ಸ್ಯಾಮ್‌ಸಂಗ್‌ ಗೆಲಾಕ್ಸಿಎಸ್‌ 4 ವರ್ಸ‌ಸ್ ನೋಕಿಯಾ 3310

Posted By:

ಸ್ಯಾಮ್‌ಸಂಗ್‌ ಕಂಪೆನಿ ಗೆಲಾಕ್ಸಿ ಎಸ್‌ 4 ಬಿಡುಗಡೆಯಾದ ಎರಡೇ ವಾರದಲ್ಲಿ 60 ಲಕ್ಷ ಎಸ್‌ 4 ಸ್ಮಾರ್ಟ್‌ಫೋನ್‌ ಮಾರಾಟ ಮಾಡಿದೆ. ವಿಶ್ವದಲ್ಲಿ ಈ ಮೊಬೈಲ್‌ ಹೊಸ ದಾಖಲೆಯನ್ನು ಬರೆಯಲಿದೆ ಎನ್ನುವ ಸುದ್ದಿಗಳು ಭಾರೀ ಹರಡುತ್ತಿದೆ. ಆದ್ರೆ ನೀವು ಏನೇ ಹೇಳಿ ಈ ಮೊಬೈಲ್‌ ವಿಶೇಷ ವಿಶೇಷತೆಗಳಿರಬಹುದು. ಬಳಕೆದಾರ ಸ್ನೇಹಿ ಅಂತ ಸ್ಯಾಮ್‌ಸಂಗ್‌ ಅಭಿಮಾನಿಗಳು ಹೇಳಬಹುದು ಆದ್ರೆ ಈ ಹಿಂದೆ ಬಿಡುಗಡೆ ಮಾಡಿದ ನೋಕಿಯಾ ಕಂಪೆನಿಯ 3310 ಫೀಚರ್‌ ಫೋನ್‌ ಮುಂದೆ ಇದು ಏನೇನು ಅಲ್ಲ! ಅದರ ಗುಣಮಟ್ಟ, ವಿಶೇಷತೆ ಮುಂದೆ ಗೆಲಾಕ್ಸಿ ಎಸ್‌ 4 ಸೋಲುತ್ತದೆ.

ಹೌದು. ಬಹಳಷ್ಟು ಜನ ಈ ಫೋನಿಗೆ ಬರೀ ಡಬ್ಬ ಫೋನ್‌ ಎಂದು ಹೇಳಬಹುದು. ಆದರೆ ಈ ಫೋನ್‌ ಎದುರು ಬೇರೆ ಫೋನ್‌ಗಳು ಸಪ್ಪೇಯಾಗಿ ಕಾಣುತ್ತದೆ. ಹಿಂದೆ ಬಹಳಷ್ಟು ಜನರ ಅಚ್ಚು ಮೆಚ್ಚಿನ ಫೋನಾಗಿದ್ದ ನೋಕಿಯಾ 3310 ಈಗ ಮಾರುಕಟ್ಟೆಗೆ ಬರುವುದಿಲ್ಲದಿದ್ದರೂ, ಅದರ ಗುಣಮಟ್ಟದ ಎದುರು ಬೇರೇ ಮೊಬೈಲ್‌ ಸ್ಮಾರ್ಟ್‌ಫೋನ್‌ಗಳು ಸೋಲುತ್ತವೆ.! ಹಾಗಾದ್ರೆ ಆ ಮೊಬೈಲ್‌ ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌ 4 ಎದುರು ಗ್ರೇಟ್‌ ಯಾಕೆ ಎನ್ನುವುದಕ್ಕೆ ಮುಂದಿನ ಪುಟಗಳಲ್ಲಿ ವಿವರಗಳಿವೆ. ಒಂದೊಂದೆ ಪುಟ ತಿರುಗಿಸಿ ಓದಿಕೊಂಡು ಹೋಗಿ. ನಂತರ ನಿಮ್ಮ ಅಭಿಪ್ರಾಯವನ್ನು ತಿಳಿಸಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ರಿಪೇರಿ ಸರಳ ಬಾಳಿಕೆ ದೀರ್ಘ!

ರಿಪೇರಿ ಸರಳ ಬಾಳಿಕೆ ದೀರ್ಘ!

ಸ್ಯಾಮ್‌ಸಂಗ್‌ ಗೆಲಾಕ್ಸಿ ವರ್ಸ‌ಸ್ ನೋಕಿಯಾ 3310

ನೋಕಿಯಾ 3310 ಪ್ಲಾಸ್ಟಿಕ್‌ನಿಂದ ಪ್ಯಾನಲ್‌ ತಯಾರಿಸಲಾಗಿದೆ, ಸ್ಕ್ರೀನ್‌ ಮೇಲೆ ಗೀರು, ಮೊಬೈಲ್‌ ಹಾಳಾದ್ರೆ ಬೇಗನೆ ನೀವು ಅದನ್ನು ಬದಲಾಯಿಸಬಹುದು.ದೀರ್ಘ ಕಾಲ ಬಾಳಿಕೆ ಮಾಡಬಹುದು. ಆದರೆ ಗೆಲಾಕ್ಸಿ ಎಸ್‌4ನಲ್ಲಿ ಇದು ಸಾಧ್ಯವೇ? ತುಂಬಾ ಸಮಯ ,ರಿಪೇರಿ ಮಾಡಲು ಹಣ ಖರ್ಚು ಮಾಡಬೇಕು.

ಮೇಲಿನಿಂದ ಬಿದ್ದರೇ ಏನ್‌ ಆಗಲ್ಲ!

ಮೇಲಿನಿಂದ ಬಿದ್ದರೇ ಏನ್‌ ಆಗಲ್ಲ!

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌ 4 ವರ್ಸ‌ಸ್ ನೋಕಿಯಾ 3310

ನೋಕಿಯಾ 3310 ಬಳಸಿದ್ದವರಿಗೆ ಗೊತ್ತಿರುತ್ತದೆ. ಈ ಮೊಬೈಲ್‌ ಎಷ್ಟು ಸಲ ಮೇಲಿನಿಂದ ಬಿದ್ದರೂ ಏನು ಆಗುದಿಲ್ಲ. ಒಂದು ವೇಳೆ ಬಿದ್ದು ಮೊಬೈಲ್‌ ಭಾಗಗಳು ಬೇರೆ ಬೇರೆ ಆದ್ರೂ ಅದನ್ನು ಕ್ಷಣ ಮಾತ್ರದಲ್ಲಿ ಜೋಡಿಸಿದ್ರೆ ಈ ಮೊಬೈಲ್‌ ಎಂದಿನಂತೆ ನಾನು ನಿಮ್ಮ ಸೇವೆ ಸದಾ ಇದ್ದೇನೆ ಎನ್ನುವಂತೆ ಕೆಲಸ ಮಾಡುತ್ತದೆ. ಆದರೆ ಗೆಲಾಕ್ಸಿ ಎಸ್ 4 ಬಿದ್ದರೆ , ಟಚ್‌ಸ್ಕ್ರೀನ್‌ ಗೀರುಗಳಾದ್ರೆ ಅದನ್ನು ಮತ್ತೆ ಅದನ್ನು ರಿಪೇರಿ ಮಾಡುವ ಶಾಪ್‌ಗೆ ಸೇರಿಸಬೇಕಾಗುತ್ತದೆ.

ಬ್ಯಾಟರಿಯಲ್ಲಿ ನಾನೇ ಸ್ಟ್ರಾಂಗು ಗುರು!

ಬ್ಯಾಟರಿಯಲ್ಲಿ ನಾನೇ ಸ್ಟ್ರಾಂಗು ಗುರು!

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌ 4 ವರ್ಸ‌ಸ್ ನೋಕಿಯಾ 3310

ಗೆಲಾಕ್ಸಿ ಎಸ್‌4ನ ಇದ್ದಲ್ಲಿ ನೀವು ಪ್ರತಿದಿನ ಚಾರ್ಜ್‌ ಮಾಡಬೇಕಾಗುತ್ತದೆ. ಒಂದು ವೇಳೆ ಜಾಸ್ತಿ ಬಳಕೆ ಮಾಡಿದ್ದಲ್ಲಿ ದಿನದಲ್ಲಿ ಎರಡು ಭಾರೀ ಚಾರ್ಜ್‌ ಮಾಡಬೇಕಾಗುತ್ತದೆ. ಆದರೆ ನೋಕಿಯಾದ ಈ ಫೋನಲ್ಲಿ ಈ ಸಮಸ್ಯೆಯೇ ಬರುವುದಿಲ್ಲ. ಫುಲ್‌ ಚಾರ್ಜ್‌ ಮಾಡಿದ್ದಲ್ಲಿ ಅಗತ್ಯಕ್ಕೆ ತಕ್ಕಂತೆಬಳಸಿದ್ದಲ್ಲಿ ಮೂರು ನಾಲ್ಕು ದಿನ ಮೊಬೈಲ್‌ನ್ನು ಬಳಸಬಹುದು. ಬ್ಯಾಟರಿ ಬೇಗ ಮುಗಿಯುತ್ತದೆ ಎನ್ನುವ ದೂರು ಈ ಮೊಬೈಲ್‌ಗೆ ಬರುವುದು ಬಹಳ ಅಪರೂಪ.

ಬೆಲೆ ವಿಚಾರದಲ್ಲಿ ಚೀಪ್‌!

ಬೆಲೆ ವಿಚಾರದಲ್ಲಿ ಚೀಪ್‌!

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌ 4 ವರ್ಸ‌ಸ್ ನೋಕಿಯಾ 3310

ಬೆಲೆ ವಿಚಾರಕ್ಕೆ ಬಂದಾಗ ನೀವು 37ಸಾವಿರ ರೂ. ಖರ್ಚು‌ ಮಾಡಿ ಗೆಲಾಕ್ಸಿ ಎಸ್ 4ನ್ನು ಖರೀದಿಸಬೇಕು. ಆದರೆ ಅದೇ ಬೆಲೆಗೆ 15 ನೋಕಿಯಾ 3310 ಖರೀದಿಸಬಹುದು.ಆದರೆ ಬೇಸರದ ಸಂಗತಿ ಈಗ ಈ ಫೋನ್‌ ಮಾರುಕಟ್ಟೆಗೆ ಬರುತ್ತಿಲ್ಲ. ಆದರೂ ಸೆಕೆಂಡ್‌ ಹ್ಯಾಂಡ್‌ ನೋಕಿಯಾ ಫೋನನ್ನು ನೀವು ಒಂದು ಸಾವಿರದೊಳಗೆ ಖರೀದಿಸಬಹುದು.

ಸ್ಕ್ರೀನ್‌ ವಿಚಾರದಲ್ಲೇ ನಾನೇ ಬ್ರೈಟ್‌!

ಸ್ಕ್ರೀನ್‌ ವಿಚಾರದಲ್ಲೇ ನಾನೇ ಬ್ರೈಟ್‌!

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌ 4 ವರ್ಸ‌ಸ್ ನೋಕಿಯಾ 3310

ಇನ್ನೂ ಸ್ಕ್ರೀನ್‌ ವಿಚಾರಕ್ಕೆ ಬಂದ್ರೆ ಗೆಲಾಕ್ಸಿ ಎಸ್‌4 Super AMOLED ಸ್ಕ್ರೀನ್ ಹೊಂದಿದೆ. ಆದರೆ ಹೊರಗಡೆ ಸೂರ್ಯ‌ನ ಬೆಳಕಿನಲ್ಲಿ ಈ ಸ್ಮಾರ್ಟ್‌ಫೋನ್‌ಲ್ಲಿ ಕೆಲಸ ಮಾಡಲು ಕಷ್ಟ. ಆದರೆ ಈ ಫೋನ್‌ಲ್ಲಿ ಈ ಸಮಸ್ಯೆಗೆ ಬರುವುದಿಲ್ಲ ಮೋನೋಕ್ರೋಮ್‌ ಎಲ್‌ಸಿಡಿ ಸ್ಕ್ರೀನ್ ಹೊಂದಿದೆ. ಮಧ್ಯಾಹ್ನ,ರಾತ್ರಿ ದಿನದ 24 ಗಂಟೆಯೂ ನೀವು ಆರಾಮವಾಗಿ ಈ ಫೋನ್‌ನ್ನು ಬಳಸಬಹುದು. ಬೆಲೆ ಕಡಿಮೆ ಜೊತಗೆ ಬಳಕೆದಾರನ ಸ್ನೇಹಿ ಎಂದು ಈ ಫೋನನ್ನು ಕರೆದರರೂ ತಪ್ಪಿಲ್ಲ.

ರಿಂಗ್‌ಟೋನ್‌ ಅಂದ್ರೆ ನೋಕಿಯಾ!

ರಿಂಗ್‌ಟೋನ್‌ ಅಂದ್ರೆ ನೋಕಿಯಾ!

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌ 4 ವರ್ಸ‌ಸ್ ನೋಕಿಯಾ 3310

ಸರಿ ಇನ್ನೂ ಲೌಡ್‌ ಸ್ಪೀಕರ್‍ ವಿಷಯಕ್ಕೆ ಬಂದ್ರೆ ಗೆಲಾಕ್ಸಿ ಎಸ್‌ 4 ನಲ್ಲಿ ನೀವು ಇಷ್ಟಬಂದ ಹಾಡನ್ನು ರಿಂಗ್‌ ಟೋನ್‌ ಆಗಿ ಬಳಸಬಹುದು.ಆದರೆ ನೋಕಿಯಾ ಫೋನಲ್ಲಿ ಇಷ್ಟಬಂದ ಹಾಡನ್ನು ರಿಂಗ್‌ಟೋನ್‌ ಬಳಸಲು ಸಾಧ್ಯವಿಲ್ಲದಿದ್ದರೂ ರಿಂಗ್‌ಟೋನ್‌ ಸೌಂಡ್‌ ಮಾತ್ರ ಸುಪರ್‌‌. ಈ ರಿಂಗ್‌ ಟೋನ್‌ ಬಹಳ ದೂರದವರೆಗೆ ಕೇಳುತ್ತಿರುತ್ತದೆ.

ನೀವೇ ರಿಂಗ್‌ಟೋನ್‌ ಕಂಪೋಸರ್‌!

ನೀವೇ ರಿಂಗ್‌ಟೋನ್‌ ಕಂಪೋಸರ್‌!

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌ 4 ವರ್ಸ‌ಸ್ ನೋಕಿಯಾ 3310

ಈ ವಿಚಾರದಲ್ಲಿ ನೋಕಿಯಾ ಮೊಬೈಲ್‌ ಗ್ರೇಟ್‌. ಈ ಮೊಬೈಲ್‌ನಲ್ಲಿ ನಿಮಗೆ ಬೇಕಾದ ಮ್ಯೂಸಿಕ್‌ನ್ನು ನೀವೇ ಕಂಪೋಸ್‌ ಮಾಡುವ ಮೂಲಕ ರಿಂಗ್‌ಟೋನ್‌ ಕಂಪೋಸರ್‌ ಆಗಬಹುದಿತ್ತು.ಆದರೆ ಈ ಗೆಲಾಕ್ಸಿ ಎಸ್‌4ನಲ್ಲಿ ಈ ಅವಕಾಶವೇ ಇಲ್ಲ ಬಿಡಿ. ಮೊಬೈಲ್‌ನಲ್ಲಿ ಸ್ಟೋರ್‌ ಆಗಿರುವ ಟೋನ್‌ಗಳನ್ನೇ ನೀವು ರಿಂಗ್‌ಟೋನ್‌ ಆಗಿ ಬಳಸಬೇಕು ಅಷ್ಟೇ.

ಗೇಮ್ಸ್‌ ಆಡಿ ಎಂಜಾಯ್‌ ಮಾಡಿ!

ಗೇಮ್ಸ್‌ ಆಡಿ ಎಂಜಾಯ್‌ ಮಾಡಿ!

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌ 4 ವರ್ಸ‌ಸ್ ನೋಕಿಯಾ 3310

ಗೇಮ್ಸ್‌ ವಿಚಾರಕ್ಕೆ ಬಂದಾಗ ನೋಕಿಯಾ ಗೇಮ್ಸ್‌ಗಳು Pairs II, Space Impact, Bantumi, ಕೊನೆಗೆ ಸ್ನೇಕ್‌ ಆಟ ಆಡುವುದೇ ಅಂದರೆ ಚೆಂದ. ಗೆಲಾಕ್ಸಿ ಮೊಬೈಲ್‌ನಲ್ಲಿ ನೀವು ಗೇಮ್ಸ್‌ ಆಡಬಹುದು. ಆದರೇ ಪ್ರಿ ಲೋಡೆಡ್‌ ಆಗಿ ಯಾವ ಗೇಮ್ಸ್‌ ಬರುವುದಿಲ್ಲ.

ತುರ್ತು‌ ಕರೆ ಸುಲಭ!

ತುರ್ತು‌ ಕರೆ ಸುಲಭ!

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌ 4 ವರ್ಸ‌ಸ್ ನೋಕಿಯಾ 3310

ತುರ್ತು‌ ಕರೆಯನ್ನು ನೋಕಿಯಾ ಫೋನಲ್ಲಿ ಮಾಡುವುದು ಸುಲಭ. ನೋಕಿಯಾ ಅನ್‌ಲಾಕ್‌ ಒಪನ್‌ ಮಾಡಿ ನಾಲ್ಕು ,ಐದು ಬಟನ್‌ ಪ್ರೆಸ್‌ ಮಾಡಿದ್ರೆ ಸುಲಭವಾಗಿ ತುರ್ತು‌ ಕರೆ ಮಾಡಬಹುದು. ಆದರೆ ಗೆಲಾಕ್ಸಿ ಎಸ್‌4ನಲ್ಲಿ ಮೊದಲು ಅನ್‌ಲಾಕ್‌ ಮಾಡಿ ಸ್ಕ್ರೀನ್‌ ಓಪನ್‌ ಆದಮೇಲೆ, ಫೋನ್‌ ಅಪ್‌ಗೆ ಹೋಗಿ, ಕೀ ಪ್ಯಾಡ್‌ ಹೋಗಿ, ಕೀ ಟೈಪ್‌ ಮಾಡುವಾಗ ಬಹಳ ಸಮಯ ತಗೆದುಕೊಳ್ಳುತ್ತದೆ.

ಕಳ್ಳರ ಭಯವೇ ಇಲ್ಲ!

ಕಳ್ಳರ ಭಯವೇ ಇಲ್ಲ!

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌ 4 ವರ್ಸ‌ಸ್ ನೋಕಿಯಾ 3310

ಕೊನೆಯದಾಗಿ ಬಹಳ ಮುಖ್ಯ. ಈ ಮೊಬೈಲ್‌ ನಿಮ್ಮಲ್ಲಿದ್ದರೆ ಕಳ್ಳರ ಭಯವೇ ಇಲ್ಲ. ಯಾರು ಕದಿಯಲು ಮನಸ್ಸೇ ಮಾಡುವುದಿಲ್ಲ. ಹಾಗಾಗಿ ನೀವು ಚಾರ್ಜ್‌ ಮಾಡುವಾಗಲೋ, ಅಥವಾ ಬಸ್ಸಿನಲ್ಲಿ ಪ್ರಯಾಣಿಸುವಗ ಈ ಮೊಬೈಲ್‌ಗೆ ಹೆಚ್ಚು ಆಲೋಚನೆ ಮಾಡಬೇಕಿಲ್ಲ. ಆದರೆ ಈ ಗೆಲಾಕ್ಸಿ ಮೊಬೈಲ್‌ ಇದ್ದರೆ ಕಳ್ಳರ ಭಯ, ಜೊತೆಗೆ ಎಲ್ಲಿ ಬೇಕಲ್ಲಿ ಚಾರ್ಜ್ ಮಾಡಲು ಸಾಧ್ಯವಿಲ್ಲ. ಚಾರ್ಜ್ ಮಾಡುವಾಗಲು ಆ ಮೊಬೈಲ್‌ಗೆ ರಕ್ಷಣೆ ನೀಡಲು ಅದರ ಜೊತೆಯಲ್ಲೇ ಒಬ್ಬರು ಇರಬೇಕು. ಒಟ್ಟಿನಲ್ಲಿ ದುಬಾರಿ ಬೆಲೆ, ಟೈಮ್‌ ವೇಸ್ಟ್‌ ಜೊತೆಗೆ ತಲೆಯಲ್ಲಿ ಈ ಮೊಬೈಲ್‌ನದ್ದೇ ಚಿಂತೆ.

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌ 4 ವರ್ಸ‌ಸ್ ನೋಕಿಯಾ 3310

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌ 4 ವರ್ಸ‌ಸ್ ನೋಕಿಯಾ 3310

ಈಗ ಹೇಳಿ ದುಬಾರಿ ಬೆಲೆಯ ಗೆಲಾಕ್ಸಿ ಎಸ್‌ 4 ಉತ್ತಮವೋ ಕಡಿಮೆ ಬೆಲೆಯ ನೋಕಿಯಾ ಫೋನ್‌ ಉತ್ತಮವೋ. ನಿಮ್ಮ ಅಭಿಪ್ರಾಯವನ್ನು ಕಮೆಂಟ್‌ ಬಾಕ್ಸ್‌ ಬರೆಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot