ಎಲ್‌ಜಿ ವಿ40 ಸ್ಮಾರ್ಟ್‌ಫೋನ್ ಫೀಚರ್‌ಗಳ ಪಟ್ಟಿ ಬಗ್ಗೆ ಗುಸು-ಗುಸು..!

  By GizBot Bureau
  |

  ಸದ್ಯ ಅಂತರ್ಜಾಲದಲ್ಲಿ ಎಲ್ ಜಿಯ ಮುಂಬರುವ ಫ್ಲ್ಯಾಗ್ ಶಿಪ್ ಡಿವೈಸ್ ಎಲ್ ಜಿ ವಿ40 ಬಗ್ಗೆ ಹರಿದಾಡುತ್ತಿರುವ ಗಾಸಿಪ್ ಸುದ್ದಿಗಳಿಗೆ ಲೆಕ್ಕಮಿತಿಯಿಲ್ಲ. ಅಷ್ಟೇ ಯಾಕೆ ಹಲವರು ಈ ಫೋನ್ ಬಗೆಗಿನ ಮಾಹಿತಿ ತಿಳಿದುಕೊಳ್ಳಲು ಭಾರೀ ಉತ್ಸುಕರಾಗಿರುವಂತೆ ಕಾಣುತ್ತದೆ. ಯಾಕೆಂದರೆ ಈಗಾಗಲೇ ಎಲ್ ಜಿ ಯ ವಿ40 ಫೋನ್ ನಲ್ಲಿ 5 ಕ್ಯಾಮರಾಗಳಿರಲಿವೆ ಎಂಬ ಸುದ್ದಿಯೊಂದು ಭಾರೀ ಚರ್ಚೆಗೆ ಕಾರಣವಾಗಿ ಬಿಟ್ಟಿದೆ. ಕೊರಿಯನ್ ಎಲೆಕ್ಟ್ರಾನಿಕ್ ದೈತ್ಯ ಸದ್ಯ ಭಾರೀ ಕುತೂಹಲದ ಕೇಂದ್ರಬಿಂದುವಾಗಿ ಅಂತರ್ಜಾಲದಲ್ಲಿ ಗುರುತಿಸಿಕೊಳ್ಳುತ್ತಿದೆ.

  ಈ ಹೊಸ ಆಧುನಿಕ ತಂತ್ರಜ್ಞಾನದ ಫೋನ್ Qualcomm Snapdragon 845 ಪ್ರೊಸೆಸರ್ ನ್ನು ಒಳಗೊಂಡಿರುತ್ತದೆ ಮತ್ತು sport POLED ಡಿಸ್ಪ್ಲೇಯನ್ನು ಹೊಂದಿರುತ್ತದೆ ಜೊತೆಗೆ ಗೂಗಲ್ ಅಸಿಸ್ಟೆಂಟ್ ಆನ್ ಬೋರ್ಡ್ ನಲ್ಲೇ ಇರುತ್ತದೆ. ಇದಿಷ್ಟನ್ನು ಕೇಳಿದ ಮೇಲೆ ಯಾರಿಗೆ ತಾನೆ ಕುತೂಹಲ ಅಧಿಕಗೊಳ್ಳುವುದಿಲ್ಲ ಹೇಳಿ ? ಅದೇ ಕಾರಣಕ್ಕೆ ಗೆಜೆಟ್ಸ್ ಪ್ರಿಯರ ನಿರೀಕ್ಷೆಯ ಮಟ್ಟವನ್ನು ಇದು ದಿನದಿಂದ ದಿನಕ್ಕೆ ಅಧಿಕಗೊಳಿಸುತ್ತದೆ.

  ಎಲ್‌ಜಿ ವಿ40 ಸ್ಮಾರ್ಟ್‌ಫೋನ್ ಫೀಚರ್‌ಗಳ ಪಟ್ಟಿ ಬಗ್ಗೆ ಗುಸು-ಗುಸು..!

  XDA ಡೆವಲಪರ್ಸ್ ವರದಿ ಮಾಡಿರುವಂತೆ,( ಈ ಸಂಸ್ಥೆ ಎಲ್ ಜಿಯ ಫೈಲ್ ಗಳ ತನಿಖೆಯನ್ನು ಕೂಡ ನಡೆಸಿದೆಯಂತೆ) ಸದ್ಯ ಬಹಳ ಕುತೂಹಲಕಾರಿ ಮತ್ತು ನಿಗೂಢವಾಗಿ ಅನ್ನಿಸುತ್ತಿರುವ ಈ ಫೋನ್ ನ ಕೋಡ್ ನೇಮ್ “judypn" ಆಗಿರುವ ಸಾಧ್ಯತೆ ಇದೆ ಅಷ್ಟೇ ಅಲ್ಲ "storm" ಅನ್ನೋ ಕೋಡ್ ನೇಮ್ ನಲ್ಲೂ ಇದು ಗುರುತಿಸ್ಪಟ್ಟಿದೆಯಂತೆ. ಆದರೆ ಇದನ್ನು ಹೊರತು ಪಡಿಸಿ ಹಲವಾರು ಸಾಕ್ಷ್ಯಾಧಾರಗಳು ಕೂಡ ಈ ಕಂಪೆನಿಗೆ ಲಭ್ಯವಾಗಿದ್ದು ಎಲ್ ಜಿ ವಿ40 ಬಗ್ಗೆ ಹಲವು ಮಾಹಿತಿಗಳು ಸಿಕ್ಕಿದೆ ಎಂದು ವರದಿ ಹೇಳಿದೆ.

  ಆರಂಭಿಕರಿಗಾಗಿ, ಹೊಸ ಸ್ಮಾರ್ಟ್ ಫೋನ್ ತನ್ನ ಬೇಸ್ ಹೆಸರನ್ನು ಎಲ್ ಜಿ ವಿ35 ThinQ ಜೊತೆ ಹಂಚಿಕೊಳ್ಳುತ್ತದೆ ಮತ್ತು ಇದರ ಕೋಡ್ ನೇಮ್ "judy" ಆಗಿದೆ ಮತ್ತು ಎಲ್ ಜಿ ಜಿ7 ThinQ ನ ಕೋಡ್ ನೇಮ್ "judyln" ಆಗಿದೆ. ವಿ35 ThinkQ sports POLED ಡಿಸ್ಪ್ಲೇಯನ್ನು ಹೊಂದಿದ್ದು ಇದರಲ್ಲಿ ನಾಚ್ ಇಲ್ಲ. LG G7 ThinQ ಎಲ್ ಸಿ ಡಿ ಡಿಸ್ಪ್ಲೇಯ ಜೊತೆಗೆ ನಾಚ್ ನ್ನು ಒಳಗೊಂಡಿದೆ. ಒಂದು ವೇಳೆ ಈ ವರದಿಯನ್ನೇ ನಂಬುವುದಾದರೆ, LG V40ಯಲ್ಲಿ sport POLED ಡಿಸ್ಪ್ಲೇ ಜೊತೆಗೆ ನಾಚ್ ಕೂಡ ಇರಲಿದೆ.

  Judypn ನಂತೆಯೇ LG V40 ಗೂಗಲ್ ಅಸಿಸ್ಟೆಂಟ್ ನ್ನು ಇನ್ ವೋಕ್ ಮಾಡುವಂತ ಬಟನ್ ಇರಲಿದೆ. Judypn ನ ಹೆಚ್ಚಿನ ಅಂಶಗಳನ್ನು ಇದೂ ಹೊಂದಿರಲಿದೆ ಎಂಬ ಬಗ್ಗೆ ಈ ವರದಿಗಳು ಪುಷ್ಠೀಕರಿಸುತ್ತಿದೆ.

  ಒಂದು ವರದಿಯ ಅನ್ವಯ ಈ ಫೋನಿನಲ್ಲಿ ಮೂರು ಕ್ಯಾಮರಾಗಳಿರಲಿದೆ. ಎರಡು ಹಿಂಭಾಗದ ಕ್ಯಾಮರಾವಾಗಿದ್ದು ಆಪ್ಟಿಕಲ್ ಇಮೇಜ್ ಸ್ಟೆಬಿಲೈಜೇಷನ್ ತಂತ್ರಜ್ಞಾನವನ್ನು ಇದು ಹೊಂದಿರುತ್ತದೆ. ಇನ್ನೊಂದು ಕ್ಯಾಮರಾ ಮುಂಭಾಗದಲ್ಲಿ ಇರಲಿದೆ ಎಂದು ಹೇಳಲಾಗುತ್ತಿದೆ. ಆದರೆ ಮತ್ತೊಂದು ವರದಿಯ ಪ್ರಕಾರ ಎಲ್ ಜಿ ವಿ40 ಯಲ್ಲಿ 5 ಕ್ಯಾಮರಾಗಳು ಇರಲಿವೆ.

  ಎಲ್‌ಜಿ ವಿ40 ಸ್ಮಾರ್ಟ್‌ಫೋನ್ ಫೀಚರ್‌ಗಳ ಪಟ್ಟಿ ಬಗ್ಗೆ ಗುಸು-ಗುಸು..!

  ಮೂರು ಕ್ಯಾಮರಾಗಳು ಹಿಂಭಾಗದಲ್ಲಿದ್ದರೆ ಎರಡು ಕ್ಯಾಮರಾಗಳು ಸೆಲ್ಫೀ ತೆಗೆಯಲು ಅನುಕೂಲಕರವಾಗಿರುವಂತೆ ಮುಂಭಾಗದಲ್ಲಿ ಎಳವಡಿಸಲಾಗಿರುತ್ತದೆ. ಅದರಲ್ಲಿ 3ಡಿ ಫೇಸ್ ರೆಕಗ್ನಿಷನ್ ತಂತ್ರಜ್ಞಾನವನ್ನು ಅಳವಡಿಸಲಾಗಿರುತ್ತದೆ ಎಂಬ ಗಾಳಿಸುದ್ದಿಯೂ ಇದೆ. ಒಟ್ಟಾರೆ ಹೊಸ ಫೋನ್ ಬಗ್ಗೆ ಎಲ್ ಜಿ ಸಂಸ್ಥೆ ಬಹಳವಾಗಿ ಕೆಲಸ ಮಾಡುತ್ತಿದೆ ಎಂಬುದು ಮಾತ್ರ ಸತ್ಯ ಸಂಗತಿ.

  ಒಂದು ವರದಿಯ ಪ್ರಕಾರ ಪ್ರೊಸೆಸರ್ ಮತ್ತು ಡಿಸ್ಪ್ಲೇ ವೈಶಿಷ್ಟ್ಯತೆಗಳ ಆಧಾರದಲ್ಲಿ ಹೇಳುವುದಾದರೆ ಸ್ಟ್ರೋಮ್ ಮತ್ತು ಜೂಡಿಲಿನ್ ಎರಡೂ ಕೂಡ ಒಂದೇ ಡಿವೈಸ್ ಆದರೆ ಕ್ಯಾಮರಾ ವೈಶಿಷ್ಟ್ಯತೆಗಳ ಗಾಸಿಪ್ ನ್ನು ನೋಡಿದಾಗ ಇವೆರಡೂ ಬೇರೆಬೇರೆ ಡಿವೈಸ್ ಎಂದು ಪರಿಗಣಿಸಬೇಕಾಗುತ್ತದೆ.

  ಆದರೆ ಪ್ರತಿಯೊಬ್ಬರೂ ಗಮನಿಸಬೇಕಾಗಿರುವ ಅಂಶವೇನೆಂದರೆ ಇದೆಲ್ಲವೂ ಸದ್ಯದ ಗಾಳಿಸುದ್ದಿಯೇ ಹೊರತು ಯಾವುದೂ ಕೂಡ ಕಂಪೆನಿಯಿಂದ ಹೊರಬಿದ್ದಿರುವ ಅಧಿಕೃತ ಮಾಹಿತಿ ಅಲ್ಲ. ಹಾಗಾಗಿ ಖಂಡಿತವಾಗಲೂ ಅಧಿಕೃತ ಮಾಹಿತಿ ಇದೆಲ್ಲದಕ್ಕಿಂತ ಭಿನ್ನವಾಗಿರುವುದರಲ್ಲಿ ಖಂಡಿತ ಆಶ್ಚರ್ಯವಲ್ಲ.

  English summary
  New LG smartphone with POLED notched display, Snapdragon 845, Google Assistant spotted online. To know more this visit kannada.gizbot.com

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more