ಎಂಟ್ರಿ ಕೊಡಲಿದೆ ವಿಶ್ವದ ಮೊದಲ 'ಫೋಲ್ಡೆಬಲ್ 5G' ಸ್ಮಾರ್ಟ್‌ಫೋನ್.! ಯಾವುದು ಗೊತ್ತಾ?

|

ಪ್ರತೀ ವರ್ಷ ಬಹುತೇಕ ಎಲ್ಲಾ ಸ್ಮಾರ್ಟ್‌ಫೋನ್‌ ಕಂಪನಿಗಳು ನೂತನ ಫೀಚರ್ಸ್‌ಗಳನ್ನು ಗ್ರಾಹಕರಿಗೆ ಪರಿಚಯಿಸುತ್ತಲೆ ಸಾಗಿವೆ. ಅದೇ ರೀತಿ ಈ ವರ್ಷವೂ ಗ್ರಾಹಕರಿಗೆ ಇನ್ನೂ ಏನಾದರೂ ಹೊಸತನವನ್ನು ಸ್ಮಾರ್ಟ್‌ಫೋನ್‌ಗಳಲ್ಲಿ ಪರಿಚಯಿಸಬೇಕು ಎನ್ನುವ ಉದ್ದೇಶ ಹೊಂದಿರುವ ಮೊಬೈಲ್ ತಯಾರಿಕಾ ಕಂಪನಿಗಳು, ಅದಕ್ಕಾಗಿ ಪೂರ್ವತಯಾರಿಯನ್ನು ಸಹ ಮಾಡಿಕೊಂಡಿವೆ. ಹೌದು ಈ ವರ್ಷ ಮಡಚುವ ಸ್ಮಾರ್ಟ್‌ಫೋನ್‌ಗಳ ಎಂಟ್ರಿ ಕೊಡಲಿವೆ.

 ಎಂಟ್ರಿ ಕೊಡಲಿದೆ ವಿಶ್ವದ ಮೊದಲ 'ಫೋಲ್ಡೆಬಲ್ 5G' ಸ್ಮಾರ್ಟ್‌ಫೋನ್.!

ಪ್ರಮುಖ ಮೊಬೈಲ್ ಕಂಪನಿಗಳು ಈ ವರ್ಷ ಮಡಚುವ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುವುದಾಗಿ ಹೇಳಿದ್ದು, ಅದರಲ್ಲಿ ಚೀನಾ ಮೂಲದ ಹುವಾಯಿ ಕಂಪನಿ ಸಹ ಒಂದು. ಈಗಾಗಲೇ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿರುವ ಹುವಾಯಿ ಸಂಸ್ಥೆ, ಇದೇ ಫೆಬ್ರುವರಿ ಅಂತ್ಯದೊಳಗೆ ತನ್ನ ಬಹುನಿರೀಕ್ಷಿತ ಮಡಚುವ ಸ್ಮಾರ್ಟ್‌ಫೋನ್‌ ಒಂದನ್ನು ಮಾರುಕಟ್ಟೆಗೆ ಪರಿಚಯಿಸುವ ಸಾಧ್ಯತೆಗಳು ದಟ್ಟವಾಗಿವೆ ಎಂದು ಹೇಳಲಾಗುತ್ತಿದೆ.

 ಎಂಟ್ರಿ ಕೊಡಲಿದೆ ವಿಶ್ವದ ಮೊದಲ 'ಫೋಲ್ಡೆಬಲ್ 5G' ಸ್ಮಾರ್ಟ್‌ಫೋನ್.!

ಹುವಾಯಿ ಇದೇ ಫೆಬ್ರುವರಿ ತಿಂಗಳಲ್ಲಿ ಫೋಲ್ಡೆಬಲ್ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದ್ದೆ ಆದರೆ ಮೊಟ್ಟ ಮೊದಲ ಮಡಚುವ ಸ್ಮಾರ್ಟ್‌ಫೋನ್‌ ಮಾರುಕಟ್ಟೆಗೆ ಪರಿಚಯಿಸಿದ ಪ್ರಸಂಶೆಗೆ ಹುವಾಯಿ ಕಂಪನಿ ಭಾಜನವಾಗಲಿದೆ. ಹಾಗಾದರೇ ಈ ವರ್ಷ ಫೋಲ್ಡೆಬಲ್ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಲು ತಯಾರಾಗುತ್ತಿರುವ ಕೇಲವು ಪ್ರಮುಖ ಸ್ಮಾರ್ಟ್‌ಫೋನ್‌ ಕಂಪನಿಗಳು ಯಾವವು ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಹುವಾಯಿ ಫೋಲ್ಡೆಬಲ್ ಸ್ಮಾರ್ಟ್‌ಫೋನ್‌ ಹೇಗಿರಲಿದೆ.?

ಹುವಾಯಿ ಫೋಲ್ಡೆಬಲ್ ಸ್ಮಾರ್ಟ್‌ಫೋನ್‌ ಹೇಗಿರಲಿದೆ.?

ಹುವಾಯಿ ಸಂಸ್ಥೆಯ ಬರಲಿರುವ ಮಡಚುವ ಸ್ಮಾರ್ಟ್‌ಫೋನ್‌ ನೋಡಲು ಸ್ಮಾರ್ಟ್‌ಫೋನ್‌ ತರಹವೇ ಕಾಣಿಸಲಿದ್ದು, ಅತೀ ಮನಮೋಹಕ ಡಿಸೈನ್ ಹೊಂದಿರಲಿದೆ. ಒಟ್ಟು 8 ಇಂಚಿನ್ ಡಿಸ್‌ಪ್ಲೇ ಹೊಂದಿರಲದೆ. ಅದನ್ನು ಮಡಚಿದಾಗ 5 ಇಂಚಿನಲ್ಲಿ ಕಾಣಿಸಿಕೊಳ್ಳಲಿದೆ ಎನ್ನಲಾಗುತ್ತಿದೆ. ಈ ಮಡಚುವ ಸ್ಮಾರ್ಟ್‌ಫೋನ್ 5G ನೆಟವರ್ಕಗೆ ಸಹಕರಿಸಲಿದೆ ಎಂದು ತಿಳಿದು ಬಂದಿದೆ. ಹಾಗಾದರೇ ಇತರೆ ಯಾವ ಕಂಪನಿಗಳು ಮಡಚುವ ಸ್ಮಾರ್ಟ್‌ಫೋನ್‌ ಗ್ರಾಹಕರಿಗೆ ಪರಿಚಯಿಸಲಿವೆ ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ ಎಕ್ಸ್

ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ ಎಕ್ಸ್

ತನ್ನ ಗುಣಮಟ್ಟದ ಉತ್ಪನ್ನಗಳಿಂದಲೇ ಜನಪ್ರಿಯ ಆಗಿರುವ ಸ್ಯಾಮ್‌ಸಂಗ್ ಗ್ರಾಹಕರಿಗೆ ಅತೀ ನೂತನ ಫೀಚರ್ಸ್‌ಗಳನ್ನು ಪರಿಚಯಿಸುವುದರಲ್ಲಿ ಹಿಂದೆ ಬಿದ್ದಿಲ್ಲ. ಸ್ಯಾಮ್‌ಸಂಗ್ ಈ ಮೊದಲೇ ಫೋಲ್ಡೆಬಲ್ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡುವ ಬಗ್ಗೆ ಸುಳಿವು ನೀಡಿತ್ತು. ಹೀಗಾಗಿ ಮಡಚುವ ಸ್ಮಾರ್ಟ್‌ಫೋನ್‌ ಪರಿಚಯಿಸುವ ಕಂಪನಿಗಳ ಲಿಸ್ಟ್‌ನಲ್ಲಿ ಸ್ಯಾಮ್‌ಸಂಗ್ ಸಹ ಸೇರಿಕೊಂಡಿದೆ.

ಹೇಗಿರಲಿದೆ ಗ್ಯಾಲ್ಯಾಕ್ಸಿ ಎಕ್ಸ್

ಹೇಗಿರಲಿದೆ ಗ್ಯಾಲ್ಯಾಕ್ಸಿ ಎಕ್ಸ್

ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ ಎಕ್ಸ್ ಫೋಲ್ಡೆಬಲ್ ಸ್ಮಾರ್ಟ್‌ಫೋನ್‌ ತಿಳುವಾದ ಬಾಹ್ಯಾ ರಚನೆಯನ್ನು ಹೊಂದಿರಲಿದ್ದು, ಸ್ಮಾರ್ಟ್‌ಫೋನ್ ತೆರೆದಾಗ 7.29 ಇಂಚಿನಲ್ಲಿ ಡಿಸ್‌ಪ್ಲೇ ಕಾಣಿಸಿಕೊಳ್ಳಲಿದೆ ಮತ್ತು ಫೋನ್‌ ಮಡಚಿದಾಗ 3.5 ಇಂಚಿನಲ್ಲಿರಲಿದೆ. ಈ ವರ್ಷದಲ್ಲಿಯೇ ಸ್ಯಾಮ್‌ಸಂಗ್‌ನ ಮಡಚುವ ಸ್ಮಾರ್ಟ್‌ಪೋನ್‌ ಮಾರುಕಟ್ಟೆಗೆ ಬರುವ ಸಾಧ್ಯತೆಗಳು ಹೆಚ್ಚಿವೆ ಎಂದು ಹೇಳಲಾಗುತ್ತಿದೆ.

ಆಪಲ್ ಫೋಲ್ಡೆಬಲ್ ಸ್ಮಾರ್ಟ್‌ಫೋನ್‌

ಆಪಲ್ ಫೋಲ್ಡೆಬಲ್ ಸ್ಮಾರ್ಟ್‌ಫೋನ್‌

ಜನಪ್ರಿಯ ಐಫೋನ್ ತಯಾರಿಕಾ ಕಂಪನಿ ಆಪಲ್ ತನ್ನ ಗ್ರಾಹಕ ವರ್ಗಕ್ಕೆ ಹೊಸತನವನ್ನು ಪರಿಚಯಿಸುವಲ್ಲಿ ಸದಾ ಮುಂದೆ. ಆಪಲ್ ಇದೀಗ ಫೋಲ್ಡೆಬಲ್ ಸ್ಮಾರ್ಟ್‌ಫೋನ್‌ ಒಂದನ್ನು ಮಾರುಕಟ್ಟೆಗೆ ಪರಿಚಯಿಸುವ ಸಿದ್ಧತೆಯಲ್ಲಿದೆ. ಈ ಫೋಲ್ಡೆಬಲ್ ಸ್ಮಾರ್ಟ್‌ಫೋನ್‌ನಲ್ಲಿ ಫ್ಲೆಕ್ಸಿಬಲ್ ಡಿಸ್‌ಪ್ಲೇ ಇರಲಿದೆ ಎಂದು ಹೇಳಲಾಗುತ್ತಿದೆ. 2020 ರ ಆರಂಭದಲ್ಲಿ ಮಾರುಕಟ್ಟೆಗೆ ಪ್ರವೇಶ ಪಡೆಯಲಿದೆ ಎನ್ನಲಾಗುತ್ತಿದೆ.

ಆಪಲ್ ಫೋಲ್ಡೆಬಲ್ ಸ್ಮಾರ್ಟ್‌ಫೋನ್ ಹೇಗಿರಲಿದೆ?

ಆಪಲ್ ಫೋಲ್ಡೆಬಲ್ ಸ್ಮಾರ್ಟ್‌ಫೋನ್ ಹೇಗಿರಲಿದೆ?

ಆಪಲ್ ಫೋಲ್ಡೆಬಲ್ ಸ್ಮಾರ್ಟ್‌ಫೋನ್‌ ನೋಡಲು ಲ್ಯಾಪ್‌ಟಾಪ್ ಮಾದರಿಯಂತೆ ಕಂಡುಬರಲಿದ್ದು, ಆದರೆ ಸ್ಮಾರ್ಟ್‌ಫೋನ್‌ ಆಕಾರವನ್ನೆ ಹೊಂದಿರುತ್ತದೆ. ಕಾರ್ಯದಕ್ಷತೆ ವೇಗವಾಗಿರಲು 8GB RAM ನೀಡುವ ಸಾಧ್ಯತೆಗಳಿದ್ದು, ಇದರೊಂದಿಗೆ ದೀರ್ಘ ಬಾಳಿಕೆಯ ಪವರ್‌ಫುಲ್ ಬ್ಯಾಟರಿ ಸಹ ಈ ಫೋಲ್ಡೆಬಲ್ ಫೋನ್ ಹೊಂದಿರಲಿದೆ ಎಂದು ಹೇಳಲಾಗುತ್ತಿದೆ.

ಮೊಟೊರೊಲಾ ರೇಜರ್

ಮೊಟೊರೊಲಾ ರೇಜರ್

ಮೊಟೊರೊಲಾ ಕಂಪನಿಯು ಈಗಾಗಲೇ ಮೊಟೊ ಹೆಸರಿನ ಸ್ಮಾರ್ಟ್‌ಫೋನ್‌ ಸರಣಿಯ ಮೂಲಕ ಮನೆ ಮಾತಾಗಿದ್ದು, ಮೊಟೊ ರೇಜರ್ ಹೆಸರಿನ ಫೋಲ್ಡೆಬಲ್ ಸ್ಮಾರ್ಟ್‌ಫೋನ್‌ ಒಂದನ್ನು ಮಾರುಕಟ್ಟೆಗೆ ಪರಿಚಯಿಸುವುದಾಗಿ ಇತ್ತೀಚಿಗೆ ಸುದ್ದಿ ಮಾಡಿತ್ತು. ಹೌದು, ಈ ವರ್ಷ ಮೊಟೊ ಕಂಪನಿಯು ಸಹ ತನ್ನ ಬಹುನಿರೀಕ್ಷಿತ 'ರೇಜರ್' ಫೋಲ್ಡೆಬಲ್ ಸ್ಮಾರ್ಟ್‌ಫೋನ್‌ ಅನ್ನು ಗ್ರಾಹಕರಿಗೆ ಪರಿಚಯಿಸುವುದು ಎನ್ನಲಾಗುತ್ತಿದೆ.

ಮೊಟೊ ರೇಜರ್ ಲುಕ್

ಮೊಟೊ ರೇಜರ್ ಲುಕ್

ಮೊಟೊರೊಲಾದ ಬಹುನಿರೀಕ್ಷಿತ ರೇಜರ್ ಫೋಲ್ಡೆಬಲ್ ಸ್ಮಾರ್ಟ್‌ಫೋನ್‌ ಎರಡು ಕ್ಯಾಮೆರಾಗಳನ್ನು ಹೊಂದಿರಲಿದ್ದು, ಗ್ಲಾಸಿ ಲುಕ್‌ನಲ್ಲಿ ಬರಲಿದೆ. ಫೋಲ್ಡ್‌ ತೆರೆದಾಗ 7 ಇಂಚಿನಲ್ಲಿರಲಿದ್ದು, ಫೋಲ್ಡ್ ಮಡಚಿದಾಗ 4 ಇಂಚಿನಲ್ಲಿ ಕಾಣಿಸಿಕೊಳ್ಳಲಿದೆ. ಎರಡು ಡಿಸ್‌ಪ್ಲೇ ಇರಲಿದ್ದು, ಮಡಚಿದಾಗ ಮೇಲೆ ಇರುವ ಚಿಕ್ಕ ಡಿಸ್‌ಪ್ಲೇಯಲ್ಲಿ ನೋಟಿಫಿಕೇಶನ್‌ಗಳನ್ನು ನೋಡಬಹುದು.

ಎಲ್‌ಜಿ ಫೋಲ್ಡೆಬಲ್ ಸ್ಮಾರ್ಟ್‌ಫೋನ್

ಎಲ್‌ಜಿ ಫೋಲ್ಡೆಬಲ್ ಸ್ಮಾರ್ಟ್‌ಫೋನ್

ಜನಪ್ರಿಯ ಎಲೆಕ್ಟ್ರಾನಿಕ್ಸ್ ಕಂಪನಿ ಎಲ್‌ಜಿ ಈಗಾಗಲೇ ಅನೇಕ ಹೊಸತನಗಳನ್ನು ಸ್ಮಾರ್ಟ್‌ಟಿವಿಗಳ ಲೋಕದಲ್ಲಿ ಪರಿಚಯಿಸಿ ಗ್ರಾಹಕರಿಂದ ಪ್ರಶಂಸೆ ಪಡೆದಿದ್ದು, ಸ್ಮಾರ್ಟ್‌ಫೋನ್‌ಗಳಲ್ಲಿಯೂ ಸಹ ಹೊಸ ಫೀಚರ್ಸ್‌ಗಳನ್ನು ಪರಿಚಯಿಸಿ ಗಮನಸೆಳೆದಿದೆ. ಎಲ್‌ಜಿ ಕಂಪನಿ ಸಹ ಫೋಲ್ಡೆಬಲ್ ಸ್ಮಾರ್ಟ್‌ಫೋನ್‌ ಬಿಡುಗಡೆ ಘೋಷಿಸಿದ್ದು, ಆದರೆ ಹೆಚ್ಚಿನ ಮಾಹಿತಿಯನ್ನು ಬಿಡುಗಡೆ ಮಾಡಿಲ್ಲ. ಸ್ಮಾರ್ಟ್‌ಫೋನ್‌ ಪ್ರಿಯರು ಈ ವರ್ಷದಲ್ಲಿ ನಿರೀಕ್ಷಿಸಬಹುದಾಗಿದೆ.

ಶಿಯೋಮಿ ಫೋಲ್ಡೆಬಲ್ ಸ್ಮಾರ್ಟ್‌ಫೋನ್

ಶಿಯೋಮಿ ಫೋಲ್ಡೆಬಲ್ ಸ್ಮಾರ್ಟ್‌ಫೋನ್

ಚೀನಾ ಮೂಲದ ಜನಪ್ರಿಯ ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿ ಶಿಯೋಮಿ ಅತ್ಯುತ್ತಮ ಫೀಚರ್ಸ್‌ಗಳನ್ನು ಸ್ಮಾರ್ಟ್‌ಫೋನ್‌ಗಳಲ್ಲಿ ಪರಿಚಯಿಸಿ ಭಾರೀ ಸದ್ದು ಮಾಡಿದ್ದು, ಇತ್ತೀಚಿಗಷ್ಟೆ ತನ್ನ ಬರಲಿರುವ ಫೋಲ್ಡೆಬಲ್ ಸ್ಮಾರ್ಟ್‌ಫೋನ್‌ ಕುರಿತ ವಿಡಿಯೋ ಒಂದರಲ್ಲಿ ತೋರಿಸಿತ್ತು. ಹೀಗಾಗಿ ಶಿಯೋಮಿಯು ಸಹ ಈ ವರ್ಷದ ಅಂತ್ಯದೊಳಗೆ ಫೋಲ್ಡೆಬಲ್ ಸ್ಮಾರ್ಟ್‌ಫೋನ್‌ ಮಾರುಕಟ್ಟೆಗೆ ಪರಿಚಯಿಸುವ ಸಾಧ್ಯತೆಗಳು ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ.

Best Mobiles in India

English summary
Huawei in a tweet announced that it will be holding an event at the upcoming Mobile World Congres 2019 on February 24. It is expected that the company may launch its 5G foldable smartphone.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X