ನೋಕಿಯಾ 5 ಸ್ಮಾರ್ಟ್‌ಪೋನು: 13 MP ಕ್ಯಾಮೆರಾ, ಆಂಡ್ರಾಯ್ಡ್ ನ್ಯಾಗಾ..!
ನೋಕಿಯಾ 5 ಸ್ಮಾರ್ಟ್‌ಪೋನಿನ ಕುರಿತು ನೋಡುವುದಾದರೆ ಈ ಪೋನು ಬಜೆಟ್ ಪೋನಿನ ನಂತರ ಬೆಲೆಯಲ್ಲಿ ದೊರೆಯಲಿದ್ದು, 12,000 ರೂ.ಗಳ ಅಸುಪಾಸಿನಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿರಲಿದೆ.
ನೋಕಿಯಾ ಸ್ಮಾರ್ಟ್‌ಪೋನುಗಳ ಕುರಿತು ಇದ್ದ ಕುತೂಹಲಗಳಿಗೆ ತೆರೆ ಬಿದಿದ್ದು, ಫೆಬ್ರವರಿ 26 ರಂದು ಬಾರ್ಸಿಲೋನಾದಲ್ಲಿ ನಡೆದ ವರ್ಲ್ಡ್ ಮೊಬೈಲ್ ಕಾಂಗ್ರೆಸ್ ನಲ್ಲಿ ನೋಕಿಯಾ ತನ್ನ ನೂತನ ಸ್ಮಾರ್ಟ್‌ಪೋನುಗಳಾದ ನೋಕಿಯಾ 3, ನೋಕಿಯಾ 5 ಮತ್ತು ನೋಕಿಯಾ 6 ಹಾಗೂ ನೋಕಿಯಾ 3310 ಸ್ಮಾರ್ಟ್‌ಪೋನುಗಳನ್ನು ಅನಾವರಣಗೊಳಿಸಿದೆ.

ಓದಿರಿ: ಮತ್ತೆ ಬಿಡುಗಡೆ ಆಯ್ತು ನೋಕಿಯಾ 3310: 1 ತಿಂಗಳ ಬ್ಯಾಟರಿ ಬಾಳಿಕೆ, ಕ್ಯಾಮೆರಾ ಇನ್ನು ಹಲವು.!!!
ಈ ಹಿನ್ನಲೆಯಲ್ಲಿ ನೋಕಿಯಾ 5 ಸ್ಮಾರ್ಟ್‌ಪೋನಿನ ಕುರಿತು ನೋಡುವುದಾದರೆ ಈ ಪೋನು ಬಜೆಟ್ ಪೋನಿನ ನಂತರ ಬೆಲೆಯಲ್ಲಿ ದೊರೆಯಲಿದ್ದು, 12,000 ರೂ.ಗಳ ಅಸುಪಾಸಿನಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿರಲಿದೆ. ಈ ಪೋನಿನ ವಿಶೇಷತೆಗಳ ಕುರಿತ ಮಾಹಿತಿ ಮುಂದಿನಂತಿದೆ.

5.2 ಇಂಚಿನ HD ಡಿಸ್‌ಪ್ಲೇ:
ನೋಕಿಯಾ 5 ಸ್ಮಾರ್ಟ್‌ಪೋನು 5.2 ಇಂಚಿನ HD ಡಿಸ್‌ಪ್ಲೇಯನ್ನು ಹೊಂದಿದ್ದು, ಉತ್ತಮ ಪಿಚ್ಚರ್ ಕ್ವಾಲಿಟಿಯಿದ್ದು, ಗೇಮಿಂಗ್ ಅನುಭವ ಉತ್ತಮವಾಗಿದೆ ಎನ್ನಲಾಗಿದೆ.

ಆಂಡ್ರಾಯ್ಡ್ 7.0:
ಶೀಘ್ರವೇ ಮಾರುಕಟ್ಟೆಗೆ ಬರಲಿರುವ ನೋಕಿಯಾ 5 ಸ್ಮಾರ್ಟ್‌ಪೋನು ನೂತನ ಆಂಡ್ರಾಯ್ಡ್ ನ್ಯಾಗಾದಲ್ಲಿ ಕಾರ್ಯನಿರ್ವಹಸಲಿದೆ ಎನ್ನಲಾಗಿದ್ದು, ಅಲ್ಲದೇ ಸ್ನಾಪ್‌ಡ್ರಾಗನ್ 430 ಪ್ರೋಸೆಸರ್ ಇದರಲ್ಲಿದೆ.

2GB RAM:
ನೋಕಿಯಾ 5 ಸ್ಮಾರ್ಟ್‌ಪೋನಿನಲ್ಲಿ ವೇಗದ ಕಾರ್ಯನಿರ್ವಹಣೆಗಾಗಿ 2 GB RAM ಅಳವಡಿಸಲಾಗಿದ್ದು, 16 GB ಆಂತರಿಕ ಮೆಮೊರಿಯನ್ನು ಹೊಂದಿದ್ದು, ಮೈಕ್ರೋSD ಕಾರ್ಡ್ ಹಾಕಿಕೊಳ್ಳುವ ಅವಕಾಶ ನೀಡಲಾಗಿದ್ದು, 128 GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳಬಹುದಾಗಿದೆ.

13 MP/ 5 MP ಕ್ಯಾಮೆರಾ:
ನೋಕಿಯಾ 5 ಸ್ಮಾರ್ಟ್‌ಪೋನಿನ ಹಿಂಭಾಗದಲ್ಲಿ 13 MP ಕ್ಯಾಮೆರಾವನ್ನು ಅಳವಡಿಸಲಾಗಿದ್ದು, ಮುಂಭಾಗದಲ್ಲಿ 5 MP ಕ್ಯಾಮೆರಾವನ್ನು ನೀಡಲಾಗಿದೆ. ಉತ್ತಮ ಗುಣಮಟ್ಟದ ಪೋಟೋ ಸೆರೆ ಹಿಡಿಯಲು ಈ ಪೋನು ಶಕ್ತವಾಗಿದೆ.

3000 mAh ಬ್ಯಾಟರಿ:
ನೋಕಿಯಾ 5 ಸ್ಮಾರ್ಟ್‌ಪೋನಿನಲ್ಲಿ 3000 mAh ಬ್ಯಾಟರಿ ಅಳವಡಿಸಲಾಗಿದ್ದು, 4G ಸಪೋರ್ಟ್ ಮಾಡಲಿದೆ. Micro-USB 2.0 ಸೇರಿದಂತೆ ಹಲವು ಹೊಸತನಗಳು ಈ ಪೋನಿನಲ್ಲಿದೆ.


Click it and Unblock the Notifications








