Subscribe to Gizbot

ಮಾರುಕಟ್ಟೆಗೆ ಬಂದಿದೆ ಬುಲೆಟ್ ಫ್ರೂಪ್ ನೋಕಿಯಾ 3310 ಫೋನ್: ಬೆಲೆ ಮಾತ್ರ ಕೇಳಬೇಡಿ..!!

Posted By: Precilla Dias

ನೋಕಿಯಾ ಮತ್ತೆ ಮಾರುಕಟ್ಟೆಗೆ ಕಾಲಿಟ್ಟಿದೆ. ಇದೇ ಸಂದರ್ಭದಲ್ಲಿ ತನ್ನ ಹಿಂದಿನ ಸ್ಟಾರ್ ಫೋನ್ ನೋಕಿಯಾ 3310 ಫೋನ್ ಅನ್ನು ಮತ್ತೆ ಹೊಸ ಅವತಾರದಲ್ಲಿ ಬಿಡುಗಡೆ ಮಾಡಿದೆ. ಇದೇ ಫೋನನ್ನು ರಷ್ಯಾ ಮೂಲದ ದುಬಾರಿ ಐಷಾರಾಮಿ ಫೋನ್ ತಯಾರಿಕಾ ಕಂಪನಿ Cavisr 'ಸುಪ್ರೀಮೋ ಪುಟಿನ್’ ಆವೃತ್ತಿಯನ್ನು ಬಿಡುಗಡೆ ಮಾಡಿತ್ತು. ಇದರ ಬೆಲೆ ರೂ.1,12,785 ಗಳಾಗಿತ್ತು.

ಮಾರುಕಟ್ಟೆಗೆ ಬಂದಿದೆ ಬುಲೆಟ್ ಫ್ರೂಪ್ ನೋಕಿಯಾ 3310 ಫೋನ್

ಈಗ ಇದೇ ಮಾದರಿಯಲ್ಲಿ ನೋಕಿಯಾ 3310 ಮತ್ತೊಂದು ಹೊಸ ಆವೃತ್ತಿಯು ಬಿಡುಗಡೆಯಾಗಿದೆ. ಇದು ಬುಲೆಟ್ ಪ್ರೂಫ್ ಆವೃತ್ತಿಯಾಗಿದೆ. ಈ ಹೊಸ ವಿನ್ಯಾಸವು ಟೈಟಿನಿಯಮ್ ಬಾಡಿಯನ್ನು ಹೊಂದಿದ್ದು, ಇದು ಬುಲೆಟ್ ತಡೆಯುವ ಶಕ್ತಿಯನ್ನು ಹೊಂದಿದೆಯಂತೆ. ವಿನ್ಯಾಸ ಮಾತ್ರ ಬದಲಾಗಿದ್ದರು ಅದರಲ್ಲಿರುವ ಆಯ್ಕೆಗಳು ಮಾತ್ರ ಒಂದೇ ಆಗಿದೆ.

ಮಾರುಕಟ್ಟೆಗೆ ಬಂದಿದೆ ಬುಲೆಟ್ ಫ್ರೂಪ್ ನೋಕಿಯಾ 3310 ಫೋನ್

ಈ ಹೊಸ ಫೋನಿನ ಕುರಿತು ಮಾಹಿತಿಯನ್ನು ಹಂಚಿಕೊಂಡಿರುವ ಕಾವಿಯರ್ ಕಂಪನಿ, ಈ ಫೋನಿನ ಹೊರ ಕವಚವು ಭಾರಿ ಗಟ್ಟಿಮುಟ್ಟಾಗಿದೆ. ಇದನ್ನು ಯಾವುದರಿಂದಲೂ ಮುರಿಯಲು ಸಾಧ್ಯವಿಲ್ಲ. ಮಿಲಿಟರಿ ಮಾದರಿಯ ಸ್ಟಿಲ್ ಇದಕ್ಕೆ ಬಳಕೆ ಮಾಡಲಾಗಿದೆ, ಇದು ಫೋನಿಗೆ ಶಕ್ತಿ ಓದಗಿಸಿದ್ದು, ನೋಡಲು ಆಕರ್ಷಕವಾಗಿ ಕಾಣುವಂತೆ ಮಾಡಿದೆ.

ನೀವು ಈ ಫೋನನ್ನು ಕೊಳ್ಳಬೇಕು ಎಂಬ ಮನಸ್ಸು ಮಾಡಿದರೆ, ಬುಲೆಟ್ ಪ್ರೂಫ್ ಫೋನನ್ನು ನಿಮ್ಮ ಕೈನಲ್ಲಿ ಹಿಡಿಯಬೇಕು ಎಂದು ಕೊಂಡರೆ ಸುಮಾರು 1.3 ಲಕ್ಷ ಆಗಲಿದೆ ಎನ್ನಲಾಗಿದೆ.

ಜಿಯೋದಂತೆ ಅಮೆಜಾನ್ ಸಹ ಪ್ರೈಮ್ ಮೆಂಬರ್‌ಶಿಪ್ ನೀಡಿದೆ!..ಏನು ಆಫರ್!

ಈಗಾಗಲೇ ನೋಕಿಯಾ 3310 ಫೋನಿಗೆ ಗಟ್ಟಿ ಮುಟ್ಟಾದ ಫೋನ್ ಎಂಬ ಹೆಗ್ಗಳಿಕೆಯೂ ಇದೆ. ಎಷ್ಟೆ ಎತ್ತರದಿಂದ ಬಿಳಿಸಿದರು ಓಡೆಯದೆ, ನಿಲ್ಲದೇ ಕಾರ್ಯ ನಿರ್ವಹಿಸುತ್ತದೆ. ಆದರೆ ಈಗ ಹೊಸದಾಗಿ ದುಬಾರಿ ಬೆಲೆಯಲ್ಲಿ ಬರುತ್ತಿರುವ ಫೋನ್ ಇನಷ್ಟು ಗಟ್ಟಿಯಾಗಿರಲಿದೆ.

English summary
A Russian company called Caviar has launched a newly designed Nokia 3310 (2017) with a titanium body.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot