Subscribe to Gizbot

ಎಲ್ಲರಿಗೂ ಶಾಕ್ ನೀಡಲು ಬರುತ್ತಿದೆ ನೋಕಿಯಾ 3310 '4G' ಫೋನ್!!

Written By:

ಒಂದು ಬ್ರಾಂಡ್ ಹೆಸರನ್ನು ಹೇಗೆಲ್ಲಾ ಬಳಸಿಕೊಳ್ಳಬಹುದು ಎನ್ನುವುದಕ್ಕೆ ನೋಕಿಯಾ 3310 ಫೀಚರ್ ಫೋನ್ ಸಾಕ್ಷಿಯಾಗಿದೆ.! ಒಂದು ಕಾಲದಲ್ಲಿ ಭಾರತ ಸೇರಿದಂತೆ ವಿಶ್ವದ ಎಲ್ಲರ ಅಚ್ಚುಮೆಚ್ಚಿನ ಫೋನ್ ಆಗಿದ್ದ ನೋಕಿಯಾ 3310 ಫೀಚರ್ ಫೋನ್ ಇದೀಗ 4G ಫೋನ್ ಆಗಿ ಮಾರುಕಟ್ಟೆಗೆ ಕಾಲಿಡುತ್ತಿದೆ.!!

ಹೌದು, 4G ಎಲಟಿಇ ಕನೆಕ್ಟಿವಿಟಿ ಮತ್ತು ಬ್ಲೂಟೂತ್ ಹೊಂದಿರುವ ನೂತನ ಮಾದರಿಯ ನೋಕಿಯಾ 3310 ಫೋನ್ ಅನ್ನು ಚೀನಾದ "ಟೀನಾ" ಪರಮಾಣಿಕರಿಸಿದ್ದು, 2018ಕ್ಕೆ ನೋಕಿಯಾ 3310 '4G' ಫೋನ್ ಮಾರುಕಟ್ಟೆಗೆ ಕಾಲಿಡಲಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.!! ಹಾಗಾದರೆ, ನೋಕಿಯಾ 3310 4G ಫೋನ್ ಏನೆಲ್ಲಾ ವೈಶಿಷ್ಟ್ಯತೆ ಹೊಂದಿರಲಿದೆ ಎಂಬುದನ್ನು ಮುಂದೆ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಫೋನ್ ಸ್ಕ್ರೀನ್ ದೊಡ್ಡದಾಗಿರಲಿದೆ.!!

ಫೋನ್ ಸ್ಕ್ರೀನ್ ದೊಡ್ಡದಾಗಿರಲಿದೆ.!!

2017 ರ ಅಕ್ಟೋಬರ್‌ನಲ್ಲಿ ಬಿಡುಗಡೆಯಾಗಿದ್ದ ನೋಕಿಯಾ 3310 3G ಫೋನ್ ಅನ್ನೇ ಸ್ವಲ್ಪ ಬದಲಾಯಿಸಿ ನೂತನ 4G ಪೋನ್ ಅನ್ನು ವಿನ್ಯಾಸ ಮಾಡಲಾಗಿದೆ. ಹಳೆಯ 3G ಫೋನ್‌ಗಿಂತಲೂ ಈ 4G ಫೋನ್ ಸ್ಕ್ರೀನ್ ಅನ್ನು 13% ರಷ್ಟು ದೊಡ್ಡದಾಗಿ ತಯಾರಿಸಲಾಗಿದೆ ಎಂದು ವರದಿಗಳು ಹೇಳಿವೆ.!!

How to Sharing a Mobile Data Connection with Your PC (KANNADA)
ಆಂಡ್ರಾಯ್ಡ್ ಫೋನ್!!

ಆಂಡ್ರಾಯ್ಡ್ ಫೋನ್!!

TD-LTE ಮತ್ತು TD-SCDMAಯ 4G ಎಲ್‌ಟಿಯ ಕನೆಕ್ಟಿವಿಟಿ ಹೊಂದಿರುವ ನೋಕಿಯಾ 3310 ಪೋನು ಆಂಡ್ಡ್ರಾಯ್ಡ್ ಫೋನ್ ಆಗಿರಲಿದೆ ಎಂದು ಹೇಳಲಾಗಿದೆ. ಇನ್ನು 16 MB ಆಂತರಿಕ ಮೆಮೊರಿ ಫೋನಿನಲ್ಲಿದ್ದು, SD ಕಾರ್ಡ್‌ ಹಾಕಿಕೊಳ್ಳುವ ಮೂಲಕ 32 ಜಿಬಿವರೆಗೆ ಮಮೊರಿಯನ್ನು ವಿಸ್ತರಿಸಿಕೊಳ್ಳುವ ಅವಕಾಶವನ್ನು ನೀಡಲಾಗಿದೆ.!!

1,200mAh ಬ್ಯಾಟರಿ

1,200mAh ಬ್ಯಾಟರಿ

ನೋಕಿಯಾ 3310 3G ಫೋನಿನಲ್ಲಿ ನೀಡಿದಹಾಗೆಯೇ ನೂತನ 4G ಫೋನಿನಲ್ಲಿಯೂ ತೆಗೆಯಬಹುದಾದ 1,200mAh ಬ್ಯಾಟರಿಯನ್ನು ನೀಡಲಾಗಿದೆ.!! ಕಡಿಮೆ ಸಾಮರ್ಥ್ಯದ ಬ್ಯಾಟರಿಯಾದರೂ ಕೂಡ 22 ಗಂಟೆಗಳ ಟಾಕ್ ಟೈಂ ಹಾಗೂ 1 ತಿಂಗಳ ಕಾಲ ಸ್ಟ್ಯಾಂಡ್ ಬೈ ಟೈಂ ಹೊಂದಿದೆ ಎನ್ನಲಾಗಿದೆ.

ಬೇರೆ ಏನೆಲ್ಲಾ ಫೀಚರ್ಸ್?

ಬೇರೆ ಏನೆಲ್ಲಾ ಫೀಚರ್ಸ್?

ನೋಕಿಯಾ 3310 4G ಫೋನಿನಲ್ಲಿ ಮೈಕ್ರೋ USB ಚಾರ್ಜಿಂಗ್ ಪೋರ್ಟ್ ಅಳವಡಿಸಲಾಗಿದ್ದು, ಫೋನ್ ಅನ್ನು ಕಂಪ್ಯೂಟರ್‌ಗೆ ಸಂಪರ್ಕಿಸಬಹುದು!! ಇನ್ನು ಬ್ಲೂಟೂತ್, 3.5ಹೆಡ್‌ಪೋನ್ ಜ್ಯಾಕ್ ಮತ್ತು ಎಫ್‍ಎಂ ರೇಡಿಯೋ ದಂತಹ ಹಲವು ಆಯ್ಕೆಗಳು ಫೋನಿನಲ್ಲಿ ಲಭ್ಯವಿವೆ.!!

ಬೆಲೆ ಎಷ್ಟಿರಬಹುದು?

ಬೆಲೆ ಎಷ್ಟಿರಬಹುದು?

ಇದೇ ಮೊದಲ ಭಾರಿ ಫೀಚರ್ ಫೋನ್ ಒಂದು 3G ನಂತರ ಇದೀಗ 4Gಗೆ ಬದಲಾಗಿ ಮಾರುಕಟ್ಟೆಗೆ ಕಾಲಿಡುತ್ತಿದ್ದು, ಫೋನ್ ಬೆಲೆ ಕೂಡ ಕುತೋಹಲ ಮೂಡಿಸಿದೆ. ಚೀನಾ ವೆಬ್‌ಸೈಟ್‌ಗಳ ಒಂದರ ಪ್ರಕಾರ, ಈ ಫೋನ್ ಬೆಲೆ 4 ಸಾವಿರ ರೂಪಾಯಿಗಳು.!!

ಓದಿರಿ:ಫೇಸ್‌ಬುಕ್ ಖಾತೆಗೆ ಆಧಾರ್ ಲಿಂಕ್!!?..ಇದಕ್ಕೆ ಫೇಸ್‌ಬುಕ್ ಹೇಳಿದ್ದೇನು ಗೊತ್ತಾ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
HMD Global may launch yet another variant of the Nokia 3310 feature phone.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot