Subscribe to Gizbot

ಊಹಾಪೋಹಕ್ಕೆ ತೆರೆ!..ಭಾರತಕ್ಕೆ ನೋಕಿಯಾ ಆಂಡ್ರಾಯ್ಡ್!!..ಯಾವಾಗ?

Written By:

ಭಾರತೀಯರ ಮನಸಿನಲ್ಲಿ ಅಚ್ಚುಳಿದಿರವ ನೋಕಿಯಾ ಕಂಪೆನಿಯ ನೋಕಿಯಾ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳು ಚೀನಾದಲ್ಲಿ ರಿಲೀಸ್ ಆಗಿ ತಿಂಗಳುಗಳೇ ಕಳೆದರೂ ಭಾರತೀಯ ಮಾರುಕಟ್ಟೆಗೆ ಮಾತ್ರ ಕಾಲಿಟ್ಟಿಲ್ಲ.!! ಆದರೆ, ಈಗಾಗಲೇ ನೋಕಿಯಾ ಅಭಿಮಾನಿಗಳು ನೋಕಿಯಾ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ ಖರೀದಿಸಲು ತುದಿಗಾಲಿನಲ್ಲಿ ನಿಂತಿದ್ದು, ಮಾರುಕಟ್ಟೆಗೆ ಬರುವಿಕೆಗಾಗಿ ಕಾಯುತ್ತಿದ್ದಾರೆ.!!

ಮೊದಲಿನಿಂದಲೂ ಭಾರತದಲ್ಲಿ ನೋಕಿಯಾ ಆಂಡ್ರಾಯ್ಡ್ ಸ್ಮಾರ್ಟ್‌ಪೋನ್ ಬಿಡುಗಡೆಯಾಗುವ ಬಗ್ಗೆ ಊಹಾಪೋಹಗಳು ಹರಿದಾಡಿದ್ದು, ಇದೀಗ ಭಾರತಕ್ಕೆ ನೋಕಿಯಾ ಆಂಡ್ರಾಯ್ಡ್ ಕಾಲಿಡುವ ಸಮಯ ಪಕ್ಕಾ ಆಗಿದೆ.! ಹೌದು, ಈ ಬಗ್ಗೆ ಹೆಚ್‌ಎಮ್‌ಡಿ ಗ್ಲೋಬಲ್‌ ಕಂಪೆನಿಯ ಭಾರತದ ಉಪಾಧ್ಯಕ್ಷ ಆಗಿರುವ ಅಜೆಯ್ ಮೆಹ್ತಾ ಮಾಹಿತಿ ನೀಡಿದ್ದಾರೆ.!!

15,000 ರೂ. ಒಳಗಿನ ಟಾಪ್ 10 ಸ್ಮಾರ್ಟ್‌ಫೋನ್ ಲೀಸ್ಟ್!! ಯಾವುದು ನಿಮ್ಮ ಬೆಸ್ಟ್?

ಊಹಾಪೋಹಕ್ಕೆ ತೆರೆ!..ಭಾರತಕ್ಕೆ ನೋಕಿಯಾ ಆಂಡ್ರಾಯ್ಡ್!!..ಯಾವಾಗ?

150 ಮಾರುಕಟ್ಟೆಗಳಲ್ಲಿ ಒಂದೆ ಸಾರಿ ನೋಕಿಯಾ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಲು ಉದ್ದೇಶಿಸಿದ್ದು, ನೋಕಿಯಾ ಆಂಡ್ರಾಯ್ಡ್ ಸ್ಮಾರ್ಟ್‌ಫೊನ್‌ಗಳು ಭಾರತಕ್ಕೆ ಬರುವ ಸಮಯ ದೂರವಿಲ್ಲ. ಮೇ ತಿಂಗಳ ಕೊನೆಯಲ್ಲಿ ಅಥವಾ ಜೂನ್‌ ತಿಂಗಳ ಮೊದಲವಾರದಲ್ಲಿ ನೋಕಿಯಾ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳು ಭಾರತಕ್ಕೆ ಕಾಲಿಡಲಿವೆ ಎಂದು ಅವರು ತಿಳಿಸಿದ್ದಾರೆ.

ಊಹಾಪೋಹಕ್ಕೆ ತೆರೆ!..ಭಾರತಕ್ಕೆ ನೋಕಿಯಾ ಆಂಡ್ರಾಯ್ಡ್!!..ಯಾವಾಗ?

ಭಾರತೀಯ ಮಾರುಕಟ್ಟೆಯಲ್ಲಿ ನೋಕಿಯಾ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಲು ನಾವು ಉತ್ಸುಕವಾಗಿದ್ದು, ಚೀನಾದಲ್ಲಿ ಉತ್ತಮ ಹೆಸರುಗಳಿಸಿರುವ ನೋಕಿಯಾ ಆಂಡ್ರಾಯ್ಡ್ ಭಾರತದಲ್ಲಿ ಜನಪ್ರಿಯವಾಗಲಿದೆ ಎಂದಿದ್ದಾರೆ.!!

ಏರ್‌ಟೆಲ್‌ನ 4G ಹುಡುಗಿ ನಾವೆ ಸ್ಪೀಡ್ ಅಂತ ಹೇಳೊಹಾಗಿಲ್ಲ!! ಏಕೆ ಗೊತ್ತಾ?

English summary
HMD Global's Vice President India, Ajey Mehta told.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot