Subscribe to Gizbot

ನೋಕಿಯಾ 3310-ಜಿಯೋ ಫೋನ್:ಯಾವುದು ಬೆಸ್ಟ್..?

Posted By: Precilla Dias

ಭಾರತೀಯ ಮಾರುಕಟ್ಟೆಯಲ್ಲಿ ಜಿಯೋ ಫೋನ್ ಸಾಕಷ್ಟು ಸದ್ದು ಮಾಡುತ್ತಿದೆ. ತನ್ನದೇ ವಿಶೇಷತೆಗಳನ್ನು ಹೊಂದುವ ಮೂಲಕ ಅತೀ ಕಡಿಮೆ ಬೆಲೆಗೆ ಅತೀ ಹೆಚ್ಚು ಜನರನ್ನು ತಲುಪುವಂತಹ ಕಾರ್ಯವನ್ನು ಮಾಡುತ್ತಿದೆ. ಇದೇ ಮಾದರಿಯಲ್ಲಿ ಮತ್ತೇ ಮಾರುಕಟ್ಟೆಗೆ ಬಂದಿರುವ ನೋಕಿಯಾ ತನ್ನ ಬೆಸ್ಟ್ ಫೀಚರ್ ಫೋನ್ ಗಳಲ್ಲಿ ಒಂದಾಗಿದ್ದ 3310 ಫೋನ್ ಅನ್ನು ಮಾರುಕಟ್ಟೆಗೆ ಹೊಸ ರೂಪದಲ್ಲಿ ರೀಲಿಸ್ ಮಾಡಿದೆ. ಅಲ್ಲದೇ ಈ ಬಾರಿ 4G ಸಫೋರ್ಟ್ ಮಾಡುವ ಆವೃತ್ತಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ನೋಕಿಯಾ 3310-ಜಿಯೋ ಫೋನ್:ಯಾವುದು ಬೆಸ್ಟ್..?

ಈ ಹಿನ್ನಲೆಯಲ್ಲಿ ಮಾರುಕಟ್ಟೆಯಲ್ಲಿ ಸಖತ್ ಸದ್ದು ಮಾಡುತ್ತಿರುವ ಜಿಯೋ ಫೋನ್ ಗೆ ನೋಕಿಯಾ 3310 ಪೋನ್ ಸವಾಲೊಡ್ಡಲಿದೆ ಎನ್ನಲಾಗಿದೆ. ಎಲ್ಲಾ ವಿಚಾರಗಳ ನೋಕಿಯಾ 3310 ಜಿಯೋ ಪೋನಿಗೆ ಸರ್ಧೆಯನ್ನು ನೀಡಲಿದೆ. ಈ ಹಿನ್ನಲೆಯಲ್ಲಿ ಈ ಎರಡು ಫೋನ್ ಗಳಲ್ಲಿ ಯಾವುದು ಬೆಸ್ಟ್..? ಮುಂದೆ ನೋಡುವ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವಿನ್ಯಾಸ:

ವಿನ್ಯಾಸ:

ವಿನ್ಯಾಸ ಮತ್ತು ಬಣ್ಣಗಳಲ್ಲಿ ನೋಕಿಯಾ 3310 ಮೊದಲ ಸ್ಥಾನವನ್ನು ಪಡೆದುಕೊಳ್ಳಲಿದೆ. ಈಗಾಗಲೇ ಹಳೇಯ ನೋಕಿಯಾ 3310 ಬಳಕೆದಾರರಿಗೆ ಸಖತ್ ಇಷ್ಟವಾಗಿತ್ತು. ಇದೇ ಮಾದರಿಯಲ್ಲಿ ನೋಕಿಯಾ 3310 ಸಹ ಬಳಕೆದಾರರಿಗೆ ಮೆಚ್ಚುಗೆಯಾಗಲಿದೆ. ಇದಲ್ಲದೇ ವಿವಿಧ ಬಣ್ಣಗಳಲ್ಲಿ ಈ ಫೋನ್ ದೊರೆಯಲಿದೆ. ಆದರೆ ಜಿಯೋ ಪೋನ್ ಒಂದೇ ಬಣ್ಣದಲ್ಲಿ ದೊರೆಯಲಿದ್ದು, ವಿನ್ಯಾಸವು ಸಾಮಾನ್ಯವಾಗಿದೆ.

ಸಾಫ್ಟ್ ವೇರ್:

ಸಾಫ್ಟ್ ವೇರ್:

ಸಾಫ್ ವೇರ್ ವಿಚಾರದಲ್ಲಿ ನೋಕಿಯಾ 3310 ಉತ್ತಮವಾಗಿದ್ದು, ಆಂಡ್ರಾಯ್ಡ್ ಆಪ್ ಗಳನ್ನು ಕೆಲವನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ. ಆದರೆ ಇದು ಜಿಯೋ ಫೋನಿನಲ್ಲಿ ಸಾಧ್ಯವಿಲ್ಲ. ಅದರಲ್ಲಿ ಕೇಲವ ಜಿಯೋ ನೀಡಿರುವ ಸೇವೆಗಳನ್ನು ಮಾತ್ರವೇ ಬಳಕೆ ಮಾಡಿಕೊಳ್ಳಬಹುದಾಗಿದೆ. ಅಲ್ಲದೇ ನೋಕಿಯಾದಲ್ಲಿ ವಾಟ್ಸ್ಆಪ್ ಮತ್ತು ಫೇಸ್ ಬುಕ್ ಆಪ್ ಗಳನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ.

ಕನೆಕ್ಟಿವಿಟಿ:

ಕನೆಕ್ಟಿವಿಟಿ:

ಇದಲ್ಲದೇ ಜಿಯೋ ಫೋನಿನ ಕೊರೆತೆ ಎನ್ನಿಸಿಕೊಂಡಿರುವ ವೈಫೈ ಮತ್ತು ಹಾಟ್ ಸ್ಪಾಟ್ ಆಯ್ಕೆಯೂ ನೋಕಿಯಾ 3310 ಫೋನಿನಲ್ಲಿ ಕಾಣಬಹುದಾಗಿದೆ. ಇದು ಈ ಫೋನಿನ ಹೈಲೆಟ್ ಗಳಲ್ಲಿ ಒಂದಾಗಲಿದೆ ಎಂದರೆ ತಪ್ಪಾಗುವುದಿಲ್ಲ.

ಭಾರತದಲ್ಲಿ ರೂ 25000 ದೊಳಗೆ ಖರೀದಿಸಬಹುದಾದ ಉತ್ತಮ ಆಕ್ಷನ್ ಕ್ಯಾಮೆರಾಗಳಿವು!

ಇನ್ನು ಇದೆ:

ಇನ್ನು ಇದೆ:

ನೋಕಿಯಾ 3310 ಫೋನಿನಲ್ಲಿ ಡ್ಯುಯಲ್ ಸಿಮ್ ಕಾರ್ಡ್ ಹಾಕಿಕೊಳ್ಳಬಹುದಾಗಿದೆ. ಅಲ್ಲದೇ ಇಂತಹದೆ ಸಿಮ್ ಹಾಕಿಕೊಳ್ಳಬೇಕು ಎನ್ನುವ ಕರಾರು ಇಲ್ಲ. ಆದರೆ ಜಿಯೋ ಫೋನಿನಲ್ಲಿ ಒಂದೇ ಸಿಮ್, ಆದುವೇ ಜಿಯೋ ಸಿಮ್ ಅನ್ನೇ ಮಾತ್ರ ಬಳಕೆ ಮಾಡಿಕೊಳ್ಳಬೇಕಾಗಿದೆ. ಇದನ್ನು ನೋಡಿದರೆ ನೋಕಿಯಾ ಫೋನ್ ಬೆಸ್ಟ್ ಎನ್ನಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Reliance JioPhone kicked off a new trend for the 4G feature phones and here comes the Nokia 3310 4G as well to compete with the same. The Nokia 3310 4G is yet to be announced for the global markets and its pricing remains unknown for now. Here is a comparison between JioPhone and Nokia 3310 4G.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot