Subscribe to Gizbot

ಆಗಸ್ಟ್ 16 ಚೀನಾ ಫೋನ್‌ಗಳ ಪಾಲಿಗೆ ಕಡೆ ದಿನ: ಅಂದೇ ರೂ.5000ಕ್ಕೆ ನೋಕಿಯ 2 ಬಿಡುಗಡೆ

Written By:

ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಬಜೆಟ್ ಸ್ಮಾರ್ಟ್‌ಫೋನ್ ಗಳ ಹಾವಳಿಯೂ ಹೆಚ್ಚಾಗಿದ್ದು, ಇದರ ನಡುವೆ ರಿಲಯನ್ಸ್ ಮಾಲೀಕತ್ವದ ಜಿಯೋ ಸಹ ರೂ.1500ಕ್ಕೆ ಸ್ಮಾರ್ಟ್‌ಫೋನ್ ವೊಂದನ್ನು ಲಾಂಚ್ ಮಾಡಿದ್ದು, ಈ ಹಿನ್ನಲೆಯಲ್ಲಿ ಮತ್ತೆ ಸ್ಮಾರ್ಟ್‌ಫೋನ್ ಲೋಕಕ್ಕೆ ಕಾಲಿಟ್ಟಿರುವ ನೋಕಿಯಾ ಸಹ ತನ್ನ ಅಭಿಮಾನಿಗಳಿಗೆ ಕಡಿಮೆ ಬೆಲೆಗೆ ಸ್ಮಾರ್ಟ್‌ಫೋನ್ ವೊಂದನ್ನು ನೀಡಲು ಮುಂದಾಗಿದೆ.

ಆಗಸ್ಟ್ 16 ಚೀನಾ ಸ್ಮಾರ್ಟ್‌ಫೋನ್‌ಗಳ ಪಾಲಿಗೆ ಕಡೆ ದಿನ

ಓದರಿ: ಶುರುವಾಗಲಿದೆ ಸ್ಮಾರ್ಟ್‌ಫೋನ್ ಜರ್ನಲಿಸಂ: ನೀವು ಕೇಳಿರದ ಅಚ್ಚರಿಯ ಸುದ್ದಿ..!!!

ಅದುವೇ ನೋಕಿಯಾ 2, ಈಗಾಗಲೇ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಉತ್ತಮ ಫೋನ್ ಎಂಬ ಖ್ಯಾತಿಗೆ ನೋಕಿಯಾ 3 ಸ್ಮಾರ್ಟ್‌ಫೋನ್ ಪಾತ್ರವಾಗಿದೆ. ಅದೇ ಮಾದರಿಯಲ್ಲಿ ಇನ್ನು ಕಡಿಮೆ ಬೆಲೆಗೆ ಅಂದರೆ ಸರಿ ಸುಮಾರು ರೂ.5000ಕ್ಕೆ ಸ್ಮಾರ್ಟ್‌ಫೋನ್ ವೊಂದನ್ನು ನೀಡಲು ನೋಕಿಯಾ ತಯಾರಿ ನಡೆಸಿದೆ. ಅದೇ ನೋಕಿಯಾ 2 ಎನ್ನುವ ಮಾತು ಕೇಳಿಬಂದಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮತ್ತೇ ಮೂರು ಫೋನ್ ಲಾಂಚ್:

ಮತ್ತೇ ಮೂರು ಫೋನ್ ಲಾಂಚ್:

ನೋಕಿಯಾದಿಂದ ಮತ್ತೆ ಮೂರು ಸ್ಮಾರ್ಟ್‌ಫೋನ್ ಗಳನ್ನು ಲಾಂಚ್ ಮಾಡುವ ಪ್ರಯತ್ನಗಳು ನಡೆಯುತ್ತಿದೆ. ಅದುವೇ ನೋಕಿಯಾ 2, ನೋಕಿಯಾ 7 ಮತ್ತು ನೋಕಿಯಾ 8 ಸ್ಮಾರ್ಟ್‌ಫೋನ್ ಗಳು, ಆದರೆ ನೋಕಿಯಾ 4 ಸ್ಮಾರ್ಟ್‌ಫೋನ್ ಬಿಡುಗಡೆಯಾಗುವುದಿಲ್ಲ ಎನ್ನಲಾಗಿದೆ ಕಾರಣ 4 ಸಂಖ್ಯೆ ವಿವಿಧೆಡೆಯಲ್ಲಿ ಅಶುಭ ಎನ್ನುವ ಕಾರಣಕ್ಕಾಗಿ.

ಆಗಸ್ಟ್ 16ಕ್ಕೆ ನೋಕಿಯಾ 2 ಬಿಡುಗಡೆ:

ಆಗಸ್ಟ್ 16ಕ್ಕೆ ನೋಕಿಯಾ 2 ಬಿಡುಗಡೆ:

ಈಗಾಗಲೇ HMD ಗ್ಲೊಬಲ್ ಸಂಸ್ಥೆಯೂ ಈಗಾಗಲೇ ಮೀಡಿಯಾ ಇನ್‌ವೈಟ್ ಅನ್ನು ಕಳುಹಿಸಿದ್ದು, ಇದೇ ಆಗಸ್ಟ್ 16ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಹೈ ಎಂಡ್ ನೋಕಿಯಾ 8 ಮತ್ತು ನೋಕಿಯಾ 2 ಸಹ ಲಾಂಚ್ ಆಗಲಿದೆ ಎಂದು ವರದಿಯಾಗಿದೆ.

ನೋಕಿಯಾ 2 ವಿಶೇಷತೆಗಳು:

ನೋಕಿಯಾ 2 ವಿಶೇಷತೆಗಳು:

ಪ್ರಖ್ಯಾತ ಬೆಂಚ್ ಮಾರ್ಕ್ ವೆಬ್ ಸೈಟ್ ಗ್ರೀಕ್ ಬ್ರಿನ್ಚ್ ನೋಕಿಯಾ 2 ವಿಶೇಷತೆಗಳ ಬಗ್ಗೆ ಮಾಹಿತಿಯನ್ನು ಹೊರ ಹಾಕಿದ್ದು, ನೋಕಿಯಾ 2 ಸ್ಮಾರ್ಟ್‌ಫೋನಿನ ಸಂಪೂರ್ಣ ವಿವರವನ್ನು ನೀಡಿದೆ.

ಬೆಲೆ ರೂ. 5000 ಮಾತ್ರ:

ಬೆಲೆ ರೂ. 5000 ಮಾತ್ರ:

ನೋಕಿಯಾ ಲಾಂಚ್ ಮಾಡುತ್ತಿರುವ ನೋಕಿಯಾ 2 ಸ್ಮಾರ್ಟ್‌ಫೋನ್ ರೂ. 5000ಕ್ಕೆ ದೊರೆಯಲಿದ್ದು, ಮಾರುಕಟ್ಟೆಯಲ್ಲಿರುವ ಚೀನಾ ಮೂಲದ ಸ್ಮಾರ್ಟ್‌ಫೋನ್ ಗಳಿಗೆ ಭರ್ಜರಿ ಸ್ಪರ್ಧೆಯನ್ನು ನೀಡಲಿದೆ ಎನ್ನುವ ಲೆಕ್ಕಚಾರ ನಡೆದಿದೆ.

1GB RAM:

1GB RAM:

ನೋಕಿಯಾ ಕೇವಲ ರೂ.5000ಕ್ಕೆ ಬಿಡುಗಡೆ ಮಾಡಲಿರುವ ನೋಕಿಯಾ 2 ಸ್ಮಾರ್ಟ್‌ಫೋನಿನಲ್ಲಿ 1GB RAM ಕಾಣಬಹುದಾಗಿದೆ. ಅಲ್ಲದೇ ಇದರಲ್ಲಿ 1.27 GHz ಕ್ವಾಲ್ಕಮ್ ಸ್ನಾಪ್‌ಡ್ರಾಗನ್ 212 ಚಿಪ್ ಸೆಟ್ ಇದೆ ಎನ್ನಲಾಗಿದೆ.

ಆನ್‌ಸ್ಕ್ರಿನ್ ನ್ಯಾವಿಗೇಷನ್:

ಆನ್‌ಸ್ಕ್ರಿನ್ ನ್ಯಾವಿಗೇಷನ್:

ನೋಕಿಯಾ 2 ಸ್ಮಾರ್ಟ್‌ಫೋನ್ ನಲ್ಲಿ ಆನ್‌ಸ್ಕ್ರಿನ್ ನ್ಯಾವಿಗೇಷನ್ ಬಟನ್ ಗಳನ್ನು ಕಾಣಬಹುದಾಗಿದೆ. ಈ ಸ್ಮಾರ್ಟ್‌ಫೋನ್ ನೂತನ ಆಂಡ್ರಾಯ್ಡ್ ನಲ್ಲಿ ಕಾರ್ಯನಿರ್ವಹಿಸಲಿದೆ ಎನ್ನುವ ಮಾಹಿತಿ ದೊರೆತಿದೆ.

ವಿನ್ಯಾಸ ಉತ್ತಮವಾಗಿದೆ:

ವಿನ್ಯಾಸ ಉತ್ತಮವಾಗಿದೆ:

ಇದೇ ಮಾದರಿಯಲ್ಲಿ ನೋಕಿಯಾ 2 ಸ್ಮಾರ್ಟ್‌ಫೋನ್ ನೋಡಲು ಉತ್ತಮವಾಗಿದ್ದು, 5 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇದು ನೋಡಲು ನೋಕಿಯಾ 3 ನಂತಯೇ ಕಾಣಿಸಲಿದೆ.

ಜಿಯೋ ಫೋನ್ ಗಿಂತಲೂ ಮೊದಲೆ ಲಭ್ಯ:

ಜಿಯೋ ಫೋನ್ ಗಿಂತಲೂ ಮೊದಲೆ ಲಭ್ಯ:

ಜಿಯೋ ನೂತನವಾಗಿ ಲಾಂಚ್ ಮಾಡಿರುವ ಜಿಯೋ ಫೋನ್ ಬಿಡುಗಡೆಗೂ ಮುನ್ನವೇ ನೋಕಿಯಾ 2 ಸ್ಮಾರ್ಟ್ ಫೋನ್ ಅಭಿಮಾನಿಗಳ ಕೈ ಸೇರಿರುತ್ತದೆ ಎನ್ನುವ ಮಾಹಿತಿಯೂ ದೊರೆತಿದೆ.

ಆಗಸ್ಟ್ 23 ರಿಂದ ಅಮೆಜಾನ್ ನಲ್ಲಿ ಮಾರಾಟ:

ಆಗಸ್ಟ್ 23 ರಿಂದ ಅಮೆಜಾನ್ ನಲ್ಲಿ ಮಾರಾಟ:

ಇದೇ ಮಾದರಿಯಲ್ಲಿ ಆಗಸ್ಟ್ 23 ರಿಂದ ನೋಕಿಯಾ 6 ಸ್ಮಾರ್ಟ್‌ಫೋನ್ ಮಾರಾಟ ಅಮೆಜಾನ್ ನಲ್ಲಿ ಆರಂಭವಾಗಲಿದೆ ಎನ್ನುವ ಸುದ್ದಿಯೂ ದೊರೆತಿದೆ. ಈಗಾಗಲೇ ಈ ಫೋನ್ ಪ್ರೀ ಬುಕಿಂಗ್ ಆರಂಭವಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
Nokia will be releasing a few more smartphones by the end of the year, including a lower-end Nokia 2. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot