ನೋಕಿಯಾ 5 ಸ್ಮಾರ್ಟ್‌ಫೋನ್ ಲಾಂಚ್: ಬೆಲೆ, ವಿಶೇಷತೆ ಕುರಿತ ಕಂಪ್ಲೀಟ್ ಡಿಟ್ಲೈಲ್ಸ್..!
ಭಾರತೀಯರ ಮನಸ್ಥಿತಿಯನ್ನು ಅರ್ಥ ಮಾಡಿಕೊಂಡು ಕಡಿಮೆ ಬೆಲೆಯಿಂದ ಹಿಡಿದು ಹೆಚ್ಚಿನ ಬೆಲೆಯವರೆಗಿನ ಸ್ಮಾರ್ಟ್‌ಫೋನ್ ಲಾಂಚ್ ಮಾಡಿ ಬುದ್ಧಿವಂತಿಕೆ ಮೆರೆದಿದೆ.
ನೋಕಿಯಾ ಈ ಹಿಂದೆ ಭಾರತೀಯಾ ಮಾರುಕಟ್ಟೆಯಲ್ಲಿ ಹೊಂದಿದ್ದ ಹಿಡಿತದ ಉಪಯೋಗವನ್ನು ಈ ಬಾರಿ ಬಳಸಿಕೊಳ್ಳುತ್ತಿದೆ. ಭಾರತೀಯರ ಮನಸ್ಥಿತಿಯನ್ನು ಅರ್ಥ ಮಾಡಿಕೊಂಡು ಕಡಿಮೆ ಬೆಲೆಯಿಂದ ಹಿಡಿದು ಹೆಚ್ಚಿನ ಬೆಲೆಯವರೆಗಿನ ಸ್ಮಾರ್ಟ್‌ಫೋನ್ ಲಾಂಚ್ ಮಾಡಿ ಬುದ್ಧಿವಂತಿಕೆ ಮೆರೆದಿದೆ.
ಓದಿರಿ: ರೆಡ್ಮಿ, ಲಿನೋವೊ, ಮೊಟೊ ಗಳಿಗೆ ಭರ್ಜರಿ ಸ್ಪರ್ಧೆ ನೀಡುವ ನೋಕಿಯಾ 3 ಸ್ಮಾರ್ಟ್ಫೋನ್ ಅಚ್ಚರಿ ಬೆಲೆಗೆ ಮಾರಾಟ..!!

ಈಗಾಗಲೇ ನಾವು ನೋಕಿಯಾ 6 ಮತ್ತು ನೋಕಿಯಾ 3 ಸ್ಮಾರ್ಟ್‌ಫೋನ್‌ಗಳ ವಿಶೇಷತೆಗಳೇನು, ಅವುಗಳ ಬೆಲೆ ಎಷ್ಟು ಎಂಬುದರ ಸಂಫೂರ್ಣ ವಿವರವನ್ನು ನೀಡಿದ್ದೇವು. ಈಗ ಅದೇ ಮಾದರಿಯಲ್ಲಿ ಮತ್ತೊಂದು ಮಧ್ಯಮ ಬೆಲೆಯ ಸ್ಮಾರ್ಟ್‌ಫೋನ್ ಆದ ನೋಕಿಯಾ 5 ಕುರಿತ ವಿವರಗಳು ಇಲ್ಲಿದೆ.
ನೋಕಿಯಾ 5 ಸ್ಮಾರ್ಟ್‌ಪೋನಿನಲ್ಲಿ ಫಿಂಗರ್ ಪ್ರಿಂಟ್ ಸ್ಕ್ಯಾನರ್‌ನೊಂದಿಗೆ 5.2 ಇಂಚಿನ HD ಡಿಸ್‌ಪ್ಲೇ ಅವಳಡಿಸಲಾಗಿದ್ದು, ನೂತನ ಆಂಡ್ರಾಯ್ಡ್ ನ್ಯಾಗಾದಲ್ಲಿ ಈ ಫೋನ್ ಕಾರ್ಯನಿರ್ವಹಿಸಿಸಲಿದೆ. ಸ್ನಾಪ್ ಡ್ರಾಗನ್ 430 ಪ್ರೋಸೆಸರ್, 2 GB RAM ಹಾಗೂ 16 GB ಆಂತರಿಕ ಮೆಮೊರಿ ಕಾಣಬಹುದಾಗಿದೆ.
ಓದಿರಿ: ನೋಕಿಯಾ ಆಂಡ್ರಾಯ್ಡ್ ಸ್ಮಾರ್ಟ್ಫೋನ್ಗಳು: ಮೂರರಲ್ಲಿ ಯಾವುದು

ಈ ಪೋನಿನಲ್ಲಿ ಮೈಕ್ರೋ SD ಕಾರ್ಡ್ ಮೂಲಕ 128 GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ ನೀಡಲಾಗಿದ್ದು, ಹಿಂಭಾಗದಲ್ಲಿ 13 MP ಕ್ಯಾಮೆರಾ, ಮುಂಭಾಗದಲ್ಲಿ 5 MP ಕ್ಯಾಮೆರಾ ಇದೆ. 3000 mAh ಬ್ಯಾಟರಿ ಇದ್ದು, 4G ಸಪೋರ್ಟ್ ಮಾಡಲಿದೆ.
ನೋಕಿಯಾ 5 ಸ್ಮಾರ್ಟ್‌ಫೋನ್ ಆಫ್‌ಲೈನ್ ಸ್ಟೋರುಗಳಲ್ಲಿ ಮಾತ್ರವೇ ದೊರೆಯಲಿದ್ದು ಜುಲೈ 7 ರಿಂದ ಮಾರಾಟ ಆರಂಭವಾಗಲಿದೆ. ಈ ಪೋನು ರೂ. 12,899ಗಳಿಗೆ ಲಭ್ಯವಿದೆ.


Click it and Unblock the Notifications








