Subscribe to Gizbot

ನೋಕಿಯಾದ ಮೊದಲ 4G ವೋಲ್ಟ್ ಫೀಚರ್ ಫೋನ್ ರಿಲೀಸ್!!

Written By:

ಬ್ರ್ಯಾಂಡ್ ಹೆಸರನ್ನೇ ಬಂಡವಾಳ ಮಾಡಿಕೊಂಡು ವಿಶ್ವದ ಮೊಬೈಲ್ ಮಾರುಕಟ್ಟೆಯಲ್ಲಿ ಮತ್ತೆ ಮಿಂಚಿನ ಸಂಚಾರ ಮಾಡಿದ "ನೋಕಿಯಾ 3310" ಮೊಬೈಲ್ ಇದೀಗ 4G ವೆರಿಯಂಟ್ ಫೀಚರ್ ಫೋನ್ ಆಗಿ ಬದಲಾಗಿದೆ.! ಹೌದು, ಹೆಚ್‌ಎಮ್‌ಡಿ ಗ್ಲೋಬಲ್ ಕಂಪೆನಿ ಚೀನಾದಲ್ಲಿಂದು ನೋಕಿಯಾ 3310 ಫೀಚರ್ 4G ಪೋನ್ ಅನ್ನು ಬಿಡುಗಡೆ ಮಾಡಿದೆ.!!

ನೋಕಿಯಾದ ಮೊದಲ 4G ವೋಲ್ಟ್ ಫೀಚರ್ ಫೋನ್ ರಿಲೀಸ್!!

ಗ್ರಾಹಕರ ಆಸೆಯಂತೆ 4G ಫೀಚರ್ ಅನ್ನು ನೋಕಿಯಾ 3310 ಫೀಚರ್ ಫೋನ್‌ನಲ್ಲಿ ಅಳವಡಿಸಲಾಗಿದ್ದು, 4G ಮತ್ತು ವೋಲ್ಟ್ ಎರಡಕ್ಕೂ ಸಪೋರ್ಟ್ ಮಾಡುವ ಫೀಚರ್ ಫೋನ್ ಇದಾಗಿದೆ.!! ಹೆಚ್‌ಎಮ್‌ಡಿ ಗ್ಲೋಬಲ್ ಕಂಪೆನಿಯ ಅಫಿಷಿಯಲ್ ವೆಬ್‌ಸೈಟ್‌ನಲ್ಲಿ ಸ್ಥಾನಪಡೆದಿರುವ ಈ ಫೋನಿನ ಇನ್ನಿತರ ಫೀಚರ್‌ಗಳು ಯಾವುವು ಎಂಬುದನ್ನು ಮುಂದೆ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಫೋನ್ ಸ್ಕ್ರೀನ್ ದೊಡ್ಡದಾಗಿದೆ.!!

ಫೋನ್ ಸ್ಕ್ರೀನ್ ದೊಡ್ಡದಾಗಿದೆ.!!

2017 ರ ಅಕ್ಟೋಬರ್‌ನಲ್ಲಿ ಬಿಡುಗಡೆಯಾಗಿದ್ದ ನೋಕಿಯಾ 3310 3G ಫೋನ್ ಅನ್ನೇ ಸ್ವಲ್ಪ ಬದಲಾಯಿಸಿ ನೂತನ 4G ಪೋನ್ ಅನ್ನು ವಿನ್ಯಾಸ ಮಾಡಲಾಗಿದೆ. ಹಳೆಯ 3G ಫೋನ್‌ಗಿಂತಲೂ ಈ 4G ಫೋನ್ ಸ್ಕ್ರೀನ್ ಅನ್ನು 13% ರಷ್ಟು ದೊಡ್ಡದಾಗಿ ತಯಾರಿಸಲಾಗಿದೆ.!!

All about Nokia 3310 Phone - GIZBOT KANNADA
ಆಂಡ್ರಾಯ್ಡ್ ಫೋನ್!!

ಆಂಡ್ರಾಯ್ಡ್ ಫೋನ್!!

TD-LTE ಮತ್ತು TD-SCDMAಯ 4G ಎಲ್‌ಟಿಯ ಕನೆಕ್ಟಿವಿಟಿ ಹೊಂದಿರುವ ನೋಕಿಯಾ 3310 ಪೋನು ಆಂಡ್ಡ್ರಾಯ್ಡ್ ಫೋನ್ ಆಗಿರಲಿದೆ. 512MB RAM ಮತ್ತು 16 MB ಆಂತರಿಕ ಮೆಮೊರಿ ಫೋನಿನಲ್ಲಿದ್ದು, SD ಕಾರ್ಡ್‌ ಹಾಕಿಕೊಳ್ಳುವ ಮೂಲಕ 32 ಜಿಬಿವರೆಗೆ ಮಮೊರಿಯನ್ನು ವಿಸ್ತರಿಸಿಕೊಳ್ಳುವ ಅವಕಾಶವನ್ನು ನೀಡಲಾಗಿದೆ.!!

1,200mAh ಬ್ಯಾಟರಿ

1,200mAh ಬ್ಯಾಟರಿ

ನೋಕಿಯಾ 3310 3G ಫೋನಿನಲ್ಲಿ ನೀಡಿದಹಾಗೆಯೇ ನೂತನ 4G ಫೋನಿನಲ್ಲಿಯೂ ತೆಗೆಯಬಹುದಾದ 1,200mAh ಬ್ಯಾಟರಿಯನ್ನು ನೀಡಲಾಗಿದೆ.!! ಕಡಿಮೆ ಸಾಮರ್ಥ್ಯದ ಬ್ಯಾಟರಿಯಾದರೂ ಕೂಡ 22 ಗಂಟೆಗಳ ಟಾಕ್ ಟೈಂ ಹಾಗೂ 1 ತಿಂಗಳ ಕಾಲ ಸ್ಟ್ಯಾಂಡ್ ಬೈ ಟೈಂ ಹೊಂದಿದೆ ಎನ್ನಲಾಗಿದೆ.

ಬೇರೆ ಏನೆಲ್ಲಾ ಫೀಚರ್ಸ್?

ಬೇರೆ ಏನೆಲ್ಲಾ ಫೀಚರ್ಸ್?

ನೋಕಿಯಾ 3310 4G ಫೋನಿನಲ್ಲಿ ಮೈಕ್ರೋ USB ಚಾರ್ಜಿಂಗ್ ಪೋರ್ಟ್ ಅಳವಡಿಸಲಾಗಿದ್ದು, ಫೋನ್ ಅನ್ನು ಕಂಪ್ಯೂಟರ್‌ಗೆ ಸಂಪರ್ಕಿಸಬಹುದು! ಇನ್ನು ಬ್ಲೂಟೂತ್, 3.5ಹೆಡ್‌ಪೋನ್ ಜ್ಯಾಕ್ ಮತ್ತು ಎಫ್‍ಎಂ ರೇಡಿಯೋ ದಂತಹ ಹಲವು ಆಯ್ಕೆಗಳು ಫೋನಿನಲ್ಲಿ ಲಭ್ಯವಿವೆ.!!

ಬೆಲೆ ಎಷ್ಟಿರಬಹುದು?

ಬೆಲೆ ಎಷ್ಟಿರಬಹುದು?

ಇದೇ ಮೊದಲ ಭಾರಿ ಫೀಚರ್ ಫೋನ್ ಒಂದು 3G ನಂತರ ಇದೀಗ 4Gಗೆ ಬದಲಾಗಿ ಮಾರುಕಟ್ಟೆಗೆ ಕಾಲಿಟ್ಟಿದೆ. ಆದರೆ, ಹೆಚ್‌ಎಮ್‌ಡಿ ಗ್ಲೋಬಲ್ ಕಂಪೆನಿ ಮಾತ್ರ ಈ ಫೋನ್ ಬೆಲೆಯನ್ನು ಈ ವರೆಗೂ ಬಿಡುಗಡೆ ಮಾಡಿಲ್ಲ. ಆದರೆ, ಚೀನಾ ವೆಬ್‌ಸೈಟ್‌ ಒಂದರ ಮಾಹಿತಿ ಪ್ರಕಾರ, ಈ ಫೋನ್ ಬೆಲೆ 4 ಸಾವಿರ ರೂಪಾಯಿಗಳು.!!

ಓದಿರಿ:ಆಪಲ್ 10 ವಿನ್ಯಾಸದ "ಮೈ ಮಿಕ್ಸ್ 2ಎಸ್" ಬಿಡುಗಡೆಗೆ ಸಜ್ಜಾಯಿತು ಶೀಯೋಮಿ!!..ಬೆಲೆ ಎಷ್ಟು ಗೊತ್ತಾ?!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Unlike the earlier two Nokia 3310 versions, the Nokia 3310 4G variant offers different specifications. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot