೊಳ್ಳಲು ಸಾಧ್ಯವಾಗದವರು ಎರಡನೇ ಸೇಲ್‌ನಲ್ಲಿ ಪ್ರಯತ್ನಿಸಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Redmi Note 5 ಬಿಡುಗಡೆಗೆ..! ಬೆಸ್ಟ್, ಬಜೆಟ್, ಬೊಂಬಾಟ್
ರೆಡ್‌ಮಿ ನೋಟ್ 5 ಸ್ಮಾರ್ಟ್‌ಫೋನ್:

ರೆಡ್‌ಮಿ ನೋಟ್ 5 ಸ್ಮಾರ್ಟ್‌ಫೋನ್:

ರೆಡ್‌ಮಿ ನೋಟ್ 5 ಸ್ಮಾರ್ಟ್‌ಫೋನಿನಲ್ಲಿ 5.99 ಇಂಚಿನ FHD ಡಿಸ್‌ಪ್ಲೇ, 5 MP ಸೆಲ್ಪಿ ಕ್ಯಾಮೆರಾ, 12 MP ಹಿಂಬದಿ ಕ್ಯಾಮೆರಾ, ವೇಗದ ಸ್ನ್ಯಾಪ್‌ಡ್ರಾಗನ್ 625 ಪ್ರೊಸೆಸರ್, ದೊಡ್ಡದಾದ 4000mAh ಬ್ಯಾಟರಿಯನ್ನು ಕಾಣಬಹುದಾಗಿದೆ. ಶಿಯೋಮಿ ರೆಡ್‌ ಮಿ ನೋಟ್ 5 ಸ್ಮಾರ್ಟ್‌ಫೋನ್ ಒಟ್ಟು ಎರಡು ಆವೃತ್ತಿಯಲ್ಲಿ ಕಾಣಿಸಿಕೊಂಡಿದೆ. 3GB RAM/ 32GB ಮೆಮೊರಿಯ ಹೊಂದಿರುವ ಸ್ಮಾರ್ಟ್‌ಫೋನ್ ಬೆಲೆ ಕೇವಲ ರೂ.9,999 ಆಗಿದ್ದು, 4GB RAM /64GB ಮೆಮೊರಿಯ ಫೋನ್ ರೂ.11,999ಕ್ಕೆ ದೊರೆಯುತ್ತಿದೆ.

ರೆಡ್‌ಮಿ ನೋಟ್ 5 ಪ್ರೋ ಸ್ಮಾರ್ಟ್‌ಫೋನ್:

ರೆಡ್‌ಮಿ ನೋಟ್ 5 ಪ್ರೋ ಸ್ಮಾರ್ಟ್‌ಫೋನ್:

5.99 ಇಂಚಿನ FHD ಡಿಸ್‌ಪ್ಲೇ, ಸ್ನಾಪ್‌ಡ್ರಾಗನ್ 636 ಪ್ರೋಸೆಸರ್, 6 GB RAM, 64GB ಮೆಮೊರಿ, ಡ್ಯುಯಲ್ ಕ್ಯಾಮೆರಾ, ಫೇಸ್‌ಅನ್ ಲಾಕ್ ನಂತಹ ಹೈ ಎಂಡ್ ಫೀಚರ್ಸ್ ಹೊಂದಿರುವ ಶಿಯೋಮಿ ರೆಡ್‌ ಮಿ ನೋಟ್ 5 ಪ್ರೊ ಸ್ಮಾರ್ಟ್‌ಫೋನ್ ಕೇವಲ ರೂ.16,999ಕ್ಕೆ ಬಿಡುಗಡೆಯಾಗಿದೆ. 4GB RAM ಮತ್ತು 64GB ಮೆಮೊರಿಯ ಆವೃತ್ತಿ ರೂ. 13,999ಕ್ಕೆ ದೊರೆಯುತ್ತಿದೆ.

ಆಫರ್ ಸಹ ಇದೆ:

ಆಫರ್ ಸಹ ಇದೆ:

ಶಿಯೋಮಿ ರೆಡ್‌ ಮಿ ನೋಟ್ 5, ಶಿಯೋಮಿ ರೆಡ್ ನೋಟ್ 5 ಪ್ರೊ ಸ್ಮಾರ್ಟ್‌ಫೋನ್‌ಗಳ ಮೇಲೆ ಜಿಯೋ ಆಫರ್ ನೀಡಿದ್ದು, ರೂ.2200 ಗಳವರೆಗೂ ಕ್ಯಾಷ್ ಬ್ಯಾಕ್ ಹಾಗೂ 100% ಹೆಚ್ಚುವರಿ 4G ಜಿಯೋ ಡೇಟಾವನ್ನು ನೀಡಲಿದೆ.

Mi LED TV 4 ಸ್ಮಾರ್ಟ್‌ ಟಿವಿ:

Mi LED TV 4 ಸ್ಮಾರ್ಟ್‌ ಟಿವಿ:

Mi LED TV 4 ಸ್ಮಾರ್ಟ್ ಟಿವಿಯಲ್ಲಿ 2GB RAM ನೊಂದಿಗೆ 8GB ಇಂಟರ್ ನಲ್ ಮೆಮೊರಿಯನ್ನು ಕಾಣಬಹುದಾಗಿದೆ. ಬ್ಲೂಟೂತ್ ಕನೆಕ್ಟ್ ಮಾಡಿಕೊಳ್ಳುವ ಅವಕಾಶ ನೀಡಿದ್ದು, Wi Fi ನೊಂದಿಗೆ ಇಂಟರ್ನೆಟ್ ಸೇವೆಯನ್ನು ಪಡೆಯಬಹುದಾಗಿದೆ. 55 ಇಂಚಿನ Mi LED TV 4 ಸ್ಮಾರ್ಟ್ ಟಿವಿ ವಿಶ್ವದ ಅತೀ ತಳುವಾದ LED TV ಎನ್ನುವ ಖ್ಯಾತಿಗೆ ಪಾತ್ರವಾಗಿದೆ. ಇದು 4.9mm ನಷ್ಟು ತೆಳುವಾಗಿದೆ. 4K ಗುಣಮಟ್ಟದ ಈ ಟಿವಿ ರೂ. 39,999ಕ್ಕೆ ದೊರೆಯಲಿದೆ.

ಎಲ್ಲಿ ಲಭ್ಯ:

ಎಲ್ಲಿ ಲಭ್ಯ:

ಫ್ಲಿಪ್‌ಕಾರ್ಟ್ ಹಾಗೂ ಮಿ.ಕಾಮ್‌ಗಳಲ್ಲಿ ಇದೇ ಫೆಬ್ರವರಿ 27ರಂದು Mi LED TV 4 ಮತ್ತು ಫೆಬ್ರವರಿ 28ರಂದು ರೆಡ್‌ ಮಿ ನೋಟ್ 5, ರೆಡ್ ನೋಟ್ 5 ಪ್ರೊ ಸ್ಮಾರ್ಟ್‌ಫೋನ್‌ಗಳು ದೊರೆಯಲಿದೆ ಎನ್ನಲಾಗಿದೆ. ಆಫ್ ಲೈನ್ ಮಿ ಹೋಮ್ ಮಳಿಗೆಗಳಲ್ಲಿಯೂ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Redmi Note 5, Redmi Note 5 Pro next sale. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot