Subscribe to Gizbot

ನಾಳೆಯಿಂದ ನೋಕಿಯಾ 1 ಸೇಲ್‌: ಜಿಯೋದಿಂದ ಬಂಪರ್ ಆಫರ್.! ಬೆಲೆಯಲ್ಲಿ ಭಾರೀ ಇಳಿಕೆ..!

Written By:

ನೋಕಿಯಾ ಭಾರತೀಯ ಮಾರುಕಟ್ಟೆಯಲ್ಲಿ ಬಜೆಟ್ ಬೆಲೆಯ ನೋಕಿಯಾ 1 ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡಿದ್ದು, ಈ ಸ್ಮಾರ್ಟ್‌ಫೋನ್ ಮಾರ್ಚ್ 28 ರಿಂದ ಮಾರುಕಟ್ಟೆಯಲ್ಲಿ ಲಭ್ಯವಿರಲಿದೆ. ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ ಒರಿಯೊ(ಗೋ ಆವೃತ್ತಿ)ಯಲ್ಲಿ ಕಾರ್ಯನಿರ್ವಹಿಸಲಿದ್ದು, ಮಾರುಕಟ್ಟೆಯಲ್ಲಿ ಹೊಸ ಸಂಚಲನವನ್ನು ಮೂಡಿಸುವ ಸಾಧ್ಯತೆ ಇದೆ. ನೋಡಲು ಚಿಕ್ಕದಾಗಿ ಚೊಕ್ಕವಾಗಿ ಬಣ್ಣ-ಬಣ್ಣವಾಗಿ ಕಾಣುತ್ತಿರುವ ನೋಕಿಯಾ 1 ಖಂಡಿತವಾಗಿಯೂ ಗೇಮ್ ಚೇಂಜಿಗ್ ಸ್ಮಾರ್ಟ್‌ ಫೋನ್ ಆಗಲಿದೆ.

ನಾಳೆಯಿಂದ ನೋಕಿಯಾ 1 ಸೇಲ್‌: ಜಿಯೋದಿಂದ ಬಂಪರ್ ಆಫರ್.! ಬೆಲೆಯಲ್ಲಿ ಭಾರೀ ಇಳಿಕೆ.

ನೋಕಿಯಾ 1 ಸ್ಮಾರ್ಟ್‌ಫೋನ್‌ ರೂ.5499ಕ್ಕೆ ದೊರೆಯಲಿದ್ದು, ಈ ಸ್ಮಾರ್ಟ್‌ಫೋನ್‌ ಮೇಲೆ ಜಿಯೋ ರೂ.2200 ಕ್ಯಾಷ್ ಬ್ಯಾಕ್ ನೀಡುತ್ತಿದೆ. ಈ ಹಿನ್ನಲೆಯಲ್ಲಿ ಎಫೇಕ್ಟಿವ್ ಬೆಲೆ ರೂ3299ಕ್ಕೆ ದೊರೆಯಲಿದೆ. ಒಟ್ಟಿನಲ್ಲಿ ಕಡಿಮೆ ಬೆಲೆಗೆ ಉತ್ತಮ ಸ್ಮಾರ್ಟ್‌ಫೋನ್ ಕೊಳ್ಳಬೇಕು ಎನ್ನುವವರಿಗೆ ಇದು ಬೆಸ್ಟ್ ಆಯ್ಕೆಯಾಗಿದೆ. ಇದಲ್ಲದೇ ಈ ಸ್ಮಾರ್ಟ್‌ಫೋನ್‌ನೊಂದಿಗೆ ಬ್ಯಾಕ್‌ ಕವರ್ ಬದಲಾಯಿಸಿಕೊಳ್ಳಬಹುದಾಗಿದೆ. ಅವುಗಳು ರೂ.450ಕ್ಕೆ ದೊರೆಯುತ್ತಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ನೋಕಿಯಾದ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್:

ನೋಕಿಯಾದ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್:

ನೋಕಿಯಾ 1 ಸ್ಮಾರ್ಟ್‌ಫೋನ್ ಅತ್ಯಂತ ಕಡಿಮೆ ಬೆಲೆಗೆ ದೊರೆಯುತ್ತಿದ್ದು, ಇದು ಆಂಡ್ರಾಯ್ಡ್ ಗೋ ಆವೃತ್ತಿಯಲ್ಲಿ ಕಾರ್ಯನಿರ್ವಹಿಸಲಿದ್ದು, 4.5 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದ್ದು, ಮೀಡಿಯಾ ಟೆಕ್ ಪ್ರೊಸೆಸರ್ ಈ ಸ್ಮಾರ್ಟ್‌ಫೋನಿನಲ್ಲಿದೆ. ನೋಡಲು ಸಣ್ಣದಾಗಿದ್ದು, ಕೈನಲ್ಲಿ ಹಿಡಿದು ಬಳಕೆ ಮಾಡುವ ಅನುಭವವು ಉತ್ತಮವಾಗಿದೆ.

1GB RAM:

1GB RAM:

ನೋಕಿಯಾ 1 ಸ್ಮಾರ್ಟ್‌ಫೋನ್‌ನಲ್ಲಿ ನೀವು ಗೋ ಆಪ್‌ಗಳನ್ನು ಬಳಕೆ ಮಾಡಿಕೊಳ್ಳುವುದರಿಂದಾಗಿ ಕೇವಲ 1GB RAM ಅನ್ನು ನೀಡಲಾಗಿದೆ. ಇದರೊಂದಿಗೆ 8GB ಇಂಟರ್ನಲ್ ಮೆಮೊರಿಯನ್ನು ನೀಡಲಾಗಿದೆ. ಇದರೊಂದಿಗೆ ಹಿಂಭಾಗದಲ್ಲಿ 5MP ಕ್ಯಾಮೆರಾದೊಂದಿಗೆ LED ಫ್ಲಾಷ್ ಲೈಟ್ ಅನ್ನು ನೋಡಬಹುದಾಗಿದೆ ಹಾಗೂ ಮುಂಭಾಗದಲ್ಲಿ 2MP ಕ್ಯಾಮೆರಾವನ್ನು ಅಳವಡಿಸಲಾಗಿದೆ.

ಗೂಗಲ್ ಗೋ ಆಪ್‌ಗಳು:

ಗೂಗಲ್ ಗೋ ಆಪ್‌ಗಳು:

ಇದಲ್ಲದೇ ನೋಕಿಯಾ 1 ಸ್ಮಾರ್ಟ್‌ಫೋನ್ ನಲ್ಲಿ ನೀವು ಗೂಗಲ್ ಗೋ ಆಪ್‌ಗಳನ್ನು ನೋಡಬಹುದಾಗಿದ್ದು, ಇವುಗಳು ಅತ್ಯಂತ ಸಣ್ಣ ಪ್ರಮಾಣದ ಗಾತ್ರದಲ್ಲಿ ಕಾಣಿಸಿಕೊಳ್ಳಲಿದೆ. ಜಿಮೇಲ್, ಅಸಿಸ್ಟೆಂಟ್, ಸರ್ಚ್, ಮ್ಯಾಪ್, ಯೂಟ್ಯೂಬ್ ಗಳು ಲೈಟ್ ಆವೃತ್ತಿಯಲ್ಲಿ ಕಾಣಿಸಿಕೊಂಡಿದೆ. ಇದರಿಂದಾಗಿ ಇದೊಂದು ಲೈಟ್ ಸ್ಮಾರ್ಟ್‌ಫೋನ್ ಎನ್ನಬಹುದಾಗಿದೆ.

ಜಿಯೋ ಆಫರ್:

ಜಿಯೋ ಆಫರ್:

ನೋಕಿಯಾ 1 ಸ್ಮಾರ್ಟ್‌ಫೋನ್ ರೂ.5499ಕ್ಕೆ ಲಭ್ಯವಿದ್ದು, ಈ ಸ್ಮಾರ್ಟ್‌ಫೋನ್ ಕೊಳ್ಳುವವರಿಗೆ ಜಿಯೋ ಬೊಂಬಾಟ್ ಆಫರ್ ವೊಂದನ್ನು ನೀಡಲು ಮುಂದಾಗಿದ್ದು, ರೂ.2200 ಕ್ಯಾಷ್ ಬ್ಯಾಕ್ ನೀಡಲಿದ್ದು, ಇದರೊಂದಿಗೆ 60GB 4G ಡೇಟಾವನ್ನು ಹೆಚ್ಚುವರಿಯಾಗಿ ಬಳಕೆ ಮಾಡಿಕೊಳ್ಳಲು ನೀಡಲಿದೆ.

ಮಾರುಕಟ್ಟೆಯಲ್ಲಿ ಹೆಚ್ಚಾದ ಬೆಲೆ:

ಮಾರುಕಟ್ಟೆಯಲ್ಲಿ ಹೆಚ್ಚಾದ ಬೆಲೆ:

ಮಾರುಕಟ್ಟೆಯಲ್ಲಿ ನೋಕಿಯಾ 1 ಸ್ಮಾರ್ಟ್‌ಫೋನಿನ ಬೆಲೆಯೂ ತೀರಾ ಹೆಚ್ಚಾಯಿತು ಎನ್ನುವ ಮಾತು ಕೇಳಿ ಬಂದಿದೆ. ಕಾರಣ ಮಾರುಕಟ್ಟೆಯಲ್ಲಿ ಇದೇ ಬೆಲೆಗೆ ಲಭ್ಯವಿರುವ ಶಿಯೋಮಿ ರೆಡಿಮಿ 5A ಸ್ಮಾರ್ಟ್‌ಫೋನ್ ಹೆಚ್ಚಿನ ಆಯ್ಕೆಗಳನ್ನು ಬಳಕೆದಾರರಿಗೆ ನೀಡುತ್ತಿದೆ. ಆದರೆ ಸ್ಟಾಕ್ ಆಂಡ್ರಾಯ್ಡ್ ಬಳಕೆ ಮಾಡುವ ಬಯಕೆ ಇದ್ದವರಿಗೆ ನೋಕಿಯಾ 1 ಉತ್ತಮ ಆಯ್ಕೆಯಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ನಿಮ್ಮ Aadhaar ದುರುಪಯೋಗವಾಗಿದೆಯೇ..? ಪತ್ತೆ ಹಚ್ಚುವುದು ಹೇಗೆ..?

ಓದಿರಿ: ಮಾರ್ಚ್ 31ಕ್ಕೆ ಜಿಯೋ ಪ್ರೈಮ್‌ ಸದಸ್ಯತ್ವ ಕೊನೆ: ಮುಂದೇನು..?

English summary
Nokia has launched the Nokia 1 smartphone in India. It is Nokia's first phone based on Google's new Android Oreo (Go Edition) platform. The phone is priced at INR 5499 and will be available starting Wednesday, March 28. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot