Subscribe to Gizbot

ಕೊನೆಗೂ ನಮ್ಮ ಮೆಟ್ರೋ ಸಂಪೂರ್ಣ ಸಂಚಾರ ಆರಂಭಕ್ಕೆ ಕ್ಷಣಗಣನೆ: ಇಲ್ಲಿದೇ ಸಂಫೂರ್ಣ ಮಾಹಿತಿ..!!!!

Written By:

ಇಡೀ ಬೆಂಗಳೂರೇ ಎದರು ನೋಡುತ್ತಿದ್ದ ಕ್ಷಣವೂ ಹತ್ತಿರ ಬಂದಿದೆ. ನಮ್ಮ ಮೆಟ್ರೋ ಮೊದಲ ಹಂತದ ಕಾಮಗಾರಿ ಪೂರ್ಣಗೊಂಡಿದ್ದು, ಇದೇ ಜೂನ್ 17ರಂದು ರಾಷ್ಟ್ರಪತಿ ಪ್ರಣವ್ ಮುಖರ್ಜಿ ನಮ್ಮ ಮೆಟ್ರೋ ಗ್ರೀನ್ ಲೈನ್‌ ಓಡಾಟಕ್ಕೆ ಹಸಿರು ನಿಶಾನೆ ತೋರಿಸಿಲಿದ್ದಾರೆ. ಈ ಹಿನ್ನಲೆಯಲ್ಲಿ ನಮ್ಮ ಮೆಟ್ರೋ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಕೊನೆಗೂ ನಮ್ಮ ಮೆಟ್ರೋ ಸಂಪೂರ್ಣ ಸಂಚಾರ ಆರಂಭಕ್ಕೆ ಕ್ಷಣಗಣನೆ

ಓದಿರಿ: ಜಿಯೋ ಬೆಂಬಲಕ್ಕೆ ನಿಂತ CCI: ಮತ್ತಷ್ಟು ಆಫರ್ ನಿರೀಕ್ಷೆ..!!!!

ಈಗಾಗಲೇ ಬೆಂಗಳೂರಿನಲ್ಲಿ ಮೆಟ್ರೋ ರೈಲು ಸಂಚಾರ ಆರಂಭವಾಗಿದ್ದು, ಮೊದಲ ಹಂತದ ಒಂದು ಮಾರ್ಗ ಮಾತ್ರವೇ ಬಳಕೆಗೆ ಮುಕ್ತವಾಗಿರಲಿಲ್ಲ, ಸಂಪಿಗೆ ರಸ್ತೆ ನಿಲ್ದಾಣದಿಂದ ಕನಕಪುರ ರಸ್ತೆಯ ಯಲಚೇನಹಳ್ಳಿ ನಿಲ್ದಾಣದ ವರೆಗಿನ ಮಾರ್ಗದ ಸಂಚಾರವನ್ನು ರಾಷ್ಟ್ರಪತಿ ಪ್ರಣವ್ ಮುಖರ್ಜಿ ಉದ್ಘಾಟಿಸಿದ್ದಾರೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮೆಟ್ರೋ ಮಾರ್ಗದ ಉದ್ಧ:

ಮೆಟ್ರೋ ಮಾರ್ಗದ ಉದ್ಧ:

ಮೊದಲ ಹಂತದ ಮೆಟ್ರೋ ಒಟ್ಟು 42.3 ಕಿಮಿ ಉದ್ಧವಿದ್ದು, ಇದರಲ್ಲಿ ಹಸಿರು ಮಾರ್ಗ ಮತ್ತು ನೇರಳೆ ಮಾರ್ಗ ಎಂದು ಎರಡು ವಿಭಾಗವಾಗಿ ವಿಂಗಡಿಸಲಾಗಿದೆ. ಈಗಾಗಲೇ ನೇರಳೇ ಮಾರ್ಗದ ಸಂಚಾರ ಸಂಪೂರ್ಣವಾಗಿ ಮುಕ್ತಗೊಂಡಿದ್ದು, ಹಸಿರು ಮಾರ್ಗದ ಈಗ ಬಳಕೆಗೆ ದೊರೆಯಲಿದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.

ನಮ್ಮ ಮೆಟ್ರೋ ಬಳಕೆಗೆ ಆಪ್:

ನಮ್ಮ ಮೆಟ್ರೋ ಬಳಕೆಗೆ ಆಪ್:

ನಮ್ಮ ಮೆಟ್ರೋ ಬಳಕೆದಾರರಿಗೆ ಆಪ್ ವೊಂದನ್ನು ಬಿಎಂಆರ್‌ಸಿಲ್ ಬಿಡುಗಡೆ ಮಾಡಿದೆ. ಇದರಲ್ಲಿ ಮೆಟ್ರೋ ನಿಲ್ಧಾಣಗಳ ಬಗ್ಗೆ ಮಾಹಿತಿ ದೊರೆಯಲಿದ್ದು, ಇದರೊಂದಿಗೆ ಮೆಟ್ರೋ ನಿಲ್ಧಾನದಲ್ಲಿರುವ ಸೌಲಭ್ಯಗಳ ಕುರಿತ ಮಾಹಿತಿ ಲಭ್ಯವಿರಲಿದೆ. ಇದರೊಂದಿಗೆ ಮೆಟ್ರೋ ದಲ್ಲಿ ಸಾಗಿದ ನಂತರ ಮೆಟ್ರೋ ಫಿಡರ್ ಬಸ್‌ ಗಳು ಎಲ್ಲಿಂದ ಎಲ್ಲಿಗೆ ದೊರೆಯುತ್ತಿದೆ ಎಂಬುದನ್ನು ಇಲ್ಲಿ ತಿಳಿಸಿಕೊಡಲಿದೆ.

ಕನ್ನಡದಲ್ಲೂ ಮಾಹಿತಿ ಲಭ್ಯ:

ಕನ್ನಡದಲ್ಲೂ ಮಾಹಿತಿ ಲಭ್ಯ:

ನಮ್ಮ ಮೆಟ್ರೋ ಆಪ್ ನಲ್ಲಿ ಕನ್ನಡ ಬಳಕೆಯೂ ಲಭ್ಯವಿದ್ದು, ಇದರೊಂದಿಗೆ ಇಂಗ್ಲಿಷ್ ಮತ್ತು ಹಿಂದಿಯಲ್ಲಿಯೂ ಮಾಹಿತಿದೊರೆಯಲಿದೆ. ಈ ಆಪ್ ನಲ್ಲಿ ಎಂ.ಜಿ ರಸ್ತೆಯಲ್ಲಿರುವ ಮೆಟ್ರೋ ನಿಲ್ದಾಣದ ರಂಗೋಲಿ ಆರ್ಟ ಸೆಂಟರ್ ಬಗ್ಗೆಯೂ ಮಾಹಿತಿ ಸಿಗಲಿದ್ದು, ಮೆಟ್ರೋದಲ್ಲಿ ನೀವು ಪ್ರಯಾಣಿಸುವಾಗ ಮಾಡಬೇಕಾದ್ದು, ಮಾಡಬಾರದ ಬಗ್ಗೆ ತಿಳುವಳಿಕೆ ನೀಡಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

Read more about:
English summary
President Pranab Mukherjee has accepted our invitation and agreed to inaugurate the underground section of the Green Line to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot