18,499 ರುಪಾಯಿಗೆ ನೋಕಿಯಾ 6.1 ಪ್ಲಸ್ 6ಜಿಬಿ ಮೆಮೊರಿ ವೇರಿಯಂಟ್ ಭಾರತದಲ್ಲಿ ಲಭ್ಯ

By Gizbot Bureau
|

MWC 2019 ಟೆಕ್ ಶೋ ಹತ್ತಿರವಾಗುತ್ತಿದೆ ಮತ್ತು ಈ ಕಾರ್ಯಕ್ರಮದಲ್ಲಿ ಫ್ಲಾಗ್ ಶಿಪ್ ಸ್ಮಾರ್ಟ್ ಫೋನ್ ಗಳನ್ನು ಬಿಡುಗಡೆಗೊಳಿಸಲಿರುವ ಪ್ರಮುಖ ಕಂಪೆನಿಗಳಲ್ಲಿ ನೋಕಿಯಾ ಪ್ರಮುಖ ಸ್ಥಾನದಲ್ಲಿದೆ. ಇದೇ ಸಂದರ್ಬದಲ್ಲಿ ನೋಕಿಯಾ ಸಂಸ್ಥೆ ಭಾರತದಲ್ಲಿ ತನ್ನ ನೋಕಿಯಾ 6.1 ಪ್ಲಸ್ ನ 6ಜಿಬಿ ವೇರಿಯಂಟ್ ನ ಫೋನ್ ನ್ನು ಬಿಡುಗಡೆಗೊಳಿಸಿದೆ.

18,499 ರುಪಾಯಿಗೆ ನೋಕಿಯಾ 6.1 ಪ್ಲಸ್ 6ಜಿಬಿ ಮೆಮೊರಿ ವೇರಿಯಂಟ್ ಭಾರತದಲ್ಲಿ ಲಭ್ಯ

ಈ ತಿಂಗಳ ಆರಂಭದಲ್ಲಿ ಹೈ ಎಂಡ್ ಮಾಡೆಲ್ ನ ನೋಕಿಯಾ 6.1 ಪ್ಲಸ್ ಮತ್ತು ನೋಕಿಯಾ 5.1 ಪ್ಲಸ್ ನ್ನು ದೇಶದಲ್ಲಿ ಸದ್ಯದಲ್ಲೇ ಬಿಡುಗಡೆಗೊಳಿಸಲಾಗುತ್ತದೆ ಎಂಬ ಸುದ್ದಿ ಹಬ್ಬಿತ್ತು. ನೋಕಿಯಾ 6.1 6ಜಿಬಿ ಮೆಮೊರಿ ಮತ್ತು 64ಜಿಬಿ ಸ್ಟೋರೇಜ್ ಆಯ್ಕೆಯಲ್ಲಿ ಬರುತ್ತದೆ. ಹಾಗೆಯೇ ನೋಕಿಯಾ 5.1 ಎರಡು ವೇರಿಯಂಟ್ ನಲ್ಲಿ – 4ಜಿಬಿ ಮೆಮೊರಿ ಮತ್ತು 64ಜಿಬಿ ಸ್ಟೋರೇಜ್ ಆಯ್ಕೆ, 6ಜಿಬಿ ಮೆಮೊರಿ ಮತ್ತು 64ಜಿಬಿ ಸ್ಟೋರೇಜ್ ಆಯ್ಕೆಯಲ್ಲಿ ಸಿಗುತ್ತದೆ ಎಂದು ಹೇಳಲಾಗಿತ್ತು.

ನೋಕಿಯಾ 6.1 ಪ್ಲಸ್ 6ಜಿಬಿ ಮೆಮೊರಿ

ನೋಕಿಯಾ 6.1 ಪ್ಲಸ್ 6ಜಿಬಿ ಮೆಮೊರಿ

ಇದೀಗ ನೋಕಿಯಾ 6.1 ಪ್ಲಸ್ 6ಜಿಬಿ ಮೆಮೊರಿ ವೇರಿಯಂಟ್ ದೇಶದಲ್ಲಿ ಬಿಡುಗಡೆಗೊಂಡಿದೆ. ಅಧಿಕೃತ ನೋಕಿಯಾ ಸ್ಟೋರ್ ಗಳಲ್ಲಿ ಖರೀದಿಗೆ ಈಗಾಗಲೇ ಲಭ್ಯವಿದೆ. ಮಾರ್ಚ್ 1 ರಿಂದ ಆಫೀಸ್ ಲಭ್ಯತೆ ಕೂಡ ಆರಂಭವಾಗುತ್ತದೆ.

ನೋಕಿಯಾ 6.1 ಪ್ಲಸ್ 6ಜಿಬಿ ಮೆಮೊರಿ ವೇರಿಯಂಟ್ ಬೆಲೆ

ನೋಕಿಯಾ 6.1 ಪ್ಲಸ್ 6ಜಿಬಿ ಮೆಮೊರಿ ವೇರಿಯಂಟ್ ಬೆಲೆ

ಈ ಫೋನಿನ ಬೆಲೆಯ ಮಾಹಿತಿಗಳ ಬಗ್ಗೆ ಹೇಳುವುದಾದರೆ 6GB RAM ವೇರಿಯಂಟ್ ನ ಸ್ಮಾರ್ಟ್ ಫೋನ್ Rs. 18,499 ಸಿಗುತ್ತದೆ. ಮೂರು ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ-ಮಿಡ್ ನೈಟ್ ನೀಲಿ, ಬಿಳಿ ಮತ್ತು ಕಪ್ಪು. ಏರ್ ಟೆಲ್ ನಲ್ಲಿ 2000 ರುಪಾಯಿಯ ಇನ್ಸೆಂಟ್ ಕ್ಯಾಷ್ ಬ್ಯಾಕ್ ಸೌಲಭ್ಯವಿದೆ ಮತ್ತು 240GB ಡಾಟಾ 12 ತಿಂಗಳ ಅವಧಿಗೆ Rs. 199, Rs. 249 ಮತ್ತು Rs. 448 ರೀಚಾರ್ಜ್ ಮಾಡಿಸಿಕೊಳ್ಳುವುದರಿಂದ ಸಿಗುತ್ತದೆ.

ವೈಶಿಷ್ಟ್ಯತೆಗಳು ಮತ್ತು ವಿಶೇಷತೆಗಳು

ವೈಶಿಷ್ಟ್ಯತೆಗಳು ಮತ್ತು ವಿಶೇಷತೆಗಳು

ಮೆಮೊರಿ ವಿಚಾರವನ್ನು ಹೊರತುಪಡಿಸಿದರೆ ಇನ್ಯಾವುದೇ ರೀತಿಯ ಬಲಾವಣೆಯು ವೈಶಿಷ್ಟ್ಯೆತೆಗಳಲ್ಲಿ ಇರುವುದಿಲ್ಲ. ನೋಕಿಯಾ Te Nokia 6.1 ಪ್ಲಸ್ ಆಂಡ್ರಾಯ್ಡ್ ಒನ್ ಸ್ಮಾರ್ಟ್ ಫೋನ್ ಆಗಿದ್ದು ಆಂಡ್ರಾಯ್ಡ್ 9.0 ಪೈ ಅಪ್ ಡೇಟ್ ನ್ನು ಪಡೆಯಲಿದೆ.ಇದು 5.8-ಇಂಚಿನ FHD+ ನಾಚ್ ಡಿಸ್ಪ್ಲೇ ಹೊಂದಿದೆ ಮತ್ತು ಸ್ನ್ಯಾಪ್ ಡ್ರ್ಯಾಗನ್ 636 ಸಾಕೆಟ್ ನ್ನು ಹೊಂದಿದೆ. ಡುಯಲ್ ಕ್ಯಾಮರಾ ವ್ಯವಸ್ಥೆ ಫೋನಿನಲ್ಲಿದ್ದು 16MP + 5MP ಸೆನ್ಸರ್ ನ್ನು ಹಿಂಭಾಗದಲ್ಲಿ ಹೊಂದಿದೆ ಮತ್ತು ಮುಂಭಾಗದಲ್ಲಿ 16MP ಸೆಲ್ಫೀ ಕ್ಯಾಮರಾ ವ್ಯವಸ್ಥೆ ಇದೆ.ಫೋನಿನ ಬ್ಯಾಟರಿ 3060mAh ಸಾಮರ್ಥ್ಯದ್ದಾಗಿದೆ. ಹಿಂಭಾಗದಲ್ಲಿ ಫಿಂಗರ್ ಪ್ರಿಂಟ್ ಸೆನ್ಸರ್ ಮತ್ತು ಗ್ಲಾಸ್ ಲೇಯರ್ ನ್ನು ಹೊಂದಿದೆ.

Most Read Articles
Best Mobiles in India

Read more about:
English summary
Nokia 6.1 Plus 6GB RAM variant now available in India for Rs. 18,499

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X