Subscribe to Gizbot

ಏರ್‌ಟೆಲ್‌ನ 4G ಹುಡುಗಿ ನಾವೆ ಸ್ಪೀಡ್ ಅಂತ ಹೇಳೊಹಾಗಿಲ್ಲ!! ಏಕೆ ಗೊತ್ತಾ?

Written By:

ಟೆಲಿಕಾಂ ಪ್ರಪಂಚಕ್ಕೆ ಈಗಷ್ಟೆ ಕಾಳಲಿಟ್ಟಿರುವ ಜಿಯೋ ಮತ್ತು ಏರ್‌ಟೆಲ್ ಫೈಟ್ ಇದೀಗ ಒಂದು ಹೆಜ್ಜೆ ಮುಂದಕ್ಕೆ ಹೋಗಿದ್ದು, ಈಗ ಟೆಲಿಕಾಂ ಸ್ಟಾರ್ ಪಟ್ಟಕ್ಕಾಗಿ ಕಿತ್ತಾಟ ನಡೆಯುತ್ತಿದೆ.!! ಇಷ್ಟು ದಿವಸ ಏರ್‌ಟೆಲ್‌ಗಿಂತ ಹೆಚ್ಚು ಸ್ಪೀಡ್‌ ಡೇಟಾ ನೀಡಲು ಯಾವುದೇ ಕಂಪೆನಿಗಳಿಗೆ ಸಾಧ್ಯವೇ ಇಲ್ಲ ಎಂದು ಹೇಳುತ್ತಿದ್ದ ಕಾಲ ಇನ್ನು ಬದಲಾಗುತ್ತದೆ.!!

ಭಾರತೀಯ ಟೆಲಿಕಾಂ ನಿಯಂತ್ರಣ ಮಂಡಳಿ ಟ್ರಾಯ್, ಹೆಚ್ಚು ಸ್ಪೀಡ್‌ ಡೇಟಾ ನೀಡುವ ಕಂಪೆನಿಗಳ ಲೀಸ್ಟ್ ಬಿಡುಗಡೆ ಮಾಡಿದ್ದು, ಪ್ರಸ್ತುತ ಬಿಡುಗಡೆ ಮಾಡಿರುವ ಮಾಹಿತಿಯಂತೆ ಜಿಯೋ ಏರ್‌ಟೆಲ್‌ಗಿಂತ ಹೆಚ್ಚು ಸ್ಪೀಡ್‌ನಲ್ಲಿ ಡೇಟಾ ನೀಡುತ್ತಿದೆ. ಹಾಗಾಗಿ, ಏರ್‌ಟೆಲ್‌ಗೆ ಜಿಯೋ ಟಾಂಗ್ ನೀಡಿದೆ.!!

ಏರ್‌ಟೆಲ್‌ನ 4G ಹುಡುಗಿ ನಾವೆ ಸ್ಪೀಡ್ ಅಂತ ಹೇಳೊಹಾಗಿಲ್ಲ!! ಏಕೆ ಗೊತ್ತಾ?

ನಿಮ್ಮ ಬೆಸ್ಟ್ 4G ಪ್ಲಾನ್ ಯಾವುದು? ಯಾವ ಆಫರ್ ಇದೆ? ಫುಲ್ ಡೀಟೆಲ್ಸ್!!

ಇನ್ನು ಏರ್‌ಟೆಲ್ ದೇಶದಲ್ಲಿ ಅತ್ಯಂತ ವೇಗದ ಇಂಟರ್ನೆಟ್ ನೀಡುತ್ತಿದೆ ಎಂದು ಹೇಳಿದ್ದಕ್ಕೆ ಬ್ರಾಡ್‌ಬ್ಯಾಂಡ್ ವೇಗವನ್ನು ಅಳತೆ ಮಾಡುವ ಓಕ್ಲಾ ಸಂಸ್ಥೆಯ ಮೇಲೆ ಅಡ್ವರ್ಟೈಸಿಂಗ್ ಸ್ಟ್ಯಾಂಡರ್ಡ್ ಕೌನ್ಸಿಲ್‌ನಲ್ಲಿ ದೂರೊಂದನ್ನು ದಾಖಲಿಸಿದೆ. ದೇಶದಲ್ಲಿ ಏರ್‌ಟೆಲ್ ಮಾತ್ರವೇ ವೇಗದ ಇಂಟರ್ನೆಟ್ ಸೇವೆಯನ್ನು ನೀಡುತ್ತಿದೆ ಎಂಬುದು ಸುಳ್ಳು. ಸುಮ್ಮನೆ ಏರ್‌ಟೆಲ್ ಪ್ರಮೋಟ್ ಮಾಡುವ ಮೂಲಕ ಗ್ರಾಹಕರನ್ನು ಹಾದಿತಪ್ಪಿಸುತ್ತಿರುವ ಓಕ್ಲಾ ಮೇಲೆ ದೂರು ದಾಖಲಿಸಿರುವುದಾಗಿ ತಿಳಿಸಿದೆ.!!

ಏರ್‌ಟೆಲ್‌ನ 4G ಹುಡುಗಿ ನಾವೆ ಸ್ಪೀಡ್ ಅಂತ ಹೇಳೊಹಾಗಿಲ್ಲ!! ಏಕೆ ಗೊತ್ತಾ?

ಇದೀಗ ಇನ್ನೊಂದು ಹೆಜ್ಜೆ ಮುಂದಿಟ್ಟಿರುವ ಜಯೋ, ಏರ್‌ಟೆಲ್ ತನ್ನ ಜಾಹೀರಾತುಗಳಲ್ಲಿ ಅತ್ಯಂತ ವೇಗದ ಇಂಟರ್ನೆಟ್ ನೀಡುತ್ತಿರುವುದಾಗಿ ಹೇಳುತ್ತಿರುವುದು ಸುಳ್ಳು ಎಂದು ಆರೋಪಿಸಿದೆ. ಈ ರೀತಿಯ ಜಾಹಿರಾತುಗಳಿಂದಾಗಿ ಜನರುದೇಶದಲ್ಲಿ ಅತ್ಯಂತ ವೇಗ ಇಂಟರ್ನೆಟ್ ವೇಗವನ್ನು ಏರ್‌ಟೆಲ್ ಹೊಂದಿದೆ ಎಂದು ತಿಳಿಯುತ್ತಿದ್ದಾರೆ. ಹಾಗಾಗಿ, ಕೂಡಲೇ ಇಂತಹ ಜಾಹಿರಾತುಗಳನ್ನು ನಿಲ್ಲಿಸಬೇಕು ಎಂದು ಎಚ್ಚರಿಸಿದೆ.!!

BSLN ನೀಡಿರುವ 2Gb ಡೇಟಾ, ಅನ್‌ಲಿಮಿಟೆಡ್ ಕಾಲ್ ಆಫರ್ ಶುರು ಯಾವಾಗ?

English summary
reliance jio files complaint against ookla also. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot