Subscribe to Gizbot

ಶುರುವಾಗಲಿದೆ ಸ್ಮಾರ್ಟ್‌ಫೋನ್ ಜರ್ನಲಿಸಂ: ನೀವು ಕೇಳಿರದ ಅಚ್ಚರಿಯ ಸುದ್ದಿ..!!!

Written By:

ಸ್ಮಾರ್ಟ್‌ಫೋನ್ ಎನ್ನುವ ಮಾಯಾಪಟ್ಟಿಗೆ ತನ್ನ ಒಡಲಲ್ಲಿ ಹಲವರು ಆಚ್ಚರಿಗಳನ್ನು ಇರಿಸಿಕೊಂಡು ಬೇರೆಲ್ಲಾ ಗ್ಯಾಜೆಟ್ ಗಳನ್ನು ಮೂಲೆ ಗುಂಪು ಮಾಡುತ್ತಲೇ ಬಂದಿದೆ. ಕಂಪ್ಯೂಟರ್, ಲ್ಯಾಪ್‌ಟಾಪ್, ಕ್ಯಾಲಿಕ್ಯುಲೆಟರ್, ಕ್ಯಾಮೆರಾ, ಎಂಪಿ3 ಪ್ಲೇಯರ್, FM ರೇಡಿಯೋ, DVD ಪ್ಲೇಯರ್, ಸ್ಕ್ಯಾನರ್ ಸೇರಿದಂತೆ ಎಲ್ಲಾ ಗ್ಯಾಜೆಟ್ ಕೆಲಸವನ್ನು ತಾನೊಂದೇ ಮಾಡುವ ಮೂಲಕ ಹೆಚ್ಚಿನ ಜನರನ್ನು ತಲುಪುತ್ತಿದೆ.

ಶುರುವಾಗಲಿದೆ ಸ್ಮಾರ್ಟ್‌ಫೋನ್ ಜರ್ನಲಿಸಂ: ನೀವು ಕೇಳಿರದ ಅಚ್ಚರಿಯ ಸುದ್ದಿ ಇದು..!!

ಓದಿರಿ: ಬೆಂಗಳೂರಿನಲ್ಲಿ ನೋಟ್ 4 ಬ್ಲಾಸ್ಟ್ ಆಗಿದ್ದು ನಿಜಾನಾ..? ಇಲ್ಲಿದೆ ಎಕ್ಸ್‌ಕ್ಲೂಸಿವ್ ಸುದ್ದಿ.!

ಇಂದು ಸ್ಮಾರ್ಟ್‌ಫೋನ್ ಒಂದರಲ್ಲಿ ನಾವು ಇಂದು ಹಲವು ಕಾರ್ಯಗಳನ್ನು ಮಾಡುವ ಸಾಧ್ಯತೆ ಇದೆ. ಮೇಲ್ ಕಳುಹಿಸಬಹುದು, ವಿಡಿಯೋ ಕಾಲ್ ಮಾಡಬಹುದು, ಪೋಟೋ ಕ್ಲಿಕಿಸಬಹುದು, ವಿಡಿಯೋ ಚಿತ್ರೀಸಬಹುದು, ಬರೆಯಬಹುದು, ಪೋಟೋ-ವಿಡಿಯೋ ಎಡಿಟ್ ಮಾಡಬಹುದು, ವಾಯ್ಸ್ ರೆಕಾರ್ಡಿಂಗ್ ಮಾಡಿಕೊಳ್ಳಬಹುದು ಹೀಗೆ ಹೇಳುತ್ತಾ ಸಾಗಿದರೆ ಇನ್ನು ಅನೇಕ ಅಂಶಗಳನ್ನು ನಾವು ಸೇರಿಸಬಹುದು. ಹೀಗೆ ಹೊಸ ಸೇರ್ಪಡೆ ಸ್ಮಾರ್ಟ್‌ಫೋನ್ ಜರ್ನಲಿಸಂ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಭವಿಷ್ಯದ ಪತ್ರಿಕೋದ್ಯಮ ಸ್ಮಾರ್ಟ್‌ಫೋನ್ ನಲ್ಲಿ!

ಭವಿಷ್ಯದ ಪತ್ರಿಕೋದ್ಯಮ ಸ್ಮಾರ್ಟ್‌ಫೋನ್ ನಲ್ಲಿ!

ಹೌದು..! ಭವಿಷ್ಯದ ಪತ್ರಿಕೋದ್ಯಮ ಸ್ಮಾರ್ಟ್‌ಫೋನ್ ನಲ್ಲಿ ಅಡಗಿದೆ ಎಂದರೆ ನೀವು ನಂಬಲೇ ಬೇಕು. ಇನ್ನು ಮುಂದೆ ಟಿವಿ ಪತ್ರಿಕೋದ್ಯಮದಲ್ಲಿ ಸ್ಮಾರ್ಟ್‌ಫೋನ್ ಗಳು ಪ್ರಮುಖ ಪಾತ್ರವನ್ನು ವಹಿಸಲಿದೆ ಎನ್ನಲಾಗಿದೆ. ಈಗಾಗಲೇ ದೇಶಿಯ ಮಾಧ್ಯಮ ಸಂಸ್ಥೆಗಳು ಸ್ಮಾರ್ಟ್‌ಫೋನ್ ಪತ್ರಿಕೋದ್ಯಮಕ್ಕೆ ಮುಂದಾಗಿವೆ ಎನ್ನುವ ಸುಳಿವು ಸಿಕ್ಕಿದೆ.

ಸ್ಮಾರ್ಟ್‌ಫೋನ್ ನಲ್ಲೇ ಪ್ರತಿಯೊಂದು:

ಸ್ಮಾರ್ಟ್‌ಫೋನ್ ನಲ್ಲೇ ಪ್ರತಿಯೊಂದು:

ಇನ್ನು ಟಿವಿ ಪತ್ರಿಕೋದ್ಯಮದಲ್ಲಿ ಕೆಲವು ಮಂದಿ ಕೆಲಸ ಕಳೆದುಕೊಳ್ಳಲಿದ್ದಾರೆ. ಪ್ರಮುಖವಾಗಿ ಕ್ಯಾಮೆರಾ ಮಾನ್‌ಗಳು, ಇನ್ನು ಮುಂದೆ ರಿಪೋರ್ಟರ್ ಗಳೇ ಸ್ಮಾರ್ಟ್‌ಫೋನ್ ಮೂಲಕ ವಿಡಿಯೋವನ್ನು ಚಿತ್ರೀಸಿಕೊಳ್ಳುವುದಲ್ಲದೇ, ಸ್ಕೈಪ್ ಮೂಲಕ ಲೈವ್ ಚಾಟ್ ನೀಡುವ ದಿನಗಳು ಹತ್ತಿರ ಬರುತ್ತಿದೆ. ಓಬಿ ವ್ಯಾನ್‌ಗಳು ತಮ್ಮ ಕಾರ್ಯಚಟುವಟಿಯನ್ನು ನಿಲ್ಲಿಸಲಿವೆ.

ಕಾಸ್ಟ್ ಕಟಿಂಗ್:

ಕಾಸ್ಟ್ ಕಟಿಂಗ್:

ಸದ್ಯ ಎಲ್ಲಾ ವಲಯಲ್ಲಿಯೂ ಸದ್ಯ ಕೇಳಿ ಬರುತ್ತಿರುವ ಪ್ರಮುಖ ವಿಷಯವೇನೆಂದರೆ ಕಾಸ್ಟ್ ಕಟಿಂಗ್, ಸದ್ಯ ಟಿವಿ ಪತ್ರಿಕೋದ್ಯಮದಲ್ಲಿಯೂ ಇದು ಕೇಳಿ ಬಂದಿದ್ದು, ಸುದ್ದಿಯನ್ನು ಸಂಗ್ರಹಿಸಲು ಹೆಚ್ಚಿನ ಖರ್ಚಾಗುತ್ತಿದ್ದು, ಇದನ್ನು ನಿಯಂತ್ರಿಸುವ ಸಲುವಾಗಿ ಸುದ್ದಿಯನ್ನು ಸಂಗ್ರಹಿಸಲು ವರದಿಗಾರರಿಗೆ ಸ್ಮಾರ್ಟ್‌ಫೋನ್ ನೀಡುವ ಚಿಂತೆನೆಯೂ ಆರಂಭವಾಗಿದೆ.

ಸ್ಕೈಪ್ ನಲ್ಲಿ ಲೈವ್:

ಸ್ಕೈಪ್ ನಲ್ಲಿ ಲೈವ್:

ಸ್ಮಾರ್ಟ್‌ಫೋನ್ ನಲ್ಲಿ ಸ್ಕೈಪ್ ಆಪ್ ಹಾಕಿಕೊಂಡು ನೇರಾ ಪ್ರಸಾರವನ್ನು ನೀಡಲು ಚಿಂತನೆ ನಡೆಸಲಾಗಿದೆ. ಈ ವೇಳೆಯಲ್ಲಿ ಹೆಚ್ಚಿನ ಸಿಬ್ಬಂದಿಯ ಅವಶ್ಯಕತೆ ಇದೆ, ಇದನ್ನು ಕಡಿತ ಮಾಡಲು ಸ್ಮಾರ್ಟ್‌ಫೋನ್ ಅಗ್ಗದ ಅಸ್ತ್ರವಾಗುತ್ತಿದೆ ಎನ್ನಲಾಗಿದೆ.

NDTV ಇದೇ ಹಾದಿಯಲ್ಲಿದೆ:

NDTV ಇದೇ ಹಾದಿಯಲ್ಲಿದೆ:

ದೇಶದಲ್ಲಿ ಪ್ರಮುಖ ಟಿವಿ ಪತ್ರಿಕೋದ್ಯಮದಲ್ಲಿ ಗುರುತಿಸಿಕೊಂಡಿರುವ NDTV ಇದೇ ಹಾದಿಯಲ್ಲಿ ಸಾಗುತ್ತಿದೆ ಎನ್ನಲಾಗಿದೆ. ಈಗಾಗಲೇ ತನ್ನ ವರದಿಗಾರರಿಗೆ ಸ್ಮಾರ್ಟ್ ಫೋನ್ ಗಳನ್ನು ಎಫೆಕ್ಟಿವ್ ಆಗಿ ಬಳಕೆ ಮಾಡಿಕೊಳ್ಳುವುದರ ಬಗ್ಗೆ ತರಬೇತಿಯನ್ನು ನೀಡುತ್ತಿದೆ ಎನ್ನುವ ಮಾತು ಕೇಳಿ ಬಂದಿದೆ.

ಹಲವು ಜನರಿಗೆ ಗೇಟ್ ಪಾಸ್:

ಹಲವು ಜನರಿಗೆ ಗೇಟ್ ಪಾಸ್:

ಈಗಾಗಲೇ ಸುದ್ದಿ ಮೂಲಗಳು ತಿಳಿಸಿರುವಂತೆ NDTV ತನ್ನ ಸಿಬ್ಬಂದಿಗಳನ್ನು ಕೆಲಸದಿಂದ ತೆಗೆಯುತ್ತಿದ್ದು, ಸ್ಮಾರ್ಟ್‌ಫೋನ್ ನಿಂದಲೇ ಕೆಲಸ ಕಾರ್ಯಗಳನ್ನು ಮಾಡಿಕೊಳ್ಳುವ ಮೊಬೈಲ್ ಪತ್ರಿಕೋದ್ಯಮದ ಕಡೆಗೆ ಹೆಜ್ಜೆ ಹಾಕುತ್ತಿದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
In its official statement, company denies any financial stress being the reason for the layoffs. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot